ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ 42 ಕೋಟಿ ಡೋಸ್ ಮಟ್ಟ ದಾಟಿದ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ; ಹೊಸ ಮೈಲಿಗಲ್ಲು ಸ್ಥಾಪನೆ


ಚೇತರಿಕೆ ದರ 97.36%ಗೆ ಸುಧಾರಣೆ

ಕಳೆದ 24 ತಾಸುಗಳಲ್ಲಿ 35,342 ದೈನಂದಿನ ಹೊಸ ಕೊರೊನಾ ಪ್ರಕರಣಗಳು ಪತ್ತೆ

ಸಕ್ರಿಯ ಪ್ರಕರಣಗಳ ಸಂಖ್ಯೆ 4,05,513ಕ್ಕೆ ಇಳಿಕೆ; ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.30%

ದೈನಂದಿನ ಪಾಸಿಟಿವಿಟಿ ದರ 2.12%ಗೆ ಇಳಿಕೆ; ಸತತ 32 ದಿನಗಳಿಂದ 3% ಮಟ್ಟದಿಂದ ಕೆಳಗೆ

Posted On: 23 JUL 2021 11:13AM by PIB Bengaluru

ಭಾರತ ಸರ್ಕಾರ ದೇಶಾದ್ಯಂತ ನಡೆಸುತ್ತಿರುವ ಕೋವಿಡ್-19 ಬೃಹತ್ ಲಸಿಕೆ ಅಭಿಯಾನದಲ್ಲಿ ಲಸಿಕೆ ನೀಡಿಕೆ ಪ್ರಮಾಣ 42 ಕೋಟಿ ಡೋಸ್ ಮಟ್ಟ ದಾಟಿ, ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ  ವರದಿ ಅನ್ವಯ, ದೇಶಾದ್ಯಂತ ಇದುವರೆಗೆ 51,94,364 ಆಂದೋಲನಗಳಲ್ಲಿ ಒಟ್ಟು 42,34,17,030 ಡೋಸ್ ಲಸಿಕೆ ಹಾಕಲಾಗಿದೆ. ಕಳೆದ 24 ತಾಸುಗಳಲ್ಲಿ 54,76,423 ಡೋಸ್ ಲಸಿಕೆ ನೀಡಲಾಗಿದೆ.

ಕೆಳಗಿನ ಗಂಪುಗಳು ಅದರಲ್ಲಿ ಸೇರಿವೆ.

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

1,02,80,416

2ನೇ ಡೋಸ್

76,51,103

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,78,34,482

2ನೇ ಡೋಸ್

1,06,40,254

18-44 ವಯೋಮಾನದವರು

ಮೊದಲ ಡೋಸ್

13,33,04,056

2ನೇ ಡೋಸ್

55,55,468

45-59 ವಯೋಮಾನದವರು

ಮೊದಲ ಡೋಸ್

9,95,79,752

2ನೇ ಡೋಸ್

3,25,92,396

60 ವರ್ಷ ದಾಟಿದವರು

ಮೊದಲ ಡೋಸ್

7,29,46,445

2ನೇ ಡೋಸ್

3,30,32,658

ಒಟ್ಟು

42,34,17,030

ಬೃಹತ್ ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ಕೇಂದ್ರ ಸರ್ಕಾರವು ದೇಶಾದ್ಯಂತ ಲಸಿಕೆ ನೀಡಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮದ ಗತಿಗೆ ವೇಗ ನೀಡಲು ಬದ್ಧವಾಗಿದೆ.

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,04,68,079 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲಿ 38,740 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದ ಒಟ್ಟಾರೆ ಚೇತರಿಕೆ ದರ 97.36%ಗೆ ಸುಧಾರಣೆ ಕಂಡಿದೆ.

https://static.pib.gov.in/WriteReadData/userfiles/image/image001Z2JW.jpg

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 35,342 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಸತತ 26 ದಿನಗಳಿಂದ ಕಾಣಿಸಿಕೊಳ್ಳುತ್ತಿರುವ ದೈನಂದಿನ ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರ ಮಟ್ಟದಿಂದ ಕೆಳಗಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಹಭಾಗಿತ್ವದ ಪ್ರಯತ್ನಗಳಿಂದಾಗಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತಾ ಬಂದಿದೆ.

 

https://static.pib.gov.in/WriteReadData/userfiles/image/image002QOPG.jpg

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 4,05,513ಕ್ಕೆ ಇಳಿಕೆ ಕಂಡಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.30% ಇದೆ.

https://static.pib.gov.in/WriteReadData/userfiles/image/image0034UPB.jpg

ದೇಶಾದ್ಯಂತ ಗಂಟಲು ಮತ್ತು ಮೂಗು ದ್ರವ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲಿ 16,68,561 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ, ಇಲ್ಲಿಯ ತನಕ 45.29 ಕೋಟಿಗಿಂತ ಅಧಿಕ ಅಂದರೆ 45,29,39,545 ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಪರಿಣಾಮ, ವಾರದ ಪಾಸಿಟಿವಿಟಿ ದರ ಪ್ರಸ್ತುತ 2.14%ಗೆ ಇಳಿಕೆ ಕಂಡಿದೆ. ದೈನಂದಿನ ಪಾಸಿಟಿವಿಟಿ ದರ ಇಂದು 2.12%ಗೆ ತಗ್ಗಿದೆ. ದೈನಂದಿನ ಪಾಸಿಟಿವಿಟಿ ದರ ಸತತ 32 ದಿನಗಳಿಂದ 3% ಮಟ್ಟದ ಕೆಳಗಿದೆ. ನಿರಂತರ 46 ದಿನಗಳಿಂದಲೂ ಅದು 5% ಮಟ್ಟದ ಕೆಳಗೆ ಕಾಯ್ದುಕೊಂಡಿದೆ.

https://static.pib.gov.in/WriteReadData/userfiles/image/image0040TQG.jpg

***

 



(Release ID: 1738187) Visitor Counter : 248