ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಪರಿಷ್ಕೃತ ವರದಿ
Posted On:
10 JUN 2021 9:46AM by PIB Bengaluru
ದೇಶಾದ್ಯಂತ ಕೋವಿಡ್-19 ಸೋಂಕು ದಿನೇದಿನೆ ಗಣನೀಯವಾಗಿ ಇಳಿಮುಖ ಕಾಣುತ್ತಿದ್ದು, 60 ದಿನಗಳ ನಂತರ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 12 ಲಕ್ಷ (11,67,952) ಮಟ್ಟಕ್ಕಿಂತ ಕೆಳಕ್ಕೆ ಇಳಿದಿದೆ.
ಕಳೆದ 24 ತಾಸುಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 63,463ರಷ್ಟು ಇಳಿಕೆ ಕಂಡಿವೆ.
ಸತತ ಮೂರನೇ ದಿನವೂ ಭಾರತದಲ್ಲಿ ಹೊಸ ಪ್ರಕರಣಗಳ ಪ್ರಮಾಣ 1 ಲಕ್ಷದ ಮಟ್ಟಕ್ಕಿಂತ ಕೆಳಗಿದೆ.
ಕಳೆದ 24 ತಾಸುಗಳ ಅವಧಿಯಲ್ಲಿ 94,052 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ನಿನ್ನೆ ಒಂದೇ ದಿನ ದೇಶಾದ್ಯಂತ 1,51,367 ಸೋಂಕಿತರು ಗುಣಮುಖರಾಗಿದ್ದಾರೆ.
ಸತತ 28ನೇ ದಿನವೂ ಚೇತರಿಕೆ ಪ್ರಕರಣಗಳ ಸಂಖ್ಯೆಯು ಹೊಸ ಕೊರೊನಾ ಪ್ರಕರಣಗಳ ಸಂಖ್ಯೆಯನ್ನು ಹಿಂದಿಕ್ಕುತ್ತಿದೆ.
ದೇಶದಲ್ಲಿ ಇದುವರೆಗೆ ಕೊರೊನಾ ಸೋಂಕಿನಿಂದ ಒಟ್ಟು 2,76,55,493 ಸೋಂಕಿತರು ಗುಣಮುಖರಾಗಿದ್ದಾರೆ.
ಇದರೊಂದಿಗೆ ಚೇತರಿಕೆ ದರ 94.77% ಗೆ ಸುಧಾರಣೆ ಕಂಡಿದೆ.
ಪ್ರಸ್ತುತ ಒಂದು ವಾರದ ಪಾಸಿಟಿವಿಟಿ ದರ 5.43% ಇದೆ.
ದೈನಂದಿನ ಪಾಸಿಟಿವಿಟಿ ದರ 4.69% ಇದೆ, ಸತತ 17 ದಿನಗಳಿಂದಲೂ 10%ಗಿಂತ ಕಡಿಮೆ ಇದೆ.
ಇದುವರೆಗೆ ದೇಶಾದ್ಯಂತ 37.21 ಕೋಟಿ ಜನರ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ.
ದೇಶವ್ಯಾಪಿ ನಡೆಯುತ್ತಿರುವ ಬೃಹತ್ ಲಸಿಕಾ ಆಂದೋಲನದಲ್ಲಿ ಒಟ್ಟು 24 ಕೋಟಿ (24,27,26,693) ಲಸಿಕಾ ಡೋಸ್|ಗಳನ್ನು ಹಾಕಲಾಗಿದೆ.
***
(Release ID: 1725867)
Visitor Counter : 164
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam