ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದ ಕೋವಿಡ್ ಲಸಿಕೆ ನೀಡುವಿಕೆಯು 30 ಕೋಟಿಯನ್ನು ದಾಟಿದೆ


ಕಳೆದ 24 ಗಂಟೆಗಳಲ್ಲಿ 64.89 ಲಕ್ಷ ಲಸಿಕೆ ಡೋಸುಗಳನ್ನು ನೀಡಲಾಗಿದೆ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ  54,069 ಹೊಸ ಪ್ರಕರಣಗಳು ವರದಿಯಾಗಿವೆ

ಭಾರತದ ಸಕ್ರಿಯ ಪ್ರಕರಣಗಳ ಹೊರೆಯು 6,27,057ಕ್ಕೆ ಮತ್ತಷ್ಟು ಇಳಿದಿದೆ

ಸತತ 42 ನೇ ದಿನವೂ ದೈನಂದಿನ ಚೇತರಿಕೆಯ ಪ್ರಮಾಣವು  ದೈನಂದಿನ ಹೊಸ ಪ್ರಕರಣಗಳಿಗಿಂತ ಹೆಚ್ಚಾಗಿದೆ

ಚೇತರಿಕೆಯ ದರ 96.61% ರಷ್ಟು  ಹೆಚ್ಚಾಗಿದೆ

ದೈನಂದಿನ ದೃಢಪಟ್ಟ ಪ್ರಕರಣಗಳ ದರವು 2.91% ರಷ್ಟಿದೆ, ಇದು ಸತತ 17 ದಿನಗಳವರೆಗೆ 5% ಕ್ಕಿಂತ ಕಡಿಮೆಯಿದೆ

Posted On: 24 JUN 2021 11:06AM by PIB Bengaluru

ಸಾಧನೆಯ ಮಹತ್ವದ ಘಟ್ಟದಲ್ಲಿ, ಭಾರತದ ಒಟ್ಟು ಲಸಿಕೆ ನೀಡುವಿಕೆ ನಿನ್ನೆ 30 ಕೋಟಿ ಮೀರಿದೆ. ತಾತ್ಕಾಲಿಕ ವರದಿಯ ಪ್ರಕಾರ ಇಂದು ಬೆಳಗ್ಗೆ 7 ಗಂಟೆಯವರೆಗೆ ಒಟ್ಟು 30,16,26,028 ಲಸಿಕೆ ಡೋಸ್ ಗಳನ್ನು 40,45,516 ಸೆಷನ್ ಗಳ ಮೂಲಕ ನೀಡಲಾಗಿದೆ.  ಕಳೆದ 24 ಗಂಟೆಗಳಲ್ಲಿ 64,89,599 ಲಸಿಕೆ ಡೋಸ್ ಗಳನ್ನು ನೀಡಲಾಯಿತು.

ಅವುಗಳ ವಿವರ ಹೀಗಿದೆ:

ಎಚ್ಸಿಡಬ್ಲ್ಯೂ

1 ನೇ ಡೋಸ್

1,01,58,915

2 ನೇ ಡೋಸ್

71,32,888

ಎಫ್ಎಲ್ಡಬ್ಲ್ಯೂ

1 ನೇ ಡೋಸ್

1,73,03,658

2 ನೇ ಡೋಸ್

91,85,106

 18 - 44 ವರ್ಷದವರು

1 ನೇ ಡೋಸ್

7,06,62,665

2 ನೇ ಡೋಸ್

15,02,078

 45 ರಿಂದ 60 ವರ್ಷದವರು

1 ನೇ ಡೋಸ್

8,39,38,683

2 ನೇ ಡೋಸ್

1,33,51,488

60 ವರ್ಷಕ್ಕಿಂತ ಮೇಲ್ಪಟ್ಟವರು

1 ನೇ ಡೋಸ್

6,61,61,004

2 ನೇ ಡೋಸ್

2,22,29,543

ಒಟ್ಟು

30,16,26,028

ಕೋವಿಡ್ ಲಸಿಕೆ ನೀಡಿಕೆಯ ಸಾರ್ವತ್ರೀಕರಣದ ಹೊಸ ಹಂತವು 2021 ರ ಜೂನ್ 21 ರಿಂದ ಪ್ರಾರಂಭವಾಯಿತು. ಕೇಂದ್ರ ಸರ್ಕಾರವು ಲಸಿಕಾ ಕಾರ್ಯಕ್ರಮದ ವೇಗವನ್ನು ಹೆಚ್ಚಿಸಲು ಮತ್ತು ಅದರ  ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಬದ್ಧವಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 54,069 ಹೊಸ ಪ್ರಕರಣಗಳು ವರದಿಯಾಗಿವೆ.

