ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಬು ಧಾಬಿ ಯುವರಾಜ ಎಚ್ ಎಚ್ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ನಡುವೆ ದೂರವಾಣಿ ಸಂಭಾಷಣೆ

Posted On: 03 SEP 2021 10:34PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಬು ಧಾಬಿ ಯುವರಾಜ ಎಚ್.ಎಚ್. ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು. ಭಾರತ – ಸಂಯುಕ್ತ ಅರಬ್ ಎಮಿರೇಟ್ಸ್(ಯುಎಇ) ನಡುವಿನ ಸಮಗ್ರ ಕಾರ್ಯತಂತ್ರ ಪಾಲುದಾರಿಕೆ ಅಡಿ ವಿವಿಧ ವಲಯಗಳಲ್ಲಿ ಮಾಡಿಕೊಂಡಿರುವ ದ್ವಿಪಕ್ಷೀಯ ಸಹಕಾರದ ಮುಂದುವರಿದ ಪ್ರಗತಿ ಕುರಿತು ಉಭಯ ನಾಯಕರು ಸಕಾರಾತ್ಮಕ ಮೌಲ್ಯಮಾಪನ ನಡೆಸಿದರು.

ಕೋವಿಡ್-19 ಸಾಂಕ್ರಾಮಿಕ ಕಾಲಘಟ್ಟದಲ್ಲಿ ಸಂಯುಕ್ತ ಅರಬ್ ಎಮಿರೇಟ್ಸ್ ಆಡಳಿತವು ಭಾರತೀಯ ಸಮುದಾಯಕ್ಕೆ ನೀಡಿದ ಬೆಂಬಲಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ದುಬೈನಲ್ಲಿ 2021 ಅಕ್ಟೋಬರ್ 1ರಿಂದ ನಡೆಯುವ ವಸ್ತು ಪ್ರದರ್ಶನ (ಎಕ್ಸ್|ಪೋ)-2020ಕ್ಕೆ ಅವರು ಶುಭ ಕೋರಿದರು.

ಭಾರತ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನಡುವಿನ ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ವಿಷಯಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಿದರು. ಭಯೋತ್ಪಾದನೆ ಮತ್ತು ಮೂಲಭೂತವಾದಕ್ಕೆ ಇಡೀ ವಿಶ್ವದಲ್ಲೇ ಜಾಗವಿಲ್ಲ. ಇಂತಹ ದುಷ್ಟಶಕ್ತಿಗಳನ್ನು ನಿಗ್ರಹಿಸಲು, ಸಮರ್ಥವಾಗಿ ಹತ್ತಿಕ್ಕಲು ಅಂತಾರಾಷ್ಟ್ರೀಯ ಸಮುದಾಯ ಜತೆಗೂಡಿ ನಿಲ್ಲಬೇಕು ಎಂದು ಉಭಯ  ನಾಯಕರು ಒಮ್ಮತಾಭಿಪ್ರಾಯ ಹೊರಹಾಕಿದರು.

***


(Release ID: 1752003) Visitor Counter : 214