ಸಂಪುಟ
ಕೇಂದ್ರ ಪಟ್ಟಿಯಲ್ಲಿರುವ ಇತರೆ ಹಿಂದುಳಿದ ವರ್ಗಗಳಲ್ಲಿನ ಉಪ ವರ್ಗೀಕರಣ ವಿಷಯವನ್ನು ಪರಿವೀಕ್ಷಿಸಲು ಸಂವಿಧಾನದ 340 ನೇ ವಿಧಿ ಅನ್ವಯ ರಚಿಸಲಾದ ಆಯೋಗದ ಅವಧಿಯನ್ನು ವಿಸ್ತರಿಸಲು ಕೇಂದ್ರ ಸಂಪುಟ ಅನುಮೋದನೆ
Posted On:
14 JUL 2021 4:05PM by PIB Bengaluru
ಕೇಂದ್ರ ಪಟ್ಟಿಯಲ್ಲಿರುವ ಇತರೆ ಹಿಂದುಳಿದ ವರ್ಗಗಳಲ್ಲಿನ [ಒಬಿಸಿಗಳು] ಉಪ ವರ್ಗೀಕರಣ ವಿಷಯವನ್ನು ಪರಿವೀಕ್ಷಿಸಲು ಸಂವಿಧಾನದ 340 ನೇ ವಿಧಿ ಅನ್ವಯ ರಚಿಸಲಾದ ಆಯೋಗದ ಅವಧಿಯನ್ನು 11 ನೇ ಬಾರಿಗೆ 2021 ಜುಲೈ 31 ರ ನಂತರ ಆರು ತಿಂಗಳು – 2022 ರ ಜನವರಿ 31 ರ ವ ರೆಗೆ ವಿಸ್ತರಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ.
ಲಾಭಗಳು:
ವಿವಿಧ ಪಾಲುದಾರರೊಂದಿಗೆ ಚರ್ಚಿಸಿ, ಅಧಿಕಾರವಾಧಿಯ ವಿಸ್ತರಣೆ ಮತ್ತು ಅದರ ಉಲ್ಲೇಖದ ನಿಯಮಗಳಲ್ಲಿ ಇವುಗಳನ್ನು ಸೇರ್ಪಡೆಗೊಳಿಸುವ ಮತ್ತು ವಿವಿಧ ಆಯೋಗಗಳೊಂದಿಗೆ ಸಮಾಲೋಚಿಸಿದ ನಂತರ ಸಮಗ್ರ ವರದಿ ಸಲ್ಲಿಸಲು ಆಯೋಗಕ್ಕೆ ಇದರಿಂದ ಸಹಕಾರಿಯಾಗಲಿದೆ.
ಶೆಡ್ಯೂಲ್ ನ ಅನುಷ್ಠಾನ:
ಆಯೋಗ ಅವಧಿಯನ್ನು 31.07.2021 ನಂತರ 6 ತಿಂಗಳ ಅವಧಿಗೆ 31.01.2022 ರವರೆಗೆ ರಾಷ್ಟ್ರಪತಿ ಅವರ ಅನುಮೋದನೆಯೊಂದಿಗೆ ಅಧಿಸೂಚನೆ ಹೊರಡಿಸಲಾಗುವುದು.
***
(Release ID: 1736818)
Visitor Counter : 277
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam