ಸಂಪುಟ
ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಹೆಚ್ಚಳಕ್ಕೆ ಕೇಂದ್ರ ಸಂಪುಟ ಅನುಮೋದನೆ
प्रविष्टि तिथि:
14 JUL 2021 4:03PM by PIB Bengaluru
ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಮಿತಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು 01.07,2021 ರಿಂದ ಶೇ 28 ರಷ್ಟು ಹೆಚ್ಚಿಸಲು ಅನುಮೋದನೆ ನೀಡಿದೆ. ಇದು ಪ್ರಸ್ತುತ ಇರುವ ಶೇ 11 ರಷ್ಟು ದರಕ್ಕಿಂತ ಮೂಲ ವೇತನ/ ಪಿಂಚಣಿಯ ಶೇ 17 ರಷ್ಟು ಹೆಚ್ಚಳವಾಗಲಿದೆ.
ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಉದ್ಭವಿಸಿದ ಅಸಾಧಾರಣ ಪರಿಸ್ಥಿತಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಮೂರು ಹೆಚ್ಚುವರಿ ಕಂತುಗಳ ತುಟ್ಟಿ ಭತ್ಯೆ [ಡಿಎ] ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು [ಡಿಆರ್] 01.01.2020, 01.07.2020 ಮತ್ತು 01.01.2021, ಸ್ಥಗಿತಗೊಳಿಸಲಾಗಿತ್ತು.
ಇದೀಗ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಹಾಗೂ ಪಿಂಚಣಿದಾರರಿಗೆ ತುಟ್ಟಿ ಪರಿಹಾರ 01.07,2021 ರಿಂದ ಶೇ 28 ಕ್ಕೆ ಹೆಚ್ಚಳವಾಗಲಿದೆ. ಇದು ಪ್ರಸ್ತುತ ಇರುವ ಶೇ 11 ರಷ್ಟು ಮೂಲ ದರಕ್ಕಿಂತ ವೇತನ/ ಪಿಂಚಣಿಯ ಶೇ 17 ರಷ್ಟು ಹೆಚ್ಚಳವಾಗಲಿದೆ. 01.01.2020, 01.07.2020 ಮತ್ತು 01.01.2021 ರಂದು ಹೆಚ್ಚುವರಿ ಕಂತುಗಳಲ್ಲಿ ಇದು ದೊರೆಯಲಿದೆ. 01.01.2020 ರಿಂದ 30.06.2021 ರ ಅವಧಿಗೆ ತುಟ್ಟಿ ಭತ್ಯೆ / ಪರಿಹಾರ ದರ ಶೇ 17 ರಷ್ಟಿದೆ.
***
(रिलीज़ आईडी: 1735502)
आगंतुक पटल : 796
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam