ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

57.61 ಕೋಟಿ ಮೈಲುಗಲ್ಲು ದಾಟಿದ ಭಾರತದ ಒಟ್ಟಾರೆ ಕೋವಿಡ್-19 ಲಸಿಕೀಕರಣ ವ್ಯಾಪ್ತಿ


ಕಳೆದ ಮಾರ್ಚ್ 2020ರಿಂದೀಚೆಗೆ ಚೇತರಿಕೆ ಪ್ರಮಾಣ (ಶೇ.97.54) ಅತ್ಯಧಿಕ

ಕಳೆದ 24 ಗಂಟೆಗಳಲ್ಲಿ ಹೊಸದಾಗಿ 34,457 ಕೋವಿಡ್ ಪ್ರಕರಣಗಳು ಪತ್ತೆ

ಸದ್ಯ ಭಾರತದ ಒಟ್ಟಾರೆ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣ (3,61,340) ಕಳೆದ 151 ದಿನಗಳಲ್ಲಿಯೇ ಅತಿ ಕಡಿಮೆ

ಒಟ್ಟಾರೆ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.1.12ರಷ್ಟು ಮಾತ್ರ; ಕಳೆದ ಮಾರ್ಚ್ 2020ರಿಂದೀಚೆಗೆ ಅತಿ ಕಡಿಮೆ

ಕಳೆದ 20 ದಿನಗಳಿಂದೀಚೆಗೆ ಪ್ರತಿದಿನದ ಪಾಸಿಟಿವಿಟಿ ದರ (ಶೇ.1.88) ಶೇಕಡ 3ಕ್ಕಿಂತಲೂ ಕಡಿಮೆ

Posted On: 21 AUG 2021 10:13AM by PIB Bengaluru

ಇಂದು ಬೆಳಿಗ್ಗೆ 7ಗಂಟೆವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 36,36,943 ಡೋಸ್ ಲಸಿಕೆಯನ್ನು ನೀಡುವುದರೊಂದಿಗೆ ಭಾರತದಲ್ಲಿ ಒಟ್ಟು ಕೋವಿಡ್-19 ಲಸಿಕೀಕರಣ ವ್ಯಾಪ್ತಿ 57.61 ಕೋಟಿ (57,61,17,350) ದಾಟಿದೆ. ಇದನ್ನು 64,01,485 ಸೆಷನ್ಸ್ ಗಳಲ್ಲಿ ಸಾಧಿಸಲಾಗಿದೆ.

ಇಂದು ಬೆಳಿಗ್ಗೆ 7 ಗಂಟೆವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಒಟ್ಟು ಲಸಿಕೆ ಪಡೆದವರ ವಿವರ ಹೀಗಿದೆ.

ಎಚ್ ಸಿಡಬ್ಲೂ

1ನೇ ಡೋಸ್

1,03,52,796

2ನೇ ಡೋಸ್

81,87,062

ಎಫ್ ಎಲ್ ಡಬ್ಲೂ ಎಸ್

1ನೇ ಡೋಸ್

1,82,99,850

2ನೇ ಡೋಸ್

1,24,76,020

18-44 ವರ್ಷ ವಯೋಮಾನದವರು

1ನೇ ಡೋಸ್

21,37,85,511

2ನೇ ಡೋಸ್

1,84,75,457

45-59 ವರ್ಷ ವಯೋಮಾನದವರು

1ನೇ ಡೋಸ್

12,18,54,173

2ನೇ ಡೋಸ್

4,80,82,007

60 ವರ್ಷ ಮೇಲ್ಪಟ್ಟವರು

1ನೇ ಡೋಸ್

8,30,11,132

2ನೇ ಡೋಸ್

4,15,93,342

ಒಟ್ಟು

57,61,17,350

2021 ಜೂನ್ 21ರಿಂದ ಸಾರ್ವತ್ರಿಕ ಕೋವಿಡ್-19 ಲಸಿಕೀಕರಣದ ಹೊಸ ಹಂತ ಆರಂಭವಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್-19 ಲಸಿಕೀಕರಣ ವ್ಯಾಪ್ತಿ ಮತ್ತು ವೇಗವನ್ನು ವೃದ್ಧಿಸಲು ಬದ್ಧವಾಗಿದೆ.

ಕಳೆದ 24 ಗಂಟೆಗಳಲ್ಲಿ 36,347 ರೋಗಿಗಳು ಚೇತರಿಸಿಕೊಳ್ಳುವುದರೊಂದಿಗೆ (ಸಾಂಕ್ರಾಮಿಕ ಆರಂಭವಾದ ನಂತರ) ಒಟ್ಟು ಸೋಂಕಿತರ ಪೈಕಿ ಈಗಾಗಲೇ 3,15,97,982 ಸೋಂಕಿತರು ಗುಣಮುಖರಾಗಿದ್ದಾರೆ.

ಇದರಿಂದಾಗಿ ಭಾರತದ ಚೇತರಿಕೆ ಪ್ರಮಾಣ ಶೇ. 97.54% ತಲುಪಿದ್ದು, ಇದು ಕಳೆದ ಮಾರ್ಚ್ ನಿಂದೀಚೆಗೆ ಅತ್ಯಧಿಕವಾಗಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಹಾಗೂ ಸಹಭಾಗಿತ್ವದ ಪ್ರಯತ್ನಗಳಿಂದಾಗಿ ಸತತ 55 ದಿನಗಳಿಂದ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆ 50,000ಕ್ಕಿಂತಲೂ ಕಡಿಮೆ ಇದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 34,457 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಹೆಚ್ಚಿನ ಸಂಖ್ಯೆಯ ಸೋಂಕಿತರು ಗುಣಮುಖವಾಗುತ್ತಿರುವುದರಿಂದ ಮತ್ತು ಹೊಸ ಪ್ರಕರಣಗಳ ಸಂಖ್ಯೆ ತಗ್ಗುತ್ತಿರುವುದರಿಂದ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 3,61,340 ಇದ್ದು, ಇದು ಕಳೆದ 151 ದಿನಗಳಲ್ಲಿಯೇ ಅತಿ ಕಡಿಮೆಯಾಗಿದೆ ಮತ್ತು ಕಳೆದ ಮಾರ್ಚ್ 2020ರಿಂದೀಚೆಗೆ ದೇಶದ ಒಟ್ಟಾರೆ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ. 1.12 ರಷ್ಟಾಗುತ್ತದೆ.

ದೇಶದಲ್ಲಿ ಒಟ್ಟಾರೆ ಕೋವಿಡ್ ಸೋಂಕು ಪರೀಕ್ಷೆಗಳ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 17,21,205 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ಭಾರತ ಈವರೆಗೆ 50.45 crore (50,45,76,158)ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದೆಡೆ ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗುತ್ತಿದೆ. ಮತ್ತೊಂದೆಡೆ ವಾರದ ಪಾಸಿಟಿವಿಟ ದರ ಇಳಿಕೆಯಾಗುತ್ತಿರುವುದು ಕಂಡುಬಂದಿದೆ. ವಾರದ ಪಾಸಿಟಿವಿಟಿ ದರ ಸದ್ಯ ಶೇ.1.98ರಷ್ಟಿದ್ದು, ಇದು ಕಳೆದ 57 ದಿನಗಳಲ್ಲಿ ಅತಿ ಕಡಿಮೆಯಾಗಿದೆ. ದಿನದ ಪಾಸಿಟಿವಿಟಿ ದರ ಇಂದು ಶೇ2.00ರಷ್ಟಿದೆ. ದಿನದ ಪಾಸಿಟಿವಿಟಿ ದರ ಕಳೆದ 26 ದಿನಗಳಿಂದ ನಿರಂತರವಾಗಿ ಶೇ.3ಕ್ಕಿಂತ ಕಡಿಮೆ ಇದೆ ಮತ್ತು ಕಳೆದ 75 ದಿನಗಳಿಂದ ಶೇ.5ಕ್ಕಿಂತ ಕಡಿಮೆ ಮುಂದುವರಿದಿದೆ.

***


(Release ID: 1747856) Visitor Counter : 262