ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಕೇಂದ್ರ ಶಿಕ್ಷಣ ಸಚಿವರಿಂದ ಎಜುಕೇಷನ್ ಪ್ಲಸ್ ಗಾಗಿ ಸಮಗ್ರ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡಿಐಎಸ್ ಇ+)ಯ 2019-20 ವರದಿ ಬಿಡುಗಡೆ


ಶಾಲಾ ಶಿಕ್ಷಣದ ಎಲ್ಲ ಹಂತಗಳಲ್ಲಿ ಜಿಇಆರ್, ಜನ ಶಿಕ್ಷಕರ ಅನುಪಾತ, ಬಾಲಕಿಯರ ನೋಂದಣಿಯಲ್ಲಿ ಸುಧಾರಣೆಗಳ ಅಂಶ ವರದಿಯಲ್ಲಿ ಬಹಿರಂಗ

Posted On: 01 JUL 2021 1:27PM by PIB Bengaluru

ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಅವರು ಇಂದು  ಭಾರತದಲ್ಲಿ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದಂತೆ ಎಜುಕೇಷನ್ ಪ್ಲಸ್ ಗಾಗಿ ಸಮಗ್ರ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡಿಐಎಸ್ ಇ+)ಯ 2019-20 ವರದಿಯನ್ನು ಬಿಡುಗಡೆ ಮಾಡಿದರು.

ಯುಡಿಐಎಸ್ ಇ+ 2019-20 ವರದಿಯನ್ವಯ, 2018-19ಕ್ಕೆ ಹೋಲಿಸಿದರೆ 2019-20ರಲ್ಲಿ ಶಾಲಾ ಹಂತದ ಎಲ್ಲ ಹಂತಗಳಲ್ಲಿ ಒಟ್ಟು ನೋಂದಣಿ ಪ್ರಮಾಣ ಹೆಚ್ಚಾಗಿದೆ. ಶಾಲಾ ಶಿಕ್ಷಣದ ಎಲ್ಲ ಹಂತಗಳಲ್ಲಿ ಜನ ಶಿಕ್ಷಕರ ಅನುಪಾತ (ಪಿಟಿಆರ್) ಕೂಡ ಸುಧಾರಣೆಯಾಗಿದೆ.

2019-20ರ ವರದಿಯ ಪ್ರಕಾರ ಪ್ರಾಥಮಿಕದಿಂದ ಪ್ರೌಢಶಿಕ್ಷಣಕ್ಕೆ ಬಾಲಕಿಯರ ನೋಂದಣಿ 12.08 ಕೋಟಿಗೂ ಅಧಿಕ.  2018-19ಕ್ಕೆ ಹೋಲಿಸಿದರೆ 14.08 ಲಕ್ಷಕ್ಕೂ ಅಧಿಕ ಹೆಚ್ಚಳವಾಗಿದೆ. 2012-13 ಮತ್ತು 2019-20ರ ನಡುವೆ, ಲಿಂಗ ಸಮಾನತೆ ಸೂಚ್ಯಂಕ (ಜಿಪಿಐ) ಪ್ರೌಢಶಿಕ್ಷಣ ಮತ್ತು ಉನ್ನತ ಶಿಕ್ಷಣ ಎರಡೂ ಮಟ್ಟದಲ್ಲೂ ಸುಧಾರಣೆಯಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ 2019-20ರಲ್ಲಿ ಅಂತರ್ಜಾಲ ಸೌಕರ್ಯ, ಕಂಪ್ಯೂಟರ್ ಗಳ ಕಾರ್ಯನಿರ್ವಹಣೆ, ವಿದ್ಯುತ್ ಹೊಂದಿರುವ ಶಾಲೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದು ಯುಡಿಐಎಸ್ ಇ+ ಯ 2019-20 ವರದಿಯಿಂದ ಕಂಡು ಬಂದಿದೆ.

ಮತ್ತೊಂದು ಪ್ರಮುಖ ಸುಧಾರಣೆ ಎಂದರೆ, ಕೈ ತೊಳೆಯುವ ಸೌಕರ್ಯ ಹೊಂದಿರುವ ಶಾಲೆಗಳ ಸಂಖ್ಯೆ ಹೆಚ್ಚಾಗಿರುವುದು. 2019-20ಯಲ್ಲಿ ಭಾರತದಲ್ಲಿ ಶೇ.90ಕ್ಕೂ ಅಧಿಕ ಶಾಲೆಗಳಲ್ಲಿ ಕೈ ತೊಳೆಯುವ ಸೌಕರ್ಯವಿದೆ, 2012-13ರಲ್ಲಿ ಈ ಪ್ರಮಾಣ ಶೇ.36.3ರಷ್ಟು ಮಾತ್ರ ಇತ್ತು.

2012-13ರಿಂದ ಚಾಲ್ತಿಯಲ್ಲಿದ್ದ ಯುಡಿಐಎಸ್ ಇ ದತ್ತಾಂಶ ಸಂಗ್ರಹ ವ್ಯವಸ್ಥೆಯಲ್ಲಿ ಕಾಗದದ ಸ್ವರೂಪದಲ್ಲಿ ಹಸ್ತಚಾಲಿತ ದತ್ತಾಂಶ ಭರ್ತಿ ವ್ಯವಸ್ಥೆ ಇತ್ತು ಮತ್ತು ನಂತರದ ಬ್ಲಾಕ್ ಅಥವಾ ಜಿಲ್ಲಾ ಮಟ್ಟದಲ್ಲಿ ಆಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಶಾಲೆಗಳಿಂದ ಆನ್ ಲೈನ್ ದತ್ತಾಂಶ ಸಂಗ್ರಹಣೆಯು ಯುಡಿಐಎಸ್ ಇ+  ವ್ಯವಸ್ಥೆಯನ್ನು 2018-91ರಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸದ್ಯದ  ಯುಡಿಐಎಸ್ ಇ+ ಪ್ರಕಟಣೆ 2019-20ನೇ ಸಾಲಿಗೆ ಸಂಬಂಧಿಸಿದ್ದಾಗಿದೆ.

ಎಜುಕೇಷನ್ ಪ್ಲಸ್ ಗಾಗಿ ಸಮಗ್ರ ಜಿಲ್ಲಾ ಮಾಹಿತಿ ವ್ಯವಸ್ಥೆ (ಯುಡಿಐಎಸ್ ಇ+) ಯ 2019-20 ವರದಿಯ ಪ್ರಮುಖಾಂಶಗಳು

·         2019-20ರಲ್ಲಿ ಶಾಲಾ ಶಿಕ್ಷಣದಲ್ಲಿ ಪೂರ್ವ ಪ್ರಾಥಮಿಕದಿಂದ ಪ್ರೌಢಶಿಕ್ಷಣಕ್ಕೆ ಸೇರಿದ  ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 26.45 ಕೋಟಿ ದಾಟಿದೆ. 2018-19 ಕ್ಕೆ ಹೋಲಿಸಿದರೆ 42.3 ಲಕ್ಷಕ್ಕೂ ಅಧಿಕವಾಗಿದೆ.

·         2018-19 ಕ್ಕೆ ಹೋಲಿಸಿದರೆ 2019-20 ರಲ್ಲಿ ಶಾಲಾ ಶಿಕ್ಷಣದ ಎಲ್ಲ ಹಂತಗಳಲ್ಲಿ ಒಟ್ಟು ನೋಂದಣಿ ಪ್ರಮಾಣ ಸುಧಾರಣೆಯಾಗಿದೆ.

·         ಒಟ್ಟು ಪ್ರವೇಶ ಅನುಪಾತ ಶೇ.89.7ಕ್ಕೆ (ಶೇ.87.7ರಿಂದ) ಹೆಚ್ಚಳವಾಗಿದೆ, ಪ್ರೌಢ ಹಂತದಲ್ಲಿ ಶೇ.97.8 (ಶೇ.96.1ರಿಂದ ) ಪ್ರಾಥಮಿಕ ಹಂತದಲ್ಲಿ ಶೇ.77.9 (ಶೇ.76.9ರಿಂದ) ಪೌಢಶಿಕ್ಷಣ ಹಂತದಲ್ಲಿ ಶೇ 51.4ರಷ್ಟು (ಶೇ.50.1ರಿಂದ) ಪ್ರೌಢಶಿಕ್ಷಣ ಹಂತದಲ್ಲಿ 2019-20 (2018-19ರಿಂದ).

o    2012-13ರಿಂದ 2019-20 ರ ನಡುವೆ ಪ್ರೌಢಶಿಕ್ಷಣದಲ್ಲಿ ಒಟ್ಟು ನೋಂದಣಿ ಅನುಪಾತ (ಜಿಇಆರ್) ಅಂದಾಜು ಶೇ.10ರಷ್ಟು ಸುಧಾರಿಸಿದೆ. ಜಿಇಆರ್ 2012-13ರಲ್ಲಿ ಶೇ.68.7ರಷ್ಟು ಇತ್ತು, ಅದಕ್ಕೆ ಹೋಲಿಸಿದರೆ ಶೇ. 78ರಷ್ಟು ತಲುಪಿದೆ.  

o    2012-13ರಿಂದ 2019-20ರ ನಡುವಿನ ಅವಧಿಯಲ್ಲಿ ಹೈಯರ್ ಸೆಕೆಂಡರಿಯಲ್ಲಿ ಜಿಇಆರ್ ಶೇ.11ಕ್ಕೂ ಹೆಚ್ಚಾಗಿದೆ. 2012-13ರಲ್ಲಿ ಹೈಯರ್ ಸೆಕೆಂಡರಿಯಲ್ಲಿ ಜಿಇಆರ್ ಪ್ರಮಾಣ ಶೇ.40.1ರಷ್ಟು ಇದ್ದಿದ್ದು, 2019-20ರಲ್ಲಿ ಶೇ.51.4ರಷ್ಟು ತಲುಪಿದೆ.

·         ಶಾಲಾ ಶಿಕ್ಷಣದಲ್ಲಿ ತೊಡಗಿರುವ ಶಿಕ್ಷಣ ಸಂಖ್ಯೆ 2019-20ರಲ್ಲಿ 96.87 ಲಕ್ಷಕ್ಕೆ ತಲುಪಿದೆ. ಇದು 2018-19ಕ್ಕೆ ಹೋಲಿಸಿದರೆ 2.57 ಲಕ್ಷ ಅಧಿಕ.

·         ಶಾಲಾ ಶಿಕ್ಷಣದ ಎಲ್ಲ ಹಂತಗಳಲ್ಲಿ ಜನ ಶಿಕ್ಷಕರ ಅನುಪಾತ (ಪಿಟಿಆರ್) ಸುಧಾರಣೆಯಾಗಿದೆ.

·         2019-20ರಲ್ಲಿ ಪ್ರಾಥಮಿಕದಲ್ಲಿ ಪಿಟಿಆರ್ ಪ್ರಮಾಣ 26.5, ಅಪ್ಪರ್ ಪ್ರೈಮರಿ ಮತ್ತು ಸೆಕೆಂಡರಿಯ ಪಿಟಿಪಿ 18.5 ಮತ್ತು ಹೈಯರ್ ಸೆಕೆಂಡರಿಯಲ್ಲಿ ಪಿಟಿಆರ್ 26.1ರಷ್ಟಿದೆ.

·         2019-20 ಪ್ರಾಥಮಿಕದಲ್ಲಿ ಪಿಟಿಆರ್ 26.5ರಷ್ಟು, 2012-13ರಲ್ಲಿ ಇದು 34.0ರಷ್ಟಿತ್ತು. ಅಪ್ಪರ್ ಪ್ರೈಮರಿಯಲ್ಲಿ 18.5ರಷ್ಟು ಇದ್ದಿದ್ದು, 2012-13ರಲ್ಲಿ 23.1ರಷ್ಟಿತ್ತು.

o     

·         2019-20 ಪ್ರೌಢಶಿಕ್ಷಣದಲ್ಲಿ ಪಿಟಿಆರ್ 18.5ರಷ್ಟು, 2012-13ರಲ್ಲಿ ಇದು 29.7ರಷ್ಟಿತ್ತು. ಅಪ್ಪರ್ ಪ್ರೈಮರಿಯಲ್ಲಿ 18.5ರಷ್ಟು ಇದ್ದಿದ್ದು, 2012-13ರಲ್ಲಿ 23.1ರಷ್ಟಿತ್ತು.

o     

o    2019-20 ಹೈಯರ್ ಸೆಕೆಂಡರಿಯಲ್ಲಿ ಪಿಟಿಆರ್ 26.1ರಷ್ಟು, 2012-13ರಲ್ಲಿ ಇದು 39.2ರಷ್ಟಿತ್ತು.

o     

o    ವಿಶೇಷಚೇತನ ವ್ಯಕ್ತಿಗಳಿಗೆ ಸಾರ್ವತ್ರಿಕ ಶಿಕ್ಷಣ ಲಭ್ಯತೆಯನ್ನು ಖಾತ್ರಿಪಡಿಸಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ. ದಿವ್ಯಾಂಗ ವಿದ್ಯಾರ್ಥಿಗಳ ಪ್ರವೇಶ 2018-19ರಲ್ಲಿ ಶೇ.6.52ರಷ್ಟು ಹೆಚ್ಚಾಗಿದೆ.

·         2019-20 ರಲ್ಲಿ ಪ್ರಾಥಮಿಕದಿಂದ ಪ್ರೌಢಶಿಕ್ಷಣಕ್ಕೆ ಬಾಲಕಿಯರ ನೋಂದಣಿ 12.08ಕೋಟಿಗೂ ಅಧಿಕವಾಗಿದೆ. ಇದು 2018019ಕ್ಕೆ ಹೋಲಿಸಿದರೆ 14.08 ಕೋಟಿ ಹೆಚ್ಚಾಗಿದೆ.

o    ಒಟ್ಟು ಬಾಲಕಿಯರ ನೋಂದಣಿ ಅನುಪಾತ 2019-20ರಲ್ಲಿ (2018-19ರ ಅಂಕಿ ಅಂಶ) ಅಪ್ಪರ್ ಪ್ರಮೈರಿ ಹಂತದಲ್ಲಿ ಶೇ.90.0ಕ್ಕೆ ಹೆಚ್ಚಾಗಿದೆ (ಶೇ.88.5ರಿಂದ), ಪ್ರಾಥಮಿಕ ಹಂತದಲ್ಲಿ ಶೇ 98.7 (ಶೇ.96.1ರಿಂದ), ಸೆಕೆಂಡರಿ ಹಂತದಲ್ಲಿ ಶೇ.77.8 ( ಶೇ.76.9ರಿಂದ) ಮತ್ತು ಪ್ರೌಢಶಿಕ್ಷಣದಲ್ಲಿ ಶೇ 52.4(ಶೇ.50.8ರಿಂದ)  ಹೆಚ್ಚಾಗಿದೆ.

o    2012-13ರಿಂದ 20190-20ರ ನಡುವೆ ಸೆಕೆಂಡರಿ ಹಂತದಲ್ಲಿ ಬಾಲಕಿಯರ ಒಟ್ಟು ನೋಂದಣಿ ಅನುಪಾತ ಶೇ.13ರಷ್ಟು ಹೆಚ್ಚಾಗಿದೆ. ಇದು 2012-13ರಲ್ಲಿ ಶೇ.39.4ರಷ್ಟಿತ್ತು, ಅದು 2019-20ರಲ್ಲಿ ಶೇ.52.4ಕ್ಕೆ ಏರಿಕೆಯಾಗಿದೆ. ಹೆಚ್ಚಳ ಬಾಲಕರಿಗಿಂತ ಏರಿಕೆಯಾಗಿದೆ. ಹೈಯರ್ ಸೆಕೆಂಡರಿಯಲ್ಲಿ ಬಾಲಕರ ಜಿಇಆರ್ ಪ್ರಮಾಣ 2019-20ರಲ್ಲಿ ಶೇ.50.5ರಷ್ಟಿದೆ, 2012-13ರಲ್ಲಿ ಶೇ.40.8ರಷ್ಟು ಇತ್ತು.

o    2012-13  ಮತ್ತು 2019-20 ನಡುವೆ  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಎರಡಲ್ಲೂ ಬಾಲಕಿಯರ ಜಿಇಆರ್ ಪ್ರಮಾಣ ಬಾಲಕರಿಗಿಂತ ಅಧಿಕವಾಗಿದೆ.

o    ಸೆಕೆಂಡರಿ ಹಂತದಲ್ಲಿ ಬಾಲಕಿಯರ ಜಿಇಆರ್ 2019-20 ರಲ್ಲಿ 9.6%  ರಷ್ಟು ಹೆಚ್ಚಾಗಿ  77.8% ತಲುಪಿದೆ, 2012-13ರಲ್ಲಿ ಶೇ.68.2% ರಷ್ಟಿತ್ತು.

o    2012-13 ಮತ್ತು 2019-20 ರ ನಡುವೆ ಸೆಕೆಂಡರಿ ಮತ್ತು ಹೈಯರ್ ಸೆಕೆಂಡಿಯಲ್ಲಿ ಲಿಂಗ ಸಮಾನತೆ ಸೂಚ್ಯಂಕ (ಜಿಪಿಐ) ಸುಧಾರಣೆಯಾಗಿದೆ.  2019-20ರಲ್ಲಿ ಹೈಯರ್ ಸೆಕೆಂಡರಿ ಹಂತದಲ್ಲಿ ಜಿಪಿಐ ಸುಧಾರಣೆಯಾಗಿದೆ, ಅದು 1.04 ತಲುಪಿದೆ, 2012-13ರಲ್ಲಿ ಅದು 0.97ರಷ್ಟಿತ್ತು.

