ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗೋವಾದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮದ ಆರೋಗ್ಯ ಕಾರ್ಯಕರ್ತರು ಮತ್ತು ಫಲಾನುಭವಿಗಳೊಂದಿಗೆ ಸೆಪ್ಟೆಂಬರ್ 18 ರಂದು ಪ್ರಧಾನಮಂತ್ರಿ ಸಂವಾದ

Posted On: 17 SEP 2021 4:34PM by PIB Bengaluru

ಗೋವಾದಲ್ಲಿ ವಯಸ್ಕ ಜನರಿಗೆ 100% ರಷ್ಟು ಮೊದಲ ಡೋಸ್ ಕೋವಿಡ್ ಲಸಿಕೆ ಹಾಕಿರುವ ಹಿನ್ನೆಲೆಯಲ್ಲಿ 2021, ಸೆಪ್ಟೆಂಬರ್ 18 ರಂದು ಬೆಳಿಗ್ಗೆ 10.30 ಕ್ಕೆ ಕೋವಿಡ್ ಲಸಿಕಾ ಕಾರ್ಯಕ್ರಮದ ಕಾರ್ಯಕರ್ತರು ಮತ್ತು ಫಲಾನುಭವಿಗಳೊಂದಿಗೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ.

ರಾಜ್ಯ ಸರ್ಕಾರ ಹಲವಾರು ಪ್ರಯತ್ನಗಳನ್ನು ಕೈಗೊಂಡಿದ್ದು, ಸಮುದಾಯದ ಕ್ರೋಡೀಕರಣಕ್ಕಾಗಿ ಟೀಕಾ ಉತ್ಸವ್ ನಂತಹ ಕಾರ್ಯಕ್ರಮದ ಆಯೋಜನೆ ಪ್ರಯತ್ನದ ಫಲವಾಗಿ ಲಸಿಕಾ ಅಭಿಯಾನ ಯಶಸ್ವಿಯಾಗಿದೆ ಮತ್ತು ವೃದ್ಧಾಶ್ರಮಗಳು, ದಿವ್ಯಾಂಗರು, ಕೆಲಸ ಮಾಡುವ ಸ್ಥಳಗಳಲ್ಲಿಯೇ ಆದ್ಯತಾ ಗುಂಪುಗಳಿಗೆ ಉದ್ದೇಶಿತ ರೀತಿಯಲ್ಲಿ ಲಸಿಕೆ ಹಾಕಿರುವ ಜತೆಗೆ ತಳಮಟ್ಟದ ಪ್ರಚಾರವನ್ನು ಸಹ ಕೈಗೊಳ್ಳಲಾಗಿದೆ. ಲಸಿಕೆ ಕುರಿತ ಸಂದೇಹಗಳು ಮತ್ತು ಇತರೆ ಜನ ಸಮೂಹದಲ್ಲಿನ ಆತಂಕ ತೊಡೆದುಹಾಕಲು ನಿರಂತರವಾಗಿ ಸಮುದಾಯವನ್ನು ತೊಡಗಿಸಿಕೊಂಡಿದೆ.  ತ್ವರಿತವಾಗಿ ಲಸಿಕೆ ಹಾಕುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ತೌಕ್ತೆ ಚಂಡಮಾರುತದಂತಹ ಸವಾಲುಗಳನ್ನು ಸಹ ಯಶಸ್ವಿಯಾಗಿ ನಿಭಾಯಿಸಿದೆ.

ಸಮಾರಂಭದಲ್ಲಿ ಗೋವಾ ಮುಖ್ಯಮಂತ್ರಿ ಅವರು ಸಹ ಪಾಲ್ಗೊಳ್ಳಲಿದ್ದಾರೆ.

****
 


(Release ID: 1756034) Visitor Counter : 207