ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವದ ಪ್ರತಿ ಮೂಲೆಗೂ ಯೋಗ ತಲುಪುವುದನ್ನು ಖಾತ್ರಿ ಪಡಿಸಿಕೊಳ್ಳುವ ಪ್ರಯತ್ನವನ್ನು ನಾವೆಲ್ಲರೂ ಮಾಡಬೇಕು: ಪ್ರಧಾನಮಂತ್ರಿ ಮೋದಿ

Posted On: 21 JUN 2021 8:11AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯೋಗ ಆಚಾರ್ಯರು, ಮತ್ತು ಯೋಗ ಪ್ರಚಾರಕರು ಮತ್ತು ಯೋಗದೊಂದಿಗೆ ನಂಟು ಹೊಂದಿರುವ ಪ್ರತಿಯೊಬ್ಬರೂ ವಿಶ್ವದ ಪ್ರತಿ ಮೂಲೆಗೂ ಯೋಗವನ್ನು ತಲುಪಿಸುವುದನ್ನು ಖಾತ್ರಿ ಪಡೆಸಲು ಶ್ರಮಿಸಬೇಕು ಎಂದು ಕರೆ ನೀಡಿದ್ದಾರೆ. ಏಳನೇ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು

ಗೀತೆಯ ಉಲ್ಲೇಖ ಮಾಡಿದ ಪ್ರಧಾನಮಂತ್ರಿಯವರು, ಯೋಗದಲ್ಲಿ ಎಲ್ಲರಿಗೂ ಪರಿಹಾರವಿದ್ದು, ನಾವೆಲ್ಲರೂ ಯೋಗದ ಸಂಘಟಿತ ಪಯಣದಲ್ಲಿ ಮುಂದೆ ಸಾಗುವುದನ್ನು ಮುಂದುವರಿಸುವ ಅಗತ್ಯವಿದೆ ಎಂದರು. ನರಳಾಟದಿಂದ ಯೋಗ ಎಲ್ಲರಿಗೂ ಮುಕ್ತಿ ನೀಡುತ್ತದೆ ಮತ್ತು ಪ್ರತಿಯೊಬ್ಬರಿಗೂ ನೆರವಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಯೋಗದ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಆಸಕ್ತಿಯನ್ನು ಗಮನಿಸಿದ ಪ್ರಧಾನಮಂತ್ರಿಯವರು,  ಪ್ರತಿ ವ್ಯಕ್ತಿಯೂ ಯೋಗದ ಬುನಾದಿ ಮತ್ತು ಸಾರವನ್ನು ಹಾಗೆಯೇ ಉಳಿಸಿಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಬ್ಬರಿಗೂ ಯೋಗವನ್ನು ಕೈಗೊಳ್ಳುವಂತೆ ಮಾಡುವ ಕಾರ್ಯದಲ್ಲಿ ಯೋಗ ಆಚಾರ್ಯರು ಮತ್ತು ನಾವೆಲ್ಲರೂ ಸಹಕರಿಸಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

***


(Release ID: 1728958) Visitor Counter : 235