ಜವಳಿ ಸಚಿವಾಲಯ

3 ವರ್ಷಗಳಲ್ಲಿ ಕೈಮಗ್ಗ ಉತ್ಪಾದನೆಯನ್ನು ಈಗಿನ 60000 ಕೋಟಿ ರೂ.ಗಳಿಂದ 125000 ಕೋಟಿ ರೂ.ಗಳಿಗೆ ದ್ವಿಗುಣಗೊಳಿಸಬೇಕು – ಕೇಂದ್ರ ಸಚಿವ ಶ್ರೀ ಪಿಯೂಷ್ ಗೋಯಲ್


ಕೈಮಗ್ಗ ಉತ್ಪನ್ನಗಳ ರಫ್ತನ್ನು ಪ್ರಸ್ತುತ ಇರುವ 2500 ಕೋಟಿ ರೂ.ನಿಂದ ನಾಲ್ಕು ಪಟ್ಟು ಹೆಚ್ಚಿಸಿ 10000 ಕೋಟಿ ರೂ.ಗೆ ತಲುಪಿಸುವ ಸಮಯ ಬಂದಿದೆ- ಶ್ರೀ ಗೋಯಲ್

ದೇಶಾದ್ಯಂತ ರಾಷ್ಟ್ರೀಯ ಕೈಮಗ್ಗ ದಿನದ ಆಚರಣೆ

ಸರ್ವತೋಮುಖ ಪ್ರಗತಿ ಸುಧಾರಣೆಯ ಮಾರ್ಗಗಳು ಮತ್ತು ವಿಧಾನಗಳನ್ನು ಶಿಫಾರಸು ಮಾಡಲು ಎಲ್ಲಾ ನೇಕಾರರು, ತರಬೇತುದಾರರ ಸಲಕರಣೆ ತಯಾರಕರು, ಮಾರುಕಟ್ಟೆ ತಜ್ಞರು ಮತ್ತು ಇತರ ಪಾಲುದಾರರನ್ನು ಒಳಗೊಂಡ ಸಮಿತಿಯ ರಚನೆ

ಕೈಮಗ್ಗ ವಲಯವನ್ನು ಮುಂದಿನ ಹಂತದ ಬೆಳವಣಿಗೆಗೆ ಕೊಂಡೊಯ್ಯುವ ಅಗತ್ಯವಿದೆ ¬- ಶ್ರೀ ಪಿಯೂಷ್ ಗೋಯಲ್

ವಲಯವು ಸರ್ಕಾರದ ಬೆಂಬಲವನ್ನು ಅವಲಂಬಿಸದೆ ಸಾಕಷ್ಟು ಪ್ರಬಲವಾಗಬೇಕು ಮತ್ತು ಏಳಿಗೆ ಹೊಂದಬೇಕು- ಶ್ರೀ ಗೋಯಲ್

ಕೈಮಗ್ಗ ಕರಕುಶಲ ಗ್ರಾಮಗಳನ್ನು ಜೆ & ಕೆಯ ಕನಿಹಾಮ, ಕೇರಳದ ಕೋವಲಂ ಮತ್ತು ಅಸ್ಸಾಂನ ಮೊಹಪರ, ಗೋಲಘಾಟ್ ಗಳಲ್ಲಿ ಸ್ಥಾಪಿಸಲಾಗಿದೆ

7 ನೇ ರಾಷ್ಟ್ರೀಯ ಕೈಮಗ್ಗ ದಿನದಂದು ತಮಿಳುನಾಡಿನ ಕಾಂಚೀಪುರಂನಲ್ಲಿ ವಿನ್ಯಾಸ ಸಂಪನ್ಮೂಲ ಕೇಂದ್ರ ಮತ್ತು ಛತ್ತೀಸ್ಗಢದ ರಾಯಗಢದಲ್ಲಿ ನೇಕಾರರ ಸೇವಾ ಕೇಂದ್ರವನ್ನು ಶ್ರೀ ಗೋಯಲ್ ಮತ್ತು ಶ್ರೀಮತಿ ದರ್ಶನಾ ಜರ್ದೋಷ್ ಜಂಟಿಯಾಗಿ ಉದ್ಘಾಟಿಸಿದರು

Posted On: 07 AUG 2021 5:13PM by PIB Bengaluru

ಕೈಮಗ್ಗ ಕ್ಷೇತ್ರದ ಉತ್ಪಾದನಾ ಸಾಮರ್ಥ್ಯವನ್ನು ಮೂರು ವರ್ಷಗಳಲ್ಲಿ ಈಗಿರುವ 60 ಸಾವಿರ ಕೋಟಿ ರೂಪಾಯಿಗಳಿಂದ ಒಂದು ಲಕ್ಷ 25 ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಕೇಂದ್ರ ಜವಳಿ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಶ್ರೀ ಪಿಯೂಷ್ ಗೋಯಲ್ ಹೇಳಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಕೈಮಗ್ಗ ವಸ್ತುಗಳ ರಫ್ತನ್ನು ಈಗಿರುವ 2,500 ಕೋಟಿ ರೂಪಾಯಿಗಳಿಂದ 10,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸುವ ಗುರಿಯನ್ನು ಹೊಂದಬೇಕು ಎಂದೂ ಅವರು ಹೇಳಿದರು. 
ನವದೆಹಲಿಯಲ್ಲಿ ಇಂದು ನಡೆದ 7 ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಗೋಯಲ್, ಕೈಮಗ್ಗ ಕ್ಷೇತ್ರದ ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರವು ಬದ್ಧವಾಗಿದೆ ಮತ್ತು ಆ ಮೂಲಕ ಕೈಮಗ್ಗ ನೇಕಾರರು ಮತ್ತು ಕಾರ್ಮಿಕರನ್ನು ಆರ್ಥಿಕವಾಗಿ ಸಬಲರನ್ನಾಗಿಸುತ್ತದೆ ಮತ್ತು ಅವರ ಸೊಗಸಾದ ಕರಕುಶಲತೆಯ ಬಗ್ಗೆ ಹೆಮ್ಮೆಯನ್ನು ಮೂಡಿಸುತ್ತದೆ ಎಂದು ಹೇಳಿದರು.
ಕೈಮಗ್ಗ ಕ್ಷೇತ್ರದ ಸರ್ವತೋಮುಖ ಪ್ರಗತಿಯನ್ನು ಸುಧಾರಿಸಲು ಮಾರ್ಗಗಳು ಮತ್ತು ವಿಧಾನಗಳನ್ನು ಶಿಫಾರಸು ಮಾಡಲು ಎಲ್ಲಾ ನೇಕಾರರು, ತರಬೇತುದಾರರ ಸಲಕರಣೆ ತಯಾರಕರು, ಮಾರುಕಟ್ಟೆ ತಜ್ಞರು ಮತ್ತು ಇತರ ಪಾಲುದಾರರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು ಎಂದು ಸಚಿವರು ಘೋಷಿಸಿದರು.

 

ನಮ್ಮ ಸಾಂಸ್ಕೃತಿಕ ಪರಂಪರೆಯಲ್ಲಿ ಕೈಮಗ್ಗ ಕ್ಷೇತ್ರಕ್ಕೆ ವಿಶಿಷ್ಟ ಸ್ಥಾನವಿದೆ ಎಂದು ಅವರು ಹೇಳಿದರು. ಶತಮಾನಗಳಿಂದ, ನೇಯ್ಗೆ ಮತ್ತು ವಿನ್ಯಾಸ ಕೌಶಲ್ಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಮೂಲಕ ಇದನ್ನು ಉಳಿಸಿಕೊಳ್ಳಲಾಗಿದೆ. ಆಗಸ್ಟ್ 07, 1905 ರಂದು ನಡೆದ ಕೋಲ್ಕತಾ ಟೌನ್ ಹಾಲ್ ಸಭೆಯಲ್ಲಿ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಲಾಯಿತು, ಇದು ದೇಶೀಯ ಉತ್ಪನ್ನಗಳು ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಪುನರುಜ್ಜೀವಗೊಳಿಸುವ ಗುರಿಯನ್ನು ಹೊಂದಿತ್ತು ಎಂದು ಅವರು ಹೇಳಿದರು. ಈ ಐತಿಹಾಸಿಕ ಸಂದರ್ಭವನ್ನು ಸ್ಮರಿಸಲು ಮತ್ತು ನಮ್ಮ ಕೈಮಗ್ಗ ಸಂಪ್ರದಾಯವನ್ನು ಆಚರಿಸಲು ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015 ರಲ್ಲಿ 7 ನೇ ಆಗಸ್ಟ್ ಅನ್ನು ರಾಷ್ಟ್ರೀಯ ಕೈಮಗ್ಗ ದಿನವನ್ನಾಗಿ ಘೋಷಿಸಿದರು. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ಒಂದು ರಾಷ್ಟ್ರವಾಗಿ ನಾವೆಲ್ಲರೂ ಭಾರತೀಯ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಲು ಮತ್ತು #MyHandloomMyPride ನೊಂದಿಗೆ ಸಹಭಾಗಿತ್ವದಿಂದ ತಮ್ಮ ಭವ್ಯತೆಯನ್ನು ಪ್ರದರ್ಶಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕರೆ ಕೊಟ್ಟಿದ್ದಾರೆ. ನೇಕಾರರು ಮತ್ತು ಕೈಮಗ್ಗ ವಲಯವನ್ನು ಉತ್ತೇಜಿಸಲು ಕನಿಷ್ಠ ಒಂದು ಕೈಮಗ್ಗದ ಉತ್ಪನ್ನವನ್ನು ಖರೀದಿಸುವಂತೆ ಸಚಿವರು ಜನರನ್ನು ಒತ್ತಾಯಿಸಿದರು.
 

ಕೇರಳದ ಕೋವಲಂ, ತಿರುವನಂತಪುರಂ, ಅಸ್ಸಾಂನ ಮೊಹಪರ, ಗೋಲಘಾಟ್ ಮತ್ತು ಜಮ್ಮು ಕಾಶ್ಮೀರದ ಕನಿಹಾಮ, ಬುದ್ಗಾಮ್, ಶ್ರೀನಗರಗಳಲ್ಲಿ ಆಯಾ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಮೂರು ಕೈಮಗ್ಗ ಕರಕುಶಲ ಗ್ರಾಮಗಳನ್ನು ಸ್ಥಾಪಿಸಿದ್ದಕ್ಕಾಗಿ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮವನ್ನು ಅಭಿನಂದಿಸಿದರು. ಇದು ಕೇವಲ ಹೆಚ್ಚುವರಿ ಆಕರ್ಷಣೆ ಮಾತ್ರವಲ್ಲ, ಬದಲಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು ಈ ಪ್ರದೇಶದ ಪ್ರಸಿದ್ಧ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸುವುದರಿಮದ ನೇಕಾರರ ಆದಾಯದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದರು. ಈ ವಲಯವನ್ನು ಹೊಸ ಆಲೋಚನೆಗಳು ಮತ್ತು ಬದಲಾಗುತ್ತಿರುವ ಅವಶ್ಯಕತೆಗಳಿಗೆ ಅನುಗುಣವಾಗಿ ಇತ್ತೀಚಿನ ತಾಂತ್ರಿಕ ಪ್ರಗತಿಯೊಂದಿಗೆ ಪುನಶ್ಚೇತನಗೊಳಿಸುವಂತೆ ಶ್ರೀ ಗೋಯಲ್ ಅವರು ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಸಲಹೆ ನೀಡಿದರು. ಸರ್ಕಾರದ ಬೆಂಬಲವಿಲ್ಲದೆ ಈ ಕ್ಷೇತ್ರ ಹೇಗೆ ತನ್ನ ಕಾಲ ಮೇಲೆ ನಿಲ್ಲಬಹುದು ಎಂಬ ಬಗ್ಗೆ ಯೋಚಿಸುವುದು ಬಹಳ ಮುಖ್ಯ ಎಂದು ಅವರು ಹೇಳಿದರು. 'ನಮ್ಮನ್ನು ನಾವು ಆತ್ಮನಿರ್ಭರ ಮಾಡಿಕೊಳ್ಳುವ ಮೂಲಕ, ನಾವು ಭಾರತವನ್ನು ಆತ್ಮನಿರ್ಭರವನ್ನಾಗಿ ಮಾಡಬಹುದು.' ಎಂದು ಅವರು ಹೇಳಿದರು.
  

