ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ – 19 ಮರಣದರ : ತಪ್ಪು ಕಲ್ಪನೆ ವಿರುದ್ಧ ವಾಸ್ತವ
ರಾಜ್ಯ ಸರ್ಕಾರಗಳು ತನ್ನ ಆಸ್ಪತ್ರೆಗಳಲ್ಲಿ ಮರಣದ ಲೆಕ್ಕಪರಿಶೋಧನೆ ನಡೆಸಬೇಕು: ತಪ್ಪಿಹೋಗಿರಬಹುದಾದ ಯಾವುದೇ ಪ್ರಕರಣಗಳು ಅಥವಾ ಸಾವುಗಳಿದ್ದರೆ ವರದಿ ಮಾಡುವಂತೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ನಿರಂತರ ಸೂಚನೆ
ಎಲ್ಲಾ ಕೋವಿಡ್ – 19 ಮರಣಗಳನ್ನು ಸರಿಯಾಗಿ ದಾಖಲಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ - ಡಬ್ಲ್ಯೂ.ಎಚ್.ಒ ತನ್ನ ಐಸಿಡಿ-10 ಸಂಹಿತೆಯಡಿ ಮಾಡಿರುವ ಶಿಫಾರಸ್ಸಿನನ್ವಯ ಐ.ಸಿ.ಎಂ.ಆರ್. ಹೊರಡಿಸಿರುವ ಮಾರ್ಗಸೂಚಿಯನ್ನು ಭಾರತ ಅನುಸರಿಸುತ್ತಿದೆ
ಕೋವಿಡ್ -19 ಸಾವುಗಳನ್ನು ದಾಖಲಿಸುವ ದೃಢವಾದ ವ್ಯವಸ್ಥೆಯನ್ನು ಭಾರತ ಹೊಂದಿದೆ
Posted On:
22 JUL 2021 11:01AM by PIB Bengaluru
ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದಲ್ಲಿನ ಹೆಚ್ಚಿನ ಸಾವುಗಳು ದಶಲಕ್ಷಗಳಷ್ಟಿರಬಹುದು ಎಂದು ಆರೋಪಿಸಿ ಇತ್ತೀಚೆಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಅಧಿಕೃತ ಕೋವಿಡ್ – 19 ಸಾವಿನ ಸಂಖ್ಯೆಯನ್ನು “ ಕಡಿಮೆ ಲೆಕ್ಕ ಮಾಡಲಾಗಿದೆ“ ಹೇಳಿದೆ.
ಇದಕ್ಕೆ ಇತ್ತೀಚಿನ ಕೆಲ ಅಧ್ಯಯನ, ಅವಿಷ್ಕಾರಗಳನ್ನು ಉಲ್ಲೇಖಿಸಲಾಗಿದೆ. ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ಸೋಂಕಿನಿಂದ ನಿರ್ದಿಷ್ಟ ವಯೋಮಿತಿಯವರ ಸಾವಿನ ದರವನ್ನು ಲೆಕ್ಕಹಾಕಲಾಗುತ್ತಿದ್ದು, ಭಾರತದಲ್ಲಿ ಸಿರೋ – ಪಾಸಿಟಿವಿಟಿ ಆಧಾರದ ಮೇಲೆ ಲೆಕ್ಕಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಯಾವುದೇ ಸೋಂಕಿತ ವ್ಯಕ್ತಿಯ ಮರಣದ ಸಾಧ್ಯತೆ ದೇಶಗಳಾದ್ಯಂತ ಒಂದೇ ಆಗಿರುತ್ತದೆ ಎಂಬ ಸಲಹೆ ಮೇರೆಗೆ ಸಾವಿನ ದರ ನಿಗದಿಮಾಡಲಾಗಿದೆ. ಜನಾಂಗ, ಜನಾಂಗೀಯತೆ, ಜನಸಂಖ್ಯೆಯ ಜಿನೋಮಿಕ್ ಕಾನ್ಸ್ಟಿಟ್ಯೂಷನ್, ಇತರೆ ಕಾಯಿಲೆಗಳ ಪರಿಶೋಧನಾ ಹಂತ ಮತ್ತು ಅಂತಹ ಜನಸಂಖ್ಯೆಯಲ್ಲಿ ಅಭಿವೃದ್ಧಿ ಹೊಂದಿದ ಪ್ರತಿ ರಕ್ಷೆಯಂತಹ ವಿವಿಧ, ನೇರ ಮತ್ತು ಪರೋಕ್ಷ ಅಂಶಗಳ ನಡುವಿನ ಪರಸ್ಪರ ಕ್ರಿಯೆಯನ್ನು ವರದಿಯಲ್ಲಿ ತಳ್ಳಿಹಾಕಲಾಗಿದೆ.
