ಸಂಪುಟ

ಆರೋಗ್ಯ ಸಂಶೋಧನಾ ಕ್ಷೇತ್ರದಲ್ಲಿ ಭಾರತ ಮತ್ತು ಮ್ಯಾನ್ಮಾರ್ ನಡುವಿನ ಒಡಂಬಡಿಕೆಗೆ ಸಚಿವ ಸಂಪುಟ ಅನುಮೋದನೆ

प्रविष्टि तिथि: 30 JUN 2021 4:17PM by PIB Bengaluru

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಮ್ಯಾನ್ಮಾರ್‌ನ ಆರೋಗ್ಯ ಮತ್ತು ಕ್ರೀಡಾ ಸಚಿವಾಲಯದ ವೈದ್ಯಕೀಯ ಸಂಶೋಧನಾ ಇಲಾಖೆ (ಡಿಎಂಆರ್) ನಡುವೆ 2020ರ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ಏರ್ಪಟ್ಟ ಒಡಂಬಡಿಕೆ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ತಿಳಿಸಲಾಯಿತು. 

ಪರಸ್ಪರ ಸಂಶೋಧನೆಯ ವಿಷಯಗಳಲ್ಲಿ ಆರೋಗ್ಯ ಸಂಶೋಧನಾ ಸಂಬಂಧವನ್ನು ನಿರ್ಮಿಸುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ. ಇದರ ಮುಖ್ಯ ಉದ್ದೇಶಗಳೆಂದರೆ:

ಎ. ಸಾಂಕ್ರಾಮಿಕ ರೋಗಗಳ ನಿರ್ಮೂಲನೆ (ಪರಸ್ಪರ ನಿರ್ಧರಿಸಬೇಕು)

ಬಿ. ಆಗಷ್ಟೇ ಬೆಳಕಿಗೆ ಬರುತ್ತಿರುವ ಸೋಂಕು ಮತ್ತು ವೈರಾಣು ಸೋಂಕುಗಳ 

     ಜಾಲದ ವೇದಿಕೆ ಅಭಿವೃದ್ಧಿ

ಸಿ. ಸಂಶೋಧನಾ ವಿಧಾನ ನಿರ್ವಹಣೆ, ವೈದ್ಯಕೀಯ ಪ್ರಯೋಗಗಳು, ನೈತಿಕತೆ 

    ಇತ್ಯಾದಿಗಳಲ್ಲಿ ತರಬೇತಿ /ಸಾಮರ್ಥ್ಯ ವರ್ಧನೆ.

ಡಿ. ನಿಯಂತ್ರಣ ಕಾರ್ಯವಿಧಾನದಲ್ಲಿ ಸಾಮರಸ್ಯ ಮೂಡಿಸುವುದು

ಆ ಸಮಯದಲ್ಲಿ ಲಭ್ಯವಿರುವ ನಿಧಿಗೆ ಅನುಗುಣವಾಗಿ ಕಾಲಕಾಲಕ್ಕೆ ಕಾರ್ಯಾಗಾರಗಳು/ ಸಭೆಗಳು ಮತ್ತು ಸಂಶೋಧನಾ ಯೋಜನೆಗಳಿಗೆ ಹಣಕಾಸು ಒದಗಿಸುವ ಬದ್ಧತೆ ಬಗ್ಗೆ ನಿರ್ಧರಿಸಲಾಗುತ್ತದೆ. ಉಭಯ ಪಕ್ಷಗಳೂ (ಸಂಸ್ಥೆಗಳು/ಇಲಾಖೆ) ಕೈಜೋಡಿಸಿ, ಆಯಾ ಸಂಸ್ಥೆಯ ಪ್ರತಿನಿಧಿಗಳನ್ನು ಒಳಗೊಂಡಂತಹ ಜಂಟಿ ಕಾರ್ಯಪಡೆಯೊಂದನ್ನು(ಜೆಡಬ್ಲ್ಯೂಜಿ) ರಚಿಸಲಿವೆ. ಜೆಡಬ್ಲ್ಯೂಜಿ ಅಧಿವೇಶನಗಳನ್ನು ಭಾರತ ಮತ್ತು ಮ್ಯಾನ್ಮಾರ್‌ನಲ್ಲಿ ಪರ್ಯಾಯವಾಗಿ ಹಮ್ಮಿಕೊಳ್ಳಲಾಗುವುದು. ಜೆಡಬ್ಲ್ಯೂಜಿ ಸದಸ್ಯರ ವೀಸಾ ಪ್ರವೇಶ, ವಸತಿ, ದೈನಂದಿನ ಸಂಭಾವನೆ, ಆರೋಗ್ಯ ವಿಮೆ, ಸ್ಥಳೀಯ ಸಾರಿಗೆ ಸೇರಿದಂತೆ ಪ್ರಯಾಣಕ್ಕೆ ಸಂಬಂಧಿಸಿದ ಖರ್ಚು-ವೆಚ್ಚಗಳನ್ನು ಸದಸ್ಯರನ್ನು ಕಳುಹಿಸುವ ದೇಶವೇ ಭರಿಸುತ್ತದೆ. ಆದರೆ ಕಾರ್ಯಪಡೆಯ ಸಭೆಗಳ ಆಯೋಜನೆಯ ವೆಚ್ಚಗಳನ್ನು ಆತಿಥೇಯ ದೇಶವು ಭರಿಸುತ್ತದೆ.

***


(रिलीज़ आईडी: 1731662) आगंतुक पटल : 214
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam