ಕಲ್ಲಿದ್ದಲು ಸಚಿವಾಲಯ

ಆಜಾ಼ದಿ ಕಾ ಅಮೃತ್ ಮಹೋತ್ಸವ ಆಚರಣೆಯ ಅಂಗವಾಗಿ ಬಿಸಿಸಿಎಲ್, ಕಲ್ಲಿದ್ದಲು ಸಚಿವಾಲಯದಿಂದ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜನೆ

Posted On: 04 SEP 2021 3:00PM by PIB Bengaluru

ಅಜಾ಼ದಿ ಕಾ ಅಮೃತ್ ಮಹೋತ್ಸವದ (AKAM)  ರಾಷ್ಟ್ರವ್ಯಾಪಿ ಆಚರಣೆಗಳ ಭಾಗವಾಗಿ, ಕಲ್ಲಿದ್ದಲು ಸಚಿವಾಲಯದ ಅಡಿಯ ಮಿನಿರತ್ನ ಕಂಪನಿ - ಭಾರತ ಕೋಕಿಂಗ್ ಕೋಲ್ ಲಿಮಿಟೆಡ್ (BCCL) ನೈರ್ಮಲ್ಯ ಮತ್ತು ಕೋವಿಡ್ -19 ಸಂಬಂಧಿತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು.  ಅಭಿಯಾನದ ಭಾಗವಾಗಿ, ಬಿಸಿಸಿಎಲ್‌ನ 'ಸಿಎಸ್‌ಆರ್' ಇಲಾಖೆಯು 125 ಹ್ಯಾಂಡ್ ಸ್ಯಾನಿಟೈಸರ್‌ಗಳು ಮತ್ತು   ಮಾಸ್ಕ್‌ಗಳನ್ನು ವಿತರಿಸಿತು.  ಜಾರ್ಖಂಡ್‌ನ ಧನ್‌ಬಾದ್‌ನ ಪೂಟ್ಕಿಬಲಿಹಾರಿ (ಪಿಬಿ) ಪ್ರದೇಶದಲ್ಲಿರುವ  ಎಸ್‌ಸಿ/ ಎಸ್‌ಟಿ/ ಒಬಿಸಿ ಬಹುಸಂಖ್ಯಾತ ಗ್ರಾಮ ಅಲ್ಜೋರಿಯಾ ಬಸ್ತಿ ನಿವಾಸಿಗಳಿಗೆ ಇವುಗಳನ್ನು ವಿತರಿಸಲಾಯಿತು.

ದಿವ್ಯಾಂಗ ಮಕ್ಕಳಿಗಾಗಿ ಮೀಸಲಾದ ಕಲಿಕಾ ಕೇಂದ್ರವಾದ ಜಗಜೀವನ್ ನಗರದ ಪೆಹಲಾ ಕದಮ್ ಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಹ್ಯಾಂಡ್ ಸ್ಯಾನಿಟೈಸರ್ ಮತ್ತು  ಮಾಸ್ಕ್‌ಗಳನ್ನು ಬಿಸಿಸಿಎಲ್ ವಿತರಿಸಿತು. ಸಮಾರಂಭದ ಆಯೋಜಕರು ವಿದ್ಯಾರ್ಥಿಗಳಿಗೆ ಕೈತೊಳೆಯುವ ಮತ್ತು ಮುಖಕ್ಕೆ ಮಾಸ್ಕ್ ಧರಿಸುವ ಅಭ್ಯಾಸವನ್ನು ಮುಂದುವರಿಸುವ ಅಗತ್ಯದ ಬಗ್ಗೆ ಅರಿವು ಮೂಡಿಸಿದರು. ಆಜಾ಼ದಿ ಕಾ ಅಮೃತ ಮಹೋತ್ಸವ ಆಚರಣೆಗೆ ಅನುಗುಣವಾಗಿ, ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

***(Release ID: 1752007) Visitor Counter : 284