ಗೃಹ ವ್ಯವಹಾರಗಳ ಸಚಿವಾಲಯ

ಎಡಪಂಥೀಯ ಉಗ್ರವಾದದ ಕುರಿತು ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿಂದು ನವದೆಹಲಿಯಲ್ಲಿ ಪರಿಶೀಲನಾ ಸಭೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದ ಕೇಂದ್ರ ಸರ್ಕಾರ ನಕ್ಸಲ್ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಬದ್ಧ

ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಜಂಟಿ ಪ್ರಯತ್ನಗಳಿಂದಾಗಿ ಎಡ ಪಂಥೀಯ ಉಗ್ರವಾದ ನಿಯಂತ್ರಣದಲ್ಲಿ ಭಾರಿ ಯಶಸ್ಸು

ದಶಕಗಳ ಹೋರಾಟದಲ್ಲಿ ನಾವು ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆ 200ಕ್ಕಿಂತ ಕಡಿಮೆ ಇರುವ ಪ್ರಮಾಣ ತಲುಪಿದ್ದೇವೆ ಮತ್ತು ನಮ್ಮೆಲ್ಲರ ಶ್ರಮದ ಪರಿಣಾಮ ಹಾಗೂ ಶ್ರೇಷ್ಠ ಸಾಧನೆಯಾಗಿದೆ

ಎಡಪಂಥೀಯ ಉಗ್ರವಾದ ಸಂಪೂರ್ಣವಾಗಿ ನಿರ್ಮೂಲನೆ ಮಾಡದ ಹೊರತು, ಅದರಿಂದ ಬಾಧಿತವಾದ ಪ್ರದೇಶಗಳ ಸಮಗ್ರ ಅಭಿವೃದ್ಧಿ ಅಸಾಧ್ಯ

ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು(ಸಿಎಪಿಎಫ್ )ಗಳ ನಿಯೋಜನೆ ಮೇರೆ ರಾಜ್ಯಗಳ ಕಾಯಂ ವೆಚ್ಚ ತಗ್ಗಿಸುವಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ಪ್ರಮುಖ ನಿರ್ಧಾರ

ಅದರ ಪರಿಣಾಮವಾಗಿ, ಸಿಎಪಿಎಫ್ ಗಳ ನಿಯೋಜನೆಗಾಗಿ ರಾಜ್ಯಗಳ ಸ್ಥಿರ ವೆಚ್ಚ ಕಡಿತವಾಗಿದ್ದು, 2018-19ಕ್ಕೆ ಹೋಲಿಸಿದರೆ 2019-20ರಲ್ಲಿ 2,900 ಕೋಟಿ ರೂ. ತಗ್ಗಿದೆ

ಭಾರತ ಸರ್ಕಾರವು ಹಲವು ವರ್ಷಗಳಿಂದ ರಾಜಕೀಯ ಪಕ್ಷಗಳತ್ತ ಗಮನಹರಿಸದೆ ಎರಡು ರಂಗಗಳಲ್ಲಿ ಯುದ್ದ ಮಾಡುತ್ತಿದೆ, ಯಾರು ಶಸ್ತ್ರಾಸ್ತ್ರ ತ್ಯಜಿಸುವರೂ ಮತ್ತು ಪ್ರಜಾಪ್ರಭುತ್ವದ ಭಾಗವಾಗ ಬಯಸುವವರೋ ಅಂತಹವರನ್ನು ಆತ್ಮೀಯವಾಗಿ ಸ್ವಾಗತಿಸಲಾಗುತ್ತಿದೆ, ಯಾರು ಶಸ್ತ್ರಾಸ್ತ್ರಗಳನ್ನು ಹಿಡಿದು ಅಮಾಯಕ ಜನರು ಮತ್

