ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೋವಿಡ್-19 ಇಂದಿನ ಪರಿಷ್ಕೃತ ವರದಿ

Posted On: 18 AUG 2021 9:23AM by PIB Bengaluru

ದೇಶಾದ್ಯಂತ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಇದುವರೆಗೆ 56.06 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ.

ದೇಶದಲ್ಲಿ ನಿನ್ನೆ ಒಂದೇ ದಿನ ಅಂದರೆ ಕಳೆದ 24 ತಾಸುಗಳಲ್ಲಿ 35,178 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.14%ಗೆ ತಗ್ಗಿದೆ. 2020 ಮಾರ್ಚ್ ನಿಂದ ಕಂಡುಬಂದಿರುವ ಅತ್ಯಂತ ಕನಿಷ್ಠ ಪ್ರಮಾಣ ಇದಾಗಿದೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3,67,415ಕ್ಕೆ ಇಳಿಕೆ ಕಂಡಿದೆ. ಕಳೆದ 148 ದಿನಗಳಲ್ಲೇ ಇದು ಅತ್ಯಂತ ಕನಿಷ್ಠ ಪ್ರಮಾಣವಾಗಿದೆ.

ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,14,85,923 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕಳೆದ 24 ತಾಸುಗಳಲ್ಲೇ ದೇಶಾದ್ಯಂತ 37,169 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಇದರೊಂದಿಗೆ ಚೇತರಿಕೆ ದರ ಪ್ರಸ್ತುತ 97.52%ಗೆ ಸುಧಾರಣೆ ಕಂಡಿದೆ. 2020 ಮಾರ್ಚ್ ನಿಂದ ಕಂಡುಬಂದಿರುವ ಗರಿಷ್ಠ ಚೇತರಿಕೆ ಇದಾಗಿದೆ.

ವಾರದ ಪಾಸಿಟಿವಿಟಿ ದರ 1.95%ಗೆ ಇಳಿಕೆ ಕಂಡಿದ್ದು, ಸತತ 54 ದಿನಗಳಿಂದ 3% ಮಟ್ಟದಿಂದ ಕೆಳಗಿದೆ.

ದೈನಂದಿನ ಪಾಟಿಸಿವಿಟಿ ದರ 1.96% ಮಟ್ಟದ ಕೆಳಗಿದ್ದು, ಸತತ 23 ದಿನಗಳಿಂದ 3% ಮಟ್ಟದಿಂದ ಕೆಳಗೆ ಮುಂದುವರಿದಿದೆ.

ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಇದುವರೆಗೆ ಒಟ್ಟು 49.84 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

***


(Release ID: 1746918) Visitor Counter : 271