ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಮಿಥ್ಯೆ ಮತ್ತು ವಾಸ್ತವ


ಐಎನ್ ಎಸ್ ಎಸಿಒಜಿಯಲ್ಲಿ ಮಾದರಿ ಅನುಕ್ರಮಣಿಕೆ ಕ್ರಮೇಣ ಹೆಚ್ಚಳ 

ಆರಂಭಿಕವಾಗಿ ದೇಶಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ವ್ಯತ್ಯಾಸವಾಗುವ ವೈರಾಣುಗಳ ಅನುಕ್ರಮಣಿಕೆ ಪತ್ತೆಹಚ್ಚುವ ಗುರಿ 

ಅನುಕ್ರಮಣಿಕೆಗೆ ಸಾಕಷ್ಟು ಸಂಖ್ಯೆಯ ಮಾದರಿ ಕಳುಹಿಸಲು ರಾಜ್ಯಗಳಿಗೆ ಪದೇ ಪದೇ ಸೂಚನೆ

Posted On: 06 SEP 2021 11:18AM by PIB Bengaluru

ಭಾರತದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸಹ ಕೋವಿಡ್-19 ಜಿನೋಮ್ ಸೀಕ್ವೆನ್ಸಿಂಗ್ ಮತ್ತು ವಿಶ್ಲೇಷಣೆಯು ಕ್ರಮೇಣ ದೇಶದಲ್ಲಿ ಕಡಿಮೆಯಾಗುತ್ತಿದೆ ಎಂದು ಆರೋಪಿಸಿ ಕೆಲವು ಮಾಧ್ಯಮಗಳು ವರದಿಗಳನ್ನು  ಪ್ರಕಟಿಸಿವೆ. ಅಲ್ಲದೆ, ವರದಿಗಳಲ್ಲಿ ಇಲ್ಲಿಯವರೆಗೆ ದೇಶದಲ್ಲಿ ಕಡಿಮೆ ಸಂಖ್ಯೆಯ ಮಾದರಿಗಳನ್ನು ಅನುಕ್ರಮಗೊಳಿಸಿದೆ ಎಂದು ಹೇಳಲಾಗಿದೆ.

ವರದಿಗಳಲ್ಲಿ ಉಲ್ಲೇಖಿಸಿರುವ ಅನುಕ್ರಮಣಿಕೆಯ ಸಂಖ್ಯೆಯನ್ನು ಭಾರತೀಯ ಕೋವಿಡ್-19 ಜಿನೋಮ್ ಸೀಕ್ವೆನ್ಸಿಂಗ್ ಪೋರ್ಟಲ್  (http://clingen.igib.res.in/covid19genomes/) ನಿಂದ ಪಡೆದುಕೊಂಡಿದ್ದಾರೆಂದು ಸ್ಪಷ್ಡಪಡಿಸಲಾಗಿದೆ

ಐಜಿಐಜಿ ಎಸ್ ಎಫ್ ಟಿಪಿ ಯಲ್ಲಿ ವಿಶ್ಲೇಷಿಸಿದ ಅನುಕ್ರಮಗಳು ಮಾದರಿಗಳ ಸಂಗ್ರಹದ ದಿನಾಂಕದ ಪ್ರಕಾರ ಮತ್ತು  ನಿರ್ದಿಷ್ಟ ತಿಂಗಳುಗಳಲ್ಲಿ ಅನುಕ್ರಮವಾಗಿ ಮಾದರಿಗಳ ಸಂಖ್ಯೆಯನ್ನು ಚಿತ್ರಿಸಿರುವುದಿಲ್ಲ. ಐಎನ್ ಎಸ್ ಎಸಿಒಜಿ ಒಕ್ಕೂಟದ ಪ್ರಯೋಗಾಲಯಗಳಿಂದ ಅನುಕ್ರಮವಾಗಿರುವ ಮಾದರಿಗಳು ಸಹ ಅಯಾ ರಾಜ್ಯಗಳು ಕಳುಹಿಸಿದ ಮಾದರಿಗಳ ಮೇಲೆ ಅವಲಂಬಿತವಾಗಿರುತ್ತದೆ.

ತಿಂಗಳವಾರು ಅನುಕ್ರಮಣಿಕೆ ನಡೆಸಿರುವ ಮಾದರಿಯ ಸಂಖ್ಯೆಗಳು ಕೆಳಗಿನಂತಿವೆ.

ಇದಲ್ಲದೆ, ಆರಂಭಿಕವಾಗಿ ಐಎನ್ ಎಸ್ ಎಸಿಒಜಿ ಪ್ರಯೋಗಾಲಯಗಳ ಗುರಿ, ದೇಶಕ್ಕೆ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ವೈರಾಣು ವ್ಯತ್ಯಾಸದ (ವಿಒಸಿ) ಪತ್ತೆ ಹಚ್ಚುವುದಾಗಿತ್ತು ಮತ್ತು ಐಎನ್ ಎಸ್ ಎಸಿಒಜಿ ಸ್ಥಾಪನೆ ದಿನಾಂಕ (2020 ಡಿಸೆಂಬರ್ 26)ರಿಂದ ಒಂದು ತಿಂಗಳ ಅವಧಿಯಲ್ಲಿ (ಇನಕ್ಯುಬೇಷನ್ ಅವಧಿ 28 ದಿನಕ್ಕೆ ಹೆಚ್ಚಳ) ವಿಒಸಿ ಹೊಂದಿರುವ ಯಾವುದಾದರೂ ವ್ಯಕ್ತಿ ದೇಶದೊಳಗೆ ಬಂದಿದ್ದಾರೆಯೇ ಎಂಬುದನ್ನು ಪರಿಶೀಲಿಸುವುದು. ದೇಶದೊಳಗಿನ ವಿಒಸಿ ಇರುವಿಕೆಯನ್ನು ಪತ್ತೆಹಚ್ಚಲು ಶೇ.5ರಷ್ಟು ಪಾಸಿಟಿವಿಟಿಗಳನ್ನು (ಆರ್ ಟಿ-ಪಿಸಿಆರ್ ಮೂಲಕ) ಅನುಕ್ರಮಣಿಕೆಗೆ ಗುರಿಪಡಿಸಲಾಗಿದೆ. ಎರಡೂ ಉದ್ದೇಶಗಳನ್ನು 2021 ಜನವರಿ ಅಂತ್ಯಕ್ಕೆ ಸಾಧಿಸಲಾಯಿತು.

ಮಹಾರಾಷ್ಟ್ರ, ಪಂಜಾಬ್ ಮತ್ತು ದೆಹಲಿಯಂತಹ ಹಲವು ರಾಜ್ಯಗಳಲ್ಲಿ ಫೆಬ್ರವರಿ ತಿಂಗಳ ನಂತರ ಸೋಂಕು ಏರಿಕೆಯ ಪ್ರವೃತ್ತಿ ಕಂಡು ಬಂದಿತು ಮತ್ತು ಅದಕ್ಕೆ ಪ್ರತಿಯಾಗಿ ವಿದರ್ಭದ 4 ಜಿಲ್ಲೆಗಳಲ್ಲಿ ಮತ್ತು ಮಹಾರಾಷ್ಟ್ರದ 10 ಜಿಲ್ಲೆಗಳಲ್ಲಿ ಮತ್ತು ಪಂಜಾಬ್ ಸುತ್ತಮುತ್ತಲಿನ 10 ಜಿಲ್ಲೆಗಳಲ್ಲಿ ಸೀಕ್ವೆನ್ಸಿಂಗ್ ಅನ್ನು ಹೆಚ್ಚಳ ಮಾಡಲಾಗಿದೆ.

ಇದೀಷ್ಟೇ ಅಲ್ಲದೆ, ತಿಂಗಳಿಗೆ 300 ಮಾದರಿಗಳನ್ನು ಅಥವಾ ಪ್ರತಿ ರಾಜ್ಯಕ್ಕೆ 10 ಸೆಂಟಿನೆಂಟಲ್ ಸೈಟ್ ಗಳೆಂದು ಸಂಖ್ಯೆಗಳನ್ನು ನಿಗದಿಪಡಿಸಿಲ್ಲ. ಇವು ಸೂಚಕ ಸಂಖ್ಯೆಗಳಾಗಿದ್ದು, ಎಲ್ಲ ಭಾಗಗಳಿಂದ ಭೌಗೋಳಿಕ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವ ಹೆಚ್ಚಿನ ಸೆಂಟಿನೆಂಟಲ್ ಸೈಟ್ ಗಳನ್ನು ಗುರುತಿಸುವ ಸರಳ ಅವಕಾಶವನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾಗಿದೆ.

ಸೆಂಟಿನೆಂಟಲ್ ಸೈಟ್ ಗಳ ಜೊತೆಗೆ ಲಸಿಕೆ ಕಂಡುಹಿಡಿಯುವಲ್ಲಿ ಮಹತ್ವದ ಪ್ರಗತಿ, ಮರು ಸೋಂಕು ಕಾಣಿಸಿಕೊಂಡಿರುವುದು ಅಥವಾ ಇತರೆ ಅಸಮಾನ್ಯ ಸಂಗತಿಗಳ ಮಾದರಿಗಳನ್ನು ಅನುಕ್ರಮಣಿಕೆಗೆ ಐಎನ್ ಎಸ್ ಎಸಿಒಜಿ ಪ್ರಾಯೋಗಾಲಯಗಳಿಗೆ ಕಳುಹಿಸುವ ಆಯ್ಕೆಯು ರಾಜ್ಯಗಳಿಗಿದೆ.

ಅಲ್ಲದೆ, ಸೆಂಟಿನೆಂಟಲ್ ಕಣ್ಗಾವಲಿನ ಕಾರ್ಯತಂತ್ರವು ಭೌಗೋಳಿಕವಾಗಿ ಪ್ರತಿಯೊಂದು ರಾಜ್ಯದ ಮಾದರಿಗಳನ್ನು ಪರಿಗಣಿಸಿ, ಅವು ಶೇ.5ರಷ್ಟು ಖಚಿತಪಡಿಸಿಕೊಳ್ಳಲಾಗಿದೆ, ಆದರೆ ಮಾದರಿ ಕಾರ್ಯತಂತ್ರದಲ್ಲಿ ಕೆಲವು ಜಿಲ್ಲೆಗಳಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆತಿದೆ ಮತ್ತು ಕೆಲವು ರಾಜ್ಯಗಳ ಕೆಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರೆತಿಲ್ಲ. ಪಾಸಿಟಿವಿಟಿ ದರ ಇಳಿಕೆಯಾಗುತ್ತಿದ್ದಂತೆಯೇ, ವಾರದಲ್ಲಿ ಶೂನ್ಯ ಅಥವಾ ಒಂದಂಕಿ ಹೊಸ ಪ್ರಕರಣಗಳು ಕಂಡು ಬರುತ್ತಿದ್ದ ಜಿಲ್ಲೆಗಳಿಂದ ಬರುತ್ತಿದ್ದ ಮಾದರಿಗಳ ಲಭ್ಯತೆಯೂ ಸಹ ಕಡಿಮೆಯಾಯಿತು. ಸದ್ಯ, ದೇಶದ ಸುಮಾರು 86 ಜಿಲ್ಲೆಗಳಲ್ಲಿ ವಾರದ ಹೊಸ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿದಿದೆ.

