ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ ಒಟ್ಟಾರೆ40 ಕೋಟಿ ಗಡಿ ದಾಟಿದ ಕೋವಿಡ್-19 ಲಸಿಕಾ ವ್ಯಾಪ್ತಿ
ಚೇತರಿಕೆ ಪ್ರಮಾಣ ಶೇ.97.31ಕ್ಕೆ ಏರಿಕೆ
ಕಳೆದ 24 ಗಂಟೆಗಳಲ್ಲಿ ಪ್ರತಿ ದಿನದ 41,157 ಹೊಸ ಪ್ರಕರಣ ದಾಖಲು
ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ(4,22,660) ಸದ್ಯ ಒಟ್ಟು ಪ್ರಕರಣಗಳಲ್ಲಿ ಶೇ.1.36ರಷ್ಟು ಮಾತ್ರ
ದಿನದ ಪಾಸಿಟಿವಿಟಿ ದರ (ಶೇ.2.13ರಷ್ಟಿದೆ) ಕಳೆದ 27 ದಿನಗಳಿಂದ ಶೇ.3ಕ್ಕೂ ಕಡಿಮೆ ದಾಖಲು
Posted On:
18 JUL 2021 10:25AM by PIB Bengaluru
ಭಾರತದಲ್ಲಿ ಕೋವಿಡ್-19 ಲಸಿಕಾ ಕಾರ್ಯಕ್ರಮದ ವ್ಯಾಪ್ತಿ 40 ಕೋಟಿ ಗಡಿ ದಾಟಿದೆ. ಇಂದು ಬೆಳಗ್ಗೆ 7 ಗಂಟೆಯವರೆಗೆ ಲಭ್ಯವಾಗಿರುವ ಪ್ರಾಥಮಿಕ ಮಾಹಿತಿಗಳ ಪ್ರಕಾರ 50,46,387 ಶಿಬಿರಗಳಲ್ಲಿ ಒಟ್ಟಾರೆ 40,49,31,715 ಡೋಸ್ ಲಸಿಕೆಯನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 51,01,567 ಡೋಸ್ ಲಸಿಕೆ ಹಾಕಲಾಗಿದೆ.
ಅದರ ವಿವರ ಈ ಕೆಳಗಿನಂತಿದೆ.
ಎಚ್ ಸಿಡಬ್ಲ್ಯೂ
|
1ನೇ ಡೋಸ್
|
1,02,69,092
|
2ನೇ ಡೋಸ್
|
75,40,656
|
ಎಫ್ಎಲ್ ಡಬ್ಲ್ಯೂ
|
1ನೇ ಡೋಸ್
|
1,77,92,396
|
2ನೇ ಡೋಸ್
|
1,03,48,504
|
18 ರಿಂದ 44 ವರ್ಷ ವಯೋಮಾನ
|
1ನೇ ಡೋಸ್
|
12,42,65,428
|
2ನೇ ಡೋಸ್
|
48,64,609
|
45 ರಿಂದ 59 ವಯೋಮಾನದವರು
|
1ನೇ ಡೋಸ್
|
9,74,79,640
|
2ನೇ ಡೋಸ್
|
2,90,71,946
|
60 ವರ್ಷ ಮೇಲ್ಪಟ್ಟವರು
|
1ನೇ ಡೋಸ್
|
7,20,87,206
|
2ನೇ ಡೋಸ್
|
3,12,12,238
|
ಒಟ್ಟು
|
40,49,31,715
|
2021ರ ಜೂನ್ 21ರಿಂದ ಸಾರ್ವತ್ರಿಕ ಕೋವಿಡ್-19 ಲಸಿಕಾ ಕಾರ್ಯಕ್ರಮದ ಹೊಸ ಹಂತ ಆರಂಭವಾಗಿದೆ. ಕೇಂದ್ರ ಸರ್ಕಾರ ದೇಶಾದ್ಯಂತ ಕೋವಿಡ್-19 ಲಸಿಕಾ ಕಾರ್ಯಕ್ರಮದ ವ್ಯಾಪ್ತಿ ಮತ್ತು ವೇಗವನ್ನು ಹೆಚ್ಚಿಸಲು ಬದ್ಧವಾಗಿದೆ.
ಸಾಂಕ್ರಾಮಿಕ ಆರಂಭವಾದ ನಂತರ ಒಟ್ಟು ಸೋಂಕಿತರ ಪೈಕಿ ಈಗಾಗಲೇ 3,02,69,796 ಸೋಂಕಿತರು ಗುಣಮುಖರಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 42,004 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆಯ ಪ್ರಮಾಣ ಶೇ.97.31ಕ್ಕೆ ಏರಿಕೆಯಾಗಿದ್ದು, ಇದು ಏರಿಕೆ ಪ್ರವೃತ್ತಿಯನ್ನು ಸೂಚಿಸುತ್ತದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 41,157 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಸತತ 21 ದಿನಗಳಿಂದ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆ 50,000ಕ್ಕಿಂತಲೂ ಕಡಿಮೆ ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಹಾಗೂ ಸಹಭಾಗಿತ್ವದ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ.
ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 4,22,660ರಲ್ಲಿದೆ ಮತ್ತು ಇದು ದೇಶದ ಒಟ್ಟಾರೆ ಪಾಸಿಟಿವ್ ಪ್ರಕರಣಗಳಿಗೆ ಹೋಲಿಸಿದರೆ ಶೇ.1.36ರಷ್ಟಾಗುತ್ತದೆ.
ದೇಶದಲ್ಲಿ ಒಟ್ಟಾರೆ ಕೋವಿಡ್ ಸೋಂಕು ಪರೀಕ್ಷೆಗಳ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 19,36,709 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ಭಾರತ ಈವರೆಗೆ 44.39 ಕೋಟಿ(44,39,58,663) ಪರೀಕ್ಷೆಗಳನ್ನು ನಡೆಸಲಾಗಿದೆ.
ಒಂದೆಡೆ ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ವೃದ್ಧಿಸಲಾಗುತ್ತಿದೆ. ಮತ್ತೊಂದೆಡೆ ವಾರದ ಪಾಸಿಟಿವಿಟಿ ದರ ಕಂಡುಬಂದಿದೆ. ವಾರದ ಪಾಸಿಟಿವಿಟಿ ದರ ಸದ್ಯ ಶೇ.2.08ರಷ್ಟಿದ್ದು, ದಿನದ ಪಾಸಿಟಿವಿಟಿ ದರ ಇಂದು 2.13ರಷ್ಟಿದೆ. ದಿನದ ಪಾಸಿಟಿವಿಟಿ ದರ ಕಳೆದ 27 ದಿನಗಳಿಂದ ನಿರಂತರವಾಗಿ ಶೇ.3ಕ್ಕಿಂತ ಕಡಿಮೆ ಇದೆ ಮತ್ತು ಕಳೆದ 41 ದಿನಗಳಿಂದ ಶೇ.5ಕ್ಕಿಂತ ಕಡಿಮೆ ಮುಂದುವರಿದಿದೆ.
***
(Release ID: 1736582)
Visitor Counter : 275