ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಡಿಜಿಟಲ್ ಇಂಡಿಯಾದ ವಿವಿಧ ಯೋಜನೆಗಳಿಗೆ ಜುಲೈ 1ರಂದು 6 ವರ್ಷ ಪೂರ್ಣ


ಯೋಜನೆಯ ಫಲಾನುಭವಿಗಳ ಜತೆ ನಾಳೆ ಬೆಳಗ್ಗೆ 11 ಗಂಟೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವರ್ಚುವಲ್ ಸಂವಾದ

ಪ್ರಮುಖ ಸಾಧನೆಗಳ ವೀಡಿಯೊ ಪ್ರದರ್ಶನ

ಡಿಜಿಟಲ್ ಇಂಡಿಯಾದ ವಿವಿಧ ಸಾಧನೆಗಳು, ಸರ್ಕಾರಗಳೊಂದಿಗೆ ಜನರು ಸಂಪರ್ಕ ಸಾಧಿಸಲು ಆಗಿರುವ ಸಕಾರಾತ್ಮಕ ಬೆಳವಣಿಗೆಗಳ ಕುರಿತು  ಪ್ರಧಾನಿ ಭಾಷಣದಲ್ಲಿ ಒತ್ತು

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಅವರು ಕಾರ್ಯಕ್ರಮದಲ್ಲಿ ಮೊದಲ್ನುಡಿ

Posted On: 30 JUN 2021 12:44PM by PIB Bengaluru

ಭಾರತವನ್ನು ಜ್ಞಾನಾಧರಿತ ಆರ್ಥಿಕತೆಯಾಗಿ ರೂಪಿಸಲು ಮತ್ತು ಡಿಜಿಟಲ್ ಸಬಲೀಕರಣದ ಸಮಾಜವಾಗಿ ಪರಿವರ್ತಿಸುವ ದೃಷ್ಟಿಕೋನದಿಂದ ಅನಾವರಣಗೊಳಿಸಲಾದ ಮಹತ್ವಾಕಾಂಕ್ಷಿ ಕಾರ್ಯಕ್ರಮ ಡಿಜಿಟಲ್ ಇಂಡಿಯಾವು 2021 ಜುಲೈ 1ರಂದು 6 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಲಿದೆ.

ಡಿಜಿಟಲ್ ಇಂಡಿಯಾಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು 2015 ಜುಲೈ 1ರಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು. ನವಭಾರತ ನಿರ್ಮಾಣದ ಹಾದಿಯಲ್ಲಿ ಕಾರ್ಯಕ್ರಮವು ದೇಶದ ಬಹುದೊಡ್ಡ ಯಶೋಗಾಥೆಯಾಗಿ ಪರಿವರ್ತನೆಯಾಗಿದೆಸರ್ಕಾರಗಳಿಗೆ ಜನರನ್ನು ಹತ್ತಿ ತಂದಿದೆ. ಸೇವೆಗಳನ್ನು ವ್ಯಾಪಕಗೊಳಿಸಿದೆ. ನಾಗರಿಕರು ಸರ್ಕಾರದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದನ್ನು ಉತ್ತೇಜಿಸುವ ಜತೆಗೆ, ದೇಶದ ಜನತೆಯನ್ನು ಸಬಲೀಕರಿಸುತ್ತಿದೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಒಲವಿನ ಮತ್ತು ಇಷ್ಟದ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಡಿಜಿಟಲ್ ಇಂಡಿಯಾ ಯೋಜನೆಯು ಯಶಸ್ವೀ 6 ವರ್ಷಗಳನ್ನು ಫೂರೈಸಿರುವ ಹಿನ್ನೆಲೆಯಲ್ಲಿ, ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಿಶೇಷ ಸಂದರ್ಭವನ್ನು ಆಯೋಜಿಸಿದ್ದು, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಅವರು ಡಿಜಿಟಲ್ ಇಂಡಿಯಾ ಫಲಾನುಭವಿಗಳ ಜತೆ ನೇರ ವರ್ಚುವಲ್ ಸಂವಾದ ನಡೆಸಲಿದ್ದಾರೆ. ಯೋಜನೆಯಿಂದ ಆಗುತ್ತಿರುವ ನಾನಾ ಪ್ರಯೋಜನಗಳು ಮತ್ತು ಸಿಗುತ್ತಿರುವ ನಾನಾ ಸೇವೆಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

2021 ಜುಲೈ 1ರಂದು ಸಂವಾದ ಕಾರ್ಯಕ್ರಮ ಆಯೋಜಿತವಾಗಿದೆ. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಅವರು ಕಾರ್ಯಕ್ರಮದಲ್ಲಿ ಮೊದಲ್ನುಡಿ ಆರಂಭಿಸಲಿದ್ದಾರೆ.

ನಂತರ ಡಿಜಿಟಲ್ ಇಂಡಿಯಾದಲ್ಲಿ ಇಲ್ಲಿಯ ತನಕ ಆಗಿರುವ ಪ್ರಮುಖ ಸಾಧನೆಗಳ ವೀಡಿಯೊ ಪ್ರದರ್ಶನ ನಡೆಯಲಿದೆ. ಇದರ ಜತೆಗೆ, ಪ್ರಧಾನ ಮಂತ್ರಿ ಅವರು ಡಿಜಿಟಲ್ ಇಂಡಿಯಾದ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ನೇರ ಸಂವಾದ ಕಲಾಪಗಳನ್ನು ನಡೆಸಲಿದ್ದಾರೆ. ಜತೆಗೆ, ಐಟಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಜಯ್ ಸಾಹ್ನಿ ಅವರು ತೀರ್ಪುಗಾರರಾಗಿ ಇರಲಿದ್ದಾರೆ.

ದೇಶದ ವಿವಿಧ ಮೂಲೆಗಳ ಫಲಾನುಭವಿಗಳು ಸಂವಾದಲ್ಲಿ ಪಾಲ್ಗೊಳ್ಳಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಅವರು, ಅವರೊಂದಿಗೆ ಮಾಹಿತಿಯೋಗ್ಯ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.

ಇದೊಂದು ಹೆಮ್ಮೆಯ ಕ್ಷಣವಾಗಲಿದೆ. ಪ್ರಧಾನ ಮಂತ್ರಿ ಅವರಿಂದ ನಾವೆಲ್ಲಾ ಪಡೆದಿರುವ ಬೆಂಬಲ ಮತ್ತು ಮಾರ್ಗದರ್ಶನವನ್ನು ಹೋಲಿಕೆ ಮಾಡಲಾಗದು. ನಿಟ್ಟಿನಲ್ಲಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಲ್ಲಿ ಡಿಜಿಟಲ್ ಇಂಡಿಯಾ ಉಪಕ್ರಮಗಳನ್ನು ಮುಂದಕ್ಕೆ ಕೊಂಡೊಯ್ಯಲು ನಾವು ಎದುರು ನೋಡುತ್ತಿದ್ದೇವೆ ಎಂದು ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ ಎಂಡಿ ಮತ್ತು ಸಿಇಒ ಹಾಗೂ ರಾಷ್ಟ್ರೀಯ ವಿದ್ಯುನ್ಮಾನ ಆಡಳಿತ ವಿಭಾಗ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧ್ಯಕ್ಷ ಮತ್ತು ಸಿಇಒ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.

ಸಂವಾದದ ನಂತರ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಡಿಜಿಟಲ್ ಇಂಡಿಯಾದ ವಿವಿಧ ಸಾಧನೆಗಳು ಮತ್ತು ಸರ್ಕಾರಗಳೊಂದಿಗೆ ಜನರು ಸಂಪರ್ಕ ಸಾಧಿಸಲು ಆಗಿರುವ ಸಕಾರಾತ್ಮಕ ಬೆಳವಣಿಗೆಗಳ ಕುರಿತು ಅವರು ಭಾಷಣದಲ್ಲಿ ಒತ್ತು ನೀಡಲಿದ್ದಾರೆ. ಡಿಜಿಟಲ್ ಇಂಡಿಯಾ ಯೋಜನೆಗಳ ಅಡಿ ನಡೆಯುತ್ತಿರುವ, ನಡೆಯಲಿರುವ ಹಲವಾರು ಕಾರ್ಯಕ್ರಮಗಳ ಬಗ್ಗೆ ಪ್ರಧಾನ ಮಂತ್ರಿ ಅವರು ಬೆಳಕು ಚೆಲ್ಲಲಿದ್ದಾರೆ.

ನಾಳೆ ನಡೆಯಲಿರುವ ಎಲ್ಲಾ ಸಂವಾವಗಳು ಮತ್ತು ಭಾಷಣಗಳು ವರ್ಚುವಲ್ ರೂಪದಲ್ಲಿ ಜರುಗಲಿವೆ. ಜುಲೈ 1ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಅದ್ಭುತ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮೂಲಕ ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿದ್ದೇವೆ. ಇದಕ್ಕಾಗಿ https://pmindiawebcast.nic.in. ಲಿಂಕ್ ಸಮಪರ್ಕಿಸಿ. ಡಿಜಿಟಲ್ ಇಂಡಿಯಾದ ಫೇಸ್|ಬುಕ್, ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಲಭ್ಯವಾಗಲಿದೆ.

***


(Release ID: 1731458) Visitor Counter : 386