ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸತತ 2 ನೇ ದಿನವೂ ಭಾರತವು 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳನ್ನು ವರದಿ ಮಾಡಿದೆ


ಭಾರತದ ಸಕ್ರಿಯ ಪ್ರಕರಣಗಳ ಹೊರೆಯು 57 ದಿನಗಳ ನಂತರ ಮತ್ತಷ್ಟು 13 ಲಕ್ಷಕ್ಕಿಂತ ಕಡಿಮೆಯಾಗಿದೆ

ಸಕ್ರಿಯ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ 72,287 ರಷ್ಟು ಕಡಿಮೆಯಾಗುತ್ತವೆ

ದೈನಂದಿನ ಚೇತರಿಕೆಗಳ ಸಂಖ್ಯೆಯು ಸತತ 27 ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿದೆ

ಚೇತರಿಕೆಯ ದರ 94.55% ಕ್ಕೆ ಹೆಚ್ಚಾಗಿದೆ

ದೈನಂದಿನ ದೃಢಪಟ್ಟ ಪ್ರಕರಣಗಳ ದರವು ಮತ್ತಷ್ಟು 4.66% ಕ್ಕೆ ಇಳಿದಿದೆ, ನಿರಂತರವಾಗಿ 16 ದಿನಗಳವರೆಗೆ 10% ಕ್ಕಿಂತ ಕಡಿಮೆ ದೃಢಪಟ್ಟ ಪ್ರಕರಣಗಳ ಸ  ಪ್ರವೃತ್ತಿ ಮುಂದುವರಿದಿದೆ

ಕಳೆದ 24 ಗಂಟೆಗಳಲ್ಲಿ 27.7 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ ಗಳನ್ನು ನೀಡಲಾಗಿದೆ

Posted On: 09 JUN 2021 11:52AM by PIB Bengaluru

ಭಾರತವು ಕಳೆದ 24 ಗಂಟೆಗಳಲ್ಲಿ 92,596 ದೈನಂದಿನ ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ದೇಶವು ಈಗ  ನಿರಂತರ ಎರಡು ದಿನಗಳವರೆಗೆ 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳನ್ನು ದಾಖಲಿಸಿದೆ.  ಇದು ಕೇಂದ್ರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ.

https://static.pib.gov.in/WriteReadData/userfiles/image/image0018U6I.jpg

ಸಕ್ರಿಯ  ಪ್ರಕರಣಗಳ ಹೊರೆಯು  ಭಾರತದಲ್ಲಿ  ನಿರಂತರವಾಗಿ ಕುಸಿತ ಕಂಡಿದೆ. ದೇಶದ ಸಕ್ರಿಯ ಪ್ರಕರಣಗಳ ಹೊರೆಯು  ಇಂದು 12,31,415 ರಷ್ಟಿದೆ. ಸತತ ಒಂಬತ್ತು ದಿನಗಳವರೆಗೆ ಪ್ರಕರಣಗಳ ಹೊರೆಯು  20 ಲಕ್ಷಕ್ಕಿಂತ ಕಡಿಮೆಯಿದೆ.

ಕಳೆದ 24 ಗಂಟೆಗಳಲ್ಲಿ 72,287 ನಿವ್ವಳ ಕುಸಿತ ಕಂಡುಬಂದಿದೆ ಮತ್ತು ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ದೃಢಪಟ್ಟ ಪ್ರಕರಣಗಳ ಕೇವಲ 4.23%ರಷ್ಟು ಮಾತ್ರ ಇದೆ.

https://static.pib.gov.in/WriteReadData/userfiles/image/image002BJDY.jpg

 ಕಳೆದ 24 ಗಂಟೆಗಳಲ್ಲಿ 1,62,664 ಚೇತರಿಕೆಯ ಪ್ರಕರಣಗಳು ವರದಿಯಾಗಿವೆ.

ಭಾರತದ ದೈನಂದಿನ ಚೇತರಿಕೆಗಳ ಪ್ರಮಾಣವು  ಸತತ 27 ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 1,62,664  ಗುಣಮುಖರಾದ ಪ್ರಕರಣಗಳು ವರದಿಯಾಗಿವೆ

ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ 70,068 ಹೆಚ್ಚಿನ ಚೇತರಿಕೆಯ ಪ್ರಕರಣಗಳು ವರದಿಯಾಗಿದೆ.

 

https://static.pib.gov.in/WriteReadData/userfiles/image/image00346VA.jpg

ಸಾಂಕ್ರಾಮಿಕ ರೋಗದ ಆರಂಭದಿಂದಲೂ ಸೋಂಕಿತ ಜನರಲ್ಲಿ 2,75,04,126   ಜನರು ಈಗಾಗಲೇ ಕೋವಿಡ್ -19 ರಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ  1,62,664  ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ದರವು 91.60% ಆಗಿದ್ದು, ಇದು ಚೇತರಿಕೆಯ ಪ್ರಮಾಣವು ಹೆಚ್ಚುತ್ತಿರುವುದನ್ನು ತೋರಿಸುತ್ತಿದೆ.

https://static.pib.gov.in/WriteReadData/userfiles/image/image004KGFC.jpg

ಕಳೆದ 24 ಗಂಟೆಗಳಲ್ಲಿ ಒಟ್ಟು 19,85,967 ಪರೀಕ್ಷೆಗಳನ್ನು ನಡೆಸಲಾಗಿದ್ದು,  ಇಲ್ಲಿಯವರೆಗೆ ಭಾರತವು 37 ಕೋಟಿ (37,01,93,563) ಪರೀಕ್ಷೆಗಳನ್ನು ನಡೆಸಿದೆ.

ದೇಶಾದ್ಯಂತ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ, ಸಾಪ್ತಾಹಿಕ   ದೃಢಪಟ್ಟ ಪ್ರಕರಣಗಳಲ್ಲಿ ನಿರಂತರ ಕುಸಿತವು ಕಂಡುಬರುತ್ತಿದೆ. ಸಾಪ್ತಾಹಿಕ ಸಕಾರಾತ್ಮಕ ದೃಢಪಟ್ಟ ಪ್ರಕರಣಗಳ ದರವು ಪ್ರಸ್ತುತ 5.66% ರಷ್ಟಿದ್ದರೆ, ದೈನಂದಿನ ದೃಢಪಟ್ಟ ಪ್ರಕರಣಗಳ ದರವು ಇಂದು 4.66% ರಷ್ಟಿದೆ.  ಈಗ ಇದು ಸತತ 16 ದಿನಗಳವರೆಗೆ 10% ಕ್ಕಿಂತ ಕಡಿಮೆಯಿದೆ.

https://static.pib.gov.in/WriteReadData/userfiles/image/image0050KMY.jpg

ದೇಶಾದ್ಯಂತ ನೀಡಲಾಗುವ ಕೋವಿಡ್ -19 ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ ಇಂದು ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಲ್ಲಿ 23.90  ಕೋಟಿಯನ್ನು ಮೀರಿದೆ.  ಕಳೆದ 24 ಗಂಟೆಗಳಲ್ಲಿ 27,76,096 ಲಸಿಕೆ ಡೋಸ್ ಗಳನ್ನು ನೀಡಲಾಯಿತು.

ಅವುಗಳ ವಿವರ ಹೀಗಿವೆ:

ಎಚ್ಸಿಡಬ್ಲ್ಯೂ

1 ನೇ ಡೋಸ್

99,96,113

2 ನೇ ಡೋಸ್

68,94,206

ಎಫ್ಎಲ್ಡಬ್ಲ್ಯೂ

1 ನೇ ಡೋಸ್

1,63,86,094

2 ನೇ ಡೋಸ್

87,28,340

 18 - 44 ವರ್ಷದವರು

1 ನೇ ಡೋಸ್

3,18,51,951

2 ನೇ ಡೋಸ್

3,18,313

 45 ರಿಂದ 60 ವರ್ಷದವರು

1 ನೇ ಡೋಸ್

7,26,04,407

2 ನೇ ಡೋಸ್

1,15,39,053

 60 ವರ್ಷಕ್ಕಿಂತ ಮೇಲ್ಪಟ್ಟವರು

1 ನೇ ಡೋಸ್

6,12,98,568

2 ನೇ ಡೋಸ್

1,94,41,315

ಒಟ್ಟು

23,90,58,360

***



(Release ID: 1725669) Visitor Counter : 204