ಪ್ರಧಾನ ಮಂತ್ರಿಯವರ ಕಛೇರಿ

ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಲೋಕಸಭಾ ಸ್ಪೀಕರ್ ಜಂಟಿಯಾಗಿ 15 ಸೆಪ್ಟೆಂಬರ್ ನಂದು ಸಂಸದ್ ಟಿವಿಗೆ ಚಾಲನೆ ನೀಡಲಿದ್ದಾರೆ

Posted On: 14 SEP 2021 3:10PM by PIB Bengaluru

ಭಾರತದ ಉಪರಾಷ್ಟ್ರಪತಿ ಮತ್ತು ರಾಜ್ಯಸಭೆ ಸಭಾಪತಿ   ಶ್ರೀ ಎಂ. ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಜಂಟಿಯಾಗಿ ಸಂಸದ್ ಟಿವಿ ಗೆ ಸಂಸತ್ ಭವನದ ಅನೆಕ್ಸ್ನ ಮುಖ್ಯ ಸಮಿತಿಯ ಕೊಠಡಿಯಲ್ಲಿ  ಸೆಪ್ಟೆಂಬರ್ 15, 2021ರಂದು ಸಂಜೆ 6 ಗಂಟೆಗೆ ಚಾಲನೆ ನೀಡಲಿದ್ದಾರೆ. ಉದ್ಘಾಟನೆಯ ದಿನಾಂಕವು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವದ ದಿನವಾಗಿದೆ .

 

ಸಂಸದ್ ಟಿವಿಯ ಬಗ್ಗೆ

ಫೆಬ್ರವರಿ, 2021 ರಲ್ಲಿ, ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಮತ್ತು 2021 ರ ಮಾರ್ಚ್ನಲ್ಲಿ ಸಂಸದ್ ಟಿವಿಯ ಸಿಇಒ ಅವರನ್ನು ನೇಮಿಸಲಾಯಿತು.

ಸಂಸದ್ ಟಿವಿ ಕಾರ್ಯಕ್ರಮಗಳು ಪ್ರಾಥಮಿಕವಾಗಿ 4 ವಿಭಾಗಗಳಲ್ಲಿರುತ್ತವೆ, ಅವುಗಳೆಂದರೆ ಸಂಸತ್ತು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಕಾರ್ಯನಿರ್ವಹಣೆ, ಆಡಳಿತ ಮತ್ತು ಯೋಜನೆಗಳು/ನೀತಿಗಳ ಅನುಷ್ಠಾನ, ಭಾರತದ ಇತಿಹಾಸ ಮತ್ತು ಸಂಸ್ಕೃತಿ ಮತ್ತು ಸಮಕಾಲೀನ ಪ್ರಕೃತಿಯ ಸಮಸ್ಯೆಗಳು, ಆಸಕ್ತಿಗಳು ಹಾಗು ಕಾಳಜಿಗಳು.

 (Release ID: 1754781) Visitor Counter : 45