ಹಣಕಾಸು ಸಚಿವಾಲಯ

2021ರ ಆಗಸ್ಟ್‌ನಲ್ಲಿ ಜಿ.ಎಸ್.ಟಿ ಆದಾಯ ಸಂಗ್ರಹ


ಆಗಸ್ ನಲ್ಲಿ 1,12,020 ಕೋಟಿ ರೂ ಜಿ.ಎಸ್.ಟಿ. ಆದಾಯ ಕ್ರೋಡೀಕರಣ

Posted On: 01 SEP 2021 1:18PM by PIB Bengaluru

2021 ಆಗಸ್ಟ್‌ನಲ್ಲಿ  1,12,020 ಕೋಟಿ ರೂ ಜಿ.ಎಸ್.ಟಿ. ಆದಾಯ ಸಂಗ್ರಹವಾಗಿದ್ದು, ಸಿ.ಜಿ.ಎಸ್.ಟಿ 20,522 ಕೋಟಿ ರೂ, ಎಸ್.ಜಿ.ಎಸ್.ಟಿ 20,605 ಕೋಟಿ ರೂ, 56,246 ಕೋಟಿ ರೂ .ಜಿ.ಎಸ್.ಟಿ [ಸರಕುಗಳ ಆಮದು ವಲಯದಲ್ಲಿ ಸಂಗ್ರಹವಾಗಿರುವ 26,884 ಕೋಟಿ ರೂ ಒಳಗೊಂಡಂತೆಮತ್ತು ಸೆಸ್ ರೂಪದಲ್ಲಿ 8,646 ಕೋಟಿ ರೂ [ಸರಕುಗಳ ಆಮದು ವಲಯದಲ್ಲಿ ಸಂಗ್ರಹವಾಗಿರುವ 646 ಕೋಟಿ ರೂ ಸೇರಿ] ಕ್ರೋಡೀಕರಣವಾಗಿದೆ

ಸರ್ಕಾರ ಸಿ.ಜಿ.ಎಸ್.ಟಿಗೆ 23,043 ಕೋಟಿ ರೂ ಮತ್ತು .ಜಿ.ಎಸ್.ಟಿಯಿಂದ ಎಸ್.ಜಿ.ಎಸ್.ಟಿ.ಗೆ 19,139 ಕೋಟಿ ರೂ ಮೊತ್ತವನ್ನು ನಿಯಮಿತವಾಗಿ ಪರಿಹಾರದ ರೂಪದಲ್ಲಿ ಇತ್ಯರ್ಥಪಡಿಸಿದೆ. ಕೇಂದ್ರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ನಡುವೆ 50:50 ಅನುಪಾತದಲ್ಲಿ .ಜಿ.ಎಸ್.ಟಿ ಯಲ್ಲಿ ತಾತ್ಕಾಲಿಕ ಪರಿಹಾರದ ರೂಪವಾಗಿ ಕೇಂದ್ರ 24,000 ಕೋಟಿ ರೂ ಇತ್ಯರ್ಥಪಡಿಸಿದೆ. 2021 ಆಗಸ್ಟ್‌ನಲ್ಲಿ  ಕೇಂದ್ರ ಮತ್ತು ರಾಜ್ಯಗಳ ನಡುವೆ ನಿಯಮಿತ ಮತ್ತು ತಾತ್ಕಾಲಿಕ ಆದಾಯ ಹಂಚಿಕೆಯಲ್ಲಿ ಸಿ.ಜಿ.ಎಸ್.ಟಿಗೆ 55,565 ಕೋಟಿ ರೂ ಮತ್ತು ಎಸ್.ಜಿ.ಎಸ್.ಟಿಗೆ 57,744 ಕೋಟಿ ರೂ ನೀಡುವುದನ್ನು ಇತ್ಯರ್ಥಪಡಿಸಿದೆ.

2021 ಆಗಸ್ಟ್‌ನಲ್ಲಿ  ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ30 ರಷ್ಟು ಹೆಚ್ಚು ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಆಗಸ್ಟ್‌ನಲ್ಲಿ  ದೇಶೀಯ ವಹಿವಾಟಿನ ಎಲ್ಲಾ ಮೂಲಗಳಿಂದ ಶೇ 27 ರಷ್ಟು ಹೆಚ್ಚು ಆದಾಯ ಬಂದಿದೆ.  2019-20 ಸಾಲಿನ ಆಗಸ್ಟ್‌ನಲ್ಲಿ  98,202 ಕೋಟಿ ರೂ ಕ್ರೋಡೀಕರಣವಾಗಿದ್ದು, ಬಾರಿ 14% ರಷ್ಟು ಪ್ರಗತಿ ದಾಖಲಿಸಿದೆ

ಕಳೆದ 9 ತಿಂಗಳಿಂದ ಜಿ.ಎಸ್.ಟಿ ಸಂಗ್ರಹ ಒಂದು ಲಕ್ಷ ಕೋಟಿ ರೂ ದಾಟುತ್ತಿದ್ದು, 2021 ಜೂನ್ ನಲ್ಲಿ ಕೋವಿಡ್ ಎರಡನೇ ಅಲೆ ಕಾರಣ ಒಂದು ಲಕ್ಷ ಕೋಟಿ ರೂಗಿಂತ ಕಡಿಮೆ ಸಂಗ್ರಹವಾಗಿತ್ತು. ಕೋವಿಡ್ ನಿಯಂತ್ರಣಗಳನ್ನು ಸುಗಮಗೊಳಿಸಿದ ಕಾರಣ ಜುಲೈ ಮತ್ತು ಆಗಸ್ಟ್‌ನಲ್ಲಿ  ಒಂದು ಲಕ್ಷ ಕೋಟಿ ರೂ ಗಿಂತ ಹೆಚ್ಚು ಆದಾಯ ಸಂಗ್ರಹವಾಗಿದೆ. ಇದು ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸ್ಪಷ್ಟ ಸಂಕೇವಾಗಿದೆ. ವಂಚನೆ ವಿರುದ್ಧದ ಕಾರ್ಯಾಚರಣೆ, ಅದರಲ್ಲೂ ವಿಶೇಷವಾಗಿ ನಕಲಿ ಬಿಲ್ ಗಳ ವಿರುದ್ಧ ಹೆಚ್ಚಿನ ಕ್ರಮಗಳನ್ನು ಕೈಗೊಂಡ ಪರಿಣಾಮ ಆರ್ಥಿಕ ಬೆಳವಣಿಗೆಯಾಗುತ್ತಿರುವ ಜತೆಗೆ ಜಿ.ಎಸ್.ಟಿ. ಸಂಗ್ರಹಕ್ಕೂ ಹೆಚ್ಚಿನ ರೀತಿಯಲ್ಲಿ ನೆರವಾಗುತ್ತಿದೆ. ಮುಂಬರುವ ತಿಂಗಳುಗಳಲ್ಲಿಯೂ ಜಿ.ಎಸ್.ಟಿ. ದೃಢವಾದ ಆದಾಯ ಮುಂದುವರಿಯುವ ಸಾಧ್ಯತೆಯಿದೆ.

2020 ಆಗಸ್ಟ್ ಗೆ ಹೋಲಿಸಿದರೆ 2021  ಆಗಸ್ಟ್‌ನಲ್ಲಿ  ರಾಜ್ಯವಾರು ಜಿ.ಎಸ್.ಟಿ ಸಂಗ್ರಹದ ಮಾಹಿತಿ  ಪಟ್ಟಿಯಲ್ಲಿದೆ

 

ರಾಜ್ಯ

ಆಗಸ್-20

ಆಗಸ್ಟ್ -21

% ರಷ್ಟು ಪ್ರಗತಿ

1

ಜಮ್ಮು ಮತ್ತು ಕಾಶ್ಮೀರ

326

392

20%

2

ಹಿಮಾಚಲ ಪ್ರದೇಶ

597

704

18%

3

ಪಂಜಾಬ್

1,139

1,414

24%

4

ಚಂಡಿಘರ್

139

144

4%

5

ಉತ್ತರಾಖಂಡ

1,006

1,089

8%

6

ಹರ್ಯಾಣ

4,373

5,618

28%

7

ದೆಹಲಿ

2,880

3,605

25%

8

ರಾಜಸ್ಥಾನ

2,582

3,049

18%

9

ಉತ್ತರ ಪ್ರದೇಶ

5,098

5,946

17%

10

ಬಿಹಾರ

967

1,037

7%

11

ಸಿಕ್ಕಿಂ

147

219

49%

12

ಅರುಣಾಚಲ ಪ್ರದೇಶ

35

53

52%

13

ನಾಗಲ್ಯಾಂಡ್

31

32

2%

14

ಮಣಿಪುರ

26

45

71%

15

ಮಿಜೋರಾಂ

12

16

31%

16

ತ್ರಿಪುರ

43

56

30%

17

ಮೇಘಾಲಯ

108

119

10%

18

ಅಸ್ಸಾಂ

709

959

35%

19

ಪಶ್ಚಿಮ ಬಂಗಾಳ

3,053

3,678

20%

20

ಜಾರ್ಖಂಡ್

1,498

2,166

45%

21

ಒಡಿಶಾ

2,348

3,317

41%

22

ಚತ್ತೀಸ್ ಘರ್

1,994

2,391

20%

23

ಮಧ್ಯಪ್ರದೇಶ

2,209

2,438

10%

24

ಗುಜರಾತ್

6,030

7,556

25%

25

ದಾಮನ್ ಮತ್ತು ದಿಯು

70

1

-99%

26

ದಾದ್ರ ಮತ್ತು ನಾಗರ್ ಹವೇಲಿ

145

254

74%

27

ಮಹಾರಾಷ್ಟ್ರ

11,602

15,175

31%

29

ಕರ್ನಾಟಕ

5,502

7,429

35%

30

ಗೋವಾ

213

285

34%

31

ಲಕ್ಷ ದ್ವೀಪ

0

1

220%

32

ಕೇರಳ

1,229

1,612

31%

33

ತಮಿಳು ನಾಡು

5,243

7,060

35%

34

ಪುದುಚೇರಿ

137

156

14%

35

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

13

20

58%

36

ತೆಲಂಗಾಣ

2,793

3,526

26%

37

ಆಂಧ್ರ ಪ್ರದೇಶ

1,955

2,591

33%

38

ಲಡಾಕ್

5

14

213%

97

ಇತರೆ ಪ್ರದೇಶ

180

109

-40%

99

ಕೇಂದ್ರ ವ್ಯಾಪ್ತಿ

161

214

33%

 

ಒಟ್ಟಾರೆ

66,598

84,490

27%

***



(Release ID: 1751105) Visitor Counter : 317