ಪ್ರಧಾನ ಮಂತ್ರಿಯವರ ಕಛೇರಿ

ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಪರಿಸರವಾದಿ ಪ್ರೊ. ರಾಧಾಮೋಹನ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 11 JUN 2021 11:00AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಪರಿಸರವಾದಿ ಪ್ರೊ. ರಾಧಾಮೋಹನ್ ಜಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ ಸೂಚಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರೊ. ರಾಧಾಮೋಹನ್ ಜಿ ಅವರು ಕೃಷಿಯ ಬಗ್ಗೆ, ವಿಶೇಷವಾಗಿ ಸುಸ್ಥಿರ ಮತ್ತು ಸಾವಯವ ಪದ್ಧತಿಗಳ ಅಳವಡಿಕೆಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು. ಅರ್ಥಿಕತೆ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಅಪಾರ ಜ್ಞಾನಕ್ಕಾಗಿ  ಅವರನ್ನು ಗೌರವಿಸಲಾಗುತ್ತಿತ್ತು. ಅವರ ನಿಧನ ದುಃಖ ತಂದಿದೆ. ಅವರ ಕುಟುಂಬ ಮತ್ತು ಅವರ ಅನುಯಾಯಿಗಳಿಗೆ ನನ್ನ ಸಂತಾಪಗಳು, ಓಂ ಶಾಂತಿಎಂದು ಹೇಳಿದ್ದಾರೆ.

***


(रिलीज़ आईडी: 1726156) आगंतुक पटल : 216
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu