ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೋವಿಡ್-19 ತಾಜಾ ಮಾಹಿತಿ

प्रविष्टि तिथि: 23 AUG 2021 10:08AM by PIB Bengaluru

ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಲ್ಲಿ ಈವರೆಗೆ 58.25 ಕೋಟಿ ಲಸಿಕೆ ನೀಡಿಕೆ

ಕಳೆದ 24 ಗಂಟೆಗಳಲ್ಲಿ 25,072 ಹೊಸ ಕೋವಿಡ್ ಪ್ರಕರಣ ದೃಢ: 160 ದಿನಗಳಲ್ಲಿ ಅತಿ ಕಡಿಮೆ

ಒಟ್ಟಾರೆ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.1.03ರಷ್ಟು ಮಾತ್ರ; ಕಳೆದ ಮಾರ್ಚ್ 2020ರಿಂದೀಚೆಗೆ ಅತಿ ಕಡಿಮೆ

ಭಾರತದ ಸದ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 3,33,924, ಕಳೆದ 155 ದಿನಗಳಲ್ಲೇ ಅತಿ ಕಡಿಮೆ

ಚೇತರಿಕೆ ಪ್ರಮಾಣ ಶೇ.97.63ಕ್ಕೆ ಏರಿಕೆ; ಕಳೆದ ಮಾರ್ಚ್ 2020ರಿಂದೀಚೆಗೆ ಅತ್ಯಧಿಕ

ಕಳೆದ 24ಗಂಟೆಗಳಲ್ಲಿ 44,157 ಸೋಂಕಿತರು ಚೇತರಿಕೆಯಾಗುವುದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 3,16,80,626ಕ್ಕೆ ಏರಿಕೆ

ವಾರದ ಪಾಸಿಟಿವಿಟಿ ದರ (ಶೇ.1.91) ಕಳೆದ 59 ದಿನಗಳಿಂದ ಶೇ.3ಕ್ಕಿಂತ ಕಡಿಮೆ ಇದೆ

ದಿನದ ಪಾಸಿಟಿವಿಟಿ ದರ  (ಶೇ.1.94) ಕಳೆದ 28 ದಿನಗಳಿಂದ ಶೇ.3ಕ್ಕಿಂತ ಕಡಿಮೆ

ಈವರೆಗೆ ಒಟ್ಟು 50.75 ಕೋಟಿ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ

***


(रिलीज़ आईडी: 1748164) आगंतुक पटल : 268
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Punjabi , Gujarati , Odia , Tamil , Telugu , Malayalam