ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಇಂದು ಅಂತಾರಾಷ್ಟ್ರೀಯ ಯುವ ದಿನದ ಅಂಗವಾಗಿ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದ 2017-18 ಮತ್ತು 2018-19ನೇ ಸಾಲಿನ 22 ವಿಜೇತರಿಗೆ ರಾಷ್ಟ್ರೀಯ ಯುವಜನ ಪ್ರಶಸ್ತಿ ಪ್ರದಾನ


ಭಾರತದ ಯುವಜನತೆ ‘ಆತ್ಮನಿರ್ಭರ ಭಾರತ ಆವಿಷ್ಕಾರ’-ಎಐನ ಚಾಲಕರು : ಶ್ರೀ ಅನುರಾಗ್ ಸಿಂಗ್ ಠಾಕೂರ್

ಹೊಸ ಪರಿಹಾರಗಳನ್ನು ಕಂಡುಹಿಡಿದು ಗೆದ್ದವರಿಗೆ ಪ್ರಶಸ್ತಿ ನೀಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 12 AUG 2021 2:56PM by PIB Bengaluru

ಪ್ರಮುಖ ಮುಖ್ಯಾಂಶಗಳು

· 2017-18ನೇ ಸಾಲಿನ ಮತ್ತು ಒಟ್ಟು 14 ರಾಷ್ಟ್ರೀಯ ಯುವಜನ ಪ್ರಶಸ್ತಿ ಮತ್ತು 2018-19ನೇ ಸಾಲಿನ 8 ಎನ್ ವೈಎ ಪ್ರಶಸ್ತಿಗಳ ಪ್ರದಾನ.

· ಪ್ರಶಸ್ತಿ – ಪದಕ, ಪ್ರಮಾಣಪತ್ರ ಮತ್ತು ವೈಯಕ್ತಿಕವಾಗಿ 1,00,000 ರೂ. ನಗದು ಬಹುಮಾನದಿಂದ ಮತ್ತು ಸಂಘಟನೆಗಳಿಗೆ 3,00,000 ರೂ.ವರೆಗೆ ನಗದು ಬಹುಮಾನ ಒಳಗೊಂಡಿದೆ.

ಕೇಂದ್ರ ಯುವಜನ ಮತ್ತು ಕ್ರೀಡಾ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ನವದೆಹಲಿಯ ವಿಜ್ಞಾನಭವನದಲ್ಲಿಂದು 2017-18 ಮತ್ತು 2018-19ನೇ ಸಾಲಿನ ರಾಷ್ಟ್ರೀಯ ಯುವಜನ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಅಂತಾರಾಷ್ಟ್ರೀಯ ಯುವದಿನ 2020-21 ಆಚರಣೆ ಅಂಗವಾಗಿ ಕೃಷಿ ಉದ್ಯಮಿ ಸವಾಲು – ಎಸ್.ಒ.ಎಲ್.ವಿ.ಇ.ಡಿ 2021(ಸಾಮಾಜಿಕ ಧ್ಯೇಯೋದ್ದೇಶಗಳನ್ನು ಆಧರಿಸಿದ ಸ್ವಯಂ ಉದ್ಯೋಗ ಅಭಿವೃದ್ಧಿ) ಸ್ಪರ್ಧೆಯಲ್ಲಿ ವಿಜೇತರಾದ ಹತ್ತು ಯುವ ಉದ್ಯಮಿಗಳ ತಂಡಗಳನ್ನು ಶ್ರೀ ಅನುರಾಗ್ ಸಿಂಗ್ ಠಾಕೂರ್ ಸನ್ಮಾನಿಸಿದರು. ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವಜನ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಉಷಾ ಶರ್ಮಾ, ವಿಶ್ವಸಂಸ್ಥೆಯ ಸ್ಥಾನಿಕ ಸಮನ್ವಯಕಾರರಾದ ಶ್ರೀಮತಿ ಡೀರ್ಡೆಬಾಯ್ಡ್, ಯುವಜನ ವ್ಯವಹಾರಗಳ ಜಂಟಿ ಕಾರ್ಯದರ್ಶಿ ಶ್ರೀ ಅಸಿತ್ ಸಿಂಗ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, ‘ವಿಶ್ವಸಂಸ್ಥೆ(ಯುಎನ್) ನಿಯೋಜಿಸಿದಂತೆ ಇಂದು ಅಂತಾರಾಷ್ಟ್ರೀಯ ಯುವದಿನವನ್ನು ಪ್ರತಿ ವರ್ಷದಂತೆ ಆಚರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಯುವ ದಿನ ಕ್ಯಾಲೆಂಡರ್ ನಲ್ಲಿ ಕೇವಲ ಒಂದು ದಿನವಲ್ಲ. ಭಾರತದ ಯುವಜನತೆ ಭಾರತದ ಭವಿಷ್ಯವಾಗಿದೆ ಮತ್ತು ಅದಕ್ಕೂ ಮುಖ್ಯವಾಗಿ ಭಾರತದ ಪ್ರಸ್ತುತತೆಯಾಗಿದ್ದಾರೆ. ಅವರು ಆತ್ಮನಿರ್ಭರ ಭಾರತ ಆವಿಷ್ಕಾರ–ಎಐ ಯುಗದಲ್ಲಿ ಅನುಶೋಧನೆ ಮತ್ತು ಹೊಸ ಚಿಂತನೆಗಳ ಚಾಲಕರಾಗಿದ್ದಾರೆ” ಎಂದರು.

ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, ಈ ವರ್ಷದ ಅಂತಾರಾಷ್ಟ್ರೀಯ ಯುವ ದಿನದ ಘೋಷಣೆ ಪರಿವರ್ತನೆಯಾಗುತ್ತಿರುವ ಆಹಾರ ವ್ಯವಸ್ಥೆ; ಯುವಜನರ ಭಾಗಿದಾರಿಕೆ ಎಂಬುದಾಗಿದ್ದು, ಇದು ಪರಿವರ್ತನೆಗೆ ಅತ್ಯಗತ್ಯವಾಗಿದೆ. ಯುವಜನತೆ ಆಧರಿತ ಕೃಷಿ ತಂತ್ರಜ್ಞಾನ ಆವಿಷ್ಕಾರಗಳು ಈ ವಲಯದಲ್ಲಿ ಹೊಸ ಆಯಾಮಗಳನ್ನು ಹುಟ್ಟು ಹಾಕುತ್ತಿದ್ದಾರೆ. ಯುವಜನರು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳದಿದ್ದರೆ ಇಂತಹ ಜಾಗತಿಕ ಪ್ರಯತ್ನದ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ. ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸರ್ಕಾರ ವೃತ್ತಿಪರ ಶಿಕ್ಷಣ, ಕೌಶಲ್ಯಾಭಿವೃದ್ಧಿ, ನಮ್ಮ ಯುವ ನಾಗರಿಕರಿಗೆ ನವೋದ್ಯಮಗಳಿಗೆ ಆರ್ಥಿಕ ನೆರವು ನೀಡುವ ನಿಟ್ಟಿನಲ್ಲಿ ಹಲವು ಉಪಕ್ರಮಗಳಿಗೆ ಆದ್ಯತೆ ನೀಡಿದೆ. ನಾವು ಭಾರತದ ಯುವಶಕ್ತಿಯನ್ನು ವಿಶ್ವದ ಬೃಹತ್ ಕೌಶಲ್ಯ ಶಕ್ತಿಯನ್ನಾಗಿ ರೂಪಿಸುವ ಗುರಿ ಹೊಂದಿದ್ದೇವೆ. ಎಲ್ಲ ರಾಷ್ಟ್ರೀಯ ಯುವಜನ ಪ್ರಶಸ್ತಿ ವಿಜೇತರನ್ನು ನಾನು ಅಭಿನಂದಿಸುತ್ತೇನೆ. ಯುವಜನತೆ ಶ್ರೇಷ್ಠ ಸಾಧನೆ ಮಾಡಲು ಅವರಿಗೆ ಉತ್ತೇಜನ ನೀಡುವುದು ಈ ಪ್ರಶಸ್ತಿಗಳನ್ನು ನೀಡುತ್ತಿರುವುದರ ಹಿಂದಿನ ಉದ್ದೇಶವಾಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಡೀರ್ಡೆಬಾಯ್ಡ್ ಅವರು, “ಭಾರತ ವಿಶ್ವದೊಂದಿಗೆ ಇನ್ನೂ ಸಾಕಷ್ಟು ಹಂಚಿಕೊಳ್ಳಬೇಕಿದೆ. ಇದು ಹೆಚ್ಚಿನ ಯುವಜನತೆಯನ್ನು ಹೊಂದಿದೆ. ಯುವಜನತೆ ಬದಲಾವಣೆಯ ಪರಿಣಾಮ ಉಂಟುಮಾಡುವ ಶಕ್ತಿ ಹೊಂದಿದ್ದಾರೆ. ಅವರಲ್ಲಿ ದೇಶದ ಪ್ರಗತಿಗೆ ತಾಜಾ ಹಾಗೂ ನವೀನ ಚಿಂತನೆಗಳು ಇವೆ. ಸುಸ್ಥಿರ ಅಭಿವೃದ್ಧಿಯಲ್ಲಿ ಜಗತ್ತಿನಾದ್ಯಂತ ಇರುವ ಯುವಜನತೆ ನಿರ್ಣಾಯಕ ಪಾತ್ರವಹಿಸಲಿದ್ದಾರೆ’’ ಎಂದರು.

ಯುವಜನ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಉಷಾ ಶರ್ಮಾ, “ಭಾರತದ ಯುವಜನತೆ ಪರಿವರ್ತನೆಯ ಹರಿಕಾರರು, ಆವಿಷ್ಕಾರಿಗಳು, ಯುವ ಉದ್ಯಮಿಗಳು ಮತ್ತು ಸಮುದಾಯಗಳ ಹಿತವನ್ನು ರಕ್ಷಿಸುವ ಸ್ವಾರ್ಥರಹಿತ ಸ್ವಯಂಸೇವಕರು ಹೀಗೆ ಬಹು ಬಗೆಯ ಪಾತ್ರಗಳನ್ನು ವಹಿಸುತ್ತಿದ್ದಾರೆ’’ ಎಂದು ಹೇಳಿದರು.

ವೈಯಕ್ತಿಕ ಹಾಗೂ ಸಂಘಟನೆಗಳ ವಿಭಾಗದಲ್ಲಿ ಒಟ್ಟು 22 ರಾಷ್ಟ್ರೀಯ ಯುವ ಪ್ರಶಸ್ತಿಗಳನ್ನು ನೀಡಲಾಯಿತು. 2017-18ನೇ ಸಾಲಿನಲ್ಲಿ ಒಟ್ಟು 14 ಎನ್ ವೈಎ ಪ್ರಶಸ್ತಿಗಳನ್ನು ನೀಡಲಾಯಿತು. ಆ ಪೈಕಿ ಹತ್ತು ಪ್ರಶಸ್ತಿಗಳು ವೈಯಕ್ತಿಕ ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳು ಸಂಘಟನೆ ವಿಭಾಗದಲ್ಲಿ ಸೇರಿವೆ. 2018-19ನೇ ಸಾಲಿನಲ್ಲಿ ಒಟ್ಟು 8 ಪ್ರಶಸ್ತಿಗಳನ್ನು ನೀಡಲಾಗಿದ್ದು, ಅದರಲ್ಲಿ ಏಳು ವೈಯಕ್ತಿಕ ವಿಭಾಗದಲ್ಲಿ ಮತ್ತು ಒಂದು ಸಂಘಟನೆಗಳ ವಿಭಾಗದಲ್ಲಿ ಸೇರಿವೆ. ಪ್ರಶಸ್ತಿ – ಪದಕ, ಪ್ರಮಾಣಪತ್ರ ಮತ್ತು ಕ್ರಮವಾಗಿ ವೈಯಕ್ತಿಕ ವಿಭಾಗದಲ್ಲಿ ಒಂದು ಲಕ್ಷ ರೂ. ಹಾಗೂ ಸಂಘಟನೆಗಳ ವಿಭಾಗದಲ್ಲಿ ಮೂರು ಲಕ್ಷ ರೂ. ನಗದು ಬಹುಮಾನ ಒಳಗೊಂಡಿದೆ.

ಪ್ರಶಸ್ತಿ ಪುರಸ್ಕೃತರ ವಿವರಗಳು

 

ಎನ್ ವೈಎ 2017-18

 

ಕ್ರ.ಸಂ.

ಹೆಸರು

ರಾಜ್ಯ

ವೈಯಕ್ತಿಕ

  1.  

ಶ್ರೀ ಸೌರಭ್ ನವಾಂಡೆ

ಮಹಾರಾಷ್ಟ್ರ

  1.  

ಶ್ರೀ ಹಿಮಾಂಶು ಕುಮಾರ್ ಗುಪ್ತಾ

ಮಧ್ಯಪ್ರದೇಶ

  1.  

ಶ್ರೀ ಅನಿಲ್ ಪ್ರಧಾನ್

ಒಡಿಶಾ

  1.  

ಕುಮಾರಿ ದೇವಿಕಾ ಮಲಿಕ್

ಹರಿಯಾಣ

  1.  

ಕುಮಾರಿ ನೇಹಾ ಕುಶ್ವಾಹ

ಉತ್ತರ ಪ್ರದೇಶ

  1.  

ಶ್ರೀ ಚೇತನ್ ಮಹದುಪರದೇಶಿ

ಮಹಾರಾಷ್ಟ್ರ

  1.  

ಶ್ರೀ ರಂಜಿತ್ ಸಿಂಗ್ ಸಂಜಯ್ ಸಿಂಗ್ ರಜಪೂತ್

ಮಹಾರಾಷ್ಟ್ರ

  1.  

ಶ್ರೀ ಮಹಮ್ಮದ್ ಅಜಮ್

ತೆಲಂಗಾಣ

  1.  

ಶ್ರೀ ಮನೀಶ್ ಕುಮಾರದವೆ

ರಾಜಸ್ಥಾನ

  1.  

ಶ್ರೀ ಪರದೀಪ್ ಮಹಾಲ

ಹರಿಯಾಣ

ಸಂಘಟನೆ

  1.  

ಮನ ವೂರು ಮನ ಬಾಧ್ಯಥ

ಆಂಧ್ರಪ್ರದೇಶ

  1.  

ಯುವ ದಿಶಾ ಕೇಂದ್ರ

ಗುಜರಾತ್

  1.  

ಥೋಜಾನ್

ತಮಿಳುನಾಡು

  1.  

ಸಿನರ್ಜಿ ಸಂಸ್ಥಾನ

ಮಧ್ಯಪ್ರದೇಶ

 

ಎನ್ ವೈಎ 2018-19

 

ಕ್ರ.ಸಂ

ಹೆಸರು

ರಾಜ್ಯ

ವೈಯಕ್ತಿಕ

  1.  

ಶ್ರೀ ಶುಭಂ ಚೌಹಾಣ್

ಮಧ್ಯಪ್ರದೇಶ

  1.  

ಶ್ರೀ ಗುಣಜಿ ಮಾಂದ್ರೇಕರ್

ಗೋವಾ

  1.  

ಶ್ರೀ ಅಜಯ್ ಓಲಿ

ಉತ್ತರಾಖಂಡ

  1.  

ಶ್ರೀ ಸಿದ್ದಾರ್ಥ ರಾಯ್

ಮಹಾರಾಷ್ಟ್ರ

  1.  

ಶ್ರೀ ಪ್ರಹರ್ಶ್ ಮೋಹನ್ ಲಾಲ್ ಪಟೇಲ್

ಗುಜರಾತ್

  1.  

ದಿವ್ಯಾ ಕುಮಾರಿ ಜೈನ್

ರಾಜಸ್ಥಾನ

  1.  

ಶ್ರೀ ಯಶ್ವೀರ್ ಗೋಯಲ್

ಪಂಜಾಬ್

ಸಂಘಟನೆ

  1.  

ಲಾಡ್ಲಿ ಫೌಂಡೇಷನ್ ಟ್ರಸ್ಟ್

ನವದೆಹಲಿ

 

ರಾಷ್ಟ್ರೀಯ ಯುವಜನ ಪ್ರಶಸ್ತಿಗೆ ಭಾಜನರಾದವರ ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

Click for the more details of National Youth awardees details

 

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವಜನ ವ್ಯವಹಾರಗಳ ಇಲಾಖೆ ವೈಯಕ್ತಿಕ ವಿಭಾಗದಲ್ಲಿ(15-29) ವರ್ಷದೊಳಗಿನವರು ಮತ್ತು ಸಂಘಟನೆಗಳ ವಿಭಾಗದಲ್ಲಿ ನಾನಾ ವಲಯದ ಅಭಿವೃದ್ಧಿಗೆ ಕೊಡುಗೆ ನೀಡಿದ ಮತ್ತು ಆರೋಗ್ಯ, ಮಾನವ ಹಕ್ಕುಗಳ ಉತ್ತೇಜನ ಸಕ್ರಿಯ ನಾಗರಿಕ, ಸಮುದಾಯ ಸೇವೆ ಮತ್ತಿತರ ವಲಯಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಷ್ಟ್ರೀಯ ಯುವ ಪ್ರಶಸ್ತಿಗಳನ್ನು ನೀಡಿ ಗೌರವಿಸಲಿದೆ.

 

ಈ ಪ್ರಶಸ್ತಿಗಳ ಉದ್ದೇಶ ಸಾಮಾಜಿಕ ಸೇವೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ವಲಯಗಳಲ್ಲಿ ಯುವಜನತೆ ಶ್ರೇಷ್ಠ ಸಾಧನೆ ಮಾಡಲು ಉತ್ತೇಜನ ನೀಡುವುದು ಹಾಗೂ ಯುವಜನತೆಯಲ್ಲಿ ಸಮುದಯಾದ ಜವಾಬ್ದಾರಿಯ ಕುರಿತು ಜಾಗೃತಿ ಮೂಡಿಸಲು ಉತ್ತೇಜಿಸುವುದು ಹಾಗೂ ಆ ಮೂಲಕ ಅವರನ್ನು ಉತ್ತಮ ನಾಗರಿಕರನ್ನಾಗಿ ವೈಯಕ್ತಿಕವಾಗಿ ಅಭಿವೃದ್ಧಿಗೊಳಿಸುವುದು ಹಾಗೂ ಸಮಾಜಸೇವೆ ಸೇರಿದಂತೆ ರಾಷ್ಟ್ರದ ಅಭಿವೃದ್ಧಿಯಲ್ಲಿ ಸ್ವಯಂ ಸಂಘಟನೆಗಳಲ್ಲಿ ದುಡಿಯುತ್ತಾ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ಯುವಕರನ್ನು ಗುರುತಿಸುವುದಾಗಿದೆ.

ಎಸ್.ಒ.ಎಲ್.ವಿ.ಇ.ಡಿ ಸ್ಪರ್ಧೆಯಲ್ಲಿ ವಿಜೇತರಾದವರ ಹೆಸರು ಈ ಕೆಳಗಿನಂತಿದೆ

ಕ್ರ.ಸಂ.

ಹೆಸರು

 

1

ಶ್ರೀ ನಿಕ್ಕಿ ಕುಮಾರ್ ಜಾ

 

2

ಶ್ರೀ ಉತ್ಕರ್ಷ ವತ್ಸ

 

3

ಶ್ರೀ ದಿವ್ಯರಾಜಸಿನ್ಹಜಾಲ

 

4

ಶ್ರೀ ವಿನೋಜ್ ಪಿ.ಎ. ರಾಜ್

 

5

ಶ್ರೀಮತಿ ಕಿರಣ್ ತ್ರಿಪಾಠಿ

 

6

ಶ್ರೀ ವಿನೋದ್ ಕುಮಾರ್ ಸಾಹು

 

7

ಶ್ರೀ ಹಲಕ್ ವಿಶಾಲ್ ಶಾ

 

8

ಶ್ರೀ ಬುದ್ದಲ ಋಷಿಕೇಶ್

 

9

ಶ್ರೀ ಅಹ್ಮರ್ ಬಶೀರ್ ಶಾ

 

10

ಶ್ರೀ ಅಮನ್ ಜೈನ್

 

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ವಿಶ್ವಸಂಸ್ಥೆಯ ಸ್ವಯಂಸೇವಕರ ಸಹಭಾಗಿತ್ವದಲ್ಲಿ 2020ರ ಡಿಸೆಂಬರ್ ನಲ್ಲಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ ಎಸ್.ಒ.ಎಲ್.ವಿ.ಇ.ಡಿ ಸ್ಪರ್ಧೆಯನ್ನು ನಗರ ಭಾರತ ಮತ್ತು ನಗರಗಳ ಹೊರವಲಯ ಹಾಗೂ ಗ್ರಾಮೀಣ ಭಾರತದ ಯುವಜನರಿಗಾಗಿ ಆಯೋಜಿಸಿತ್ತು. ಕೃಷಿ ಆಹಾರ ಮೌಲ್ಯ ಸರಣಿಯಲ್ಲಿ ಯುವಜನತೆ ನೇತೃತ್ವದಲ್ಲಿ ಉದ್ಯಮಶೀಲ ಪರಿಹಾರಗಳನ್ನು ಹಾಗೂ ವಿನೂತನ ತಂತ್ರಗಳನ್ನು ಗುರುತಿಸುವುದು ಇದರ ಉದ್ದೇಶವಾಗಿತ್ತು. ಭಾರತದಾದ್ಯಂತ ಸುಮಾರು 850 ಮಂದಿ ಯುವಕರು ಇದಕ್ಕೆ ಅರ್ಜಿ ಸಲ್ಲಿಸಿದ್ದರು. ಹಲವು ಸುತ್ತುಗಳ ಸ್ಪರ್ಧೆ ಮತ್ತು ತರಬೇತಿ ನಂತರ ಹತ್ತು ವಿಜೇತರು ಜಮ್ಮು ಮತ್ತು ಕಾಶ್ಮೀರ, ಬಿಹಾರ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್ ಗಢ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಿಂದ ಆಯ್ಕೆಯಾಗಿದ್ದಾರೆ.

 

ಎಸ್.ಒ.ಎಲ್.ವಿ.ಇ.ಡಿ ಸ್ಪರ್ಧೆಯಲ್ಲಿ ವಿಜೇತರಾದವರ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

Click for the more details of S.O.L.V.E.D Challenge awardees

 

*******



(Release ID: 1745273) Visitor Counter : 227