ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಆಫ್ಘಾನಿಸ್ತಾನದಲ್ಲಿ ಪ್ರಸ್ತುತ ಭದ್ರತಾ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇನ್ನು ಮುಂದೆ ಎಲ್ಲಾ ಆಫ್ಘನ್ ಪ್ರಜೆಗಳು ಇ-ವೀಸಾದೊಂದಿಗೆ ಮಾತ್ರ ಭಾರತಕ್ಕೆ ಪ್ರಯಾಣಿಸಬೇಕು

Posted On: 25 AUG 2021 11:56AM by PIB Bengaluru

ಆಫ್ಘಾನಿಸ್ತಾನದಲ್ಲಿ ಪ್ರಸ್ತುತ ನೆಲೆಸಿರುವ ಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತು ʻ-ತುರ್ತು ಎಕ್ಸ್-ಮಿಸಲೇನಿಯಸ್‌ ವೀಸಾʼವನ್ನು ಪರಿಚಯಿಸುವ ಮೂಲಕ ವೀಸಾ ಪ್ರಕ್ರಿಯೆಯನ್ನು ಸುವ್ಯವಸ್ಥಿತಗೊಳಿಸಿರುವುದರಿಂದ, ಇನ್ನು ಮುಂದೆ ಎಲ್ಲಾ ಆಫ್ಘನ್ ಪ್ರಜೆಗಳು -ವೀಸಾದೊಂದಿಗೆ ಮಾತ್ರ ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡಲು ಎಂದು ನಿರ್ಧರಿಸಲಾಗಿದೆ.

ಕೆಲವು ಆಫ್ಘನ್ ಪ್ರಜೆಗಳ ಪಾಸ್‌ಪೋರ್ಟ್‌ಗಳು ಕಳೆದುಹೋಗಿವೆ ಎಂಬ ವರದಿಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಭಾರತದಲ್ಲಿಲ್ಲದ ಎಲ್ಲಾ ಆಫ್ಘನ್ ಪ್ರಜೆಗಳಿಗೆ ಹಿಂದೆ ನೀಡಲಾಗಿದ್ದ ವೀಸಾಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನ್ಯಗೊಳಿಸಲಾಗಿದೆ. ಇನ್ನು ಮುಂದೆ  ಭಾರತಕ್ಕೆ ಪ್ರಯಾಣಿಸಲು ಬಯಸುವ ಆಫ್ಘನ್ ಪ್ರಜೆಗಳು www.indianvisaonline.gov.in ಮೂಲಕ -ವೀಸಾಗೆ ಅರ್ಜಿ ಸಲ್ಲಿಸಬಹುದು.

***(Release ID: 1748816) Visitor Counter : 127