ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಜಗನ್ನಾಥರಾವ್ ಜೋಶಿ ಜೀ ಅವರಿಗೆ 101 ನೇ ಜನ್ಮದಿನದಂದು ಪ್ರಧಾನ ಮಂತ್ರಿ ಅವರಿಂದ ಗೌರವಾರ್ಪಣೆ.

Posted On: 23 JUN 2021 4:44PM by PIB Bengaluru

ಭಾರತೀಯ ಜನ ಸಂಘ ಮತ್ತು ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಶ್ರೀ ಜಗನ್ನಾಥರಾವ್ ಜೋಶೀ ಜೀ ಅವರಿಗೆ,  ಅವರ 101 ನೇ ಜನ್ಮವರ್ಷಾಚರಣೆ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಗೌರವಾರ್ಪಣೆ ಮಾಡಿದರು. 

ಟ್ವೀಟೊಂದರಲ್ಲಿ ಪ್ರಧಾನ ಮಂತ್ರಿ ಅವರು: 
“ಜನತೆಯೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡು ಕೆಲಸ ಮಾಡಿದ ಮತ್ತು ಗಮನಾರ್ಹ ಸಂಘಟಕ ಶ್ರೀ ಜಗನ್ನಾಥರಾವ್ ಜೋಶೀ ಜೀ ಅವರಿಗೆ ಅವರ 101 ನೇ ಜನ್ಮ ವರ್ಷಾಚರಣೆ ಅಂಗವಾಗಿ ನಾನು ಗೌರವಾರ್ಪಣೆ ಮಾಡುತ್ತೇನೆ. ಜನ ಸಂಘವನ್ನು ಮತ್ತು ಬಿ.ಜೆ.ಪಿ.ಯನ್ನು ಬಲಿಷ್ಟಗೊಳಿಸುವಲ್ಲಿ ಅವರ ಪಾತ್ರ ಜನಜನಿತವಾದುದು. ಅವರು ಶ್ರೇಷ್ಠ ವಿದ್ವಾಂಸ ಮತ್ತು ಬುದ್ಧಿಜೀವಿ ಆಗಿದ್ದರು” ಎಂದು ಹೇಳಿದ್ದಾರೆ.

 

***
 


(Release ID: 1729788) Visitor Counter : 203