ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಷ್ಟ್ರೀಯ ವೈದ್ಯಕೀಯ ಆಯೋಗ [ಎನ್.ಎಂ.ಸಿ]ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ ಕೇಂದ್ರ ಆರೊಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯ


ರಾಷ್ಟ್ರೀಯ ನಿರ್ಗಮನ ಪರೀಕ್ಷೆಯನ್ನು [ಎನ್.ಇ.ಎಕ್ಸ್.ಟಿ] ಮಾರ್ಗನಕ್ಷೆಯಂತೆ 2023 ರ ಮೊದಲಾರ್ಧದಲ್ಲಿ ನಡೆಸುವ ಕುರಿತು ಖಚಿತಪಡಿಸಿ ಕೊಳ್ಳಲಾಗುತ್ತಿದೆ: 2022 ರಲ್ಲಿ ಅಣಕು ಪರೀಕ್ಷೆಗೆ ಯೋಜಿಸಲಾಗಿದೆ

ಗುಣಮಟ್ಟದ ವೈದ್ಯಕೀಯ ಶಿಕ್ಷಣ ನೀಡಲು, ಆರೋಗ್ಯ ಸೇವೆಗಳು ಮತ್ತು ಪಾರದರ್ಶಕ ಪರೀಕ್ಷಾ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧ : ಶ್ರೀ ಮನ್ಸುಖ್ ಮಾಂಡವಿಯ

Posted On: 30 JUL 2021 3:23PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ಮನ್ಸುಖ್ ಮಾಂಡವಿಯ ಅವರು ಇಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರಮುಖ ವೈದ್ಯಕೀಯ ಶಿಕ್ಷಣ ವಿಷಯಗಳ ಕುರಿತು ಚರ್ಚಿಸಲಾಯಿತು.

ಸಭೆಯಲ್ಲಿ ಎನ್.ಎಂ.ಸಿ. ಅಧಿಕಾರಿಗಳನ್ನು ಶ್ಲಾಘಿಸಿದ ಅವರು, ರಾಷ್ಟ್ರೀಯ ನಿರ್ಗಮನ ಪರೀಕ್ಷೆಯನ್ನು [ಎನ್.ಇ.ಎಕ್ಸ್.ಟಿ] ಮಾರ್ಗನಕ್ಷೆಯಂತೆ 2023 ರ ಮೊದಲಾರ್ಧದಲ್ಲಿ ನಡೆಸುವ ಕುರಿತು ಖಚಿತಪಡಿಸಿ ಕೊಳ್ಳಲಾಗುತ್ತಿದೆ. ಪರೀಕ್ಷಾ ಪ್ರಕ್ರಿಯೆಗಳು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಆತಂಕ ನಿವಾರಿಸಲು ಅಣಕು ಪರೀಕ್ಷೆಗೆ ಯೋಜಿಸಲಾಗಿದೆ ಮತ್ತು 2022 ರಲ್ಲಿ ಇದನ್ನು ನಡೆಸಲು ಕ್ರಮ ಕೈಗೊಳ್ಳಲಾಗುವುದು. ಎನ್.ಇ.ಎಕ್ಸ್.ಟಿ [ಸ್ಟೆಪ್ 1 ಮತ್ತು 2] ಫಲಿತಾಂಶಗಳನ್ನು ಪ್ರಕಟಿಸುವ ಕುರಿತು ಚರ್ಚಿಸಲಾಯಿತು.

ನಂತರ ಇದನ್ನು ಈ ರೀತಿಯ ಬಳಸಹುದು.

(i) ಎಂ.ಬಿ.ಬಿ.ಎಸ್ ಅಂತಿಮ ಪರೀಕ್ಷೆಗೆ ಅರ್ಹತೆ

(ii) ಭಾರತದಲ್ಲಿ ಆಧುನಿಕ ವೈದ್ಯಕೀಯ ಅಭ್ಯಾಸಕ್ಕಾಗಿ ಪರವಾನಗಿ ಪಡೆಯಲು  

(iii) ವಿಸ್ತಾರವಾದ ವಿಶೇಷ ವಲಯಗಳಲ್ಲಿ ಪಿಜಿ. ಸೀಟುಗಳ ಅರ್ಹತೆ ಆಧಾರಿತ ಹಂಚಿಕೆಗಾಗಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಎನ್.ಇ.ಎಕ್ಸ್.ಟಿ ಅನ್ನು ವಿಶ್ವದರ್ಜೆಯ ಮಾನದಂಡದ ಪರೀಕ್ಷೆಯನ್ನಾಗಿ ಮಾಡುವ ವಿಧಾನ ಮತ್ತು ಉದ್ದೇಶದ ಬಗ್ಗೆಯೂ ಚರ್ಚಿಸಲಾಗಿದೆ. ಎನ್.ಇ.ಎಕ್ಸ್.ಟಿ ಪರೀಕ್ಷೆಯ ಪ್ರಾಮುಖ್ಯ ಭಾರತದಲ್ಲಿ ಅಥವಾ ಪ್ರಪಂಚದ ಯಾವುದೇ ಭಾಗದಲ್ಲಿ ತರಬೇತಿ ಪಡೆದಿದ್ದರೂ ಸಹ ಎಲ್ಲರಿಗೂ ಒಂದೇ ಆಗಿರುತ್ತದೆ ಮತ್ತು ಇದು ವಿದೇಶಿ ವೈದ್ಯಕೀಯ ಪದವೀದರರ [ಎಂ.ಎಫ್.ಜಿ] ಸಮಸ್ಯೆ ಮತ್ತು ಪರಸ್ಪರ ಮಾನ್ಯತೆ ವಿಷಯಗಳನ್ನು ಬಗೆಹರಿಸುತ್ತದೆ.

ಸಭೆಯಲ್ಲಿ ಮಾತನಾಡಿದ ಶ್ರೀ ಮನ್ಸುಖ್ ಮಾಂಡವಿಯ, ಸರ್ಕಾರ ಗುಣಮಟ್ಟದ ವೈದ್ಯಕೀಯ ಶಿಕ್ಷಣ ದೊರಕಿಸಿಕೊಡಲು ಮತ್ತು ಪಾರದರ್ಶಕ ಪರೀಕ್ಷಾ ವ್ಯವಸ್ಥೆಗೆ ಮೂಲ ಸೌಕರ್ಯ ಕಲ್ಪಿಸಲು ಬದ್ಧವಾಗಿದೆ. ಆರೋಗ್ಯ ಸೇವೆಗಳು ಮತ್ತು ಈ ಗುರಿ ಸಾಧಿಸಲು ಎಲ್ಲಾ ಪಾಲುದಾರರೊಂದಿಗೆ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.  

ರಾಷ್ಟ್ರೀಯ ವೈದ್ಯಕೀಯ ಆಯೋಗ ಕುರಿತು [ಎನ್.ಎಂ.ಸಿ]:

ಎನ್.ಎಂ.ಸಿ.ಯನ್ನು ಸಂಸತ್ತಿನ ಕಾಯ್ದೆ 2019 ರ ಮೂಲಕ ಅಸ್ತಿತ್ವಕ್ಕೆ ತರಲಾಗಿದೆ. ಇದು 25.9.2020 ರಿಂದ ಜಾರಿಗೆ ಬಂದಿದ್ದು, ಗುಣಮಟ್ಟದ ಮತ್ತು ಕೈಗೆಟುಕುವ ವೈದ್ಯಕೀಯ ಶಿಕ್ಷಣ ದೊರಕಿಸಿಕೊಡುವ ಸೂಕ್ತ ಮತ್ತು ಭಾರತದ ಎಲ್ಲಾ ಭಾಗಗಳಲ್ಲಿ ಉನ್ನತ ಗುಣಮಟ್ಟದ ವೈದ್ಯಕೀಯ ವೃತ್ತಿಪರರನ್ನು ಸೃಷ್ಟಿಸುವ, ಸಮಾನ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆ ಒದಗಿಸುವುದನ್ನು ಇದು ಖಚಿತಪಡಿಸಿಕೊಳ್ಳುವ ಕೆಲಸ ಮಾಡುತ್ತದೆ.   

ಎನ್.ಎಂ.ಸಿ. ವಿಸ್ತಾರವಾದ ಕಾರ್ಯಗಳಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಉತ್ತಮ ಗುಣಮಟ್ಟದ ಮತ್ತು ಉನ್ನತ ದರ್ಜೆಯನ್ನು ಕಾಯ್ದುಕೊಳ್ಳುವ ನೀತಿಯನ್ನು ಇದು ರೂಪಿಸುತ್ತದೆ ಹಾಗೂ ಅಗತ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುತ್ತದೆ. ವೈದ್ಯಕೀಯ ಸಂಸ್ಥೆಗಳು, ವೈದ್ಯಕೀಯ ಸಂಶೋಧನೆಗಳು ಮತ್ತು ವೈದ್ಯಕೀಯ ವೃತ್ತಿಪರರನ್ನು ನಿಯಂತ್ರಿಸುವ ನೀತಿಗಳನ್ನು ಇದು ರೂಪಿಸಲಿದೆ. ಆರೋಗ್ಯ ಮತ್ತು ಆರೋಗ್ಯ ಮೂಲ ಸೌಕರ್ಯಕ್ಕಾಗಿ ಮಾನವ ಸಂಪನ್ಮೂಲ ಸೇರಿದಂತೆ ಆರೋಗ್ಯ ರಕ್ಷಣೆಯಲ್ಲಿನ ಅವಶ್ಯಕತೆಗಳನ್ನು ನಿರ್ಣಯಿಸುವ ಮತ್ತು ಅಂತಹ ಅವಶ್ಯಕತೆಗಳನ್ನು ಪೂರೈಸಲು ಮಾರ್ಗ ನಕ್ಷೆಯನ್ನು ಇದು ಸಿದ್ಧಪಡಿಸುತ್ತದೆ. ಆಯೋಗ, ಸ್ವಾಯತ್ತ ಮಂಡಳಿಗಳು ಮತ್ತು ರಾಜ್ಯ ವೈದ್ಯಕೀಯ ಮಂಡಳಿಗಳ ಸರಿಯಾದ ಕಾರ್ಯನಿರ್ವಹಣೆಗೆ ಅಗತ್ಯವಾದ ನಿಯಮಗಳನ್ನು ರೂಪಿಸುವ ಮೂಲಕ ಮಾರ್ಗಸೂಚಿಗಳನ್ನು ಉತ್ತೇಜಿಸುವ, ಸಂಯೋಜಿಸುವ ಕಾರ್ಯ ನಿರ್ವಹಿಸಲಿದೆ. ಸ್ವಾಯತ್ತ ಮಂಡಳಿಗಳ ನಡುವೆ ಸಮನ್ವಯತೆ ಸಾಧಿಸುವುದನ್ನು ಇದು ಖಚಿತಪಡಿಸಿಕೊಳ್ಳುತ್ತದೆ.

ಸ್ವಾಯತ್ತ ಮಂಡಳಿಗಳ ನಿರ್ಧಾರಗಳಿಗೆ ಸಂಬಂಧಿಸಿದಂತೆ ಎಂ.ಎನ್.ಸಿ ಮೇಲ್ಮನವಿ ನ್ಯಾಯಾಧೀಕರಣ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ. ವೈದ್ಯಕೀಯ ವೃತ್ತಿಯಲ್ಲಿ ವೃತ್ತಿಪರ ನೈತಿಕತೆಯನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ನೀತಿಗಳು ಮತ್ತು ಸಂಹಿತೆಯನ್ನು ಕೊಡುತ್ತದೆ. ವೈದ್ಯಕೀಯ ವೃತ್ತಿಪರರಿಂದ ಆರೈಕೆ ಸಮಯದಲ್ಲಿ ನೈತಿಕ ನಡಾವಳಿಕೆಯನ್ನು ಉತ್ತೇಜಿಸುತ್ತದೆ.

***



(Release ID: 1740860) Visitor Counter : 190