ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮಾಹಿತಿ ಮತ್ತು ಪ್ರಜಾಪ್ರಭುತ್ವ ಕುರಿತ ಶೃಂಗಸಭೆಯನ್ನುದ್ದೇಶಿಸಿ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಭಾಷಣ


ಮಾಹಿತಿ ಸಾಂಕ್ರಾಮಿಕ ಸಮಸ್ಯೆಯನ್ನು ಉನ್ನತ ಮಟ್ಟದಲ್ಲಿ ಪರಿಹರಿಸುವುದು ಮುಖ್ಯ: ಶ್ರೀ ಅನುರಾಗ್ ಠಾಕೂರ್

ಸುಳ್ಳು ಸುದ್ದಿಗಳನ್ನು ಮತ್ತು ವಿವರಣೆಗಳನ್ನು ಬಯಲು ಮಾಡುವಲ್ಲಿ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಸಕ್ರಿಯವಾಗಿ ತೊಡಗಿಸಿಕೊಂಡಿದೆ: ಶ್ರೀ ಠಾಕೂರ್.

Posted On: 25 SEP 2021 11:08AM by PIB Bengaluru

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರು ನಿನ್ನೆ ನ್ಯೂಯಾರ್ಕ್ ನಲ್ಲಿರುವ ಫ್ರಾನ್ಸ್ ಕಾನ್ಸುಲೇಟ್ ಜನರಲ್ ನಲ್ಲಿ ಯು.ಎನ್.ಜಿ.ಎ.ಯ  ನೇಪಥ್ಯದಲ್ಲಿ ಆಯೋಜಿಸಿದ್ದ  ಮಾಹಿತಿ ಮತ್ತು ಪ್ರಜಾಪ್ರಭುತ್ವ ಕುರಿತ ಶೃಂಗಸಬೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅವರು ಲಡಾಖ್ ಪ್ರದೇಶದ ಲೇಹ್ ನಿಂದ ಕಾರ್ಯಕ್ರಮಕ್ಕೆ ಸೇರಿಕೊಂಡು ದುಂಡು ಮೇಜಿನ ಚರ್ಚೆಯಲ್ಲಿ ಭಾಗವಹಿಸಿದರು. 
ದುಂಡು ಮೇಜಿನ ಚರ್ಚೆಯ ಮುಕ್ತಾಯದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ  ಮಂಡಿಸಿದ ಸಚಿವರು “ಜಗತ್ತು ಜಾಗತಿಕ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವಾಗ ಅಷ್ಟೇ ಹಾನಿಕಾರಕವಾದ “ಮಾಹಿತಿ ಸಾಂಕ್ರಾಮಿಕ” (ಇನ್ಫೋಡೆಮಿಕ್)  ಕೂಡಾ ಸದಸ್ಯ ರಾಷ್ಟ್ರಗಳಿಗೆ ಸವಾಲೆಸೆಯುತ್ತಿದೆ ಎಂದರು. ಈ ಮಾಹಿತಿ ಸಾಂಕ್ರಾಮಿಕದ ಸಮಸ್ಯೆಯನ್ನು ಉನ್ನತ ಮಟ್ಟದಲ್ಲಿ ಪರಿಹರಿಸುವುದು ಬಹಳ ಮುಖ್ಯ. “ ನಾವು ಮಾಹಿತಿ ಮತ್ತು ಪ್ರಜಾಪ್ರಭುತ್ವಕ್ಕಾಗಿರುವ ಅಂತಾರಾಷ್ಟ್ರೀಯ ಸಹಭಾಗಿತ್ವ”ಕ್ಕೆ ಅಂಕಿತ ಹಾಕಿರುವ ಸ್ಥಾಪಕ ಸದಸ್ಯ ರಾಷ್ಟ್ರವಾಗಿರುವುದು ನಮಗೆ ಸಂತಸದ ಸಂಗತಿಯಾಗಿದೆ ಎಂದರು. 
ಕೋವಿಡ್ ಜಾಗತಿಕ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಭಾರತವು ಎದುರಿಸಿದ ತಪ್ಪು ಮಾಹಿತಿಯ ದಾಳಿಯನ್ನು ಪ್ರಸ್ತಾಪಿಸಿದ ಸಚಿವರು “ದೇಶೀಯವಾಗಿ, ಭಾರತ ಜಾಗತಿಕ ಸಾಂಕ್ರಾಮಿಕದ ಹರಡುವಿಕೆ ಸಂದರ್ಭದಲ್ಲಿ ದ್ವಿಮುಖ ಮಾಹಿತಿ ಸವಾಲುಗಳನ್ನು ಎದುರಿಸಬೇಕಾಯಿತು ಎಂದರು. ಒಂದು ಬದಿಯಲ್ಲಿ ನಗರ ಪ್ರದೇಶದ ಜನತೆ ಸಾಮಾಜಿಕ ಮಾಧ್ಯಮಗಳ ಮೂಲಕ ಹಾಗು ಇತರ ಸ್ಮಾರ್ಟ್ ಫೋನ್ ಗಳ ಮೂಲಕ ತ್ವರಿತವಾಗಿ ಹಬ್ಬುವ,  ತಪ್ಪು ದಾರಿಗೆ ಎಳೆಯುವ ಮತ್ತು ಸುಳ್ಳು ಸುದ್ದಿಗಳ ಸವಾಲನ್ನು ಎದುರಿಸಬೇಕಾಯಿತು. ಇನ್ನೊಂದೆಡೆ ಗ್ರಾಮೀಣ ಮತ್ತು ದುರ್ಗಮ ಪ್ರದೇಶಗಳಲ್ಲಿಯ ಜನರು, ಬಹು ಪ್ರಾದೇಶಿಕ ಭಾಷೆಗಳಿಂದಾಗಿ ವಲಯದಿಂದ ವಲಯಕ್ಕೆ ಬದಲಾಗುವ ಸಂಪರ್ಕದ ಸಮಸ್ಯೆಯನ್ನು ಎದುರಿಸಬೇಕಾಯಿತು” ಎಂದರು.  
ಈ ಮಾಹಿತಿ ಸಾಂಕ್ರಾಮಿಕಕ್ಕೆ ಸಂಬಂಧಿಸಿ ಭಾರತದ ತ್ವರಿತಗತಿಯ ಪ್ರತಿಕ್ರಿಯೆಯ ಬಗ್ಗೆ ಸಭಿಕರಿಗೆ ತಿಳಿಸಿದ ಶ್ರೀ ಅನುರಾಗ್ ಠಾಕೂರ್ “ಭಾರತ ಸರಕಾರವು ಈ ಸವಾಲುಗಳನ್ನು ವಿಜ್ಞಾನ ಮತ್ತು ವಸ್ತುಸ್ಥಿತಿ ಆಧರಿತ ತ್ವರಿತ ಮತ್ತು ಸ್ಪಷ್ಟ ಸಂಪರ್ಕದ ಮೂಲಕ ಎದುರಿಸಿತು. ತಪ್ಪು ಮಾಹಿತಿಗಳನ್ನು ಎದುರಿಸಲು ನಿಯಮಿತವಾಗಿ  ಮತ್ತು ಅಧಿಕೃತ ಸ್ಪಷ್ಟ ಮಾಹಿತಿ ಹರಿವನ್ನು ಖಾತ್ರಿಪಡಿಸುವುದು ಭಾರತದ ಪ್ರತಿಕ್ರಿಯಾ ನೀತಿಯ ಪ್ರಮುಖ ಘಟಕಾಂಶವಾಗಿತ್ತು. ಸುಳ್ಳು ಸುದ್ದಿಗಳನ್ನು ಮತ್ತು ಸುಳ್ಳು ವಿವರಣೆಗಳನ್ನು ಇದರ ಮೂಲಕ ಎದುರಿಸಲಾಯಿತು. ನಾವು ಕೋವಿಡ್ ಕುರಿತಂತೆ ಮಾಹಿತಿ ನೀಡಲು ದೈನಂದಿನ ಸುದ್ದಿ ಗೋಷ್ಠಿಗಳನ್ನು ಏರ್ಪಾಡು ಮಾಡಿದೆವು. ಅದರ ಮೂಲಕ ಟಿ.ವಿ.ಸುದ್ದಿಗಳಲ್ಲಿ, ಮುದ್ರಣ, ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮಮಗಳಲ್ಲಿ ಮಾಹಿತಿಯನ್ನು ವ್ಯಾಪಕವಾಗಿ ಪ್ರಚುರಪಡಿಸಲಾಯಿತು” ಎಂದರು
ಮುಂದುವರಿದು ಮಾತನಾಡಿದ ಸಚಿವರು “ಭಾರತದ ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಇಂತಹ ಸುಳ್ಳು ಸುದ್ದಿಗಳನ್ನು ಮತ್ತು ವಿವರಣೆಗಳನ್ನು ತನ್ನ ವಿವಿಧ ವೇದಿಕೆಗಳ ಮೂಲಕ  ಬಯಲು ಮಾಡುವಲ್ಲಿ ಸಕ್ರಿಯವಾದಂತಹ ಪಾತ್ರವನ್ನು ನಿಭಾಯಿಸಿತು. ನಾವು ವಿವಿಧ ವಿಷಯಗಳಿಗೆ ಸಂಬಂಧಿಸಿ ಭಾರತದ  ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಸ್ಯದ ಶಕ್ತಿಯನ್ನೂ ಬಳಸಿಕೊಂಡೆವು” ಎಂದರು. 
“ಪಾರದರ್ಶಕ, ಸಕಾಲಿಕ ಮತ್ತು ನಂಬಿಕೆಗೆ ಅರ್ಹವಾದ ಮಾಹಿತಿ ಹರಿವು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಹಾಗು ನಮ್ಮ ನಾಗರಿಕರಿಗೆ ಮಾಹಿತಿಯುಕ್ತ ನಿರ್ಧಾರಗಳನ್ನು ಕೈಗೊಳ್ಳಲು ಅನುಕೂಲತೆಗಳನ್ನು ಒದಗಿಸುತ್ತದೆ. ಭಾರತವು ಇದರಲ್ಲಿ ಬಲವಾದ ನಂಬಿಕೆಯನ್ನು ಇರಿಸಿದೆ”  ಎಂದೂ  ಶ್ರೀ ಠಾಕೂರ್ ಹೇಳಿದರು.  
“ಸಾಮಾನ್ಯ ಸಭೆಯು ಈ ವರ್ಷದಲ್ಲಿ  ಒಟ್ಟಾಭಿಪ್ರಾಯದಿಂದ ಮಾಧ್ಯಮ ಸಾಕ್ಷರತಾ ಕೌಶಲ್ಯಗಳನ್ನು ಬಳಸಿ ತಪ್ಪು ಮಾಹಿತಿಯ ಪ್ರಸರಣವನ್ನು ಮತ್ತು ಸುಳ್ಳು  ಮಾಹಿತಿ ಹಬ್ಬುವಿಕೆಗೆ ಸಂಬಂಧಿಸಿದ ಕಳವಳಗಳನ್ನು ಪರಿಹರಿಸುವುದಕ್ಕಾಗಿ ಅಕ್ಟೋಬರ್ 24-31 ರ ನಡುವಿನ ವಾರವನ್ನು  “ಜಾಗತಿಕ ಮಾಧ್ಯಮ ಮತ್ತು ಮಾಹಿತಿ ಸಾಕ್ಷರತೆ ಸಪ್ತಾಹ’ ವನ್ನಾಗಿ ಆಚರಿಸುವುದಾಗಿ ಘೋಷಿಸಿದೆ. ಈ ನಿರ್ಧಾರವನ್ನು ಕೈಗೊಳ್ಳುವಲ್ಲಿ ಭಾರತವು ಮುಖ್ಯ ಗುಂಪಿನ ರಾಷ್ಟ್ರಗಳಲ್ಲಿ ಒಂದಾಗಿತ್ತು ಎಂಬುದನ್ನು ತಿಳಿಸಲು ನನಗೆ ಸಂತೋಷವಾಗುತ್ತದೆ. ಯುನೆಸ್ಕೋದಲ್ಲಿ ಇಂತಹದೇ ಗೊತ್ತುವಳಿಗೆ ಸಹಪ್ರವರ್ತಕರಾಗಿರುವವರಲ್ಲಿ ನಾವೂ ಇದ್ದೇವೆ ಎಂದರು. 
ಕೋವಿಡ್ -19 ಹಿನ್ನೆಲೆಯಲ್ಲಿ  “ಮಾಹಿತಿ ಸಾಂಕ್ರಾಮಿಕ” ಕುರಿತ ಮೊದಲ ಗಡಿಯಾಚೆಗಿನ ಪ್ರಾದೇಶಿಕ ಘೋಷಣೆಯ ಸಹ ಲೇಖಕರಲ್ಲಿ ಭಾರತವೂ ಒಂದಾಗಿದೆ. ನಾವು ವಿಶ್ವ ಸಂಸ್ಥೆಯ ಜಾಗತಿಕ ಸಂವಹನದ ಇಲಾಖೆಯ  “ಪರಿಶೀಲಿಸಲಾದ” ಮತ್ತು  “ತಡೆಹಿಡಿಯುವ ಪ್ರತಿಜ್ಞೆ” ಉಪಕ್ರಮಗಳನ್ನು ಸಕ್ರಿಯವಾಗಿ ಬೆಂಬಲಿಸಿದ್ದೇವೆ.
ಮಾಹಿತಿ ಸಾಂಕ್ರಾಮಿಕದ ಸಂದರ್ಭದಲ್ಲಿ ಜಾಗತಿಕವಾಗಿ ಸದಸ್ಯ ರಾಷ್ಟ್ರಗಳ ಜೊತೆ ಸೇರಿಕೊಂಡು ತಪ್ಪು ಮಾಹಿತಿಯ ಸಮಸ್ಯೆಯನ್ನು ಬಗೆಹರಿಸುವುದು ಮತ್ತು ಪರಸ್ಪರ ಕಲಿಯುವುದು ಸಮಸ್ಯೆಗಳನ್ನು ತಿಳಿದುಕೊಳ್ಳುವಲ್ಲಿ ಹಾಗು ಈ ಕಳವಳಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನಮ್ಮನ್ನು ಬಹಳ ದೂರ ಕೊಂಡೊಯ್ಯಬಲ್ಲುದು. 


ಹಿನ್ನೆಲೆ: 
ಮಾಹಿತಿ ಮತ್ತು ಪ್ರಜಾಪ್ರಭುತ್ವಕ್ಕಾಗಿರುವ ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು 2019ರ ಸೆಪ್ಟೆಂಬರ್ 26ರಂದು ನ್ಯೂಯಾರ್ಕಿನಲ್ಲಿ ಬಹುತ್ವಕ್ಕಾಗಿರುವ ಮಿತ್ರಕೂಟದ ಚೌಕಟ್ಟಿನಲ್ಲಿ ಆರಂಭಿಸಲಾಯಿತು. ಇದಕ್ಕೆ ಇಂದಿನವರೆಗೆ 43 ರಾಷ್ಟ್ರಗಳು ಅಂಕಿತ ಹಾಕಿವೆ. ಮತ್ತು ಅಭಿಪ್ರಾಯಗಳು ಹಾಗು ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಉತ್ತೇಜಿಸುವುದು ಹಾಗು ಮುಕ್ತ, ಬಹುತ್ವದ ಹಾಗು ನಂಬಲರ್ಹ ಮಾಹಿತಿಯು  ಲಭ್ಯವಾಗುವಂತೆ ಮಾಡುವುದು ಇದರ ಉದ್ದೇಶಗಳಲ್ಲಿ ಸೇರಿದೆ.  
ಸಹಭಾಗಿತ್ವದ ತತ್ವಗಳನ್ನು ಅನುಷ್ಠಾನ ಗೊಳಿಸಲು ಮಾಹಿತಿ ಮತ್ತು ಪ್ರಜಾಪ್ರಭುತ್ವದ ವೇದಿಕೆಯನ್ನು 2019ರ ನವೆಂಬರ್ 10ರಂದು ಗಡಿ ರಹಿತ ವರದಿಗಾರರು ಮತ್ತು 10 ಸ್ವತಂತ್ರ ನಾಗರಿಕ ಸಮಾಜ ಸಂಘಟನೆಗಳ ಪ್ರತಿನಿಧಿಗಳು  ರೂಪಿಸಿದರು. 2020ರ ನವೆಂಬರ್ 12ರಂದು ಈ ವೇದಿಕೆಯು ಮಾಹಿತಿ ಸಾಂಕ್ರಾಮಿಕದ ವಿರುದ್ಧ ಹೋರಾಟದ ತನ್ನ ಮೊದಲ ವರದಿಯನ್ನು ಪ್ರಕಟಿಸಿತು, 2021ರ ಜೂನ್ 16ರಂದು ಪತ್ರಿಕೋದ್ಯಮದ ಆರ್ಥಿಕ ಸುಸ್ಥಿರತೆ ಕುರಿತ ಎರಡನೇ ವರದಿ ಪ್ರಕಟವಾಯಿತು. (ಪತ್ರಿಕೋದ್ಯಮಕ್ಕೆ ಹೊಸ ಒಪ್ಪಂದ ಶೀರ್ಷಿಕೆಯಲ್ಲಿ) 


ಉದ್ದೇಶಗಳು
ಶೃಂಗವು ಈ ಕೆಳಗಿನ ಆದ್ಯತೆಗಳ ಮೇಲೆ ಬೆಳಕು ಬೀರುವ ಆವಕಾಶಗಳನ್ನು ಒದಗಿಸುತ್ತದೆ. 
1.ಉಚಿತ, ಬಹುತ್ವದ ಮತ್ತು ನಂಬಲರ್ಹ ಮಾಹಿತಿಯ ಲಭ್ಯತೆಯನ್ನು ಇದು ಉತ್ತೇಜಿಸುತ್ತದೆ ಮತ್ತು ಅದನ್ನು ಪ್ರತಿಪಾದಿಸುತ್ತದೆ. ಹಾಗು ಇದು ಅಭಿಪ್ರಾಯ ಹಾಗು ಅಭಿವ್ಯಕ್ತಿಯ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತದೆ. 
2. ವೇದಿಕೆಯ ಶಿಫಾರಸುಗಳನ್ನು ಚರ್ಚಿಸುತ್ತದೆ, ಅವುಗಳ ಅನುಷ್ಠಾನವನ್ನು ಪೋಷಿಸುತ್ತದೆ ಹಾಗು ಮುಂದಿನ ಕೆಲಸಗಳಿಗೆ ಬೆಂಬಲ ನೀಡುತ್ತದೆ. 
3. ಜಾಗತಿಕ ಮಾಹಿತಿ ವಿಶ್ಲೇಷಣಾ ಧೋರಣೆಗಳ ಜವಾಬ್ದಾರಿಯನ್ನು ನಿಭಾಯಿಸಲು ಮಾಹಿತಿಗಾಗಿ ಮತ್ತು ಪ್ರಜಾಪ್ರಭುತ್ವಕ್ಕಾಗಿ  ಅಂತಾರಾಷ್ಟ್ರೀಯ  ವೀಕ್ಷಣಾಲಯ ಸ್ಥಾಪಿಸುವುದಕ್ಕೆ ಗಮನ ಮತ್ತು ಸಹಭಾಗಿತ್ವಕ್ಕೆ ಅಂಕಿತ ಹಾಕಿದ  ರಾಷ್ಟ್ರಗಳು ಹಾಗು ನಾಗರಿಕ ಸಮಾಜಕ್ಕಾಗಿ ನಿಯಮಿತವಾಗಿ ವರದಿಗಳ ಪ್ರಕಟನೆ. 
4. ರಾಜ್ಯಗಳು ಮತ್ತು ಸಾರ್ವಜನಿಕರಲ್ಲಿ ಸಹಭಾಗಿತ್ವದ ತತ್ವಗಳನ್ನು ಪ್ರಚುರಪಡಿಸಲು ಜಾಗೃತಿ ಹೆಚ್ಚಳ ಮತ್ತು ಅದರ ಸಮರ್ಥನೆಗಾಗಿ ವೇದಿಕೆಗೆ ಜೋಡಿಸಲ್ಪಟ್ಟಂತೆ ನಾಗರಿಕ ಸಮಾಜಗಳ ಮಿತ್ರಕೂಟ (ಸುಮಾರು ೫೦ ಎನ್.ಜಿ.ಒ.ಗಳು) ಆರಂಭ ಮಾಡುವುದು. 
5. ಮಾಹಿತಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ಅಂತಾರಾಷ್ಟ್ರೀಯ ಸಹಭಾಗಿತ್ವ ಮತ್ತು ಮುಕ್ತ, ಬಹುತ್ವದ ಹಾಗು ನಂಬಲರ್ಹ ಮಾಹಿತಿ ಲಭ್ಯತೆಗೆ ಸಂಬಂಧಿಸಿದ ವಿಷಯಗಳಲ್ಲಿ ತೊಡಗಿಕೊಂಡಿರುವ ಅಂತಾರಾಷ್ಟ್ರೀಯ ಸಂಘಟನೆಗಳ ನಡುವೆ ಬಾಂಧವ್ಯದ ಪೋಷಣೆ

 


***



(Release ID: 1757996) Visitor Counter : 210