ಸತತ 17 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕೇಂದ್ರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ.

ದೈನಂದಿನ ಹೊಸ ಕೋವಿಡ್ ಪ್ರಕರಣಗಳಲ್ಲಿ ಭಾರತದಲ್ಲಿ ನಿರಂತರ ಇಳಿಮುಖವು ಕಾಣುತ್ತಿದೆ. ದೇಶದಲ್ಲಿ ಇಂದಿನ ಸಕ್ರಿಯ ಪ್ರಕರಣಗಳ ಹೊರೆಯು 6,27,057 ಆಗಿದೆ.

ಕಳೆದ 24 ಗಂಟೆಗಳಲ್ಲಿ 16,137ರ ನಿವ್ವಳ ಕುಸಿತ ಕಂಡುಬಂದಿದೆ ಮತ್ತು ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ದೃಢಪಟ್ಟ ಪ್ರಕರಣಗಳ ಕೇವಲ 2.08%ರಷ್ಟು ಮಾತ್ರ ಇದೆ.

ಕೋವಿಡ್-19 ಸೋಂಕಿನಿಂದ ಹೆಚ್ಚಿನ ಜನರು ಚೇತರಿಸಿಕೊಳ್ಳುತ್ತಿರುವುದರಿಂದ, ಭಾರತದ ದೈನಂದಿನ ಚೇತರಿಕೆ ಪ್ರಮಾಣ  ಸತತ 42 ದಿನಗಳವರೆಗೆ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 68,885  ಗುಣಮುಖರಾದ ಪ್ರಕರಣಗಳು ವರದಿಯಾಗಿವೆ.

ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ 14,000 (14,816)ಕ್ಕಿಂತಲೂ ಹೆಚ್ಚು  ಚೇತರಿಕೆಯ ಪ್ರಕರಣಗಳು ವರದಿಯಾಗಿವೆ.

ಸಾಂಕ್ರಾಮಿಕ ರೋಗದ ಆರಂಭದಿಂದಲೂ ಸೋಂಕಿತರಲ್ಲಿ 2,90,63,740 ಜನರು ಈಗಾಗಲೇ ಕೋವಿಡ್-19 ರಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ   68,885 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ದರವು 96.61% ಆಗಿದ್ದು, ಇದು ಚೇತರಿಕೆಯ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು  18,59,469 ಪರೀಕ್ಷೆಗಳನ್ನು ನಡೆಸಲಾಗಿದ್ದು,  ಇಲ್ಲಿಯವರೆಗೆ  ಭಾರತದಲ್ಲಿ 39.78 ಕೋಟಿ (39,78,32,667) ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷೆಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು ವಾರದ  ಪ್ರಕರಣದ ದೃಢಪಟ್ಟ ಪ್ರಕರಣಗಳಲ್ಲಿ ನಿರಂತರ ಕುಸಿತವನ್ನು ಗಮನಿಸಲಾಗಿದೆ.  ವಾರದ  ದೃಢಪಟ್ಟ ಪ್ರಕರಣಗಳ ದರವು ಪ್ರಸ್ತುತ 3.04% ರಷ್ಟಿದ್ದರೆ, ದೈನಂದಿನ ದೃಢಪಟ್ಟ ಪ್ರಕರಣಗಳ ದರವು ಇಂದು 2.91% ರಷ್ಟಿದೆ. ಸತತ 17 ದಿನಗಳಿಂದ ಇದು 5% ಕ್ಕಿಂತ ಕಡಿಮೆಯಾಗಿದೆ.

***


(Release ID: 1730110) Visitor Counter : 248