ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಆಜಾ಼ದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಸೆಪ್ಟೆಂಬರ್ ತಿಂಗಳಾದ್ಯಂತ “ವಿಷಯಾಧಾರಿತ” ಪೋಷಣ್ ಮಾಸಾಚರಣೆ


ಸಮಗ್ರವಾಗಿ ಪೌಷ್ಟಿಕತೆ ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಕೃತ ಮತ್ತು ಸಂಯೋಜಿತವಾಗಿ ವಿಷಯಾಧಾರಿತ ಕಾರ್ಯಕ್ರಮಗಳು

Posted On: 29 AUG 2021 11:45AM by PIB Bengaluru

ಪೋಷಣ್ ಅಭಿಯಾನ ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿದ್ದು, ಮಕ್ಕಳು, ಹದಿಹರಿಯದ ಬಾಲಕಿಯರು, ಗರ್ಭೀಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶ ಹೊಂದಿದೆ.  2018 ರ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ರಾಜಸ್ಥಾನದ ಜುನ್ ಜುನುವಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೋಷಣ್ [ಪ್ರಧಾನಮಂತ್ರಿ ಅವರ ಸಮಗ್ರ ಪೋಷಣೆ ಕುರಿತ ಯೋಜನೆ] ಅಭಿಯಾನ ಅಪೌಷ್ಟಿಕತೆ ಸಮಸ್ಯೆಗಳತ್ತ ದೇಶದ ಗಮನ ಸೆಳೆಯುವ ಮತ್ತು ಅಭಿಯಾನದ ಮಾದರಿಯಲ್ಲಿ ಇವುಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿ ಹೊಂದಿದೆ. ಈ ಗುರಿಯನ್ನು ಕೇಂದ್ರೀಕರಿಸಿ ಪೋಷಣ್ ಅಭಿಯಾನ, ಮಿಷನ್ ಪೋಷಣ್ 2.0 [ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0] ಕಾರ್ಯಕ್ರಮವನ್ನು 2021 – 2022  ರ ಬಜೆಟ್ ನಲ್ಲಿ ಸಮಗ್ರ ಪೌಷ್ಟಿಕ ಬೆಂಬಲ ನೀಡುವ ಕಾರ್ಯಕ್ರಮವನ್ನು ಪ್ರಕಟಿಸಲಾಗಿತ್ತು. ಪೌಷ್ಟಿಕ ಅಂಶಗಳನ್ನು ಬೆಂಬಲಿಸುವ, ವಿತರಣೆ, ಆರೋಗ್ಯ ಪೋಷಿಸುವ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವತ್ತ ಗಮನರಿಸಿ ಉತ್ತಮ ಫಲಿತಾಂಶ ಪಡೆಯುವ,  ರೋಗಗಳಿಂದ ಹೊರಬರಲು ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಕ್ಷೇಮ ಮತ್ತು ಅಪೌಷ್ಟಿಕತೆ ನಿವಾರಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.  

ಪೋಷಣ್ ಅಭಿಯಾನ ಜನಾಂದೋಲನ ಅಥವಾ “ಜನರ ಚಳವಳಿ”. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಇಲಾಖೆಗಳು ಮತ್ತು ಸಾರ್ವಜನಿಕ, ಖಾಸಗಿ ವಲಯವನ್ನು ಸಂಯೋಜಿಸಿ ಎಲ್ಲರೂ ಪಾಲ್ಗೊಳ್ಳುವಂತೆ ಮಾಡುವುದು. ಸಮುದಾಯವನ್ನು ಸಜ್ಜುಗೊಳಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು, ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ ಪೋಷಣ್ ಮಾಸ ಆಚರಿಸಲಾಗುತ್ತಿದೆ.

ಈ ವರ್ಷ ಆಜಾ಼ದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಹೆಚ್ಚು ಜನರನ್ನು ತಲುಪಲು ಮತ್ತು ಈ ಅಭಿಯಾನಕ್ಕೆ ವೇಗ ನೀಡಲು ತಿಂಗಳು ಪೂರ್ತಿ ಪ್ರತಿ ವಾರಗಳಿಗೆ ಅನುಗುಣವಾಗಿ ವಿಷಯಗಳನ್ನು ವಿಂಗಡಿಸಿ ಸಮಗ್ರ ಪೌಷ್ಟಿಕತೆ ಸುಧಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಜತೆಯಲ್ಲಿ ತಿಂಗಳಾದ್ಯಂತ ಸರಣಿ ಸ್ವರೂಪದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  

ಈ  ವರ್ಷ ವಿಷಯಾಧಾರಿತವಾಗಿ ಆಚರಿಸಲಿರುವ ಕಾರ್ಯಕ್ರಮದ ವಿವರ ಈ ಕೋಷ್ಠಕದಲ್ಲಿದೆ
 

 

 

ದಿನಾಂಕಗಳು [ಸಾಪ್ತಾಹ]

 

 

ವಿಷಯಗಳು

ವಿಷಯ 1

1-7 ಸೆಪ್ಟೆಂಬರ್

 

ಗಿಡ ನೆಡುವ ಚಟುವಟಿಕೆ “ಪೋಷನ್ ವಾಟಿಕಾ”

ವಿಷಯ 2

8-15 ಸೆಪ್ಟೆಂಬರ್

 

ಪೌಷ್ಠಿಕತೆಗಾಗಿ ಯೋಗ ಮತ್ತು ಆಯುಷ್

ವಿಷಯ 3

16-23 ಸೆಪ್ಟೆಂಬರ್

ಹೆಚ್ಚಿನ ಸಮಸ್ಯೆ ಇರುವ ಜಿಲ್ಲೆಗಳ ಅಂಗನವಾಡಿ

ಫಲಾನುಭವಿಗಳಿಗೆ “ ಪ್ರಾದೇಶಿಕ ಪೌಷ್ಠಿಕ ಕಿಟ್”

ಗಳ ವಿತರಣೆ

 

ವಿಷಯ 4

24-30 ಸೆಪ್ಟೆಂಬರ್

ಅಪೌಷ್ಠಿತೆ ಇರುವ ಮಕ್ಕಳನ್ನು ಗುರುತಿಸುವ ಮತ್ತು

ಪೌಷ್ಠಿಕ ಆಹಾರ ವಿತರಣೆ ಮಾಡುವ

 

ಈ ವರ್ಷದ ಪೋಷಣ್ ಮಾಸಾಚರಣೆ ಸಂದರ್ಭದಲ್ಲಿ ವ್ಯಾಪಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಅಂಗನವಾಡಿ, ಶಾಲಾ ಆವರಣಗಳು, ಗ್ರಾಮ ಪಂಚಾಯತ್ ಗಳು, ಇತರೆ ಸ್ಥಳಗಳಲ್ಲಿ ಲಭ್ಯವಿರುವ ಎಲ್ಲಾ ಪಾಲುದಾರರಿಂದ ವಿಸ್ತೃತವಾಗಿ “ಪೋಷಣ್ ವಾಟಿಕ “ ಹೆಸರಿನಡಿ ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನೆಡುತೋಪು ಚಟುವಟಿಕೆಯಡಿ ಪೌಷ್ಟಿಕ ಹಣ್ಣಿನ ಮರಗಳ ಸಸಿಗಳು, ಸ್ಥಳೀಯ ತರಕಾರಿಗಳು, ಗಿಡ ಮೂಲಿಕೆ ಮತ್ತು ಔಷಧೀಯ ಸಸ್ಯಗಳು, ಕೋವಿಡ್ ಲಸಿಕೆ ಅಭಿಯಾನ ಕುರಿತು ಸಂವೇದನೆ ಮತ್ತು ಅರಿವು ಮೂಡಿಸುವ ಮತ್ತು ಕೋವಿಡ್ ಶಿಷ್ಟಾಚಾರಗಳನ್ನು ಪರಿಪಾಲನೆಗೆ ಈ ಸಂದರ್ಭದಲ್ಲಿ ಆದ್ಯತೆ ನೀಡಲಾಗುತ್ತಿದೆ. ಮಕ್ಕಳ ತೂಕ ಮತ್ತು ಎತ್ತರ [6 ವರ್ಷಕ್ಕಿಂತ ಕಡಿಮೆ ವಯೋಮಿತಿ]ವನ್ನು ಅಳೆಯುವ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಗರ್ಭೀಣಿಯರಿಗೆ ಸ್ಥಳೀಯವಾಗಿ ಲಭ್ಯವಿರುವ ಪೌಷ್ಟಿಕ ಆಹಾರ ಒದಗಿಸಲು ವಿವಿಧ ಅಡುಗೆ ಸ್ಪರ್ಧೆ ಆಯೋಜಿಸುವ ಮತ್ತು ಪೌಷ್ಟಿಕ ಆಹಾರ ಕುರಿತ ಘೋಷಣೆಗಳನ್ನು ಬರೆಯುವ ಸ್ಪರ್ಧೆಗಳನ್ನು ಸಹ ಆಯೋಜಿಸಲಾಗುತ್ತಿದೆ. ಸರ್ಕಾರ ಮತ್ತು ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕೆಲಸ  ಮಾಡುವ ಸ್ಥಳಗಳಲ್ಲಿ “ 5 ನಿಮಿಷದ ಯೋಗ ಶಿಷ್ಟಾಚಾರ “ [ ವೈ – ಬ್ರೇಕ್ ಅಥವಾ ಯೋಗ ಬ್ರೇಕ್ ] ಆಯೋಜಿಸಲಾಗುತ್ತಿದೆ. ಮಹತ್ವದ  ಪ್ರಾದೇಶಿಕ/ ಸ್ಥಳೀಯ ಆಹಾರ ವಿತರಣೆ ಅಭಿಯಾನ ನಡೆಸುತ್ತಿದ್ದು, ಪೌಷ್ಟಿಕ ಆಹಾರ ಕಿಟ್ ಗಳನ್ನು [ ಉದಾಹರಣೆಗೆ, ಗುಜರಾತ್ ನ ಸುಕಡಿ, ಪಂಜಾಬ್  ನ ಪಂಜಿರಿ, ಬಿಹಾರದ ಸತ್ತು, ಮಹಾರಾಷ್ಟ್ರದ ಚಕ್ಕಿ] ವಿತರಿಸಲಾಗುತ್ತಿದೆ. ಅನಿಮೀಯ ಶಿಬಿರಗಳು, ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರತಿಯೊಂದು ಬ್ಲಾಕ್ ಮಟ್ಟದಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳುವುದು, 5 ವರ್ಷದೊಳಗಿನ ಅಪೌಷ್ಟಿಕತೆ ಸಮಸ್ಯೆ ಹೊಂದಿರುವ ಮಕ್ಕಳಿಗೆ ಪೂರಕ ಆಹಾರ ಒದಗಿಸುವ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುವುದು, ತೀವ್ರ ಅಪೌಷ್ಟಿಕತೆ ಹೊಂದಿರುವವರಿಗಾಗಿ ಸಂವೇದನಶೀಲ ಕಾರ್ಯಕ್ರಮ ಮತ್ತು ಅಪೌಷ್ಟಿಕ ಮಕ್ಕಳಿಗೆ ಆಹಾರ ವಿತರಣೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  

