ಪ್ರಧಾನ ಮಂತ್ರಿಯವರ ಕಛೇರಿ

ಬಿಲ್ಲುಗಾರಿಕೆ ವಿಶ್ವಕಪ್‌ನಲ್ಲಿ ಸಾಧನೆಗಾಗಿ ದೀಪಿಕಾ ಕುಮಾರಿ, ಅಂಕಿತಾ ಭಕಾತ್‌, ಕೊಮಲಿಕಾ ಬಾರಿ, ಅತನು ದಾಸ್ ಮತ್ತು ಅಭಿಷೇಕ್ ವರ್ಮಾ ಅವರನ್ನು ಅಭಿನಂದಿಸಿದ ಪ್ರಧಾನಿ

Posted On: 29 JUN 2021 2:53PM by PIB Bengaluru

ಪ್ಯಾರಿಸ್‌ನಲ್ಲಿ ನಡೆದ ಬಿಲ್ಲುಗಾರಿಕೆ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ದೀಪಿಕಾ ಕುಮಾರಿ, ಅಂಕಿತಾ ಭಾಕತ್‌, ಕೊಮಲಿಕಾ ಬಾರಿ, ಅತನು ದಾಸ್ ಮತ್ತು ಅಭಿಷೇಕ್ ವರ್ಮಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, "ಕಳೆದ ಕೆಲವು ದಿನಗಳು ವಿಶ್ವಕಪ್‌ನಲ್ಲಿ ನಮ್ಮ ಬಿಲ್ಲುಗಾರರ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿಯಾಗಿವೆ. ದೀಪಿಕಾ ಕುಮಾರಿ, ಅಂಕಿತಾ ಭಾಕತ್‌, ಕೊಮಲಿಕಾ ಬಾರಿ, ಅತನು ದಾಸ್ ಮತ್ತು ಅಭಿಷೇಕ್‌ ವರ್ಮಾ ಅವರಿಗೆ ಅಭಿನಂದನೆಗಳು. ಈ ಸಾಧನೆಯು ಈ ಕ್ಷೇತ್ರದಲ್ಲಿ ಮುಂಬರುವ ಪ್ರತಿಭೆಗಳಿಗೆ ಸ್ಫೂರ್ತಿ ನೀಡಲಿದೆ,ʼʼ ಎಂದು ಹೇಳಿದ್ದಾರೆ.

 

****
 (Release ID: 1731157) Visitor Counter : 77