ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಬೇಳೆಕಾಳುಗಳ ದಾಸ್ತಾನು ಮಿತಿ ಕುರಿತು ಕೆಲವು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಪ್ಪುಮಾಹಿತಿಗೆ ಸ್ಪಷ್ಟನೆ
Posted On:
15 JUL 2021 11:50AM by PIB Bengaluru
ಬೇಳೆಕಾಳುಗಳ ದಾಸ್ತಾನು ಮಿತಿಯನ್ನು ತೆಗೆದುಹಾಕಲಾಗಿದೆ ಎಂದು ಮೊಬೈಲ್ ವಾಟ್ಸ್ಆಪ್ ಸಂದೇಶ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ವರದಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಬೇಳೆಕಾಳುಗಳ ದಾಸ್ತಾನಿಗೆ 02.07.2021ರಂದು ಹೇರಿರುವ ಮಿತಿಯನ್ನು ತೆಗೆದುಹಾಕಿಲ್ಲ, ಅದು ಜಾರಿಯಲ್ಲಿದೆ ಎಂದು ಸರ್ಕಾರ ತಿಳಿಸಿದೆ. ಈ ಆದೇಶವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಟ್ಟುನಿಟ್ಟಾಗಿ ಜಾರಿ ಮಾಡುವ ಕುರಿತು ಕೇಂದ್ರ ಸರ್ಕಾರ ನಿಕಟ ಮೇಲ್ವಿಚಾರಣೆ ನಡೆಸುತ್ತಿದೆ.
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿಚಾರಣೆ ಸಚಿವಾಲಯವು ಅಭಿವೃದ್ಧಿಪಡಿಸಿರುವ ಪೋರ್ಟಲ್|ನಲ್ಲಿ ದಾಸ್ತಾನುದಾರರು ಘೋಷಿಸುವ ಬೇಳೆಕಾಳುಗಳ ದಾಸ್ತಾನು ಪ್ರಮಾಣ ಮತ್ತು ಬೇಳೆಕಾಳುಗಳ ದಾಸ್ತಾನಿಗೆ ಬ್ಯಾಂಕ್ ಗಳಿಂದ ಪಡೆದಿರುವ ಸಾಲ ಅಥವಾ ಆಮದುದಾರರು ಆಮದು ಮಾಡಿಕೊಂಡಿರುವ ದಾಸ್ತಾನು ಪ್ರಮಾಣ ಹೊಂದಿಕೆ ಆಗುತ್ತಿಲ್ಲ (ವ್ಯತ್ಯಾಸ ಕಂಡುಬರುತ್ತಿದೆ) ಎಂಬ ವಿಷಯವನ್ನು ಕೇಂದ್ರ ಸರ್ಕಾರವು ರಾಜ್ಯಗಳ ಜತೆ ವಿನಿಮಯ ಮಾಡಿಕೊಂಡಿದೆ. ದಾಸ್ತಾನು ಮಿತಿಯ ಆದೇಶ ಉಲ್ಲಂಘಿಸುತ್ತಿರುವ ದಾಸ್ತಾನುದಾರರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
***
(Release ID: 1735814)
Visitor Counter : 261