ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಐರೋಪ್ಯ ಒಕ್ಕೂಟ(ಮಂಡಳಿ)ದ ಅಧ್ಯಕ್ಷ ಚಾರ್ಲ್ಸ್ ಮಿಶೆಲ್ ನಡುವೆ ದೂರವಾಣಿ ಮಾತುಕತೆ

Posted On: 31 AUG 2021 8:46PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಐರೋಪ್ಯ ಒಕ್ಕೂಟ(ಮಂಡಳಿ) ಅಧ್ಯಕ್ಷ ಚಾರ್ಲ್ಸ್ ಮಿಶೆಲ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಉಭಯ ನಾಯಕರು ಇತ್ತೀಚಿನ ಆಫ್ಘಾನಿಸ್ತಾನದ ಬೆಳವಣಿಗೆಗಳು, ಅದರಿಂದ ಭಾಗ ಮತ್ತು ವಿಶ್ವದೆಲ್ಲೆಡೆ ಆಗುತ್ತಿರುವ ಪರಿಣಾಮಗಳ ಕುರಿತು ಚರ್ಚಿಸಿದರು. ಅಪಾರ  ಸಾವು-ನೋವುಗಳಿಗೆ ಕಾರಣವಾದ ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಭೀಕರ ಭಯೋತ್ಪಾದಕ ದಾಳಿಯನ್ನು ಅವರು ತೀವ್ರವಾಗಿ ಖಂಡಿಸಿದರು. ಅಫ್ಘಾನಿಸ್ತಾನದಲ್ಲಿ  ಸ್ಥಿರ ಮತ್ತು ಸುಭದ್ರ ಪರಿಸ್ಥಿತಿ ನೆಲೆಸಲು, ಶಾಶ್ವತ ಶಾಂತಿ ಕಾಪಾಡಲು ಅಗತ್ಯವಾದ ಕ್ರಮಗಳ ಕುರಿತು ಇಬ್ಬರೂ ನಾಯಕರು ಚರ್ಚಿಸಿದರಲ್ಲದೆ, ನಿಟ್ಟಿನಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟ ನಿರ್ವಹಿಸಬಹುದಾದ ಸಂಭಾವ್ಯ ಪಾತ್ರಗಳ ಕುರಿತು ಸಮಾಲೋಚನೆ ನಡೆಸಿದರು.

ಅಲ್ಲದೆ, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮತ್ತು ಜಾಗತಿಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು, ಅದರಲ್ಲೂ ವಿಶೇಷವಾಗಿ ಅಫ್ಘಾನಿಸ್ತಾನದ ಅಹಿತಕರ ಬೆಳವಣಿಗೆಗಳನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ನಿರಂತರ ಸಂಪರ್ಕ ಸಾಧಿಸಲು ಇಬ್ಬರೂ ನಾಯಕರು ಒಪ್ಪಿಗೆ ಸೂಚಿಸಿದರು.

***



(Release ID: 1751036) Visitor Counter : 182