·         2019-20ರಲ್ಲಿ ಭಾರತದ ಶೇ.80ಕ್ಕೂ ಅಧಿಕ ಶಾಲೆಗಳಲ್ಲಿ ವಿದ್ಯುತ್ ಕಾರ್ಯನಿರ್ವಹಣೆ ಇದೆ. ಇದು 2018-19ಕ್ಕೆ ಹೋಲಿಸಿದರೆ ಶೇ.6ರಷ್ಟು ಸುಧಾರಿಸಿದೆ.

·         ಕಾರ್ಯನಿರ್ವಹಿಸುತ್ತಿರುವ ಕಂಪ್ಯೂಟರ್ ಗಳನ್ನು ಹೊಂದಿರುವ ಶಾಲೆಗಳ ಸಂಖ್ಯೆ 2019-20ರಲ್ಲಿ 5.2ಲಕ್ಷಕ್ಕೆ ಹೆಚ್ಚಳವಾಗಿದೆ, 2018-19ರಲ್ಲಿ ಇದು 4.7 ಲಕ್ಷ ಇತ್ತು.

·         2018-19ರಲ್ಲಿ ಅಂತರ್ಜಾಲ ಸೌಕರ್ಯ ಹೊಂದಿರುವ ಶಾಲೆಗಳ ಸಂಖ್ಯೆ 2.9ಲಕ್ಷ  ಇತ್ತು, ಅದು 2019-20ರಲ್ಲಿ 3.36 ಲಕ್ಷಕ್ಕೆ ಹೆಚ್ಚಳವಾಗಿದೆ.

·         2019-20ರಲ್ಲಿ ಭಾರತದಲ್ಲಿ ಶೇ.90ಕ್ಕೂ ಅಧಿಕ ಶಾಲೆಗಳಲ್ಲಿ ಕೈ ತೊಳೆಯುವ ಸೌಕರ್ಯವಿದೆ. ಇದು ಮಹತ್ವದ ಸುಧಾರಣೆಯಾಗಿದೆ, ಏಕೆಂದರೆ 2012-13ರಲ್ಲಿ ಈ  ಪ್ರಮಾಣ ಶೇ.36.3ರಷ್ಟಿತ್ತು.

·         2019-20ರಲ್ಲಿ ಶೇ.83ಕ್ಕೂ ಅಧಿಕ ಶಾಲೆಗಳಲ್ಲಿ ವಿದ್ಯುತ್ ಸಂಪರ್ಕವಿದೆ, 2018-19ಕ್ಕೆ ಹೋಲಿಸಿದರೆ ಇದು ಶೇ.7ರಷ್ಟು ಸುಧಾರಣೆಯಾಗಿದೆ. 2012-13ರಲ್ಲಿ ಶೇ.54.6ರಷ್ಟು ಶಾಲೆಗಳಿಗೆ ಮಾತ್ರ ವಿದ್ಯುತ್ ಸಂಪರ್ಕವಿತ್ತು.

·         2019-20ರಲ್ಲಿ ಶೇ.82ಕ್ಕೂ ಅಧಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದೆ, ಇದು 2018-19ಕ್ಕೆ ಹೋಲಿಸಿದರೆ ಶೇ.4ರಷ್ಟು ಹೆಚ್ಚಾಗಿದೆ. 2012-13ರಲ್ಲಿ ಸುಮಾರು ಶೇ.61.1ರಷ್ಟು ಶಾಲೆಗಳಲ್ಲಿ ವೈದ್ಯಕೀಯ ತಪಾಸಣೆಗಳನ್ನು ನಡೆಸಲಾಗಿತ್ತು.

·         2019-20ರಲ್ಲಿ ಭಾರತದಲ್ಲಿ ಶೇ.84ಕ್ಕೂ ಅಧಿಕ ಶಾಲೆಗಳಲ್ಲಿ ಗ್ರಂಥಾಲಯ/ಓದುವ ಕೊಠಡಿ/ ರೀಡಿಂಗ್ ಕಾರ್ನರ್ ಇದೆ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ.4ರಷ್ಟು ಸುಧಾರಿಸಿದೆ. 2012-13ರಲ್ಲಿ ಶೇ.69.2ರಷ್ಟು ಶಾಲೆಗಳಲ್ಲಿ ಮಾತ್ರ ಗ್ರಂಥಾಲಯ/ಓದುವ ಕೊಠಡಿ/ ರೀಡಿಂಗ್ ಕಾರ್ನರ್ ಇತ್ತು.

ಹೆಚ್ಚಿನ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ:

https://www.education.gov.in/hi/statistics-new?shs%20term%20node%20tid%20depth%20=394&Apply=Apply

****

 (Release ID: 1731981) Visitor Counter : 256