Posted On: 26 SEP 2021 4:35PM by PIB Bengaluru

ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿಂದು ಎಡಪಂಥೀಯ ಉಗ್ರವಾದ ನಿಯಂತ್ರಣ ಕುರಿತು ಪರಿಶೀಲನಾ ಸಭೆ ನಡೆಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಶ್ರೀ ಗಿರಿರಾಜ್ ಸಿಂಗ್, ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ, ಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ಜನರಲ್ ವಿ.ಕೆ.ಸಿಂಗ್ , ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಬಿಹಾರ, ಒಡಿಶಾ, ಮಹಾರಾಷ್ಟ್ರ, ತೆಲಂಗಣ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಆಂಧ್ರಪ್ರದೇಶದ ಗೃಹ ಸಚಿವರು, ಛತ್ತೀಸ್ ಗಢ, ಪಶ್ಚಿಮ ಬಂಗಾಳ ಮತ್ತು ಕೇರಳದ ಹಿರಿಯ ಅಧಿಕಾರಿಗಳು, ಕೇಂದ್ರ ಗೃಹ ಕಾರ್ಯದರ್ಶಿ, ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ ಹಿರಿಯ ಅಧಿಕಾರಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಲವು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ ಎಡಪಂಥೀಯ ಉಗ್ರವಾದದಿಂದ ಬಾಧಿತವಾಗಿರುವ ರಾಜ್ಯಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಅವರ ನಾಯಕತ್ವದಲ್ಲಿ ಎಡಪಂಥೀಯ ಉಗ್ರವಾದವನ್ನು ತಗ್ಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಪ್ರಯತ್ನಗಳು ಸಾಕಷ್ಟು ಯಶಸ್ವಿ ನೀಡಿವೆ ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತದೆ ಎಂದು ಶ್ರೀ ಶಾ ಹೇಳಿದರು. ಎಡಪಂಥೀಯ ಉಗ್ರವಾದ ಘಟನೆಗಳು ಶೇ.23ರಷ್ಟುಕಡಿಮೆಯಾಗಿವೆ ಮತ್ತು ಸಾವಿನ ಸಂಖ್ಯೆ ಶೇ.21ರಷ್ಟು ಇಳಿಕೆಯಾಗಿವೆ ಎಂದು ಅವರು ಹೇಳಿದರು. ದಶಕಗಳ ಹೋರಾಟದ ಬಳಿಕ ನಾವು ಇದೇ ಮೊದಲ ಬಾರಿಗೆ ಸಾವಿನ ಸಂಖ್ಯೆ 200ಕ್ಕಿಂತ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ, ಇದು ನಮ್ಮೆಲ್ಲರಿಗೂ ದೊಡ್ಡ ಸಾಧನೆಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಎಡಪಂಥೀಯ ಉಗ್ರವಾದ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದು ಹಾಕುವವರೆಗೆ ಅದರಿಂದ ಬಾಧಿತವಾಗಿರುವ ರಾಜ್ಯಗಳ ಸಮಗ್ರ ಅಭಿವೃದ್ಧಿ ಅಸಾಧ್ಯ ಎಂದು ಹೇಳಿದರು. ಅದನ್ನು ನಿರ್ಮೂಲನೆ ಮಾಡದ ಹೊರತು ನಾವು ಪ್ರಜಾಪ್ರಭುತ್ವವನ್ನು ತಳಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಸಾಧ್ಯವಿಲ್ಲ ಅಥವಾ ಅಭಿವೃದ್ಧಿಯಾಗದ ಪ್ರದೇಶಗಳನ್ನು ಅಭಿವೃದ್ಧಿ ಮಾಡಲಾಗುವುದಿಲ್ಲ, ಹಾಗಾಗಿ ಈವರೆಗೆ ನಾವು ಸಾಧಿಸಿರುವುದಕ್ಕೆ ತೃಪ್ತಿಪಟ್ಟುಕೊಳ್ಳುವ ಬದಲು ಇನ್ನೂ ಆಗಬೇಕಾಗಿರುವ ಕಾರ್ಯವನ್ನು ಸಾಧಿಸಲು ನಮ್ಮ ವೇಗವನ್ನು ಹೆಚ್ಚಿಸಬೇಕಿದೆ ಎಂದರು.

ಭಾರತ ಸರ್ಕಾರ ರಾಜಕೀಯ ಪಕ್ಷಗಳತ್ತ ಗಮನಹರಿಸದೆ ಹಲವು ವರ್ಷಗಳಿಂದ ಎರಡು ರಂಗಗಳಲ್ಲಿ ಸಮರವನ್ನು ನಡೆಸುತ್ತಿದೆ ಎಂದು ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವರು ಹೇಳಿದರು. ಯಾರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಮುಖ್ಯವಾಹಿನಿಗೆ ಸೇರ್ಪಡೆಯಾಗಲು ಬಯಸುತ್ತಾರೋ ಅಂತವರನ್ನು ಆತ್ಮೀಯವಾಗಿ ಸ್ವಾಗತಿಸಲಾಗುತ್ತಿದೆ. ಯಾರು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಅಮಾಯಕ ಜನರು ಮತ್ತು ಪೊಲೀಸರನ್ನು ಗಾಯಗೊಳಿಸುತ್ತಿದ್ದಾರೋ ಅವರಿಗೆ ಅದೇ ವಿಧಾನದಲ್ಲಿ ಉತ್ತರ ನೀಡಲಾಗುತ್ತಿದೆ. ಸ್ವಾತಂತ್ರ್ಯಾ ನಂತರ ಕಳೆದ ಆರು ದಶಕಗಳಲ್ಲಿ ಅಭಿವೃದ್ಧಿ ತಲುಪದಿರುವುದೇ ಅತೃಪ್ತಿಗೆ ಮೂಲ ಕಾರಣವಾಗಿದೆ. ಇದೀಗ ಅತ್ಯಂತ ವೇಗದ ಅಭಿವೃದ್ಧಿ ಲಭ್ಯತೆಯನ್ನು ಖಾತ್ರಿಪಡಿಸಬೇಕಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅಭಿವೃದ್ಧಿ ಕಾರ್ಯಗಳು ಮುಂದುವರಿಯುತ್ತಿವೆ. ಇದೀಗ ಮುಗ್ಧ ಜನರನ್ನು ದಾರಿತಪ್ಪಿಸಲಾಗದು ಎಂಬುದು ನಕ್ಸಲಿಯರಿಗೂ ಸಹ ಅರ್ಥವಾಗಿದೆ ಎಂದರು. ಹಾಗಾಗಿ ಯಾವುದೇ ಅಡೆತಡೆ ಇಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವ ಪ್ರಾಮುಖ್ಯವಿದೆ. ಈ ಎರಡೂ ರಂಗಗಳಲ್ಲೂ ಯಶಸ್ಸು ಸಾಧಿಸುವಲ್ಲಿ ಯಶಸ್ವಿಯಾಗಿರುವುದು ಈ ಸಭೆಯ ಅತ್ಯಂತ ಪ್ರಮುಖ ಅಂಶವಾಗಿದೆ. 

ಎಡಪಂಥೀಯ ಉಗ್ರವಾದವನ್ನು ನಿಯಂತ್ರಿಸಲು ಬಾಧಿತವಾಗಿರುವ ರಾಜ್ಯಗಳು ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲ ಕೇಂದ್ರೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಡಿಜಿಪಿಗಳು ಪರಿಶೀಲನಾ ಸಭೆಗಳನ್ನು ನಡೆಸಬೇಕು ಎಂದು ಶ್ರೀ ಶಾ ಕರೆ ನೀಡಿದರು. ಮತ್ತು ಆನಂತರವೇ ನಾವು ಈ ಹೋರಾಟವನ್ನು ಮುಂದುವರಿಸಬೇಕಾಗಿದೆ ಎಂದರು. ಕಳೆದ ಎರಡು ವರ್ಷಗಳಿಂದೀಚೆಗೆ ಈವರೆಗೆ ಭದ್ರತೆ ಬಿಗಿಯಾಗಿಲ್ಲದಂತಹ ಪ್ರದೇಶಗಳಲ್ಲಿ ವಿಶೇಷವಾಗಿ ಛತ್ತೀಸ್ ಗಢ, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಹೆಚ್ಚಿನ ಭದ್ರತಾ ಶಿಬಿರಗಳನ್ನು ಸ್ಥಾಪಿಸುವಲ್ಲಿ ಭಾರೀ ಯಶಸ್ಸು ಮತ್ತು ಪ್ರಯತ್ನ ನಡೆಸಲಾಗಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಮಟ್ಟದಲ್ಲಿ ನಿರಂತರ ಪರಿಶೀಲನಾ ಸಭೆಗಳು ನಡೆದರೆ ಆಗ ತಳಮಟ್ಟದ ಅಧಿಕಾರಿಗಳ ಜತೆಗಿನ ಸಮನ್ವಯದ ಸಮಸ್ಯೆಗಳು ತಾನಾಗಿಯೇ ಬಗೆಹರಿಯಲಿವೆ ಎಂದು ಹೇಳಿದರು. ಈ ಸಮಸ್ಯೆ ವಿರುದ್ಧ ಹೋರಾಟದಲ್ಲಿ ಕಳೆದ 40 ವರ್ಷದಲ್ಲಿ 16 ಸಾವಿರಕ್ಕೂ ಅಧಿಕ ನಾಗರಿಕರು ಹತರಾಗಿದ್ದಾರೆ. ಅದೀಗ ಅಂತ್ಯ ತಲುಪಿದೆ ಮತ್ತು ಆ ಕಾರ್ಯವನ್ನು ಇನ್ನಷ್ಟು ತ್ವರಿತಗೊಳಿಸಬೇಕಿದೆ ಮತ್ತು ನಿರ್ಣಾಯಕವನ್ನಾಗಿ ಮಾಡಬೇಕಿದೆ ಎಂದರು.

ಇತ್ತೀಚೆಗೆ ಭಾರತ ಸರ್ಕಾರ ಹಲವು ಬಂಡುಕೋರ ಸಂಘಟನೆಗಳಿಂದ ವಿಶೇಷವಾಗಿ ಈಶಾನ್ಯ ರಾಜ್ಯಗಳಲ್ಲಿ ಶಸ್ತ್ರಾಸ್ತ್ರಗಳನ್ನು ತ್ಯಜಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಈವರೆಗೆ ಸುಮಾರು 16,000 ಯೋಧರು ಸಮಾಜದ ಮುಖ್ಯವಾಹಿನಿಯನ್ನು ಸೇರ್ಪಡೆಯಾಗಿದ್ದಾರೆ. ಅವರಲ್ಲಿ ಬೋಡೋಲ್ಯಾಂಡ್ ಒಪ್ಪಂದ, ಬ್ರು ಒಪ್ಪಂದ ಮತ್ತು ಕರ್ಬಿ ಆಂಗ್ಲಾಂಗ್ ಒಪ್ಪಂದ ಮತ್ತು ತ್ರಿಪುರಾದ ಬಂಡುಕೋರ ಸಂಘಟನೆಗಳಿಂದ ಶರಣಾಗತರಾದವರು ಸೇರಿದ್ದಾರೆ. ಯಾರು ಹಿಂಸಾಚಾರವನ್ನು ತೊರೆದು ಮುಖ್ಯ ವಾಹಿನಿಯನ್ನು ಸೇರಲು ಬಯಸುತ್ತಾರೋ ಅಂತಹವರನ್ನು ಸ್ವಾಗತಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 

ರಾಜ್ಯ ಆಡಳಿತಗಳು ಇನ್ನಷ್ಟು ಕ್ರಿಯಾಶೀಲವಾಗಬೇಕು ಮತ್ತು ಕೇಂದ್ರೀಯ ಪಡೆಗಳ ಸಮನ್ವಯದೊಂದಿಗೆ ಮುನ್ನಡೆಯಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಕೇಂದ್ರೀಯ ಪಡೆಗಳ ನಿಯೋಜನೆಗೆ ಸಂಬಂಧಿಸಿದಂತೆ ರಾಜ್ಯಗಳ ಬೇಡಿಕೆಗಳನ್ನು ಈಡೇರಿಸುವ ಕುರಿತು ಪ್ರಯತ್ನಗಳು ನಡೆದಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರಾಜ್ಯಗಳಿಗೆ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ(ಸಿಎಪಿಎಫ್) ನಿಯೋಜನೆಗೆ ವೆಚ್ಚ ಮಾಡುತ್ತಿದ್ದ ನಿಶ್ಚಿತ ವೆಚ್ಚವನ್ನು ಕಡಿತಗೊಳಿಸುವಲ್ಲಿ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇದರ ಪರಿಣಾಮವಾಗಿ 2018-19ಕ್ಕೆ ಹೋಲಿಸಿದರೆ 2019-20ರಲ್ಲಿ ಸಿಎಪಿಎಫ್ ಗಳ ನಿಯೋಜನೆಗೆ ರಾಜ್ಯಗಳ ವೆಚ್ಚ ಸುಮಾರು 2900 ಕೋಟಿ ರೂಪಾಯಿಗಳಷ್ಟು ಕಡಿತವಾಗಿದೆ. ಪ್ರಧಾನಮಂತ್ರಿ ಅವರು ನಿರಂತರವಾಗಿ ಈ ಕುರಿತು ಪರಾಮರ್ಶೆ ನಡೆಸುತ್ತಿದ್ದಾರೆ ಮತ್ತು ನಮ್ಮೆಲ್ಲರಿಗೂ ನಿರಂತರ ಮಾರ್ಗದರ್ಶನ ನೀಡುತ್ತಿದ್ದಾರೆ.