ಕಳೆದ ಒಂದು ತಿಂಗಳಲ್ಲಿ ಕೇರಳ ಮತ್ತು ಮಹಾರಾಷ್ಟ್ರ ಎರಡು ರಾಜ್ಯಗಳಲ್ಲಿ ಮಾತ್ರ ಬಹುತೇಕ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಸದ್ಯ ಒಟ್ಟು 45,000 ಪ್ರಕರಣಗಳಲ್ಲಿ 32,000ಕ್ಕೂ ಅಧಿಕ ಪ್ರಕರಣಗಳು ಕೇರಳದಲ್ಲಿ ಮತ್ತು 4,000ಕ್ಕೂ ಅಧಿಕ ಪ್ರಕರಣಗಳು ಮಹಾರಾಷ್ಟ್ರದಲ್ಲಿ ಪತ್ತೆಯಾಗಿವೆ, ಅಂದರೆ ಶೇ.80ಕ್ಕೂ ಅಧಿಕ ಪ್ರಕರಣಗಳು ಎರಡು ರಾಜ್ಯಗಳಲ್ಲಿವೆ, ಉಳಿದ 9,000 ಪ್ರಕರಣಗಳು ಅಂದರೆ ಶೇ. 20 ರಷ್ಟು ಪ್ರಕರಣಗಳು ಉಳಿದ ದೇಶದ ಉಳಿದ ರಾಜ್ಯಗಳಲ್ಲಿವೆಇದನ್ನು ರಾಜ್ಯಗಳ ಸೀಕ್ವೆನ್ಸಿಂಗ್ ಮಾದರಿಯ ವಿವರಗಳಲ್ಲಿ ತಿಳಿಯಬಹುದಾಗಿದೆ.

ಜುಲೈನಿಂದೀಚೆಗೆ ಮಾದರಿ ವಿವರಗಳ ನಿಖರ ಹಂಚಿಕೆ ಮತ್ದತು ಡಬ್ಲೂಜಿಎಸ್  ಫಲಿತಾಂಶಗಳ ಸಕಾಲಿಕ ಸಂವಹನಕ್ಕಾಗಿ ಸೆಂಟಿನೆಂಟಲ್ ಸೈಟ್ ಗಳಿಂದ ಡಬ್ಲೂ ಜಿಎಸ್ ಗಳಿಗಾಗಿ ಮಾದರಿ ದತ್ತಾಂಶವನ್ನು ಐಎಚ್ ಐಪಿ ಪೋರ್ಟಲ್ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಇದು ಮಾದರಿ ವಿವರಗಳು ಮತ್ತು ಡಬ್ಲೂಜಿಎಸ್ ಫಲಿತಾಂಶಗಳ ನೈಜ ಸಕಾಲಿಕ ಹಂಚಿಕೆಯನ್ನು ಖಾತ್ರಿಪಡಿಸುತ್ತದೆ. ಅದರಂತೆ ಜುಲೈನಲ್ಲಿ 9066 ಮಾದರಿಗಳನ್ನು ಸೆಂಟಿನೆಂಟಲ್ ಸಟ್ಸ್ ಮೂಲಕ ಕಳುಹಿಸಲಾಗಿದೆ ಮತ್ತು ಆಗಸ್ಟ್ ನಲ್ಲಿ 6969 ಮಾದರಿಗಳನ್ನು ಹಂಚಿಕೊಳ್ಳಲಾಗಿದೆ.

ಪ್ಯಾಂಗೋ ಲೈನೇಜಸ್ ಮೂಲಕ (ನಾನಾ ಐಎನ್ ಎಸ್ ಎಸಿಒಜಿ ಪ್ರಯೋಗಾಲಯಗಳು) ಎನ್ ಡಿಸಿಪಿ ಸ್ವೀಕರಿಸಿರುವ ಮಾಸಿಕವಾರು ಮಾದರಿಗಳ ವಿವರಗಳು.

***



(Release ID: 1752527) Visitor Counter : 238