ಸಂಸ್ಕೃತಿ ಸಚಿವಾಲಯ
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕಲಾಕೃತಿಗಳಿಗೆ ಸಂಬಂಧಿಸಿದಂತೆ ಸಂಸ್ಕೃತಿ ಸಚಿವಾಲಯದ ಸ್ಪಷ್ಟೀಕರಣ
Posted On:
27 JUN 2021 8:42PM by PIB Bengaluru
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕಲಾಕೃತಿಗಳು ಕಾಣೆಯಾಗಿವೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವ ಕುರಿತು ಸ್ಪಷ್ಟೀಕರಣ ನೀಡಿರುವ ಸಂಸ್ಕೃತಿ ಸಚಿವಾಲಯ, ಇವು ಸಂಪೂರ್ಣ ಅಸತ್ಯ ಎಂದು ಸ್ಪಷ್ಟಪಡಿಸಿದೆ. ಜನವರಿ 23 ರಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ಜನ್ಮ ಶತಮಾನೋತ್ಸವ ಅಂಗವಾಗಿ ಕೊಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ನಲ್ಲಿ ಈ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು.
ಕೆಂಪುಕೋಟೆಯ ಭಾರತೀಯ ಸರ್ವೇಕ್ಷಣಾ ಇಲಾಖೆ – ಎ.ಎಸ್.ಐ ವಸ್ತು ಸಂಗ್ರಹಾಲಯದಿಂದ ಈ ಕಲಾಕೃತಿಗಳನ್ನು ವಿಕ್ಟೋರಿಯಾ ಮೆಮೊರಿಯಲ್ ಗೆ ತರಲಾಗಿತ್ತು. ಈ ಸಂಬಂಧ ಎರಡೂ ಸಂಸ್ಥೆಗಳ ನಡುವೆ ಸೂಕ್ತ ಮಾದರಿಯಲ್ಲಿ ಎಂ.ಒ.ಯು ಮಾಡಿಕೊಳ್ಳಲಾಗಿತ್ತು. ಈ ಎಂ.ಒ.ಯು ಅವಧಿ 6 ತಿಂಗಳ ಅವಧಿಯದ್ದಾಗಿತ್ತು ಮತ್ತು ಬಳಿಕ ಎರಡು ವರ್ಷಕ್ಕೆ ಇದನ್ನು ವಿಸ್ತರಿಸಲಾಗಿತ್ತು. ಈ ಕಲಾಕೃತಿಗಳನ್ನು ಸೂಕ್ತ ಭದ್ರತೆ ಮತ್ತು ವಿಮೆ ಮೂಲಕ ಕೊಲ್ಕತ್ತಾಗೆ ರವಾನಿಸಲಾಗಿತ್ತು. ಪ್ರಾಚೀನ ವಸ್ತುಗಳು ಮತ್ತು ಪ್ರದರ್ಶನಗಳ ವಿನಿಮಯ ಪರಸ್ಪರ ವಸ್ತು ಸಂಗ್ರಹಾಲಯಗಳ ನಡುವಿನ ನಿಯಮಿತ ಕಸರತ್ತು ಆಗಿದೆ ಎಂದು ಸಚಿವಾಲಯ ಹೇಳಿದೆ. ಈ ಪ್ರಕರಣದಲ್ಲಿ ಎ.ಎಸ್.ಐ ಮತ್ತು ವಿ.ಎಂ.ಎಚ್ ಮೇಲೆ ಸಂಸ್ಕೃತಿ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣ ಹೊಂದಿದೆ.
***
(Release ID: 1730791)
Visitor Counter : 210