ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav g20-india-2023

ಭಾರತದಲ್ಲಿ ಭರದಿಂದ ಸಾಗಿರುವ ಕೋವಿಡ್-19 ಬೃಹತ್ ಲಸಿಕೆ ಅಭಿಯಾನ; ಇದುವರೆಗೆ 58.89 ಕೋಟಿ ಜನರಿಗೆ ಲಸಿಕೆ ನೀಡಿಕೆ


ಚೇತರಿಕೆ ದರ 97.68%ಗೆ ಸುಧಾರಣೆ; 2020 ಮಾರ್ಚ್ ನಿಂದ ಆಗಿರುವ ಗರಿಷ್ಠ ಸುಧಾರಣೆ

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 25,467 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1%ಗಿಂತ ಕೆಳಕ್ಕೆ ಇಳಿಕೆ; 2020 ಮಾರ್ಚ್ ನಿಂದ ಅತ್ಯಂತ ಕನಿಷ್ಠ

ಸಕ್ರಿಯ ಪ್ರಕರಣಗ ಸಂಖ್ಯೆ 3,19,551ಕ್ಕೆ ಇಳಿಕೆ ಇಳಿಕೆ; 156 ದಿನಗಳಲ್ಲೇ ಅತ್ಯಂತ ಕನಿಷ್ಠ

ದೈನಂದಿನ ಪಾಸಿಟಿವಿಟಿ ದರ 1.55%ಗೆ ಕುಸಿತ; ಸತತ 29 ದಿನಗಳಿಂದ 3% ಮಟ್ಟದಿಂದ ಕೆಳಕ್ಕೆ

Posted On: 24 AUG 2021 10:07AM by PIB Bengaluru

ಭಾರತದಲ್ಲಿ ದೇಶಾದ್ಯಂತ ಭರದಿಂದ ಸಾಗಿರುವ ಕೋವಿಡ್-19 ಬೃಹತ್ ಲಸಿಕೆ ಅಭಿಯಾನದಲ್ಲಿ ಇದುವರೆಗೆ 58.89 ಕೋಟಿಗಿಂತ ಹೆಚ್ಚಿನ ಅಂದರೆ 58,89,97,805 ಜನರಿಗೆ ಕೋವಿಡ್-19 ಲಸಿಕೆ ಹಾಕಲಾಗಿದೆ ಎಂಬ ಗಮನಾರ್ಹ ವಿಚಾರ ಇಂದು ಬೆಳಗ್ಗೆ 7 ಗಂಟೆಗೆ ಬಿಡುಗಡೆ ಆಗಿರುವ ತಾತ್ಕಾಲಿಕ ವರದಿಯಿಂದ ದೃಢಪಟ್ಟಿದೆ. ದೇಶಾದ್ಯಂತ ನಡೆದಿರುವ ಒಟ್ಟು 65,03,493 ಆಂದೋಲನಗಳಲ್ಲಿ ಸಾಧನೆ ಮಾಡಲಾಗಿದೆ.

ಇಂದು ಬೆಳಗ್ಗೆ 8 ಗಂಟೆಗೆ ಪ್ರಕಟವಾಗಿರುವ ತಾತ್ಕಾಲಿಕ ವರದಿ ಪ್ರಕಾರ, ಈ ಕೆಳಗಿನ ಗುಂಪುಗಳು ಅದರಲ್ಲಿ ಸೇರಿವೆ:

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

1,03,53,692

2ನೇ ಡೋಸ್

82,32,742

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,83,07,076

2ನೇ ಡೋಸ್

1,26,40,318

18-44 ವಯೋಮಾನದವರು

ಮೊದಲ ಡೋಸ್

22,03,32,468

2ನೇ ಡೋಸ್

2,03,29,375

45-59 ವಯೋಮಾನದವರು

ಮೊದಲ ಡೋಸ್

12,34,70,622

2ನೇ ಡೋಸ್

4,93,70,668

60 ವರ್ಷ ದಾಟಿದವರು

ಮೊದಲ ಡೋಸ್

8,36,87,351

2ನೇ ಡೋಸ್

1,03,53,692

ಒಟ್ಟು

58,89,97,805

ದೇಶವ್ಯಾಪಿ ನಡೆಯುತ್ತಿರುವ ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮದ ಗತಿಗೆ ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 39,486 ರೋಗಿಗಳು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,17,20,112 ಜನರು ಗುಣಮುಖರಾಗಿದ್ದಾರೆ.

ಇದರ ಫಲವಾಗಿ, ಭಾರತದ ಚೇತರಿಕೆ ದರ 97.68%ಗೆ ಸುಧಾರಣೆ ಕಂಡಿದೆ, 2020 ಮಾರ್ಚ್ ನಿಂದ ಆಗಿರುವ ಗರಿಷ್ಠ ಸುಧಾರಣೆ ಇದಾಗಿದೆ.

https://static.pib.gov.in/WriteReadData/userfiles/image/image001AJ3G.jpg

ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸುಸ್ಥಿರ ಮತ್ತು ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ, ದೈನಂದಿನ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದೆ. ಸತತ 58 ದಿನಗಳಿಂದ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 50,000 ಮಟ್ಟದಿಂದ ಕೆಳಗಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 25,467 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

https://static.pib.gov.in/WriteReadData/userfiles/image/image002LW41.jpg

ಅತ್ಯಧಿಕ ಪ್ರಮಾಣದ ಚೇತರಿಕೆ ದರ ಮತ್ತು ಕನಿಷ್ಠ ಸಂಖ್ಯೆಯ ಹೊಸ ಕೊರೊನಾ ಪ್ರಕರಣಗಳಿಂದಾಗಿ, ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 3,19,551ಕ್ಕೆ ಇಳಿಕೆ ಕಂಡಿದ್ದು, ಸತತ 156 ದಿನಗಳಿಂದ ಕಂಡುಬಂದಿರುವ ಕನಿಷ್ಠ ಪ್ರಮಾಣ ಇದಾಗಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1% ಮಟ್ಟದ ಕೆಳಗೆ ಮುಂದುವರಿದಿದ್ದು, ಅದೀಗ 0.98%ಕ್ಕೆ ಇಳಿಕೆ ಕಂಡಿದೆ. 2020 ಮಾರ್ಚ್ ನಿಂದ ಕಂಡುಬಂದಿರುವ ಕನಿಷ್ಠ ಪ್ರಮಾಣ ಇದಾಗಿದೆ.

https://static.pib.gov.in/WriteReadData/userfiles/image/image0030164.jpg

ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಕಳೆದ 24 ತಾಸುಗಳಲ್ಲಿ ಒಟ್ಟು 16,47,526 ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತದಲ್ಲಿ ಇದುವರೆಗೆ ಒಟ್ಟು 50.93 ಕೋಟಿಗಿಂತ ಹೆಚ್ಚಿನ ಅಂದರೆ, 50,93,91,792 ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಪರಿಣಾಮ, ವಾರದ ಪಾಸಿಟಿವಿಟಿ ದರ 1.90%ಗೆ ಇಳಿಕೆ ಕಂಡಿದ್ದು, ಸತತ 60 ದಿನಗಳಿಂದ 3% ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ. ದೈನಂದಿನ ಪಾಸಿಟಿವಿಟಿ ದರ 1.55%ಗೆ ಇಳಿದಿದೆ. ಕಳೆದ 29 ದಿನಗಳಿಂದ ದೈನಂದಿನ ಪಾಸಿಟಿವಿಟಿ ದರ 3% ಮಟ್ಟದಿಂದ ಕೆಳಗಿದ್ದರೆ, ನಿರಂತರ 78 ದಿನಗಳಿಂದ ಅದು 5% ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ.

https://static.pib.gov.in/WriteReadData/userfiles/image/image0046MUF.jpg

***(Release ID: 1748510) Visitor Counter : 168