ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕಳೆದ 24 ಗಂಟೆಗಳಲ್ಲಿ 88.13 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡುವ ಮೂಲಕ ಭಾರತವು ಒಂದೇ ದಿನದಲ್ಲಿ ಅತಿ ಹೆಚ್ಚು ಲಸಿಕೆ ನೀಡಿದ ಹೆಗ್ಗುರುತನ್ನು ಸಾಧಿಸಿದೆ


ಭಾರತದ ಒಟ್ಟಾರೆ ಕೋವಿಡ್-19 ಲಸಿಕೆ ವ್ಯಾಪ್ತಿ 55 ಕೋಟಿ ಮೈಲುಗಲ್ಲು ಸಾಧಿಸಿದೆ

ಮಾರ್ಚ್ 2020ರ ನಂತರ ಅತ್ಯಧಿಕ ಚೇತರಿಕೆ ದರ (97.51%) ಸಾಧಿಸಿದೆ

ಕಳೆದ 24 ಗಂಟೆಗಳಲ್ಲಿ 25,166 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ


ಭಾರತದ ಸಕ್ರಿಯ ಪ್ರಕರಣಗಳ ಹೊರೆ (3,69,846) 146 ದಿನಗಳಲ್ಲೇ ಅತ್ಯಂತ ಕಡಿಮೆಯಾಗಿದೆ

ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.15% ಇದ್ದು, ಇದು 2020ರ ಮಾರ್ಚ್‌ ನಂತರ ಅತ್ಯಂತ ಕಡಿಮೆ ಎನಿಸಿದೆ

ದೈನಂದಿನ ಪಾಸಿಟಿವಿಟಿ ದರ (1.61%) ಕಳೆದ 22 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿದೆ

Posted On: 17 AUG 2021 10:31AM by PIB Bengaluru

ಭಾರತವು ತನ್ನ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನ ಅಡಿಯಲ್ಲಿ ಕಳೆದ 24 ಗಂಟೆಗಳಲ್ಲಿ 88.13 ಲಕ್ಷಕ್ಕೂ ಅಧಿಕ ಡೋಸ್ ಗಳನ್ನು ನೀಡಿದೆ. ನಮ್ಮ ಲಸಿಕೆ ಅಭಿಯಾನ ಪ್ರಾರಂಭವಾದ ನಂತರ  ಒಂದೇ ದಿನದಲ್ಲಿ ಅತ್ಯಧಿಕ ಲಸಿಕೆ ನೀಡಿಕೆ  ಸಾಧನೆ ಇದಾಗಿದೆ.    ಇದರೊಂದಿಗೆ ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿ ನಿನ್ನೆ 55 ಕೋಟಿ ಮೈಲಿಗಲ್ಲು ಸಾಧಿಸಿದೆ. ಒಟ್ಟಾರೆಯಾಗಿ, ಇಂದು ಬೆಳಿಗ್ಗೆ 7 ಗಂಟೆಯವರೆಗೆ ತಾತ್ಕಾಲಿಕ ವರದಿಯ ಪ್ರಕಾರ, 62,12,108 ಸೆಷನ್‌ಗಳ ಮೂಲಕ 55,47,30,609 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಇದರಲ್ಲಿ ಇವೂ ಸೇರಿವೆ:

ಆರೋಗ್ಯ ಕಾರ್ಯಕರ್ತರು

1ನೇ ಡೋಸ್‌

1,03,50,941

2ನೇ ಡೋಸ್

81,20,754

ಮುಂಚೂಣಿ ಕಾರ್ಯಕರ್ತರು

1ನೇ ಡೋಸ್‌

1,82,86,002

2ನೇ ಡೋಸ್

1,22,44,940

18-44 ವರ್ಷ ವಯೋಮಾನದವರು

1ನೇ ಡೋಸ್‌

20,20,24,963

2ನೇ ಡೋಸ್

1,61,02,484

45-59 ವರ್ಷ ವಯೋಮಾನದವರು

1ನೇ ಡೋಸ್‌

11,87,86,699

2ನೇ ಡೋಸ್

4,64,06,915

60 ವರ್ಷ ಮೀರಿದವರು

1ನೇ ಡೋಸ್‌

8,17,46,204

2ನೇ ಡೋಸ್

4,06,60,707

ಒಟ್ಟು

55,47,30,609

ಭಾರತದ ಚೇತರಿಕೆ ದರವು 97.51%ರಷ್ಟಿದ್ದು, ಇದು ಮಾರ್ಚ್2020ರ ನಂತರ ಅತ್ಯಧಿಕವಾಗಿದೆ.ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತವು 2021ರ ಜೂನ್ 21 ರಿಂದ ಪ್ರಾರಂಭವಾಗಿದೆ. ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ.

ಸಾಂಕ್ರಾಮಿಕದ ಆರಂಭದಿಂದ ಸೋಂಕಿಗೆ ಒಳಗಾದವರಲ್ಲಿ ಈಗಾಗಲೇ 3,14,48,754 ಜನರು ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ  ಮತ್ತು ಕಳೆದ 24 ಗಂಟೆಗಳಲ್ಲಿ 36,830  ರೋಗಿಗಳು ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ 154 ದಿನಗಳಲ್ಲೇ  ಅತ್ಯಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು (25,166) ವರದಿಯಾಗಿವೆ.

ಸತತ ಐವತ್ತೊಂದು ದಿನಗಳಿಂದ 50,000ಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇದು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲವಾಗಿದೆ.

ಭಾರತದಲ್ಲಿ 3,69,846 ಸಕ್ರಿಯ ಪ್ರಕರಣಗಳ ಹೊರೆ ಇದ್ದು,  ಇದು 146 ದಿನಗಳಲ್ಲಿ ಅತ್ಯಂತ ಕಡಿಮೆ ಎನಿಸಿದೆ.  ಸಕ್ರಿಯ ಪ್ರಕರಣಗಳು ಈಗದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳಲ್ಲಿ ಕೇವಲ 1.15% ರಷ್ಟಿವೆ, ಇದು ಮಾರ್ಚ್ 2020ರ ನಂತರ ಅತ್ಯಂತ ಕಡಿಮೆ ಪ್ರಮಾಣವೆನಿಸಿದೆ. 

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 15,63,985 ಪರೀಕ್ಷೆಗಳನ್ನು ನಡೆಸಲಾಯಿತು. ಒಟ್ಟಾರೆಯಾಗಿ, ಭಾರತವು ಇಲ್ಲಿಯವರೆಗೆ 49.66 ಕೋಟಿ (49,66,29,524)ಪರೀಕ್ಷೆಗಳನ್ನು ನಡೆಸಿದೆ.

ಒಂದೆಡೆ ಪರೀಕ್ಷಾ ಸಾಮರ್ಥ್ಯವನ್ನು ದೇಶಾದ್ಯಂತ ಗಣನೀಯವಾಗಿ ಹೆಚ್ಚಿಸಲಾಗಿದ್ದರೂ  ಸಾಪ್ತಾಹಿಕ ಪಾಸಿಟಿವಿಟಿ ದರವು 1.98% ರಷ್ಟಿದ್ದು, ಇದು ಸತತ 53 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ.   ದೈನಂದಿನ ಪಾಸಿಟಿವಿಟಿ ದರವೂ 1.61% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಸತತ 22 ದಿನಗಳಿಂದ 3% ಕ್ಕಿಂತ ಕೆಳಗಿನ ಮಟ್ಟದಲ್ಲಿ ಹಾಗೂ ಸತತ 71 ದಿನಗಳಿಂದ 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ.

***



(Release ID: 1746697) Visitor Counter : 232