ರಾಷ್ಟ್ರಪತಿಗಳ ಕಾರ್ಯಾಲಯ

ಮಾಧ್ಯಮ ಸಂವಹನ

प्रविष्टि तिथि: 06 JUL 2021 1:13PM by PIB Bengaluru

ರಾಷ್ಟ್ರಪತಿಯವರು ಕೆಳಕಂಡ ನೇಮಕಾತಿ/ಬದಲಾವಣೆ ಮಾಡಲು ಹರ್ಷಿಸುತ್ತಾರೆ:-

  1. ಶ್ರೀ ಪಿ.ಎಸ್. ಶ್ರೀಧರನ್ ಪಿಳ್ಳೈ, ಮಿಜೋರಾಂ ರಾಜ್ಯಪಾಲರ ಹುದ್ದೆಯಿಂದ ಗೋವಾ ರಾಜ್ಯಪಾಲರಾಗಿ ವರ್ಗಾವಣೆ ಮಾಡಿ ನೇಮಕ.
  2. ಶ್ರೀ ಸತ್ಯದೇವ್ ನಾರಾಯಣ ಆರ್ಯ, ಹರಿಯಾಣದ ರಾಜ್ಯಪಾಲರಾಗಿದ್ದ ಅವರನ್ನು ತ್ರಿಪುರಾದ ರಾಜ್ಯಪಾಲರಾಗಿ ವರ್ಗಾವಣೆ ಮಾಡಿ ನೇಮಕ ಮಾಡಲಾಗಿದೆ.
  3. ಶ್ರೀ ರಮೇಶ್ ವ್ಯಾಸ್ ತ್ರಿಪುರಾ ರಾಜ್ಯಪಾಲರಾಗಿದ್ದ ಅವರನ್ನು ಜಾರ್ಖಂಡ್ ರಾಜ್ಯಪಾಲರಾಗಿ ವರ್ಗಾವಣೆ ಮಾಡಿ ನೇಮಕ ಮಾಡಲಾಗಿದೆ.
  4. ಶ್ರೀ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ರಾಜ್ಯಪಾಲರಾಗಿ ನೇಮಕ.
  5. ಶ್ರೀ ಬಂಗಾರು ದತ್ತಾತ್ರೇಯ ಹಿಮಾಚಲ ಪ್ರದೇಶ ರಾಜ್ಯಪಾಲರಾಗಿದ್ದ ಅವರನ್ನು ವರ್ಗಾವಣೆ ಮಾಡಿ ಹರಿಯಾಣ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ
  6. ಡಾ. ಹರಿ ಬಾಬು ಕಂಬಂಪತಿ ಮಿಜೋರಾಂ ರಾಜ್ಯಪಾಲರಾಗಿ ನೇಮಕ.
  7. ಶ್ರೀ ಮಂಗುಭಾಯ್ ಛಗ್ಗನ್ ಭಾಯ್ ಪಟೇಲ್, ಮಧ್ಯಪ್ರದೇಶದ ರಾಜ್ಯಪಾಲರು.
  8. ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹಿಮಾಚಲ ಪ್ರದೇಶದ ರಾಜ್ಯಪಾಲರು.

2. ಮೇಲ್ಕಂಡ ಎಲ್ಲ ನೇಮಕಾತಿಗಳೂ ಅವರು ತಮ್ಮ ಅಧಿಕಾರ ಸ್ವೀಕರಿಸುವ ದಿನದಿಂದ ಜಾರಿಗೆ ಬರುತ್ತದೆ.

***


(रिलीज़ आईडी: 1733061) आगंतुक पटल : 457
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Punjabi , Gujarati , Tamil , Telugu , Malayalam