ಪ್ರಧಾನ ಮಂತ್ರಿಯವರ ಕಛೇರಿ

ಬಾರಾಬಂಕಿ ರಸ್ತೆ ಅಪಘಾತದಲ್ಲಿ ಮಡಿದವರಿಗೆ ಪ್ರಧಾನ ಮಂತ್ರಿ ಶೋಕ


ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ಘೋಷಣೆ

ಪ್ರಕಟಣಾ ದಿನಾಂಕ: 28 JUL 2021 9:40AM by PIB Bengaluru

ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಡಿದವರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು, “यूपी के बाराबंकी में हुए सड़क हादसे की खबर से बहुत दुखी हूं। शोकाकुल परिवारों के साथ मेरी संवेदनाएं हैं। अभी सीएम योगी जी से भी बात हुई है। सभी घायल साथियों के उचित उपचार की व्यवस्था की जा रही है।” ಎಂದಿದ್ದಾರೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತ ಸಂತ್ರಸ್ತರ ಪ್ರತಿ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಹಾಗೂ ಪ್ರತಿ ಗಾಯಾಳುವಿಗೆ ತಲಾ 50,000 ರೂ. ಪರಿಹಾರ ಪ್ರಕಟಿಸಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯ ಈ ಕುರಿತು ಟ್ವೀಟ್ ಮಾಡಿದ್ದು, “ಬಾರಾಬಂಕಿ ರಸ್ತೆ ಅಪಘಾತ ದುರಂತದಲ್ಲಿ ಸಾವಿಗೀಡಾದ ಸಂತ್ರಸ್ತರ ಪ್ರತಿ ಕುಟುಂಬಕ್ಕೆ ಪಿಎಂಎನ್ಆರ್|ಎಫ್ ನಿಧಿಯಿಂದ ತಲಾ 2 ಲಕ್ಷ ರೂಪಾಯಿ, ಪ್ರತಿ ಗಾಯಾಳುವಿಗೆ ತಲಾ 50,000 ರೂ. ಪರಿಹಾರ ಧನ ಪ್ರಕಟಿಸಲಾಗಿದೆ” ಎಂದಿದೆ.

***


(ಪ್ರಕಟಣೆ ಐ.ಡಿ.: 1739808) ವಿಸಿಟರ್ ಕೌಂಟರ್ : 241