ಗಣಿ ಸಚಿವಾಲಯ

ʻನಾಲ್ಕೊ ನಮಸ್ಯʼ ಮೊಬೈಲ್ ಆ್ಯಪ್‌


ʻಎಂಎಸ್ಇʼಗಳನ್ನು ಬೆಂಬಲಿಸಲು ನವೀನ ವೇದಿಕೆ ಒದಗಿಸುತ್ತದೆ

Posted On: 06 SEP 2021 4:40PM by PIB Bengaluru

ಗಣಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ʻನವರತ್ನ ಸಿಪಿಎಸ್ಇʼ ಸಂಸ್ಥೆಯಾಗಿರುವ ʻನ್ಯಾಷನಲ್ ಅಲ್ಯೂಮಿನಿಯಂ ಕಂಪನಿ ಲಿಮಿಟೆಡ್ʼ (ನಾಲ್ಕೊ), ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳ (ಎಂಎಸ್‌ಇ)  ಮಾರಾಟಗಾರರಿಗೆ ಅನುಕೂಲ ಒದಗಿಸಲು ವಿಶೇಷವಾದ 'ನಾಲ್ಕೊ ಮೈಕ್ರೋ ಅಂಡ್ ಸ್ಮಾಲ್ ಎಂಟರ್‌ಪ್ರೈಸ್ ಯೋಗಾಯೋಗ್ ಅಪ್ಲಿಕೇಶನ್' (ನಮಸ್ಯ) ಎಂಬ ದ್ವಿಭಾಷಾ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ. ಆ ಮೂಲಕ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ ಆಧುನಿಕ ಮತ್ತು ನವೀನ ವೇದಿಕೆಯನ್ನು ಒದಿಗಿಸಿ, ಅವುಗಳನ್ನು ಸಬಲೀಕರಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಕೇಂದ್ರ ಗಣಿ, ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ದೇಶದ ಗಣಿಗಾರಿಕೆ ಮತ್ತು ಖನಿಜ ವಲಯದಲ್ಲಿ ʻಎಂಎಸ್‌ಇʼ ಸಮುದಾಯವನ್ನು ತಲುಪಲು ಮತ್ತು ಪರಿಸರ ವ್ಯವಸ್ಥೆಯ ಅಭಿವೃದ್ಧಿಗಾಗಿ ನಾಲ್ಕೊ ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು.

ʻಎಂಎಸ್ಇʼಗಳ ಅಭಿವೃದ್ಧಿಗೆ ಕಂಪನಿಯ ಪ್ರಯತ್ನಗಳನ್ನು ಎತ್ತಿ ಹಿಡಿಯಲು ʻನಮಸ್ಯʼ ಆ್ಯಪ್ ವೇದಿಕೆಯನ್ನು ಒದಗಿಸುತ್ತದೆ. ಮಾರಾಟಗಾರರ ನೋಂದಣಿ ಪ್ರಕ್ರಿಯೆ, ಮಾರಾಟಗಾರರು ಪೂರೈಸಬಹುದಾದ ವಸ್ತುಗಳ ತಾಂತ್ರಿಕ ನಿರ್ದಿಷ್ಟತೆ ಸಮೇತ ಮಾಹಿತಿ, ಮಾರಾಟಗಾರರ ಅಭಿವೃದ್ಧಿ ಮತ್ತು ನಾಲ್ಕೊದ ತರಬೇತಿ ಕಾರ್ಯಕ್ರಮಗಳು ಇತ್ಯಾದಿ ಅಗತ್ಯ ಮಾಹಿತಿ ಒದಗಿಸುವ ಮೂಲಕ ಈ ಆ್ಯಪ್ ʻಎಂಎಸ್‌ಇʼಗಳನ್ನು ಸಶಕ್ತಗೊಳಿಸುತ್ತದೆ.

ಜವಾಬ್ದಾರಿಯುತ ಕಾರ್ಪೊರೇಟ್ ಸಂಸ್ಥೆಯಾಗಿ; ಭಾರತದ ಪ್ರಮುಖ ಅಲ್ಯುಮಿನಾ ಮತ್ತು ಅಲ್ಯೂಮಿನಿಯಂ ಉತ್ಪಾದಕ ಮತ್ತು ರಫ್ತುದಾರನಾಗಿ ಈ ಸಂಸ್ಥೆಯು ವ್ಯಾಪಾರ ಪ್ರಕ್ರಿಯೆಯನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ವಿಶೇಷವಾಗಿ ಗಣಿಗಾರಿಕೆ ಮತ್ತು ಲೋಹದ ವ್ಯವಹಾರದಲ್ಲಿ ತೊಡಗಿರುವ ʻಎಂಎಸ್ಇʼ ವಲಯಕ್ಕೆ ಮತ್ತು ಅದರ ಪರಿಸರ ವ್ಯವಸ್ಥೆಯಲ್ಲಿ ಸಮಗ್ರ ಬೆಳವಣಿಗೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಮುಂದುವರಿಸಲು ಈ ಉಪಕ್ರಮಗಳು ನೆರವಾಗಿವೆ. 

  

***



(Release ID: 1752675) Visitor Counter : 236