ಈ ಸಂದರ್ಭದಲ್ಲಿ ತಮಿಳುನಾಡಿನ ಕಾಂಚೀಪುರಂನಲ್ಲಿ ವಿನ್ಯಾಸ ಸಂಪನ್ಮೂಲ ಕೇಂದ್ರ ಮತ್ತು ಛತ್ತೀಸ್‌ಗಢದ ರಾಯಘಡ್ ನಲ್ಲಿ ನೇಕಾರರ ಸೇವಾ ಕೇಂದ್ರದ ಕಟ್ಟಡವನ್ನು ಶ್ರೀ ಗೋಯಲ್ ಮತ್ತು ಜವಳಿ ಮತ್ತು ರೈಲ್ವೇ ರಾಜ್ಯ ಸಚಿವೆ ಶ್ರೀಮತಿ ದರ್ಶನಾ ಜರ್ದೋಶ್ ಜಂಟಿಯಾಗಿ ಉದ್ಘಾಟಿಸಿದರು. ವರ್ಚುವಲ್ ಗ್ರಾಹಕರು ಹಾಗೂ ಮಾರಾಟಗಾರರ ಸಭೆಯನ್ನು ಸಹ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮವು ಆಯೋಜಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ದರ್ಶನಾ ಜರ್ದೋಷ್ ಅವರು, ಶೇ.70 ರಷ್ಟು ಮಹಿಳಾ ನೇಕಾರರು ಮತ್ತು ಸಂಬಂಧಿತ ಕಾರ್ಮಿಕರನ್ನು ಹೊಂದಿರುವ ಈ ವಲಯವು ಮಹಿಳಾ ಸಬಲೀಕರಣವನ್ನು ನೇರವಾಗಿ ಬೆಂಬಲಿಸುವ ಕ್ಷೇತ್ರವಾಗಿದೆ ಎಂದರು. ಸ್ಥಳೀಯತೆಗೆ ಆದ್ಯತೆ ಉಪಕ್ರಮದ ಅಡಿಯಲ್ಲಿ ಸ್ಥಳೀಯ ಕುಶಲಕರ್ಮಿಗಳನ್ನು ಉತ್ತೇಜಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.
ಕೈಮಗ್ಗ ನೇಕಾರರು ಮತ್ತು ಕರಕುಶಲಕರ್ಮಿಗಳಿಗಾಗಿ ಡಿಜಿಟಲ್ ಇಂಡಿಯಾ ಕಾರ್ಪೊರೇಶನ್ ಸಮನ್ವಯದಲ್ಲಿ ಇ-ಕಾಮರ್ಸ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಜವಳಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಯು ಪಿ ಸಿಂಗ್ ಹೇಳಿದರು. ಇದರಿಂದ ನಮ್ಮ ನೇಕಾರರು ಮತ್ತು ಕುಶಲಕರ್ಮಿಗಳು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಸಾಧ್ಯವಾಗುತ್ತದೆ. ಕೈಮಗ್ಗ ವಲಯವನ್ನು ಬೆಂಬಲಿಸಲು ಮತ್ತು ವಿಶಾಲ ಮಾರುಕಟ್ಟೆಯನ್ನು ಸಕ್ರಿಯಗೊಳಿಸಲು, ನೇಕಾರರಿಗೆ ಸರ್ಕಾರಿ ಇ-ಮಾರುಕಟ್ಟೆ ಸ್ಥಳ (ಜಿಇಎಂ) ಕ್ಕೆ  ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಈ ಕ್ರಮವು ನೇಕಾರರು ತಮ್ಮ ಉತ್ಪನ್ನಗಳನ್ನು ನೇರವಾಗಿ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ. ಇಲ್ಲಿಯವರೆಗೆ ಸುಮಾರು 1.50 ಲಕ್ಷ ನೇಕಾರರನ್ನು ಜಿಇಎಂ ಪೋರ್ಟಲ್‌ನಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಭಾಗವಹಿಸಲು ದೇಶದ ವಿವಿಧ ಮೂಲೆಗಳಿಂದ ಬಂದ ನೇಕಾರರೊಂದಿಗೆ ಶ್ರೀ ಗೋಯಲ್ ಮತ್ತು ಶ್ರೀಮತಿ. ದರ್ಶನಾ ಜರ್ದೋಷ್ ಅವರು ಸಂವಾದ ನಡೆಸಿದರು. ಸಮೃದ್ಧ ವೈವಿಧ್ಯಮಯ ಕೈಮಗ್ಗ ಉತ್ಪನ್ನಗಳ ಪ್ರದರ್ಶನವನ್ನು ಹೋಟೆಲ್ ಅಶೋಕದ ಸಮಾವೇಶ ಸಭಾಂಗಣದಲ್ಲಿ  ಆಯೋಜಿಸಲಾಗಿದೆ.
ಪ್ರಧಾನಮಂತ್ರಿಯವರ ಸ್ಪಷ್ಟವಾದ ಕರೆಯ ಮೇರೆಗೆ,  7 ನೇ ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ನಿಗಮದಿಂದ ರಾಷ್ಟ್ರ ಮಟ್ಟದ – ‘ನನ್ನ ಕೈಮಗ್ಗ ನನ್ನ ಹೆಮ್ಮೆ’ ಯ ಪ್ರದರ್ಶನವನ್ನು ನವದೆಹಲಿಯ ದಿಲ್ಲಿ ಹಾತ್ ನಲ್ಲಿ ಆಗಸ್ಟ್ 1 ರಿಂದ 15 ರವರೆಗೆ ನಿಂದ ಆಯೋಜಿಸಲಾಗಿದೆ. ಇಲ್ಲಿ ದೇಶಾದ್ಯಂತದ ಕೈಮಗ್ಗ ಉತ್ಪಾದಕ ಸಂಸ್ಥೆಗಳು ಮತ್ತು ನೇಕಾರರು ದೇಶಾದ್ಯಂತ ತಮ್ಮ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಪ್ರದರ್ಶಿಸುತ್ತಿದ್ದಾರೆ. 22 ರಾಜ್ಯಗಳಿಗೆ ಸೇರಿದ 125 ಕ್ಕೂ ಹೆಚ್ಚು ಕೈಮಗ್ಗ ಏಜೆನ್ಸಿಗಳು/ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ಎಕ್ಸ್‌ಪೋದಲ್ಲಿ ಭಾಗವಹಿಸುತ್ತಿದ್ದಾರೆ. ಪ್ರದರ್ಶನವು ಆಗಸ್ಟ್ 15, 2021 ರವರೆಗೆ ಹದಿನೈದು ದಿನಗಳವರೆಗೆ ಬೆಳಗ್ಗೆ 11 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ ಮತ್ತು 10000 ಕ್ಕೂ ಹೆಚ್ಚು ಜನರು ಪ್ರದರ್ಶನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಭಾರತದ ಕೆಲವು ಅಪರೂಪದ ಸ್ಥಳಗಳ ಕೈಮಗ್ಗ ಉತ್ಪನ್ನಗಳು ಪ್ರದರ್ಶನದಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕಿವೆ.  2021 ಆಗಸ್ಟ್ 7 ರಿಂದ 11 ರವರೆಗೆ #MyHandloomMyPride ಎಕ್ಸ್‌ಪೋವನ್ನು ಹೋಟೆಲ್ ಲೀಲಾ ಪ್ಯಾಲೇಸ್ ಬಳಿಯ ಸಮುದಾಯ ಭವನದಲ್ಲಿ ಕೈಮಗ್ಗ ರಫ್ತು ಉತ್ತೇಜನಾ ಮಂಡಳಿಯು  ಆಯೋಜಿಸಲಿದೆ.

***


(Release ID: 1743690) Visitor Counter : 309