ಇದಲ್ಲದೇ ಸಿರೋ ಪ್ರಸರಣ ಅಧ್ಯಯನಗಳು ದುರ್ಬಲ ಜನಸಂಖ್ಯೆಗೆ ಸೋಂಕು ಪ್ರಸರಣವನ್ನು ಇನ್ನಷ್ಟು ತಡೆಗಟ್ಟುವ ತಂತ್ರ ಮತ್ತು ಕ್ರಮಗಳ ಮಾರ್ಗದರ್ಶನ ಮಾಡುವ ಜತೆಗೆ ಸಾವುಗಳ ಸಂಖ್ಯೆಯನ್ನು ಅಳೆಯಲು ಸಹ ಬಳಸಲಾಗುತ್ತದೆ. ಆಂಟಿಬಾಡಿ ಟೈಟರ್ ಗಳು ಕಾಲಾನಂತರದಲ್ಲಿ ಕಡಿಮೆಯಾಗಬಹುದು ಎಂಬ ಮತ್ತೊಂದು ಸಂಭವನೀಯ ಕಾಳಜಿಯನ್ನು ಸಹ ಅಧ್ಯಯನಗಳು ಹೊಂದಿವೆ. ಇದು ನೈಜ ಪ್ರಸರಣದ ಕಡಿಮೆ ಅಂದಾಜು ಮತ್ತು ಸೋಂಕಿನ ಸಾವಿನ ಪ್ರಮಾಣವನ್ನು ಅತಿಯಾಗಿ ಅಂದಾಜು ಮಾಡಲು ಕಾರಣವಾಗುತ್ತದೆ. ಇದಲ್ಲದೇ ಎಲ್ಲಾ ಹೆಚ್ಚುವರಿ ಮರಣದ ಅಂಕಿ ಅಂಶಗಳು ಕೋವಿಡ್ ಸಾವುಗಳು ಎಂದು ಅಂದಾಜಿಸಿವೆ. ಇದು ಸತ್ಯವನ್ನು ಆಧರಿಸಿಲ್ಲ ಮತ್ತು ಸಂಪೂರ್ಣವಾಗಿ ತಪ್ಪಾಗಿದೆ. ಹೆಚ್ಚುವರಿ ಮರಣ ಎಂಬುದನ್ನು ಎಲ್ಲಾ ಮರಣದ ಕಾರಣಗಳನ್ನು ವಿವರಿಸಲು ಬಳಸುವ ಪದವಾಗಿದೆ ಮತ್ತು ಈ ಸಾವುಗಳು ಕೋವಿಡ್ – 19 ನಿಂದ ಆಗಿವೆ ಎಂದು ಹೇಳುವುದು ಸಂಫೂರ್ಣವಾಗಿ ದಾರಿ ತಪ್ಪಿಸುವಂತಿದೆ.
ಭಾರತ ಸಂಪೂರ್ಣವಾಗಿ ಸಂಪರ್ಕವನ್ನು ಪತ್ತೆ ಮಾಡುವ ಕಾರ್ಯತಂತ್ರ ಹೊಂದಿದೆ. ಎಲ್ಲಾ ಪ್ರಾಥಮಿಕ ಸಂಪರ್ಕ, ಅದು ರೋಗ ಲಕ್ಷಣಗಳು ಅಥವಾ ಲಕ್ಷಣ ರಹಿತ ಕೋವಿಡ್ 19 ಪ್ರಕರಣಗಳಾಗಿರಬಹುದು. ಆರ್.ಟಿ-ಪಿಸಿಆರ್ ನಲ್ಲಿ ಪತ್ತೆಯಾದ ಪ್ರಕರಣಗಳು ನೈಜ ಪಾಸಿಟಿವ್ ಪ್ರಕರಣಗಳಾಗಿರುತ್ತವೆ. ಈ ನಿಟ್ಟಿನಲ್ಲಿ ಕೋವಿಡ್ – 19 ಪರೀಕ್ಷೆಯು ಚಿನ್ನದ ಮಾನದಂಡವಾಗಿರುತ್ತದೆ. ಇದರ ಜತೆಗೆ ಸಂಪರ್ಕವನ್ನು ಪತ್ತೆ ಮಾಡಲು ದೇಶಾದ್ಯಂತ 27,000 ಕ್ಕೂ ಹೆಚ್ಚು ಪರೀಕ್ಷಾ ಪ್ರಯೋಗಾಲಯಗಳಿದ್ದು, ಪರೀಕ್ಷೆ ಮಾಡಿಸಿಕೊಳ್ಳಲು ಯಾರಾದರೂ ಬಯಸಿದರೆ ಇಲ್ಲಿ ಅದು ಸಾಧ್ಯವಾಗುತ್ತದೆ. ಇದು ರೋಗ ಲಕ್ಷಣಗಳ ಬಗ್ಗೆ ವಿಶಾಲವಾದ ಐಇಸಿಯೊಂದಿಗೆ ಸೇರಿಕೊಂಡಿದೆ ಮತ್ತು ಅಗತ್ಯವಿದ್ದಲ್ಲಿ ವೈದ್ಯಕೀಯ ಆರೈಕೆಗಾಗಿ ಆಸ್ಪತ್ರೆಗಳಿಗೆ ತಲುಪುವುದನ್ನು ಖಚಿತಪಡಿಸುತ್ತದೆ.
ಭಾರತ ದೃಢವಾದ ಮತ್ತು ಕಾನೂನಾತ್ಮಕ ಮರಣ ನೋಂದಣಿ ವ್ಯವಸ್ಥೆಯನ್ನು ಹೊಂದಿದ್ದು, ಸಾಂಕ್ರಾಮಿಕ ರೋಗ ಮತ್ತು ಅದರ ನಿರ್ವಹಣೆಯ ತತ್ವಗಳ ಪ್ರಕಾರ ಕೆಲವು ಪ್ರಕರಣಗಳು ಪತ್ತೆಯಾಗುವುದಿಲ್ಲವಾದರೂ ಸಾವುಗಳನ್ನು ತಪ್ಪಿಸಿಕೊಳ್ಳುವುದು ಅಸಂಭವವಾಗಿದೆ. ಇದರಲ್ಲಿ ಮರಣದರವನ್ನು ಸಹ ನಾವು ನೋಡಬಹುದಾಗಿದ್ದು, 2020 ರ ಡಿಸೆಂಬರ್ 31 ರ ವರೆಗೆ ಮರಣದರ 1.45% ಇತ್ತು ಮತ್ತು 2021 ರ ಏಪ್ರಿಲ್ – ಮೇ ತಿಂಗಳಲ್ಲಿ ಅನಿರೀಕ್ಷಿತವಾಗಿ ಎರಡನೇ ಅಲೆ ಉತ್ತುಂಗಕ್ಕೆ ಏರಿಕೆಯಾಗಿದ್ದು, ಇದೀಗ ಮರಣ ದರ 1.34% ಇದೆ.
ತಳಮಟ್ಟದಿಂದಲೇ ದೈನಂದಿನ ಹೊಸ ಪ್ರಕರಣಗಳು ಮತ್ತು ಮರಣಗಳು ವರದಿಯಾಗುತ್ತಿದ್ದು, ಜಿಲ್ಲೆಗಳು ಒಟ್ಟು ಪ್ರಕರಣಗಳು ಮತ್ತು ಮರಣಗಳ ಸಂಖ್ಯೆಯನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಿವೆ ಮತ್ತು ಇದು ಕೇಂದ್ರ ಸರ್ಕಾರಕ್ಕೆ ನಿರಂತರವಾಗಿ ರವಾನೆಯಾಗುತ್ತವೆ. 2020 ರ ಮೇ ಗೂ ಮೊದಲೇ ವರದಿಯಾದ ಸಾವುಗಳು ಮತ್ತು ಗೊಂದಲ ತಪ್ಪಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ [ಐಸಿಎಂಆರ್] ಭಾರತದಲ್ಲಿ ಕೋವಿಡ್ – 19 ಸಂಬಂಧಿತ ಸಾವುಗಳನ್ನು ಸೂಕ್ತ ರೀತಿಯಲ್ಲಿ ದಾಖಲಿಸಲು ಮಾರ್ಗಸೂಚಿ ಬಿಡುಗಡೆಮಾಡಿತ್ತು. ಎಲ್ಲಾ ಕೋವಿಡ್ – 19 ಮರಣಗಳನ್ನು ಸರಿಯಾಗಿ ದಾಖಲಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ - ಡಬ್ಲ್ಯೂ.ಎಚ್.ಒ ತನ್ನ ಐಸಿಡಿ-10 ಸಂಹಿತೆಯಡಿ ಮಾಡಿರುವ ಶಿಫಾರಸ್ಸಿನನ್ವಯ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಐ.ಸಿ.ಎಂ.ಆರ್. ಹೊರಡಿಸಿರುವ ಮಾರ್ಗಸೂಚಿಯನ್ನು ಭಾರತ ಅನುಸರಿಸುತ್ತಿದೆ.
ರಾಜ್ಯಸಭೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಅವರು ತಮ್ಮ ಹೇಳಿಕೆಯಲ್ಲಿ ಕೋವಿಡ್ – 19 ಸಾವುಗಳನ್ನು ಮುಚ್ಚಿಡುವ ಆರೋಪಗಳನ್ನು ತಳ್ಳಿಹಾಕಿದರು ಮತ್ತು ಕೇಂದ್ರ ಸರ್ಕಾರ ರಾಜ್ಯಗಳು ಕಳುಹಿಸುವ ದತ್ತಾಂಶವನ್ನು ಸಂಗ್ರಹಿಸುತ್ತದೆ ಮತ್ತು ಪ್ರಕಟ ಮಾಡುತ್ತದೆ ಎಂದರು.
ಕೇಂದ್ರ ಆರೋಗ್ಯ ಸಚಿವಾಲಯ ಹಲವಾರು ಸಂವಹನಗಳಲ್ಲಿ, ವಿಡಿಯೋ ಸಂವಾದಗಳಲ್ಲಿ ಮತ್ತು ನಿಗದಿತ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮರಣ ದರಗಳನ್ನು ದಾಖಲಿಸಬೇಕು ಎಂದು ಸೂಚಿಸಿದೆ. ಕೇಂದ್ರ ತಂಡಗಳನ್ನು ನಿಯೋಜಿಸುವ ಮೂಲಕವೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪದೇ ಪದೇ ಸಲಹೆಗಳನ್ನು ನೀಡುತ್ತಿದೆ. ಜಿಲ್ಲಾವಾರು ಪ್ರಕರಣಗಳು ಮತ್ತು ಸಾವುಗಳನ್ನು ಪ್ರತಿದಿನ ವರದಿ ಮಾಡಲು ಸದೃಢವಾದ ವರದಿಯ ಕಾರ್ಯವಿಧಾನದ ಅಗತ್ಯವನ್ನು ಆರೋಗ್ಯ ಸಚಿವಾಲಯ ನಿಯಮಿತವಾಗಿ ಒತ್ತಿ ಹೇಳುತ್ತಿದೆ.
ರಾಜ್ಯ ಸರ್ಕಾರಗಳು ತನ್ನ ಆಸ್ಪತ್ರೆಗಳಲ್ಲಿ ಮರಣದ ಲೆಕ್ಕಪರಿಶೋಧನೆ ನಡೆಸಬೇಕು. ತಪ್ಪಿಹೋಗಿರಬಹುದಾದ ಯಾವುದೇ ಪ್ರಕರಣಗಳು ಅಥವಾ ಸಾವುಗಳಿದ್ದರೆ ವರದಿ ಮಾಡುವಂತೆ ಕೇಂದ್ರ ಆರೋಗ್ಯ ಸಚಿವಾಲಯದಿಂದ ನಿರಂತರ ಸೂಚನೆ ನೀಡಲಾಗುತ್ತಿದೆ ಅಥವಾ ದಿನಾಂಕಗಳ ಆಧಾರದ ಮೇಲೆ ದತ್ತಾಂಶ ಚಾಲಿತ ನಿರ್ಧಾರ ತೆಗೆದುಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಾಗಿದೆ. ಎರಡನೇ ಅಲೆಯ ಉತ್ತುಂಗದಲ್ಲಿ ಸಂಪೂರ್ಣ ಆರೋಗ್ಯ ವ್ಯವಸ್ಥೆಯು ವೈದ್ಯಕೀಯ ಸಹಾಯದ ಅಗತ್ಯವಿರುವ ಪ್ರಕರಣಗಳ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆ ಮೇಲೆ ಕೇಂದ್ರೀಕರಿಸಿದೆ ಮತ್ತು ಸರಿಯಾದ ವರದಿ, ದಾಖಲೆಗಳ ಹೊಂದಾಣಿಕೆ ಮಾಡಿಕೊಳ‍್ಳಬಹುದಾಗಿದ್ದು, ಇದು ಸಹ ಸ್ಪಷ್ಟವಾಗಿದೆ. ಮಹಾರಾಷ್ಟ್ರ, ಬಿಹಾರ ಮತ್ತು ಮಧ್ಯಪ್ರದೇಶದಂತಹ ಕೆಲವು ರಾಜ್ಯಗಳಲ್ಲಿ ಇತ್ತೀಚಿನ ಸಾವಿನ ಸಂಖ್ಯೆಯನ್ನು ಸಮನ್ವಯಗೊಳಿಸಲಾಗಿದೆ.
ಈ ವರದಿ ಜತೆಗೆ ಕಾನೂನು ಆಧರಿತ ನಾಗರಿಕ ನೋಂದಣಿ ವ್ಯವಸ್ಥೆಯು [ಸಿ.ಆರ್.ಎಸ್] ತನ್ನ ದೃಢತೆಯಿಂದ ದೇಶದ ಎಲ್ಲಾ ಜನನ ಮತ್ತು ಮರಣಗಳನ್ನು ನೋಂದಾಯಿಸಿಕೊಳ‍್ಳುವುದನ್ನು ಖಾತ್ರಿಪಡಿಸುತ್ತದೆ. ಸಿ.ಎಸ್.ಆರ್ ದತ್ತಾಂಶ ಸಂಗ್ರಹ, ಮತ್ತು ಸಂಖ್ಯೆಗಳನ್ನು ಸಹ ಪ್ರಕಟಿಸುತ್ತದೆ. ಇದು ಬಹಳ ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ ಆಗಿದ್ದರೂ ಯಾವುದೇ ಸಾವುಗಳು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳುತ್ತದೆ. ವಿಸ್ತರಣೆ ಮತ್ತು ಚಟುವಟಿಕೆಯ ಹಿನ್ನೆಲೆಯಲ್ಲಿ ಸಂಖ್ಯೆಗಳನ್ನು ಸಾಮಾನ್ಯವಾಗಿ ಮುಂದಿನ ವರ್ಷ ಪ್ರಕಟಿಸಲಾಗುತ್ತದೆ.
***
(Release ID: 1737684)
Visitor Counter : 430