ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ  ಕೋವಿಡ್-19 ಲಸಿಕೆ ನೀಡುವಿಕೆಯು 31 ಕೋಟಿಯ ಮೈಲಿಗಲ್ಲನ್ನು  ದಾಟಿದೆ


ಕಳೆದ 24 ಗಂಟೆಗಳಲ್ಲಿ 61.19 ಲಕ್ಷ  ಡೋಸ್ ಲಸಿಕೆ ನೀಡಲಾಯಿತು

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 48,698 ಹೊಸ ಪ್ರಕರಣಗಳು ವರದಿಯಾಗಿವೆ

ಭಾರತದ ಸಕ್ರಿಯ ಪ್ರಕರಣಗಳ ಹೊರೆಯು ಮತ್ತಷ್ಟು 5,95,565 ಕ್ಕೆ ಇಳಿದಿದ್ದು,  86ದಿನಗಳ ನಂತರ 6 ಲಕ್ಷಕ್ಕಿಂತ ಕಡಿಮೆಯಾಗಿದೆ

ದೈನಂದಿನ ಚೇತರಿಕೆ ಪ್ರಕರಣಗಳು ಸತತ 44 ನೇ ದಿನವೂ  ದೈನಂದಿನ ಹೊಸ ಪ್ರಕರಣ ಸಂಖ್ಯೆಯನ್ನು ಮೀರಿಸಿವೆ

ಚೇತರಿಕೆಯ ದರ 96.72% ರಷ್ಟು ಹೆಚ್ಚಾಗಿದೆ

ದೈನಂದಿನ ದೃಢಪಟ್ಟ ಪ್ರಕರಣಗಳ ದರವು 2.79%ರಷ್ಟಿದೆ, ಇದು ಸತತ 19 ದಿನಗಳವರೆಗೆ 5% ಕ್ಕಿಂತ ಕಡಿಮೆಯಿದೆ

Posted On: 26 JUN 2021 10:46AM by PIB Bengaluru

ಮಹತ್ವದ ಸಾಧನೆಯಲ್ಲಿ, ಭಾರತದ  ಒಟ್ಟು ಲಸಿಕಾಕರಣವು ನಿನ್ನೆ 31 ಕೋಟಿ ಮೀರಿದೆತಾತ್ಕಾಲಿಕ ವರದಿಯ ಪ್ರಕಾರ ಇಂದು ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 31,50,45,926 ಲಸಿಕೆ ಡೋಸ್ ಗಳನ್ನು  42,00,839 ಸೆಷನ್ಗಳ ಮೂಲಕ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 61,19,169 ಲಸಿಕೆ ಡೋಸ್ ಗಳನ್ನು  ನೀಡಲಾಯಿತು.

ಅವುಗಳ ವಿವರ ಹೀಗಿದೆ:

ಎಚ್ಸಿಡಬ್ಲ್ಯೂ

1 ನೇ ಡೋಸ್

1,01,83,459

2 ನೇ ಡೋಸ್

71,75,222

ಎಫ್ಎಲ್ಡಬ್ಲ್ಯೂ

1 ನೇ ಡೋಸ್

1,74,05,275

2 ನೇ ಡೋಸ್

93,02,922

 18 - 44 ವರ್ಷದವರು

1 ನೇ ಡೋಸ್

7,91,80,154

2 ನೇ ಡೋಸ್

17,15,458

 45 ರಿಂದ 60 ವರ್ಷದವರು

1 ನೇ ಡೋಸ್

8,59,69,905

2 ನೇ ಡೋಸ್

1,40,81,556

 60 ವರ್ಷಕ್ಕಿಂತ ಮೇಲ್ಪಟ್ಟವರು

1 ನೇ ಡೋಸ್

6,70,95,979

2 ನೇ ಡೋಸ್

2,29,35,996

ಒಟ್ಟು

31,50,45,926

ಕೋವಿಡ್ 19 ಲಸಿಕಾ ಕಾರ್ಯಕ್ರಮದ ಸಾರ್ವತ್ರಿಕೀಕರಣದ ಹೊಸ ಹಂತವು ಜೂನ್ 21, 2021 ರಿಂದ ಪ್ರಾರಂಭವಾಯಿತು. ಕೇಂದ್ರ ಸರ್ಕಾರವು ಲಸಿಕೆ ನೀಡಿಕೆಯನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ ವಿಸ್ತರಿಸಲು ಬದ್ಧವಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತವು 48,698 ಹೊಸ  ಪ್ರಕರಣಗಳನ್ನು ವರದಿ ಮಾಡಿದೆ.

ಸತತ 19 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕೇಂದ್ರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ.

https://static.pib.gov.in/WriteReadData/userfiles/image/image0018DBW.jpg

ಭಾರತದಲ್ಲಿ  ಸಕ್ರಿಯ  ಪ್ರಕರಣಗಳ ಹೊರೆಯಲ್ಲಿ ಕೂಡ ನಿರಂತರವಾಗಿ ಕುಸಿತ ಕಂಡುಬರುತ್ತಿದೆ. ದೇಶದ ಸಕ್ರಿಯ ಪ್ರಕರಣಗಳ ಹೊರೆಯು  ಇಂದು  5,95,565   ರಷ್ಟಿದೆಸಕ್ರಿಯ ಪ್ರಕರಣಗಳ ಹೊರೆಯು 86 ದಿನಗಳ ನಂತರ 9 ಲಕ್ಷಕ್ಕಿಂತ ಕಡಿಮೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 17,303 ನಿವ್ವಳ ಕುಸಿತ ಕಂಡುಬಂದಿದೆ ಮತ್ತು ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ದೃಢಪಟ್ಟ ಪ್ರಕರಣಗಳ ಕೇವಲ 1.97%ರಷ್ಟು ಮಾತ್ರ ಇದೆ.

https://static.pib.gov.in/WriteReadData/userfiles/image/image002VA9R.jpg

ಕೋವಿಡ್-19 ಸೋಂಕಿನಿಂದ ಹೆಚ್ಚು ಜನರು ಚೇತರಿಸಿಕೊಳ್ಳುತ್ತಿರುವ ಕಾರಣ, ಭಾರತದ ದೈನಂದಿನ ಚೇತರಿಕೆಗಳ ಪ್ರಮಾಣವು  ಸತತ 44ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 64,818 ಗುಣಮುಖರಾದ ಪ್ರಕರಣಗಳು ವರದಿಯಾಗಿವೆ.

ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಹದಿನಾರು  ಸಾವಿರಕ್ಕಿಂತ (16,120 ) ಹೆಚ್ಚಿನ ಚೇತರಿಕೆಯ ಪ್ರಕರಣಗಳು ವರದಿಯಾಗಿದೆ.

https://static.pib.gov.in/WriteReadData/userfiles/image/image003N4R3.jpg

ಸಾಂಕ್ರಾಮಿಕದ ಆರಂಭದಿಂದಲೂ ಸೋಂಕಿತರಲ್ಲಿ  2,91,93,085 ಜನರು ಈಗಾಗಲೇ ಕೋವಿಡ್-19 ರಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ   64,818 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ದರವು 96.72%, ಆಗಿದ್ದು, ಇದು ಚೇತರಿಕೆಯ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತಿದೆ.

https://static.pib.gov.in/WriteReadData/userfiles/image/image00483NQ.jpg

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು ಕಳೆದ 24 ಗಂಟೆಗಳಲ್ಲಿ ಒಟ್ಟು 17,35,781  ಪರೀಕ್ಷೆಗಳನ್ನು ನಡೆಸಲಾಗಿದ್ದುಇಲ್ಲಿಯವರೆಗೆ  ಭಾರತದಲ್ಲಿ  39.78 ಕೋಟಿಗಿಂತಲೂ (39,95,68,448)  ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು ವಾರದ  ಪ್ರಕರಣದ ದೃಢಪಟ್ಟ ಪ್ರಕರಣಗಳಲ್ಲಿ ನಿರಂತರ ಕುಸಿತವನ್ನು ಗಮನಿಸಲಾಗಿದೆವಾರದ  ದೃಢಪಟ್ಟ ಪ್ರಕರಣಗಳ ದರವು ಪ್ರಸ್ತುತ 2.97% ರಷ್ಟಿದ್ದರೆ, ದೈನಂದಿನ ದೃಢಪಟ್ಟ ಪ್ರಕರಣಗಳ ದರವು ಇಂದು 2.79% ರಷ್ಟಿದೆ. ಸತತ 19 ದಿನಗಳಿಂದ ಇದು 5% ಕ್ಕಿಂತ ಕಡಿಮೆಯಿದೆ.

https://static.pib.gov.in/WriteReadData/userfiles/image/image005WARV.jpg

***


(Release ID: 1730510) Visitor Counter : 299