ಸಂಸ್ಕೃತಿ ಸಚಿವಾಲಯ

ಅಂತಾರಾಷ್ಟ್ರೀಯ ಯೋಗ ದಿನದಂದು “ಯೋಗ ಒಂದು ಭಾರತೀಯ ಪರಂಪರೆ” ವಿಷಯದಡಿ ದೇಶಾದ್ಯಂತ 75 ಪಾರಂಪರಿಕ ಸ್ಥಳಗಳಲ್ಲಿ ಯೋಗ ಕಾರ್ಯಕ್ರಮಗಳ ಆಯೋಜನೆ


ಸಂತಸ ಮತ್ತು ಆರೋಗ್ಯಪೂರ್ಣ ಬದುಕಿಗಾಗಿ ಯುವ ಸಮೂಹ ಯೋಗವನ್ನು ಅಳವಡಿಸಿಕೊಳ್ಳುವಂತೆ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಆಗ್ರಹ

Posted On: 21 JUN 2021 1:04PM by PIB Bengaluru

7ನೇ ಅಂತಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ [ಸ್ವತಂತ್ರ್ಯ ನಿರ್ವಹಣೆ] ಸಚಿವ ಶ‍್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಅವರು, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು, ಯೋಗ ಪರಿಣತರು ಮತ್ತು ಯೋಗ ಆಸಕ್ತರೊಂದಿಗೆ ಯೋಗ ಪ್ರದರ್ಶನ ಮಾಡಿದರು.

ಆಜಾ಼ದಿ ಕಿ ಅಮೃತ್ ಮಹೋತ್ಸವ್ ಅಭಿಯಾನದಲ್ಲಿ ಕೇಂದ್ರ ಸಚಿವರುಯೋಗ ಒಂದು ಭಾರತೀಯ ಪರಂಪರೆ”  ಎಂಬ ಆಂದೋಲನದ ನೇತೃತ್ವ ವಹಿಸಿದ್ದಾರೆ. 75 ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ 75 ಪಾರಂಪರಿಕ ಸ್ಥಳಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಚಿವಾಲಯದ ಎಲ್ಲಾ ಅಂಗಗಳು, ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಂಡಿದ್ದವು

ಪ್ರಸ್ತುತ ಸಾಂಕ್ರಾಮಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರತಿಯೊಂದು ಸ್ಥಳದ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಯನ್ನು 20 ಕ್ಕೆ ಸೀಮಿತಗೊಳಿಸಲಾಗಿತ್ತು. ಯೋಗ ಪ್ರದರ್ಶನಕ್ಕೂ ಮುನ್ನ ಕೇಂದ್ರ ಸಚಿವರು ಮತ್ತು ಪಾಲ್ಗೊಂಡಿದ್ದವರು ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ನೇರ ಪ್ರಸಾರ ವೀಕ್ಷಿಸಿದರು.

ಯೋಗ ಕಾರ್ಯಕ್ರಮ ಸಂದರ್ಭದಲ್ಲಿ ಕೆಂಪು ಕೋಟೆ ಬಳಿ ಸುದ್ದಿಗಾರರ ಜತೆ ಮಾತನಾಡಿದ ಶ್ರೀ ಪ್ರಹಲ್ಲಾದ್ ಸಿಂಗ್ ಪಟೇಲ್, ಯೋಗ ನಮ್ಮ ಪರಮೋಚ್ಚ ಪರಂಪರೆಯಾಗಿದೆ ಎಂದರು.

ಜಗತ್ತಿನಾದ್ಯಂತ ಆರೋಗ್ಯ ಮಂತ್ರವನ್ನು ಜನಪ್ರಿಯಗೊಳಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಇದರ ಶ್ರೇಯಸ್ಸು ದೊರೆಯಬೇಕು ಮತ್ತು ಇದರ ಫಲವಾಗಿ ಇಂದು ಇಡೀ ಜಗತ್ತು ಅಂತಾರಾಷ್ಟ್ರೀಯ ಯೋಗ ದಿನ ಆಚರಿಸುತ್ತಿದೆ ಮತ್ತು ಜನತೆ ಇದನ್ನು ಜೀವನದ ಭಾಗವಾಗಿ ಮಾಡಿಕೊಂಡಿದ್ದಾರೆ ಎಂದರು

