ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಟೋಕಿಯೋ ಒಲಿಂಪಿಕ್ಸ್ ಗೆ ಸಚಿವರ ನಿಯೋಗವನ್ನು ನಿಯೋಜಿಸುವುದಿಲ್ಲ


ಸಾರಿಗೆ ನೆರವು ನೀಡಲು ಟೋಕಿಯೋದ ಭಾರತೀಯ ರಾಯಭಾರ ಕಚೇರಿಯಲ್ಲಿ ಒಲಿಂಪಿಕ್ಸ್ ಮಿಷನ್ ಕೋಶ ಸ್ಥಾಪನೆ

Posted On: 11 JUN 2021 2:59PM by PIB Bengaluru

ಟೋಕಿಯೋ ಒಲಿಂಪಿಕ್ಸ್ 2020ರಲ್ಲಿ ಭಾಗವಹಿಸಲಿರುವ ಭಾರತೀಯ ತಂಡ ಮತ್ತು ಕ್ರೀಡಾಪಟುಗಳ ಮೇಲೆ ದಿನದ 24 ಗಂಟೆಯೂ ನಿಗಾ ವಹಿಸಲಾಗುವುದು. ಅಥ್ಲೀಟ್ ಗಳಿಂದ ಗರಿಷ್ಠ ಸಾಧನೆಯನ್ನು ಪಡೆಯಲು ಸಚಿವಾಲಯ ತರಬೇತುದಾರರು, ವೈದ್ಯರು, ಫಿಸಿಯೋಥೆರಪಿಸ್ಟ್ ಸೇರಿದಂತೆ ಗರಿಷ್ಠ ಪ್ರಮಾಣದ ಪೂರಕ ಸಿಬ್ಬಂದಿಯನ್ನು ನಿಯೋಜಿಸಲು ನಿರ್ಧರಿಸಿದೆ.  ಅಥ್ಲೀಟ್ ಗಳು, ತರಬೇತುದಾರರು ಮತ್ತು ಪೂರಕ ಸಿಬ್ಬಂದಿಯನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳ ಭೇಟಿಗೆ ಶಿಷ್ಟಾಚಾರದ ಅಗತ್ಯವಿದ್ದರೆ ಮಾತ್ರ ಅವಕಾಶ ನೀಡಲಾಗುವುದು. ಈ ವ್ಯವಸ್ಥೆಯ ಹಿನ್ನೆಲೆಯಲ್ಲಿ ಟೋಕಿಯೋ ಒಲಿಂಪಿಕ್ಸ್ ಗೆ ಯಾವುದೇ ಸಚಿವರ ನಿಯೋಗವನ್ನು ನಿಯೋಜಿಸದಿರಲು ನಿರ್ಧರಿಸಲಾಗಿದೆ.  ಟೋಕಿಯೋದಲ್ಲಿನ ರಾಯಭಾರ ಕಚೇರಿಯಲ್ಲಿ ಒಲಿಂಪಿಕ್ ಮಿಷನ್ ಕೋಶವನ್ನು ಸ್ಥಾಪಿಸಲಾಗುವುದು, ಅದು ಭಾರತದಿಂದ ಟೋಕಿಯೋಗೆ ಆಗಮಿಸುವವರಿಗೆ ಸಾರಿಗೆ ನೆರವು ಒದಗಿಸುವ ಏಕಗವಾಕ್ಷಿ ವಿಧಾನವಾಗಿ ಕಾರ್ಯನಿರ್ವಹಿಸುವುದಲ್ಲದೆ, ಯಾವುದೇ ಅಡಚಣೆಯಿಲ್ಲದೆ ನಿರಂತರವಾಗಿ ಸಾಧ್ಯವಾದ ಎಲ್ಲ ನೆರವು ನೀಡಲು ಅನುಕೂಲವಾಗುತ್ತದೆ.

*******



(Release ID: 1726347) Visitor Counter : 144