ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
azadi ka amrit mahotsav

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯವರು ಗುಜರಾತ್ ನ ಅಂಕಲೇಶ್ವರದಲ್ಲಿ ತಯಾರಿಸಿದ ಕೋವಾಕ್ಸಿನ್ ನ ಮೊದಲ ವಾಣಿಜ್ಯ ಬ್ಯಾಚ್ ಅನ್ನು ಬಿಡುಗಡೆ ಮಾಡಿದರು.


ಅಂಕಲೇಶ್ವರ ಕಾರ್ಖಾನೆಯು ಇಂದಿನಿಂದ ತಿಂಗಳಿಗೆ 1 ಕೋಟಿ ಡೋಸ್ ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ:
ಶ್ರೀ ಮನ್ಸುಖ್ ಮಾಂಡವೀಯ

ಮಾನ್ಯ ಪ್ರಧಾನ ಮಂತ್ರಿಯವರ ದೂರದೃಷ್ಟಿಯಿಂದಾಗಿ, ಭಾರತವು ತನ್ನ ಮೊದಲ ಸ್ಥಳೀಯ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು: ಕೇಂದ್ರ ಆರೋಗ್ಯ ಸಚಿವ

ಭಾರತ್ ಬಯೋಟೆಕ್ ಸ್ಥಿರವಾಗಿ 1 ಶತಕೋಟಿ ಡೋಸ್ ವಾರ್ಷಿಕ ಸಾಮರ್ಥ್ಯದ ಗುರಿಯತ್ತ ಸಾಗುತ್ತಿದೆ, ಹೈದರಾಬಾದ್, ಮಾಲೂರು, ಅಂಕಲೇಶ್ವರ ಮತ್ತು ಪುಣೆಯಲ್ಲಿ ವಿಶೇಷ ಜೈವಿಕ ಸುರಕ್ಷಾ ಕಂಟೈನ್ಮೆಂಟ್ ಸೌಲಭ್ಯಗಳನ್ನು ಹೊಂದಿದೆ

Posted On: 29 AUG 2021 1:09PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಮನ್ಸುಖ್ ಮಾಂಡವಿಯಾ ಇಂದು ಕೋವ್ಯಾಕ್ಸಿನ್ ನ ಮೊದಲ ವಾಣಿಜ್ಯ ಬ್ಯಾಚ್ ಅನ್ನು ಗುಜರಾತ್ ನ ಅಂಕಲೇಶ್ವರದಲ್ಲಿರುವ ಭಾರತ್ ಬಯೋಟೆಕ್ ನ ಚಿರೋನ್ ಬೆಹ್ರಿಂಗ್ ಲಸಿಕೆ ಕೆಂದ್ರದಿಂದ ಬಿಡುಗಡೆ ಮಾಡಿದರು. ನವಸಾರಿಯ ಸಂಸದರಾದ ,ಶ್ರೀ ಸಿ ಆರ್ ಪಾಟೀಲ್, ಅಂಕಲೇಶ್ವರ ಶಾಸಕರಾದ ಶ್ರೀ ಈಶ್ವರಸಿಂಹ ಪಟೇಲ್,  ಶ್ರೀ. ದುಷ್ಯಂತ್ ಪಟೇಲ್, ಶಾಸಕರು ಮತ್ತು ಭಾರತ್ ಬಯೋಟೆಕ್  ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೃಷ್ಣಾ ಎಲ್ಲಾ  ಸಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
 


ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಮಾಂಡವಿಯಾ ಮಾನ್ಯ ಪ್ರಧಾನ ಮಂತ್ರಿಯವರ ದೂರದೃಷ್ಟಿಯಿಂದಾಗಿ ಭಾರತವು ತನ್ನ ಮೊದಲ ಸ್ಥಳೀಯ ಲಸಿಕೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು ಎಂದು  ಹೇಳಿದರು. ಭಾರತವು ವಿಶ್ವದ ಅತಿದೊಡ್ಡ ಲಸಿಕೆ ನೀಡುವಿಕೆ ಕಾರ್ಯಕ್ರಮಗಳಲ್ಲಿ ಒಂದನ್ನು ನಡೆಸುತ್ತಿದೆ ಮತ್ತು ಈ ಸ್ಥಳೀಯ ಲಸಿಕೆಗಳ ಅಭಿವೃದ್ಧಿಯಿಂದಾಗಿ ಇದು ಸಾಧ್ಯವಾಯಿತು ಎಂದು ಅವರು ಹೇಳಿದರು. ರಾಷ್ಟ್ರೀಯ ಕೋವಿಡ್ -19 ಲಸಿಕೆ ಕಾರ್ಯಕ್ರಮವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 16 ನೇ ಜನವರಿ 2021 ರಿಂದ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು


ಅಂಕಲೇಶ್ವರ ಕೆಂದ್ರದಿಂದ ಕೊವಾಕ್ಸಿನ್ ನ ಮೊದಲ ಬ್ಯಾಚ್ ಬಿಡುಗಡೆ ಮಾಡುವುದನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಕೇಂದ್ರ ಆರೋಗ್ಯ ಸಚಿವರು, ಇದು ಕೋವಿಡ್ -19 ವಿರುದ್ಧ ಭಾರತದ ಹೋರಾಟದ ಮಹತ್ವದ ಕ್ಷಣ ಎಂದು ಹೇಳಿದರು. ಕೋವಿಡ್ -19 ಲಸಿಕೆಗಳ ಉತ್ಪಾದನಾ ಸಾಮರ್ಥ್ಯದ ಹೆಚ್ಚಳವು ಭಾರತದಲ್ಲಿ ಲಸಿಕೆ ನೀಡುವ ಕಾರ್ಯಕ್ರಮದ ವೇಗಕ್ಕೆ ಮತ್ತಷ್ಟು ಉತ್ತೇಜನ ನೀಡುತ್ತದೆ. ಭಾರತ್ ಬಯೋಟೆಕ್ ಮತ್ತು ಝೈಡಸ್ ಕ್ಯಾಡಿಲಾ ಎಂಬ ಎರಡು ಕಂಪನಿಗಳ ಲಸಿಕೆಗಳ ಸಂಶೋಧನೆ ಮತ್ತು ಉತ್ಪಾದನೆ ಭಾರತದಲ್ಲಿ ನಡೆಯುತ್ತಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು. ಅಂಕಲೇಶ್ವರ ಕಾರ್ಖಾನೆಯು ಇಂದಿನಿಂದ ತಿಂಗಳಿಗೆ 1 ಕೋಟಿ ಡೋಸ್ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.
ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತದ ಕೊಡುಗೆಯ ಕುರಿತು ಮಾತನಾಡಿದ ಅವರು, ಕೋವಿಡ್ ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಔಷಧಿಗಳ ಅಗತ್ಯವಿರುವ ಇತರ ದೇಶಗಳಿಗೆ ಸಹಾಯ ಮಾಡಲು ಭಾರತ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ ಎಂದು ಉಲ್ಲೇಖಿಸಿದರು.

ಭಾರತದಲ್ಲಿ ಕೋವಾಕ್ಸಿನ್ ಉತ್ಪಾದನೆಯ ಸ್ಥಿತಿಯ ಕುರಿತು ಮಾತನಾಡಿದ ಕೇಂದ್ರ ಸಚಿವರು, ಭಾರತ್ ಬಯೋಟೆಕ್ ಈಗಾಗಲೇ ಹೈದರಾಬಾದ್, ಮಾಲೂರು, ಬೆಂಗಳೂರು ಮತ್ತು ಪುಣೆ ಕ್ಯಾಂಪಸ್ ಗಳಲ್ಲಿ ಅನೇಕ ಉತ್ಪಾದನಾ ಸೌಲಭ್ಯಗಳನ್ನು ನಿಯೋಜಿಸಿದೆ ಮತ್ತು ಚಿರೋನ್ ಬೆಹ್ರಿಂಗ್, ಅಂಕಲೇಶ್ವರವು ಕೋವಾಕ್ಸಿನ್ ಉತ್ಪಾದನೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ . 2020 ರಲ್ಲಿ ನಿರ್ಮಿಸಲಾದ ಹೊಸ ಫೈಲಿಂಗ್ ಸೌಲಭ್ಯವನ್ನು ಈಗ ಕೋವಾಕ್ಸಿನ್ ಉತ್ಪಾದನೆಗೆ ಬಳಸಲಾಗುತ್ತಿದೆ. ಕೋವಾಕ್ಸಿನ್ ಉತ್ಪಾದನೆಯು ಜೂನ್ ಆರಂಭದಲ್ಲಿ ಪ್ರಾರಂಭವಾಯಿತು, ಮೊದಲು ತಂಡವು ಉಪಕರಣದ ಕಾರ್ಯವನ್ನು ಅಧ್ಯಯನ ಮಾಡಲು ಎಂಜಿನಿಯರಿಂಗ್ ಬ್ಯಾಚ್ಗಳನ್ನು ಕಾರ್ಯಗತಗೊಳಿಸಿತು. ಅಂಕಲೇಶ್ವರ ಸೌಲಭ್ಯಗಳಿಂದ ತಯಾರಿಸಿದ ಉತ್ಪನ್ನಗಳು ಸೆಪ್ಟೆಂಬರ್ 2021 ರಿಂದ ಪೂರೈಕೆಗೆ ಲಭ್ಯವಿರುತ್ತವೆ ಎಂದು ಅವರು ಹೇಳಿದರು.

ಭಾರತ್ ಬಯೋಟೆಕ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೃಷ್ಣಾ ಎಲ್ಲಾ ಹೇಳಿದರು, "ಜಾಗತಿಕ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಮಾನದಂಡಗಳೊಂದಿಗೆ ಲಸಿಕೆಯನ್ನು ಅಭಿವೃದ್ಧಿಪಡಿಸುವ ನಮ್ಮ ಗುರಿಯನ್ನು ಈಗ ಸಾಧಿಸಲಾಗಿದೆ, ನಾವು ಈಗ ವಾರ್ಷಿಕ 1.0 ಬಿಲಿಯನ್ ಡೋಸ್ಗಳ ಸಾಮರ್ಥ್ಯದ ಗುರಿಯತ್ತ ಸಾಗುತ್ತಿದ್ದೇವೆ."
ಭಾರತ್ ಬಯೋಟೆಕ್ ಹೆಚ್ಚಿನ ಉತ್ಪಾದನೆಗಾಗಿ ಜೈವಿಕ ಸುರಕ್ಷತೆ ನಿಯಂತ್ರಣದಲ್ಲಿ ನಿಷ್ಕ್ರಿಯಗೊಳಿಸಿದ ವೈರಲ್ ಲಸಿಕೆಗಳ ವಾಣಿಜ್ಯ ಪ್ರಮಾಣದ ತಯಾರಿಕೆಯಲ್ಲಿ ಪೂರ್ವ ಪರಿಣತಿಯನ್ನು ಹೊಂದಿರುವ ಇತರ ದೇಶಗಳ ತಯಾರಕರೊಂದಿಗೆ ಉತ್ಪಾದನಾ ಪಾಲುದಾರಿಕೆಯನ್ನು ಅನ್ವೇಷಿಸುತ್ತಿದೆ ಎಂದು ಡಾ. ಕೃಷ್ಣಾ ಎಲ್ಲಾ ಹೇಳಿದರು.


(Release ID: 1750240) Visitor Counter : 365