https://static.pib.gov.in/WriteReadData/userfiles/image/image00183YL.png

ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಳಮಟ್ಟದವರೆಗೆ ಪೌಷ್ಟಿಕತೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ‍್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶಾ, ಎ.ಎನ್.ಎಂ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಶಾಲೆಗಳಲ್ಲಿ ಶಾಲಾ ಶಿಕ್ಷಣ  ಮತ್ತು ಸಾಕ್ಷರತೆ ಇಲಾಖೆ, ಪಂಚಾಯತ್ ಗಳಲ್ಲಿ ಪಂಚಾಯತ್ ರಾಜ್ ಇಲಾಖೆ,  ಸ್ವಸಹಾಯ ಗುಂಪುಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ವಿವಿಧ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಆರೋಗ್ಯಕರ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ತಿಂಗಳು ಪೂರ್ತಿ ಪೌಷ್ಟಿಕಾಂಶದ ಸಂದೇಶ ಹರಡಲಾಗುತ್ತಿದೆ.

https://static.pib.gov.in/WriteReadData/userfiles/image/image0023Y10.jpg

ಉದಾತ್ತ ಮತ್ತು ಸಮಗ್ರ ಗುರಿಯೊಂದಿಗೆ ಪ್ರಾರಂಭಿಸಲಾದ ಪೋಷಣ್ ಅಭಿಯಾನ ಒಟ್ಟಾರೆ ಪೌಷ್ಟಿಕಾಂಶದ ಅರಿವು ಹೆಚ್ಚಿಸುವ ಉದ್ದೇಶ ಹೊಂದಿದೆ.  ಮಕ್ಕಳ ತಾಯಂದಿರು, ಹದಿಹರೆಯದ ಬಾಲಕಿಯರು, ಗರ್ಭೀಣಿಯರು, ಪತಿ, ತಂದೆ, ಅತ್ತೆ, ಸಮುದಾಯದ ಸದಸ್ಯರು, ಆರೋಗ್ಯ ಆರೈಕೆ ಮಾಡುವವರಿಗೆ [ಎ.ಎನ್.ಎಂ, ಆಶಾ, ಅಂಗನವಾಡಿ ಕಾರ್ಯಕರ್ತರು], ಪ್ರಮುಖ ಪೋಷಣೆಯ ನಡಾವಳಿಕೆಗಳ ಬಗ್ಗೆ ಜವಾಬ್ದಾರಿತನ ಮೂಡಿಸಲಾಗುತ್ತಿದೆ, ಪೋಷಣ್ ಮಾಸಾಚರಣೆ ಸಮನ್ವಯತೆಯಿಂದ ತ್ವರಿತವಾಗಿ ಪೋಷಣ ಅಭಿಯಾನದ ಸಮಗ್ರ ಗುರಿಗಳನ್ನು ಸಾಧಿಸಲು ಉದ್ದೇಶಿಸಲಾಗಿದೆ.

****



(Release ID: 1750214) Visitor Counter : 3978