ಎಡಪಂಥೀಯ ಬಂಡುಕೋರರ ಆದಾಯ ಮೂಲಗಳನ್ನು ತಟಸ್ಥಗೊಳಿಸುವ ಕಾರ್ಯ ಅತ್ಯಂತ ಪ್ರಮುಖವಾಗಿ ಆಗಬೇಕಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಸೇರಿ ವ್ಯವಸ್ಥೆಯನ್ನು ರೂಪಿಸುವ ಮೂಲಕ ಇದನ್ನು ತಡೆಯಲು ಪ್ರಯತ್ನಿಸಬೇಕಿದೆ. ಎಲ್ಲ ಮುಖ್ಯಮಂತ್ರಿಗಳು ಮುಂದಿನ ಒಂದು ವರ್ಷ ಎಡಪಂಥೀಯ ಬಂಡುಕೋರರ ಸಮಸ್ಯೆ ನಿವಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರೆ ನೀಡಿದ ಅವರು ಇದರಿಂದಾಗಿ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದರು. ಅದಕ್ಕೆ ಒತ್ತಡ ನಿರ್ಮಾಣ, ವೇಗದ ಹೆಚ್ಚಳ ಮತ್ತು ಉತ್ತಮ ಸಮನ್ವಯದ ಅಗತ್ಯವಿದೆ ಎಂದರು.

ಕಳೆದ ಹಲವು ದಶಕಗಳಿಂದೀಚೆಗೆ ಎಡಪಂಥೀಯ ಉಗ್ರವಾದ (ಎಲ್ ಡಬ್ಲ್ಯೂಇ) ಅತ್ಯಂತ ಮಹತ್ವದ ಭದ್ರತಾ ಸವಾಲಾಗಿದೆ. ಮೂಲತಃ ರಾಜ್ಯ ವಿಷಯವಾದರೂ ಗೃಹ ವ್ಯವಹಾರಗಳ ಸಚಿವಾಲಯ ಎಡಪಂಥೀಯ ಉಗ್ರವಾದ(ಎಲ್ ಡಬ್ಲ್ಯೂಇ) ಪಿಡುಗನ್ನು ಸಮಗ್ರವಾಗಿ ಹತ್ತಿಕ್ಕಲು, ಪರಿಸ್ಥಿತಿಯ ಬಗ್ಗೆ ನಿರಂತರವಾಗಿ ನಿಗಾವಹಿಸಲು ಮತ್ತು ಪ್ರಗತಿ ಪರಾಮರ್ಶೆಗೆ ಹಾಗೂ ಬಹುಹಂತದ ಕಾರ್ಯಾಚರಣೆಗಳನ್ನೊಳಗೊಂಡ ‘ರಾಷ್ಟ್ರೀಯ ನೀತಿ ಮತ್ತು ಕ್ರಿಯಾ ಯೋಜನೆ’ಯನ್ನು 2015ರಿಂದ ಜಾರಿಗೊಳಿಸಿದೆ.

ಈ ನೀತಿಯ ಪ್ರಮುಖ ಅಂಶವೆಂದರೆ ಶೂನ್ಯ ಸಹಿಷ್ಣುತೆ, ಹಿಂಸಾಚಾರ ಬದಿಗೊತ್ತಿ ಅಭಿವೃದ್ಧಿ ಚಟುವಟಿಕೆಗಳಿಗೆ ಭಾರೀ ಉತ್ತೇಜನ ನೀಡುವ ಮೂಲಕ ಬಾಧಿತ ಪ್ರದೇಶಗಳಲ್ಲಿನ ದುರ್ಬಲ ಮತ್ತು ಬಡಜನರಿಗೆ ಅಭಿವೃದ್ಧಿಯ ಪ್ರಯೋಜನಗಳನ್ನು ತಲುಪಿಸುವುದಾಗಿದೆ.

ನೀತಿಗೆ ಅನುಗುಣವಾಗಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸಾಮರ್ಥ್ಯವೃದ್ಧಿ ಮತ್ತು ಭದ್ರತಾ ಬಲವರ್ಧನೆಗೆ ಬೆಂಬಲ ನೀಡುತ್ತಿವೆ. ಸಿಎಪಿಎಫ್ ತುಕಡಿಗಳ ನಿಯೋಜನೆ, ಹೆಲಿಕಾಪ್ಟರ್ ಗಳು ಮತ್ತು ಯುಎವಿಗಳನ್ನು ಹೊಂದುವುದು ಭಾರತೀಯ ಮೀಸಲು ತುಕಡಿಗಳು(ಐಆರ್ ಬಿಎಸ್)/ವಿಶೇಷ ಭಾರತೀಯ ಮೀಸಲು ತುಕಡಿಗಳ(ಎಸ್ಐಆರ್ ಬಿಎಸ್) ಅನುಮೋದನೆಯೂ ಸೇರಿದೆ. ಪೊಲೀಸ್ ಪಡೆಗಳ ಆಧುನೀಕರಣ (ಎಂಪಿಎಫ್), ಭದ್ರತೆಗೆ ಸಂಬಂಧಿಸಿದ ವೆಚ್ಚ (ಎಸ್ಆರ್ ಇ) ಯೋಜನೆ ಮತ್ತು ರಾಜ್ಯ ಪೊಲೀಸ್ ತರಬೇತಿ ಮತ್ತು ಆಧುನೀಕರಣಕ್ಕಾಗಿ ವಿಶೇಷ ಮೂಲಸೌಕರ್ಯ ಯೋಜನೆ (ಎಸ್ಐಎಸ್)ಗಳಿಗೆ ಆರ್ಥಿಕ ನೆರವನ್ನು ನೀಡಲಾಗುತ್ತಿದೆ.  

ಎಡಪಂಥೀಯ ಉಗ್ರವಾದವನ್ನು ಬಾಧಿತವಾಗಿರುವ ಪ್ರದೇಶಗಳ ಅಭಿವೃದ್ಧಿಗೆ ಭಾರತ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ 17,600 ಕಿಲೋಮೀಟರ್ ರಸ್ತೆ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದ್ದು, ಆರ್ ಆರ್ ಪಿ-1, ಆರ್ ಸಿಪಿಎಲ್ ಡಬ್ಲ್ಯೂಇ ಅಡಿಯಲ್ಲಿ 9343 ಕಿಲೋಮೀಟರ್ ರಸ್ತೆಯನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಎಡಪಂಥೀಯ ಉಗ್ರವಾದಿಗಳಿಂದ ಬಾಧಿತವಾಗಿರುವ ಜಿಲ್ಲೆಗಳಲ್ಲಿ ದೂರಸಂಪರ್ಕ ಸುಧಾರಣೆಗೆ 2343 ಹೊಸ ಮೊಬೈಲ್ ಟವರ್ ಗಳನ್ನು ಸ್ಥಾಪಿಸಲಾಗಿದೆ ಮತ್ತು ಮುಂದಿನ 18 ತಿಂಗಳಲ್ಲಿ 2542 ಟವರ್ ಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗುವುದು. ಎಲ್ ಡಬ್ಲ್ಯೂಇ ಬಾಧಿತ ಜಿಲ್ಲೆಗಳ ಜನರ ಆರ್ಥಿಕ ಸೇರ್ಪಡೆಗಾಗಿ  1789 ಅಂಚೆ ಕಚೇರಿಗಳು, 1236 ಬ್ಯಾಂಕ್ ಶಾಖೆಗಳು,  1077 ಎಟಿಎಂಗಳನ್ನು ತೆರೆಯಲಾಗಿದೆ ಮತ್ತು 14230 ಬ್ಯಾಂಕಿಂಗ್ ಪ್ರತಿನಿಧಿಗಳನ್ನು ನೇಮಿಸಲಾಗಿದೆ ಹಾಗೂ ಮುಂದಿನ ಒಂದು ವರ್ಷದಲ್ಲಿ 3114 ಅಂಚೆ ಕಚೇರಿಗಳನ್ನು ಆರಂಭಿಸಲಾಗುವುದು. ಎಲ್ ಡಬ್ಲ್ಯೂಇ ಬಾಧಿತ ಪ್ರದೇಶಗಳ ಯುವಕರಿಗೆ ಗುಣಮಟ್ಟದ ಶಿಕ್ಷಣ ನೀಡಲು ವಿಶೇಷ ಒತ್ತು ನೀಡಿ, ಏಕಲವ್ಯ ಮಾದರಿ ವಸತಿಶಾಲೆ (ಇಎಂಆರ್ ಎಸ್)ಗಳನ್ನು ತೆರೆಯಲಾಗುತ್ತಿದೆ. ಎಲ್ ಬ್ಲ್ಯೂಇ ಬಾಧಿತ ಜಿಲ್ಲೆಗಳಿಗೆ ಒಟ್ಟು 234 ಇಎಂಆರ್ ಎಸ್ ಗಳನ್ನು ಅನುಮೋದಿಸಲಾಗಿದ್ದು, ಆ ಪೈಕಿ 119 ಈಗಾಗಲೇ ಕಾರ್ಯಾರಂಭ ಮಾಡಿವೆ.

ವಿಶೇಷ ಕೇಂದ್ರದ ನೆರವಿನ(ಎಸ್ ಸಿಎ) ಯೋಜನೆಯಡಿ ಬಾಧಿತ ಜಿಲ್ಲೆಗಳ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಲಾಗಿದೆ. 10,000ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದ್ದು, ಆ ಪೈಕಿ ಈಗಾಗಲೇ ಶೇ.80ರಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ. ಈ ಯೋಜನೆಯಡಿ ಎಲ್ ಡಬ್ಲ್ಯೂಇ ಈ ಬಾಧಿತ ರಾಜ್ಯಗಳಿಗೆ 2698.24 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 992 ಕೋಟಿ ರೂ. ಮೌಲ್ಯದ ಎಸ್ಐಎಸ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು ಮುಂಗಡವಾಗಿ 152 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಏಪ್ರಿಲ್ 2014ರಿಂದೀಚೆಗೆ ಕಳೆದ ಏಳು ವರ್ಷಗಳಲ್ಲಿ ಎಸ್ ಆರ್ ಇ ಅಡಿಯಲ್ಲಿ 1992 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅದರ ಹಿಂದಿನ ಏಳು ವರ್ಷಗಳಿಗೆ ಹೋಲಿಸಿದರೆ ಈ ಮೊತ್ತ ಶೇಕಡ 85ಕ್ಕೂ ಅಧಿಕ.

ಎಂಎಚ್ಎ ಎಲ್ ಡಬ್ಲ್ಯೂಇ ಬಾಧಿತ ಜಿಲ್ಲೆಗಳನ್ನು ವರ್ಗೀಕರಿಸಿದೆ ಮತ್ತು ಭದ್ರತಾ ಸಿಬ್ಬಂದಿ ವೆಚ್ಚ (ಎಸ್ ಆರ್ ಇ) ವ್ಯಾಪ್ತಿಗೆ ಒಳಪಡುವುದನ್ನು ಗುರುತಿಸಲಾಗಿದ್ದು, ನಿರ್ದಿಷ್ಟ ಸಂಪನ್ಮೂಲ ಬಳಕೆಗೆ ಬಾಧಿತ ನಿಗ್ರಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆ ಪೈಕಿ ಎಸ್ಆರ್ ಇ ಜಿಲ್ಲೆಗಳಿಗೆ ಎಲ್ ಡಬ್ಲ್ಯೂಇ ಹಿಂಸಾಚಾರ ಬಾಧಿತ ಶೇ.85ಕ್ಕೂ ಅಧಿಕ ಜಿಲ್ಲೆಗಳಿವೆ ಮತ್ತು ಅವುಗಳನ್ನು ‘ಹೆಚ್ಚು ಬಾಧಿತ ಜಿಲ್ಲೆಗಳು’ ಎಂದು ವರ್ಗೀಕರಿಸಲಾಗಿದೆ. ಅಲ್ಲಿ ಸಂಪನ್ಮೂಲಗಳ ನಿಯೋಜನೆ, ಭದ್ರತೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಒತ್ತು ನೀಡಲಾಗುತ್ತಿದೆ. 

ಕಳೆದ ಒಂದು ದಶಕದಿಂದೀಚೆಗೆ ಅಥವಾ ಅಲ್ಲಿಂದ ಹಿಂಸಾಚಾರ ಪ್ರಕರಣಗಳು ಮತ್ತು ಭೌಗೋಳಿಕ ವ್ಯಾಪ್ತಿ ಕೂಡ ನಿರಂತರವಾಗಿ ಇಳಿಕೆಯಾಗುತ್ತಿದೆ. ಎಡಪಂಥೀಯ ಉಗ್ರವಾದಿಗಳ ಹಿಂಸಾಕೃತ್ಯಗಳು ಶೇ. 70%ರಷ್ಟು ತಗ್ಗಿವೆ. 2009ರಲ್ಲಿ ಅತ್ಯಧಿಕ 2258 ಪ್ರಕರಣಗಳಿದ್ದರೆ 2020ರಲ್ಲಿ ಕೇವಲ 665 ಪ್ರಕರಣಗಳು ವರದಿಯಾಗಿವೆ. ಅಂತಹ ಘಟನೆಗಳಿಂದ ಆಗುತ್ತಿರುವ ಸಾವುಗಳ ಪ್ರಮಾಣವನ್ನು ಶೇ.82ರಷ್ಟು ತಗ್ಗಿದ್ದು, 2010ರಲ್ಲಿ ದಾಖಲೆಯ 1005 ಮಂದಿ ಸಾವನ್ನಪ್ಪಿದ್ದರೆ 2020ರಲ್ಲಿ ಆ ಪ್ರಮಾಣ 183ಕ್ಕೆ ಇಳಿಕೆಯಾಗಿವೆ. ಎಡಪಂಥೀಯ ಉಗ್ರವಾದಗಳಿಂದ ಬಾಧಿತವಾಗಿರುವ ಪ್ರದೇಶ ಶೇ.85ರಷ್ಟು ಇಳಿಕೆಯಾಗುವುದರೊಂದಿಗೆ ಅಂತಹ ಬಂಡುಕೋರರಿರುವ ಪ್ರದೇಶ 25 ಜಿಲ್ಲೆಗಳಿಗೆ ಇಳಿಕೆಯಾಗಿದೆ. ಮಾವೋವಾದಿಗಳ ಪ್ರಭಾವವಿರುವ ಭೌಗೋಳಿಕ ಪ್ರದೇಶವು ಕುಗ್ಗುತ್ತಿದ್ದು, 2010ರಲ್ಲಿ ಅಂತಹ 96 ಜಿಲ್ಲೆಗಳಿದ್ದವು. ಇದೀಗ 2020ರಲ್ಲಿ ಅಂತಹ ಜಿಲ್ಲೆಗಳ ಸಂಖ್ಯೆ 53ಕ್ಕೆ ಇಳಿಕೆಯಾಗಿವೆ. ಪರಿಸ್ಥಿತಿ ಸುಧಾರಿಸಿದೆ.

ಎಸ್ಆರ್ ಇ ಜಿಲ್ಲೆಗಳ ಸಂಖ್ಯೆ ಕಳೆದ ಮೂರು ವರ್ಷಗಳಿಂದ ಎರಡು ಬಾರಿ ಪರಿಶೀಲಿಸಲಾಗಿದ್ದು, 2018ರ ಏಪ್ರಿಲ್ ನಲ್ಲಿ 126ರಿಂದ 90ಕ್ಕೆ ಮತ್ತು 2021ರ ಜುಲೈನಲ್ಲಿ 70ಕ್ಕೆ ಇಳಿಕೆಯಾಗಿದೆ. ಅಲ್ಲದೆ, ಎಲ್ ಡಬ್ಲೂ ಇನಿಂದ ತೀವ್ರ ಬಾಧಿತವಾದ ಜಿಲ್ಲೆಗಳು 2018ರ ಏಪ್ರಿಲ್ ನಲ್ಲಿ 35ರಿಂದ 30ಕ್ಕೆ ಹಾಗೂ 2021ರ ಜುಲೈನಲ್ಲಿ 25ಕ್ಕೆ ಇಳಿಕೆಯಾಗಿವೆ. 

ಈ ವಿದ್ಯಮಾನದ ಹೊರಹೊಮ್ಮುವಿಕೆಗೆ ಕೆಲವು ಹೊಸ ಪ್ರದೇಶಗಳನ್ನು ಸಂಭಾವ್ಯ ಸ್ಥಳಗಳನ್ನಾಗಿ ಗುರುತಿಸಲಾಗಿದೆ. ಸಿಪಿಐ (ಮಾವೋವಾದಿ) ವಿಸ್ತರಣಾ ಯೋಜನೆಯನ್ನು ತಡೆಯಲು ಮತ್ತು ಇತ್ತೀಚೆಗೆ ಎಲ್ ಡಬ್ಲೂ ಇ ಪ್ರಭಾವದಿಂದ ಹೊರಬಂದ ಪ್ರದೇಶಗಳಲ್ಲಿ ಮತ್ತೆ ಪುಟಿಯುವಂತೆ ಮಾಡಲು 8 ಜಿಲ್ಲೆಗಳನ್ನು ‘ಕಾಳಜಿ ಜಿಲ್ಲೆ’ಗಳೆಂದು ವರ್ಗೀಕರಿಸಲಾಗಿದೆ. ಪರಿಷ್ಕೃತ ವರ್ಗೀಕರಣವು ಸದ್ಯದ ಎಲ್ ಡಬ್ಲೂ ಇ ಸನ್ನಿವೇಶದ ಹೆಚ್ಚು ವಾಸ್ತವಿಕ ಪ್ರಾತಿನಿಧ್ಯವಾಗಿದೆ.

ಎಡಪಂಥೀಯ ಬಂಡುಕೋರರ ಬೆದರಿಕೆಯ ವಿರುದ್ಧದ ಹೋರಾಟ ಈಗ ನಿರ್ಣಾಯಕ ಹಂತದಲ್ಲಿದೆ ಮತ್ತು ಸರ್ಕಾರವು ಅಪಾಯವನ್ನು ಅತ್ಯಲ್ಪ ಮಟ್ಟಕ್ಕೆ ತಗ್ಗಿಸುವ ಆಶಾವಾದವನ್ನು ಹೊಂದಿದೆ.

ಭೌಗೋಳಿಕ ವ್ಯಾಪ್ತಿ

ಎಲ್ ಡಬ್ಲೂ ಇ ಘಟನೆಗಳು

ಸಾವುಗಳ ಪ್ರಮಾಣ

***



(Release ID: 1758417) Visitor Counter : 320