75 ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ಆಜಾ಼ದಿ ಕಾ ಅಮೃತ್ ಮಹೋತ್ಸವ್ ಭಾಗವಾಗಿ 2021 ಐಡಿವೈ ಅನ್ನು ಆಚರಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ದೇಶದ 75 ಪಾರಂಪರಿಕ ಸ್ಥಳಗಳಲ್ಲಿ ಯೋಗ ಪ್ರದರ್ಶನ ಆಯೋಜಿಸಲಾಗಿದೆ. ಸಂತಸ ಮತ್ತು ಆರೋಗ್ಯಪೂರ್ಣ ಬದುಕಿಗಾಗಿ ಯುವ ಸಮೂಹ ಯೋಗವನ್ನು ಅಳವಡಿಸಿಕೊಳ್ಳುವಂತೆ ಶ್ರೀ ಪ್ರಹ್ಲಾದ್ ಸಿಂಗ್ ಪಟೇಲ್ ಆಗ್ರಹಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರು ಹೇಳಿದಂತೆ ಜಗತ್ತಿದೆ ಇಂದು ಎಂ-ಯೋಗ ಆ್ಯಪ್ ದೊರೆಯುತ್ತಿದ್ದು, ಇದರಿಂದ ಸಾಮಾನ್ಯ ಯೋಗ ಶಿಷ್ಟಾಚಾರದಡಿ ಹಲವು ಭಾಷೆಗಳಲ್ಲಿ ಯೋಗ ತರಬೇತಿ ಕುರಿತು ಹಲವಾರು ವಿಡಿಯೋಗಳು ದೊರೆಯುತ್ತಿವೆ. ಎಂ- ಯೋಗ ಆಪ್ ನಿಂದ ಜಗತ್ತಿನ ಜನತೆ ಆರೋಗ್ಯ ಮತ್ತು ಸಂತಸದ ಬದುಕು ಸಾಗಿಸಬಹುದಾಗಿದೆ ಎಂದರು.

ಕೆಂಫು ಕೋಟೆಯಲ್ಲಿ ಆಚಾರ್ಯ ಪ್ರತಿಷ್ಠಾ ಅವರ ಅವರ ಮಾರ್ಗದರ್ಶನದಲ್ಲಿ ಯೋಗ ಶಿಷ್ಟಾಚಾರದಡಿ ಯೋಗ ಪ್ರದರ್ಶನ ಏರ್ಪಡಿಸಲಾಗಿತ್ತು. ಕೇಂದ್ರ ಸರ್ಕಾರದ [ಸಂಸ್ಕೃತಿ] ಕಾರ್ಯದರ್ಶಿ ಶ್ರೀ ರಾಘವೇಂದ್ರ, ಭಾರತ ಸರ್ಕಾರದ [ಪ್ರವಾಸೋದ್ಯಮ] ಕಾರ್ಯದರ್ಶಿ ಅರವಿಂದ್ ಸಿಂಗ್ ಮತ್ತು ಸಚಿವಾಲಯದ ಇತರೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.  

ಪಾರಂಪರಿಕ ತಾಣಗಳಾದ ಎಲ್ಲೋರ ಗುಹೆಗಳು [ಔರಂಗಾಬಾದ್], ನಳಂದ [ಬಿಹಾರ], ಸಬರಮತಿ ಆಶ್ರಮ [ಗುಜರಾತ್], ಹಂಪಿ [ಕರ್ನಾಟಕ], ಲದ್ದಾಕ್ ಶಾಂತಿ ಸ್ಥೂಪ [ಲೆಹ್], ಸಂಚಿ ಸ್ಥೂಪ [ವಿದಿಶ], ಶೀಶ್ ಮಹಲ್ [ಪಾಟಿಯಾಲ], ರಾಜೀವ್ ಲೋಚನ ದೇವಸ್ಥಾನ [ಚತ್ತೀಸ್ ಘರ್], ಬೊಮ್ದಿಲ [ಅರುಣಾಚಲ ಪ್ರದೇಶ್] ಮತ್ತಿತರ ಸ್ಥಳಗಳಲ್ಲಿ ಸಂಸ್ಕೃತಿ ಸಚಿವಾಲಯ ಯೋಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಸಿತ್ತು.

ಶೀಶ್ ಮಹಲ್, ಪಾಟಿಯಾಲ

ವಾರಂಗಲ್ ಕೋಟೆ, ವಾರಂಗಲ್

ಎಲ್ಲೋರ ಗುಹೆಗಳು, ಎಲ್ಲೋ, ಔರಂಗಾಬಾದ್

ಗಂಗೈಕೊಂಡ, ಚೋಳಪುರಂ

ಬೊಮ್ದಿಲ [ಅರುಣಾಚಲ ಪ್ರದೇಶ]

ರಾಜೀವ್ ಲೋಚನ ದೇವಸ್ಥಾನ, ಚತ್ತೀಸ್ ಘರ್

ಹಂಪಿ ಸರ್ಕಲ್, ಕರ್ನಾಟಕ

***


(Release ID: 1729074) Visitor Counter : 200