ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಪ್ಯಾರಾಲಿಂಪಿಕ್ ಥೀಮ್ ಸಾಂಗ್ ಬಿಡುಗಡೆ ಮಾಡಿದರು


ನೀವು ಕನಸು ಕಾಣಲು ಸಾಧ್ಯವಾದರೆ, ನೀವು ಅದನ್ನು ಸಾಧಿಸಬಹುದು: ಶ್ರೀ ಅನುರಾಗ್ ಸಿಂಗ್ ಠಾಕೂರ್

Posted On: 03 AUG 2021 4:10PM by PIB Bengaluru

ಪ್ರಮುಖ ಮುಖ್ಯಾಂಶಗಳು :

  • "ಕರ್ ದೇ ಕಮಾಲ್ ತು" ಹಾಡನ್ನು ದಿವ್ಯಾಂಗ ಕ್ರಿಕೆಟ್ ಆಟಗಾರ ಸಂಜೀವ್ ಸಿಂಗ್ ಸಂಯೋಜಿಸಿದ್ದಾರೆ ಮತ್ತು ಹಾಡಿದ್ದಾರೆ
  • ಬಾರಿ ದಾಖಲೆಯ ಸಂಖ್ಯೆಯ 54 ಪ್ಯಾರಾ ಅಥ್ಲೀಟ್ಗಳು 9 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರು ಇಂದು ನವದೆಹಲಿಯಲ್ಲಿ ಭಾರತೀಯ ಪ್ಯಾರಾಲಿಂಪಿಕ್ ತಂಡಕ್ಕಾಗಿ "ಕರ್ ದೇ ಕಮಾಲ್ ತು" ಥೀಮ್ ಸಾಂಗ್ ಅನ್ನು ಬಿಡುಗಡೆ ಮಾಡಿದರು. ಕಾರ್ಯದರ್ಶಿ (ಕ್ರೀಡೆ) ಶ್ರೀ ರವಿ ಮಿತ್ತಲ್; ಜಂಟಿ ಕಾರ್ಯದರ್ಶಿ (ಕ್ರೀಡೆ) ಶ್ರೀ ಎಲ್ ಎಸ್ ಸಿಂಗ್; ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಅಧ್ಯಕ್ಷರಾದ ಡಾ ದೀಪಾ ಮಲಿಕ್; ಪ್ರಧಾನ ಕಾರ್ಯದರ್ಶಿ ಶ್ರೀ ಗುರುಶರಣ್ ಸಿಂಗ್ ಮತ್ತು ಮುಖ್ಯ ಪೋಷಕ ಎಸ್. ಅವಿನಾಶ್ ರೈ ಖನ್ನಾ ಕೂಡ ಸಂದರ್ಭದಲ್ಲಿ ಹಾಜರಿದ್ದರು.

"ಕರ್ ದೇ ಕಮಾಲ್ ತು" ಹಾಡನ್ನು ಲಕ್ನೋ ನಿವಾಸಿ ದಿವ್ಯಾಂಗ ಕ್ರಿಕೆಟ್ ಆಟಗಾರ ಸಂಜೀವ್ ಸಿಂಗ್ ಸಂಯೋಜಿಸಿದ್ದಾರೆ ಮತ್ತು ಹಾಡಿದ್ದಾರೆ. ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಕಲ್ಪನೆಯು ದಿವ್ಯಾಂಗ ಸಮುದಾಯದಿಂದ ಹಾಡನ್ನು ಒಳಗೊಳ್ಳುವಿಕೆಯ ಸಂಕೇತವಾಗಿ ಪಡೆಯುವುದಾಗಿತ್ತುಹಾಡಿನ ಸಾಹಿತ್ಯವು ಕೇವಲ ಕ್ರೀಡಾಪಟುಗಳನ್ನು ಮಾತ್ರವಲ್ಲದೆ ಯಾವುದೇ ರೀತಿಯ ಅಂಗವೈಕಲ್ಯ ಹೊಂದಿರುವ ಜನರನ್ನು ತಾವು ಯಾರಿಗೂ ಕಡಿಮೆಯಿಲ್ಲವೆಂದುಕೊಳ್ಳುವಂತೆ  ಮತ್ತು ಅವರಲ್ಲಿ ಅದ್ಭುತಗಳನ್ನು ಸೃಷ್ಟಿಸಲು ಪ್ರೇರೇಪಿಸುತ್ತದೆ.

https://static.pib.gov.in/WriteReadData/userfiles/image/image0017YL3.jpg

ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್, " ಭಾರತವು  9 ಕ್ರೀಡಾ ವಿಭಾಗಗಳಲ್ಲಿಭಾಗವಹಿಸಲು 54 ಕ್ರೀಡಾ ಪಟುಗಳಿರುವ ತನ್ನ ಅತಿದೊಡ್ಡ ತಂಡವನ್ನು   ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಕಳುಹಿಸುತ್ತಿದೆ.  

ಭಾರತವು ನಿಮ್ಮ ಪ್ರತಿಯೊಂದು ನಡೆಯನ್ನು ನೋಡುತ್ತಿರುತ್ತದೆ, ಕ್ರೀಡಾಕೂಟದಲ್ಲಿ ನಾವು ನಿಮ್ಮ ಅಭೂತಪೂರ್ವ ಪ್ರಯಾಣವನ್ನು ನೋಡುತ್ತಿರುತ್ತೇವೆ. ನಮ್ಮ ಪ್ಯಾರಾ-ಅಥ್ಲೀಟ್ಗಳ ಛಲವು ಅವರ ಅದ್ಭುತ ಚೈತನ್ಯವನ್ನು ತೋರಿಸುತ್ತದೆ. ನೀವು ಭಾರತಕ್ಕಾಗಿ ಆಡುವಾಗ 130 ಕೋಟಿ ಭಾರತೀಯರು ನಿಮ್ಮನ್ನು ಹುರಿದುಂಬಿಸುತ್ತಾರೆ ಎಂಬುದನ್ನು ನೆನಪಿಡಿ! ನಮ್ಮ ಪ್ಯಾರಾ-ಕ್ರೀಡಾಪಟುಗಳು ತಮ್ಮ ಅತ್ಯುತ್ತಮವಾದದ್ದನ್ನು ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ!

 ಶ್ರೀ ನರೇಂದ್ರ ಮೋದಿ ಅವರು ನಮ್ಮ ರಿಯೋ 2016 ಪ್ಯಾರಾಲಿಂಪಿಕ್ ಕ್ರೀಡಾಪಟುಗಳನ್ನು ಭೇಟಿ ಮಾಡಿದ್ದರು ಮತ್ತು ನಮ್ಮ ಕ್ರೀಡಾಪಟುಗಳ ಹಿತಕ್ಕಾಗಿ ಯಾವಾಗಲೂ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಮತ್ತು ದೇಶಾದ್ಯಂತ ಕ್ರೀಡಾ ಮೂಲಸೌಕರ್ಯಗಳ ಅಭಿವೃದ್ಧಿಯೊಂದಿಗೆ ಪ್ರತಿಭೆಯನ್ನು ಪೋಷಿಸುವ ಸರ್ಕಾರದ ವಿಧಾನದಿಂದ ಗಮನ ಹರಿಸಿದ್ದಾರೆ.   ಭಾರತದ ಪ್ಯಾರಾಲಿಂಪಿಕ್ ಕಮಿಟಿ ಮತ್ತು ಅದರ ಅಧ್ಯಕ್ಷರಾದ  ಶ್ರೀಮತಿ ದೀಪಾ ಮಲಿಕ್ ಅವರು ನಮ್ಮ ಕ್ರೀಡಾಪಟುಗಳು ಉತ್ತಮವಾಗಿ ಸಿದ್ಧರಾಗಿರುವರು ಮತ್ತು ಉತ್ತಮ ಸೌಲಭ್ಯಗಳನ್ನು ಪಡೆಯುತ್ತಿರುವುದನ್ನು  ಎಂದು ಖಚಿತಪಡಿಸಿಕೊಂಡಿದ್ದಾರೆ, ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.

https://static.pib.gov.in/WriteReadData/userfiles/image/image0021JZS.jpg

ಸಂಜೀವ್ ಸಿಂಗ್, ಗೀತೆಯ ಸಂಯೋಜಕ ಮತ್ತು ಗಾಯಕ ಇದು ತನಗೆ ಮಾತ್ರವಲ್ಲ ಇಡೀ ಸಮುದಾಯಕ್ಕೆ ಹೆಮ್ಮೆಯ ಕ್ಷಣ ಎಂದು ಹೇಳಿದರು. ರಿಯೋ 2016 ಪ್ಯಾರಾ ಗೇಮ್ಸ್ನಲ್ಲಿ ಡಾಕ್ಟರ್ ದೀಪಾ ಮಲಿಕ್ ಅವರ ಸಾಧನೆಯೇ ಥೀಮ್ ಸಾಂಗ್ ಆಗಿ ರೂಪುಗೊಂಡ ಅವರ ಬಗ್ಗೆ ಕವಿತೆ ಬರೆಯಲು ಸ್ಫೂರ್ತಿ ನೀಡಿತು ಎಂದು ಸಂಜೀವ್ ಸಿಂಗ್ ಹೇಳಿದರು.  " ಹಾಡು ಪ್ಯಾರಾ-ಅಥ್ಲೀಟ್ಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸ್ಫೂರ್ತಿ ನೀಡಲಿ ಎಂದು ನಾನು ಬಯಸುತ್ತೇನೆ. ಅವರು ಈಗಾಗಲೇ ತಮ್ಮ ಜೀವನದಲ್ಲಿ ವಿಜಯಶಾಲಿಗಳಾಗಿದ್ದಾರೆ ಆದರೆ ಗೆದ್ದ ಒಂದು ಪದಕವು  ಇಡೀ ದೇಶದ ಗಮನ ಸೆಳೆಯುತ್ತದೆ ಮತ್ತು ರಾಷ್ಟ್ರವು  ಹೆಮ್ಮೆಪಡುವಂತೆ ಮಾಡುತ್ತದೆ. "ಎಂದು  ಸಂಜೀವ್ ಹೇಳಿದರು.

https://static.pib.gov.in/WriteReadData/userfiles/image/image003Y8B0.jpg

ಪಿಸಿಐನ ಅಧ್ಯಕ್ಷರಾದ ದೀಪಾ ಮಲಿಕ್ ಹೇಳುತ್ತಾರೆ, "ಭಾರತದ ಪ್ಯಾರಾಲಿಂಪಿಕ್ ಕಮಿಟಿಯ ಅಧ್ಯಕ್ಷರಾಗಿ ಮತ್ತು ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ 'ಆಜಾದಿ ಕಾ ಅಮೃತ್ ಮಹೋತ್ಸವ' ಸ್ಮರಣಾರ್ಥವಾಗಿ, ನಾನು ಇದನ್ನು ನನ್ನ ಪ್ರಯತ್ನವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾರತದ India@75 ದೃಷ್ಟಿಕೋನಕ್ಕೆ ಬಲ ತರುತ್ತೇನೆ . ಭಾರತದಲ್ಲಿ ಪ್ಯಾರಾಲಿಂಪಿಕ್ ಚಟುವಟಿಕೆಗಳು ಬಹಳ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ  ನಡೆಯುತ್ತಿವೆ ಮತ್ತು ಪ್ಯಾರಾ ಕ್ರೀಡೆಗಳು (ಪ್ಯಾರಾ-ಸ್ಪೋರ್ಟ್ಸ್ ) ಇದನ್ನು ಮಾಡಲು ಉತ್ತಮ ಮಾರ್ಗಗಳಲ್ಲಿ ಒಂದಾಗಿದೆ. ಪ್ಯಾರಾ-ಸ್ಪೋರ್ಟ್ಸ್ ಅನ್ನು ಭಾರತದಲ್ಲಿ ಮುಖ್ಯವಾಹಿನಿಗೆ ತರಬೇಕು. ಥೀಮ್ ಸಾಂಗ್ ಅನ್ನು ಭಾರತೀಯ ಪ್ಯಾರಾಲಿಂಪಿಕ್ ತಂಡಕ್ಕೆ ಹುರುಪನ್ನು ಹೆಚ್ಚಿಸಲು ರಚಿಸಲಾಗಿದೆ. ಎಲ್ಲಾ ಭಾರತೀಯರು ಕ್ರೀಡಾಕೂಟವನ್ನು ವೀಕ್ಷಿಸುವ ಮೂಲಕ ತಮ್ಮ ಬೆಂಬಲವನ್ನು ತೋರಿಸಲು ಮತ್ತು ಥೀಮ್ ಹಾಡನ್ನು ಕೇಳಲು ಮತ್ತು ಹಂಚಿಕೊಳ್ಳಲು ನಾವು ವಿನಂತಿಸುತ್ತೇವೆ.

ಪಿಸಿಐನ ಪ್ರಧಾನ ಕಾರ್ಯದರ್ಶಿ ಶ್ರೀ ಗುರುಶರಣ್ ಸಿಂಗ್ ಅವರು ವಂದನಾರ್ಪಣೆಯನ್ನು  ಅರ್ಪಿಸುತ್ತಾ, " ಹಾಡು ಆಟಗಾರರನ್ನು ಪ್ರೇರೇಪಿಸುತ್ತದೆ ಮತ್ತು ಇಡೀ ದೇಶವು ಅವರ ಬೆನ್ನ ಹಿಂದಿದೆ ಎಂಬ ಭಾವನೆ ಮೂಡಿಸುತ್ತದೆ. ಪ್ಯಾರಾಲಿಂಪಿಕ್ಸ್ನಲ್ಲಿ ತ್ರಿವರ್ಣ ಧ್ವಜವು ಏರಿದಾಗ, ಇಡೀ ದೇಶವು ಹೆಮ್ಮೆಪಡುತ್ತದೆ. ಆಟಗಾರರು ಹಾಡನ್ನು ಕೇಳಿದ ನಂತರ ಅವರು ಪ್ರೇರಣೆ ಮತ್ತು ಸ್ಫೂರ್ತಿಯನ್ನು ಅನುಭವಿಸಬೇಕೆಂದು ನಾವು ಬಯಸುತ್ತೇವೆ.

ಬಾರಿ ದಾಖಲೆಯ 54 ಪ್ಯಾರಾ ಅಥ್ಲೀಟ್ಗಳು 9 ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲಿದ್ದಾರೆ. ಅನೇಕ ಕ್ರೀಡಾಪಟುಗಳು ವಿಶ್ವ ದಾಖಲೆಯ ಸಾಧನೆಯೊಂದಿಗೆ ಅರ್ಹತೆ ಪಡೆದಿದ್ದಾರೆ ಇದು ಪದಕದ ನಿರೀಕ್ಷೆಯನ್ನು ಹೆಚ್ಚಿಸಿದೆ.

***



(Release ID: 1741965) Visitor Counter : 191