ಪ್ರಧಾನ ಮಂತ್ರಿಯವರ ಕಛೇರಿ
ವಿಶ್ವ ಸಿಂಹ ದಿನದ ಅಂಗವಾಗಿ, ಸಿಂಹಗಳ ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರುವ ಎಲ್ಲರಿಗೂ ಶುಭಾಶಯ ಕೋರಿದ ಪ್ರಧಾನಿ
प्रविष्टि तिथि:
10 AUG 2021 10:55AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ಸಿಂಹ ದಿನದ ಅಂಗವಾಗಿ, ಸಿಂಹಗಳ ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರುವ ಎಲ್ಲರಿಗೂ ಶುಭ ಕೋರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ, "ಸಿಂಹವು ಭವ್ಯ ಮತ್ತು ಧೈರ್ಯಶಾಲಿ. ಭಾರತವು ಏಷ್ಯಾಟಿಕ್ ಸಿಂಹದ ನೆಲೆಯಾಗಿರುವುದು ಹೆಮ್ಮೆಯ ವಿಷಯ. ವಿಶ್ವ ಸಿಂಹ ದಿನದಂದು, ಸಿಂಹಗಳ ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರುವ ಎಲ್ಲರಿಗೂ ನಾನು ನನ್ನ ಶುಭಾಶಯಗಳನ್ನು ಕೋರುತ್ತಿದ್ದೇನೆ. ಕಳೆದ ಕೆಲವು ವರ್ಷಗಳಲ್ಲಿ ಭಾರತದ ಸಿಂಹಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳವಾಗಿರುವ ವಿಷಯ ನಿಮಗೆ ಸಂತೋಷ ತರುವಂಥದ್ದು.”
“ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ, ಗಿರ್ ಸಿಂಹಗಳಿಗೆ ಸುರಕ್ಷಿತ ಮತ್ತು ಸುಭದ್ರ ಆವಾಸಸ್ಥಾನಗಳನ್ನು ಒದಗಿಸಿಕೊಡುವ ಕೆಲಸ ಮಾಡುವ ಅವಕಾಶ ನನಗೆ ಇತ್ತು. ಸಿಂಹಗಳ
ಸ್ಥಳೀಯ ಸಮುದಾಯದ ಬೆಂಬಲದೊಂದಿಗೆ ಹಾಗೂ ಜಾಗತಿಕವಾಗಿ ಅತ್ಯುತ್ತಮ ಅಭ್ಯಾಸಗಳನ್ನು ಅನುಸರಿಸುವ ಮೂಲಕ ಸಿಂಹಗಳ ಆವಾಸಸ್ಥಾನಗಳನ್ನು ಸುರಕ್ಷಿತವಾಗಿಡಲು ಹಾಗೆಯೇ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ,” ಎಂದಿದ್ದಾರೆ.
***
(रिलीज़ आईडी: 1744379)
आगंतुक पटल : 378
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam