ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ʻಉನ್ನತ ಶಿಕ್ಷಣ ಕುರಿತ ಅಖಿಲ ಭಾರತ ಸಮೀಕ್ಷಾ ವರದಿ (ಎಐಎಸ್ಹೆಚ್‌ಇ) - 2019-20ʼ ಬಿಡುಗಡೆಗೆ ಕೇಂದ್ರ ಶಿಕ್ಷಣ ಸಚಿವರಿಂದ ಅನುಮೋದನೆ


ಉನ್ನತ ಶಿಕ್ಷಣಕ್ಕೆ ಸರಕಾರ ನಿರಂತರ ಒತ್ತು ನೀಡುತ್ತಿರುವುದನ್ನು ವರದಿ ಸೂಚಿಸುತ್ತದೆ

2015-16ರಿಂದ 2019-20ರ ನಡುವಿನ ಅವಧಿಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಶೇ.11.4ರಷ್ಟು ಹೆಚ್ಚಳವಾಗಿದೆ

2015-16ರಿಂದ 2019-20ರ ಅವಧಿಯಲ್ಲಿ ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ದಾಖಲಾತಿ  18.2% ಹೆಚ್ಚಳವಾಗಿರುವುದನ್ನು ವರದಿಯು ಪ್ರತಿಫಲಿಸಿದೆ

2019-20ರಲ್ಲಿ ಉನ್ನತ ಶಿಕ್ಷಣದಲ್ಲಿ ಸರಾಸರಿ ದಾಖಲಾತಿ ಅನುಪಾತ (ಜಿಇಆರ್) ಶೇ.27.1 ಆಗಿದೆ

Posted On: 10 JUN 2021 2:14PM by PIB Bengaluru

ʻಉನ್ನತ ಶಿಕ್ಷಣ ಕುರಿತ ಅಖಿಲ ಭಾರತ ಸಮೀಕ್ಷಾ ವರದಿ-2019-20ʼ ಬಿಡುಗಡೆಗೆ ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ 'ನಿಶಾಂಕ್' ಅವರು ಇಂದು ಅನುಮೋದನೆ ನೀಡಿದ್ದಾರೆ. ವರದಿಯು ದೇಶದ ಉನ್ನತ ಶಿಕ್ಷಣದ ಪ್ರಸ್ತುತ ಸ್ಥಿತಿಗತಿಗೆ ಸಂಬಂಧಿಸಿದಂತೆ ಪ್ರಮುಖ ಕಾರ್ಯಕ್ಷಮತೆಯ ಸೂಚ್ಯಂಕಗಳನ್ನು ಒದಗಿಸುತ್ತದೆ.

 

2015-16ರಿಂದ 2019-20ರವರೆಗಿನ ಕಳೆದ ಐದು ವರ್ಷಗಳ ಅವಧಿಯಲ್ಲಿವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇ.11.4ರಷ್ಟು ಹೆಚ್ಚಳವಾಗಿದೆ ಎಂದು ಶ್ರೀ ಪೋಖ್ರಿಯಾಲ್ ಅವರು ಹೇಳಿದರು ಅವಧಿಯಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳಾ ದಾಖಲಾತಿಯಲ್ಲಿ ಶೇ. 18.2ರಷ್ಟು ಏರಿಕೆಯಾಗಿದೆ. ಉನ್ನತ ಶಿಕ್ಷಣದಲ್ಲಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ತೊಡಗಿಕೊಳ್ಳುವಿಕೆ ಹೆಚ್ಚಾಗಿರುವುದು ವರದಿಯಲ್ಲಿ ಕಂಡು ಬಂದಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರಕಾರವು ಬಾಲಕಿಯರ ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ನಿರಂತರ ಗಮನ ಹರಿಸುತ್ತಿರುವುದನ್ನು ಅಂಶವು ಪ್ರತಿಫಲಿಸುತ್ತದೆ ಎಂದು ಸಚಿವರು ಒತ್ತಿ ಹೇಳಿದರು.

ಸಹಾಯಕ ಸಚಿವ ಶ್ರೀ ಸಂಜಯ್ ಧೋತ್ರೆ ಅವರು " ವರದಿಯಲ್ಲಿ ಪ್ರಕಟವಾದ ಫಲಿತಾಂಶಗಳು, ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಳವಡಿಸಿಕೊಂಡಿರುವ ನೀತಿಗಳ ಯಶಸ್ಸಿನ ಸೂಚಕಗಳಾಗಿವೆ. ದೇಶದ ಉನ್ನತ ಶಿಕ್ಷಣದ ಸ್ಥಿತಿಗತಿಯನ್ನು ಮತ್ತಷ್ಟು ಸುಧಾರಿಸಲು ವರದಿಯು ನಮ್ಮ ನೀತಿ ನಿರೂಪಕರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ." ಎಂದರು.

ಉನ್ನತ ಶಿಕ್ಷಣ ಕಾರ್ಯದರ್ಶಿ ಶ್ರೀ ಅಮಿತ್ ಖರೆ ಅವರು, “ ವರದಿಯು ಶಿಕ್ಷಣ ಇಲಾಖೆಯು ವಾರ್ಷಿಕವಾಗಿ ಬಿಡುಗಡೆಗೊಳಿಸುತ್ತಿರುವ ʻಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆʼ (ಎಐಎಸ್ ಹೆಚ್) ಸರಣಿಯಲ್ಲಿ 10ನೇ ವರದಿಯಾಗಿದೆ ಎಂದು ಹೇಳಿದರು. ದಾಖಲಾತಿ, ಶಿಕ್ಷಣ ಸಂಸ್ಥೆಗಳ ಸಂಖ್ಯೆ ಮತ್ತು ಲಿಂಗ ಸಮಾನತೆಯಲ್ಲಿ ನಿರಂತರ ಏರಿಕೆಯು ʻರಾಷ್ಟ್ರೀಯ ಶಿಕ್ಷಣ ನೀತಿ-2020ʼ ಹಿನ್ನೆಲೆಯಲ್ಲಿ ಶಿಕ್ಷಣದ ಲಭ್ಯತೆ, ಸಮಾನತೆ ಮತ್ತು ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಕೈಗೊಂಡ ಪ್ರಮುಖ ಉಪಕ್ರಮದ ಭಾಗವಾಗಿದೆ,ʼʼ ಎಂದು ಅವರು ಹೇಳಿದರು.

ʻಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷಾ ವರದಿ-2019-20ʼ ಮುಖ್ಯಾಂಶಗಳು:

1. ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿಯು 2018-19ರಲ್ಲಿದ್ದ 3.74 ಕೋಟಿಗೆ ಹೋಲಿಸಿದರೆ 2019-20ರಲ್ಲಿ 3.85 ಕೋಟಿಗೆ ಏರಿಕೆಯಾಗಿದ್ದು, 11.36 ಲಕ್ಷ (3.04%) ಬೆಳವಣಿಗೆ ದಾಖಲಾಗಿದೆ. 2014-15ರಲ್ಲಿ ಒಟ್ಟು ದಾಖಲಾತಿ 3.42 ಕೋಟಿ ಇತ್ತು.

2. ಉನ್ನತ ಶಿಕ್ಷಣಕ್ಕೆ ದಾಖಲಾದ ಅರ್ಹ ವಯೋಮಾನದ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣವನ್ನು ಸೂಚಿಸುವ ಒಟ್ಟು ದಾಖಲಾತಿ ಅನುಪಾತವು(ಜಿಇಆರ್‌) 2019-20ರಲ್ಲಿ ಶೇ. 27.1ರಷ್ಟಿದೆ. ಪ್ರಮಾಣವು 2018-19ರಲ್ಲಿ 26.3% ಮತ್ತು 2014-2015ರಲ್ಲಿ 24.3% ರಷ್ಟಿತ್ತು.

3. ಉನ್ನತ ಶಿಕ್ಷಣದಲ್ಲಿ ಲಿಂಗ ಸಮಾನತೆ ಸೂಚ್ಯಂಕವು (ಜಿಪಿಐ2018-19ರಲ್ಲಿದ್ದ 1.00ಕ್ಕೆ ಹೋಲಿಸಿದರೆ, 2019-20ರಲ್ಲಿ 1.01ರಷ್ಟಿದೆ. ಹೆಚ್ಚಳವು ಅರ್ಹ ವಯಸ್ಸಿನ ಮಹಿಳೆಯರಿಗೆ ಉನ್ನತ ಶಿಕ್ಷಣ ಪ್ರವೇಶದಲ್ಲಿ ಸಾಪೇಕ್ಷ ಸುಧಾರಣೆಯನ್ನು ಸೂಚಿಸುತ್ತದೆ.

4. 2019-20ರಲ್ಲಿ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿ ಶಿಕ್ಷಕರ ಅನುಪಾತ 26 ರಷ್ಟಿದೆ.

2019-20ರಲ್ಲಿ: ವಿಶ್ವವಿದ್ಯಾಲಯಗಳು: 1,043(2%); ಕಾಲೇಜುಗಳು: 42,343(77%) ಮತ್ತು ಸ್ವಾಯತ್ತ ಸಂಸ್ಥೆಗಳು: 11,779(21%).

6. ಪದವಿ ಪೂರ್ವ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ 3.38 ಕೋಟಿ ವಿದ್ಯಾರ್ಥಿಗಳು ವಿವಿಧ ಶೈಕ್ಷಣಿಕ ಕೋರ್ಸ್ಗಳಿಗೆ ದಾಖಲಾಗಿದ್ದಾರೆ ಪೈಕಿ, ಸುಮಾರು 85% (2.85 ಕೋಟಿ) ವಿದ್ಯಾರ್ಥಿಗಳು ಮಾನವಿಕ, ವಿಜ್ಞಾನ, ವಾಣಿಜ್ಯ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ವೈದ್ಯಕೀಯ ವಿಜ್ಞಾನ ಮತ್ತು ಐಟಿ ಹಾಗೂ ಐಟಿ ಕಂಪ್ಯೂಟರ್ ನಂತಹ ಆರು ಪ್ರಮುಖ ವಿಭಾಗಗಳಿಗೆ ದಾಖಲಾಗಿದ್ದಾರೆ.

7. 2014-15ರಲ್ಲಿ 1.17 ಲಕ್ಷ  ಇದ್ದ ಪಿಎಚ್‌.ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ  2019-20ರಲ್ಲಿ 2.03 ಲಕ್ಷಕ್ಕೆ ಏರಿದೆ.

8. ಶಿಕ್ಷಕರ ಒಟ್ಟು ಸಂಖ್ಯೆ  15,03,156 ಆಗಿದ್ದು, ಇದರಲ್ಲಿ 57.5% ಪುರುಷರು ಮತ್ತು 42.5% ಮಹಿಳೆಯರು ಇದ್ದಾರೆ.

ವರದಿಯನ್ನು ನೋಡಲು ಕೆಳಗೆ ಕ್ಲಿಕ್ ಮಾಡಿ:

***



(Release ID: 1725972) Visitor Counter : 712