ನೀತಿ ಆಯೋಗ

2020-21 ಸಾಲಿನ ಭಾರತದ ಎಸ್ಡಿಜಿ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್ ಬಿಡುಗಡೆ ಮಾಡಿದ ನೀತಿ ಆಯೋಗ

Posted On: 03 JUN 2021 10:23AM by PIB Bengaluru

ʻಭಾರತದ ಎಸ್ಡಿಜಿ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್-2020-21ʼ ಮೂರನೇ ಆವೃತ್ತಿಯನ್ನು ನೀತಿ ಆಯೋಗವು ಇಂದು ಬಿಡುಗಡೆ ಮಾಡಿತು. 2018 ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಪ್ರಾರಂಭಿಸಿದಾಗಿನಿಂದಲೂ ಸೂಚ್ಯಂಕವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಾಧಿಸಿರುವ ದೇಶದ ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಿ, ಸಮಗ್ರವಾಗಿ ದಾಖಲಿಸಿ, ಶ್ರೇಯಾಂಕ ನೀಡುತ್ತಿದೆ. ಪ್ರಸ್ತುತ ಮೂರನೇ ಆವೃತ್ತಿಯಲ್ಲಿ ಪ್ರಕಟಗೊಳ್ಳುತ್ತಿರುವ ಸೂಚ್ಯಂಕವು ದೇಶದಲ್ಲಿ ಎಸ್ಡಿಜಿಗಳ ವಿಚಾರವಾಗಿ ಪ್ರಗತಿಯ ಮೇಲ್ವಿಚಾರಣೆಗೆ ಪ್ರಾಥಮಿಕ ಸಾಧನವಾಗಿದೆ. ಜೊತೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಸ್ಪರ್ಧಾತ್ಮಕತೆಯನ್ನೂ ಸೂಚ್ಯಂಕ ಬೆಳೆಸುತ್ತಿದೆ.

ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು ʻಭಾರತದ ಎಸ್ಡಿಜಿ ಸೂಚ್ಯಂಕ ಮತ್ತು ಡ್ಯಾಶ್ ಬೋರ್ಡ್ 2020-21: ದಶಕದ ಕಾರ್ಯಯೋಜನೆಯಲ್ಲಿ ಪಾಲುದಾರಿಕೆಗಳುʼ  ಶೀರ್ಷಿಕೆಯ ವರದಿಯನ್ನು ನೀತಿ ಆಯೋಗದ ಸದಸ್ಯ ಡಾ. ವಿನೋದ್ ಪಾಲ್, ನೀತಿ ಆಯೋಗದ ಸಿಇಒ ಶ್ರೀ ಅಮಿತಾಬ್ ಕಾಂತ್ ಮತ್ತು ನೀತಿ ಆಯೋಗದ ಸಲಹೆಗಾರರಾದ (ಎಸ್ಡಿಜಿ) ಶ್ರೀಮತಿ ಸನ್ಯುಕ್ತಾ ಸಮದ್ದಾರ್ ಅವರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು. ನೀತಿ ಆಯೋಗವು ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಸೂಚ್ಯಂಕವನ್ನು ಪ್ರಾಥಮಿಕ ಮಧ್ಯಸ್ಥಗಾರರಾದ - ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು; ಭಾರತದಲ್ಲಿರುವ ವಿಶ್ವ ಸಂಸ್ಥೆಯ ಏಜೆನ್ಸಿಗಳು, ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (ಎಂಒಎಸ್ಪಿಐ) ಮತ್ತು ಪ್ರಮುಖ ಕೇಂದ್ರ ಸಚಿವಾಲಯಗಳ ಜೊತೆ ವ್ಯಾಪಕ ಸಮಾಲೋಚನೆ ಬಳಿಕ ಸಿದ್ಧಪಡಿಸಲಾಗಿದೆ.

"ಭಾರತದ ಎಸ್ಡಿಜಿ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್ʼ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳ ಮೇಲ್ವಿಚಾರಣೆಯ ನಮ್ಮ ಪ್ರಯತ್ನವು ವಿಶ್ವದಾದ್ಯಂತ ವ್ಯಾಪಕವಾಗಿ ಗಮನ ಸೆಳೆದಿದ್ದು, ಮೆಚ್ಚುಗೆಗೆ ಒಳಪಟ್ಟಿದೆ. ಸುಸ್ಥಿರ ಅಭಿವೃದ್ಧಿ ಗುರಿಗಳ ಸಂಯೋಜಿತ ಸೂಚ್ಯಂಕವನ್ನು ಲೆಕ್ಕಹಾಕುವ ಮೂಲಕ ನಮ್ಮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶ್ರೇಯಾಂಕ ನೀಡುವ ನಿಟ್ಟಿನಲ್ಲಿ ಇದೊಂದು ಅಪರೂಪದ, ದತ್ತಾಂಶ ಚಾಲಿತ ಉಪಕ್ರಮವಾಗಿ ಉಳಿದಿದೆ. ಇದು ಮಹತ್ವಾಕಾಂಕ್ಷೆಯ ಮತ್ತು ಅನುಕರಣೆಯ ವಿಷಯವಾಗಿ ಉಳಿಯುತ್ತದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೇಲ್ವಿಚಾರಣೆ ಪ್ರಯತ್ನಗಳನ್ನು ಮುನ್ನಡೆಸಲು ಸಹಾಯ ಮಾಡುತ್ತದೆ ಎಂಬ ವಿಶ್ವಾಸ ನಮಗಿದೆ", ಎಂದು ನೀತಿ ಆಯೋಗದ ಉಪಾಧ್ಯಕ್ಷ ಡಾ. ರಾಜೀವ್ ಕುಮಾರ್ ಅವರು ವರದಿ ಬಿಡುಗಡೆ ಸಂದರ್ಭದಲ್ಲಿ ಹೇಳಿದರು.

2030 ಕಾರ್ಯಸೂಚಿಯನ್ನು ಸಾಧಿಸುವ ನಿಟ್ಟಿನಲ್ಲಿ ಮೂರನೇ ಒಂದು ಭಾಗದಷ್ಟು ಪ್ರಯಾಣವು ನಮ್ಮ ಹಿಂದೆ ಇರುವ ಹಿನ್ನಲೆಯಲ್ಲಿ, ಪ್ರಸಕ್ತ ಆವೃತ್ತಿಯ ಸೂಚ್ಯಂಕ ವರದಿಯು ಪಾಲುದಾರಿಕೆಯ ಮಹತ್ವವನ್ನು ಪ್ರಧಾನ ವಿಷಯವಾಗಿ ಕೇಂದ್ರೀಕರಿಸುತ್ತದೆ. ನೀತಿ ಆಯೋಗದ ಸಿಇಒ ಶ್ರೀ ಅಮಿತಾಬ್ ಕಾಂತ್ ಅವರು ಮಾತನಾಡಿ, "ನಮ್ಮ ಎಸ್ಡಿಜಿಗಳ ಪ್ರಯತ್ನಗಳ ಸಮಯದಲ್ಲಿ ನಾವು ನಿರ್ಮಿಸಿರುವ ಮತ್ತು ಬಲಪಡಿಸಿದ ಪಾಲುದಾರಿಕೆಯನ್ನು ವರದಿ ಪ್ರತಿಬಿಂಬಿಸುತ್ತದೆ. ಸಹಯೋಗದ ಉಪಕ್ರಮಗಳು ಹೇಗೆ ಉತ್ತಮ ಫಲಿತಾಂಶಗಳು ಮತ್ತು ಹೆಚ್ಚಿನ ಪರಿಣಾಮಗಳಿಗೆ ದಾರಿ ಮಾಡುತ್ತವೆ ಎಂಬುದರ ಮೇಲೆ ವರದಿಯ ನಿರೂಪಣೆಯು ಬೆಳಕು ಚೆಲ್ಲುತ್ತದೆ." ಎಂದು ಹೇಳಿದರು.

ಗುರಿ 17  ಕೇಂದ್ರಬಿಂದುವಾಗಿರುವ ಪಾಲುದಾರಿಕೆಯ ವಿಷಯದ ಬಗ್ಗೆ ಮಾತನಾಡಿದ ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿನೋದ್ ಪಾಲ್ ಅವರು, "ಒಟ್ಟಾಗಿ ಕೆಲಸ ಮಾಡುವ ಮೂಲಕ ಯಾರನ್ನೂ ಹಿಂದೆ ಉಳಿಯದಂತೆ ಕಾಯ್ದುಕೊಳ್ಳುವಹೆಚ್ಚು ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಭವಿಷ್ಯವನ್ನು ನಾವು ನಿರ್ಮಿಸಬಹುದು ಎಂಬುದು ಸ್ಪಷ್ಟವಾಗಿದೆ" ಎಂದು ಹೇಳಿದರು.

"2018ರಲ್ಲಿ ಬಿಡುಗಡೆ ಮಾಡಲಾದ ಮೊದಲ ಆವೃತ್ತಿಯು 62 ಸೂಚಕಗಳೊಂದಿಗೆ 13 ಗುರಿಗಳನ್ನು ಒಳಗೊಂಡಿತ್ತು. ಆದರೆ ಮೂರನೇ ಆವೃತ್ತಿಯು 16 ಗುರಿಗಳ ಕುರಿತಾದ 115 ಪರಿಮಾಣಾತ್ಮಕ ಸೂಚಕಗಳು ಮತ್ತು 17 ಲಕ್ಷ್ಯಗಳ ಕುರಿತಾದ ಗುಣಾತ್ಮಕ ಮೌಲ್ಯಮಾಪನವನ್ನು ಒಳಗೊಂಡಿದೆ. ವಿಸ್ತರಣೆಯು ಪ್ರಮುಖ ಸಾಧನವನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ನಮ್ಮ ನಿರಂತರ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ" ಎಂದು ನೀತಿ ಆಯೋಗದ ಸಲಹೆಗಾರರಾದ (ಎಸ್ಡಿಜಿ) ಶ್ರೀಮತಿ ಸನ್ಯುಕ್ತಾ ಸಮದ್ದಾರ್ ಹೇಳಿದರು.

ದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳ ಅಳವಡಿಕೆ ಮತ್ತು ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಪರ್ಧಾತ್ಮಕತೆ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಉತ್ತೇಜಿಸುವ ಅವಳಿ ಧ್ಯೇಯೋದ್ದೇಶಗಳನ್ನು ನೀತಿ ಆಯೋಗವು ಹೊಂದಿದೆ. ಸೂಚ್ಯಂಕವು ರಾಷ್ಟ್ರೀಯ ಆದ್ಯತೆಗಳಿಗೆ ಹೊಂದಿಕೊಂಡಂತೆ, 2030 ಕಾರ್ಯಸೂಚಿಯ ಅಡಿಯಲ್ಲಿ ಜಾಗತಿಕ ಗುರಿಗಳ ಸಮಗ್ರ ಸ್ವರೂಪದ ಅಭಿವ್ಯಕ್ತಿಯನ್ನು ಪ್ರತಿನಿಧಿಸುತ್ತದೆ. ಸೂಚ್ಯಂಕದ ನಮ್ಯ ಸ್ವರೂಪವು ಆರೋಗ್ಯ, ಶಿಕ್ಷಣ, ಲಿಂಗ, ಆರ್ಥಿಕ ಬೆಳವಣಿಗೆ, ಸಂಸ್ಥೆಗಳು, ಹವಾಮಾನ ಬದಲಾವಣೆ ಮತ್ತು ಪರಿಸರ ಸೇರಿದಂತೆ ಗುರಿಗಳ ವಿಸ್ತಾರವಾದ ಸ್ವರೂಪದ ಬಗ್ಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಗತಿಯನ್ನು ಅಳೆಯುವ ಸಿದ್ಧ ಸಾಧನವಾಗಿ ಮತ್ತು ನೀತಿ ಸಾಧನವಾಗಿ ಮಾರ್ಪಟ್ಟಿದೆ.

https://static.pib.gov.in/WriteReadData/userfiles/image/image001MLG2.jpg

ಬಲದಿಂದ ಎಡಕ್ಕೆ: ಡಾ. ವಿನೋದ್ ಪಾಲ್, ಸದಸ್ಯ (ಆರೋಗ್ಯ); ಡಾ. ಆರ್ ರಾಜೀವ್ ಕುಮಾರ್, ಉಪಾಧ್ಯಕ್ಷ; ಶ್ರೀ ಅಮಿತಾಬ್ ಕಾಂತ್, ಸಿಇಒ; ಮತ್ತು ನೀತಿ ಆಯೋಗದ ಸಲಹೆಗಾರರಾದ (ಎಸ್ಡಿಜಿ) ಶ್ರೀಮತಿ ಸನ್ಯುಕ್ತಾ ಸಮದ್ದಾರ್

ಭಾರತದ ಎಸ್ಡಿಜಿ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್ 2020-21: ಮೂರನೇ ಆವೃತ್ತಿಯ ಪರಿಚಯ

ಭಾರತದಲ್ಲಿ ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ʻ2020-21ನೇ ಸಾಲಿನ ಭಾರತದ ಎಸ್ಡಿಜಿ ಸೂಚ್ಯಂಕʼವು ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (ಎಂಒಎಸ್ಪಿಐ) ʻರಾಷ್ಟ್ರೀಯ ಸೂಚ್ಯಂಕ ವ್ಯವಸ್ಥೆʼಗೆ (ಎನ್ಐಎಫ್) ಅನುಗುಣವಾಗಿ, 115 ಸೂಚ್ಯಂಕಗಳ ವಿಚಾರದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ರಾಷ್ಟ್ರಗಳ ಪ್ರಗತಿಯ ಮೇಲೆ ನಿಗಾ ವಹಿಸುತ್ತದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕ್ಷಮತೆಗೆ ಮಾನದಂಡ ನಿಗದಿಪಡಿಸುವುದು ಮತ್ತು ನಿಟ್ಟಿನಲ್ಲಿ ಪ್ರಗತಿಯನ್ನು ನಿರಂತರ ಅಳೆಯುವುದು; ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ʻಎಸ್ಡಿಜಿʼಗೆ ಸಂಬಂಧಿಸಿದ ತಾಜಾ ದತ್ತಾಂಶ ಸದಾ ಲಭ್ಯವಾಗುವಂತೆ ಮಾಡುವುದು ಅತ್ಯಗತ್ಯವಾಗಿದೆ. ಇದಕ್ಕಾಗಿ ಪ್ರಮುಖ ಸಾಧನವನ್ನು ಆವೃತ್ತಿಯಿಂದ ಆವೃತ್ತಿಗೆ ಮತ್ತಷ್ಟು ಪರಿಷ್ಕರಿಸುವ ಮತ್ತು ಸುಧಾರಿಸುವ ಉಪಕ್ರಮವನ್ನೂ ಕೈಗೊಳ್ಳಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾಲುದಾರರ ಜೊತೆ ಹಲವು ಬಾರಿ ವಿಸ್ತೃತ ಸಮಾಲೋಚನೆ ಬಳಿಕ 155 ಸೂಚಕಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿಕ್ರಿಯೆ ಕೇಳಲಾಗಿದೆ. ಸ್ಥಳೀಕರಣ ಸಾಧನದ ಅಗತ್ಯ ಪಾಲುದಾರರಾಗಿ ಮತ್ತು ಪ್ರೇಕ್ಷಕರಾಗಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೂಚ್ಯಂಕವನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೀಡುವ ತಮ್ಮ ಸ್ಥಳೀಯ ಒಳನೋಟಗಳು ಮತ್ತು ವಾಸ್ತವಿಕ ಅನುಭವದೊಂದಿಗೆ ನೀಡುವ ಪ್ರತಿಕ್ರಿಯೆಯು ಪ್ರಕ್ರಿಯೆಯನ್ನು ಶ್ರೀಮಂತಗೊಳಿಸಿದೆ.

ʻಎನ್ಐಎಫ್ʼ ಜೊತೆ ಹೆಚ್ಚಿನ ಹೊಂದಾಣಿಕೆ ಜೊತೆಗೆ ಗುರಿಗಳು ಮತ್ತು ಸೂಚಕಗಳ ವಿಸ್ತೃತ ವ್ಯಾಪ್ತಿಯ ಕಾರಣದಿಂದಾಗಿ ʻ2020-21ನೇ ಸಾಲಿನ ಭಾರತ ಎಸ್ಡಿಜಿ ಸೂಚ್ಯಂಕʼವು ಹಿಂದಿನ ಆವೃತ್ತಿಗಳಿಗಿಂತ ಹೆಚ್ಚು ದೃಢವಾಗಿದೆ. 115 ಸೂಚಕಗಳು 17 ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ 16ಅನ್ನು ಒಳಗೊಂಡಿವೆ. 17ನೇ ಗುರಿಯ ಕುರಿತ ಗುಣಾತ್ಮಕ ಮೌಲ್ಯಮಾಪನದ ಜೊತೆಗೆ 70 ಎಸ್ಡಿಜಿ ಲಕ್ಷ್ಯಗಳನ್ನೂ ಇದು ಒಳಗೊಂಡಿದೆ. ಕ್ರಮವಾಗಿ 13 ಗುರಿಗಳು, 39 ಲಕ್ಷ್ಯಗಳು ಮತ್ತು 62 ಸೂಚಕಗಳನ್ನು ಒಳಗೊಂಡಿದ್ದ  2018-19 ನೇ ಸಾಲಿನ ಆವೃತ್ತಿ ಹಾಗೂ ಮತ್ತು 54 ಗುರಿಗಳು ಮತ್ತು 17 ಗುರಿಗಳು, 54 ಲಕ್ಷ್ಯಗಳು, 100 ಸೂಚಕಗಳನ್ನು ಒಳಗೊಂಡಿದ್ದ 2019-20ನೇ ಸಾಲಿನ ಆವೃತ್ತಿಗೆ ಹೋಲಿಸಿದರೆ, ಪ್ರಸಕ್ತ ಆವೃತ್ತಿಯು ಹೆಚ್ಚಿನ ಸುಧಾರಣೆ ಕಂಡಿದೆ.

https://static.pib.gov.in/WriteReadData/userfiles/image/image002V4Z4.jpg

ಭಾರತದ ಎಸ್ಡಿಜಿ ಸೂಚ್ಯಂಕವು ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ 16 ಎಸ್ಡಿಜಿಗಳಿಗೆ ಸಂಬಂಧಿಸಿದಂತೆ ಗುರಿ ಸಾಧನೆವಾರು ಅಂಕಗಳನ್ನು ಲೆಕ್ಕಾಚಾರ ಮಾಡುತ್ತದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಗುರಿ-ವಾರು ಅಂಕಗಳನ್ನು ಬಳಸಿ ಒಟ್ಟಾರೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಂಕಗಳನ್ನು ಪಡೆಯಲಾಗುತ್ತದೆ. ಇದನ್ನು ಬಳಸಿ, ಉಪ-ರಾಷ್ಟ್ರೀಯ ಘಟಕದ ಸರಾಸರಿ ಕಾರ್ಯದಕ್ಷತೆಯನ್ನು ಅಳೆಯಲಾಗುತ್ತದೆ. ಎಲ್ಲಾ 16 ಎಸ್ಡಿಜಿಗಳಿಗೆ ಸಂಬಂಧಿಸಿದ ಅಂಕಗಳನ್ನು ಆಧಾರವಾಗಿ  ಪರಿಗಣಿಸಿ ಮೌಲ್ಯಮಾಪನ ಮಾಡಲಾಗುತ್ತದೆ. ಅಂಕಗಳು 0-100 ನಡುವೆ ಇರುತ್ತವೆ. ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶವು 100 ಅಂಕಗಳನ್ನು ಸಾಧಿಸಿದರೆ, ಅದು 2030 ಗುರಿಗಳನ್ನು ಸಾಧಿಸಿರುವುದನ್ನು ಸೂಚಿಸುತ್ತದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶ ಪಡೆದ ಅಂಕ ಹೆಚ್ಚಿದಷ್ಟೂ  ಅದು ಗುರಿ ಸಾಧನೆ ಹಾದಿಯಲ್ಲಿ ಹೆಚ್ಚು ದೂರ ಕ್ರಮಿಸಿದೆ ಎಂಬುದನ್ನು ಸೂಚಿಸುತ್ತದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳು  ʻಭಾರತದ ಎಸ್ಡಿಜಿ ಸೂಚ್ಯಂಕʼದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಕೆಳಗಿನಂತೆ ವರ್ಗೀಕರಿಸಲಾಗಿದೆ:

  • ಆಕಾಂಕ್ಷಿ: 0–49
  • ಕಾರ್ಯಕ್ಷಮತೆ ಪ್ರದರ್ಶಕ: 50–64
  • ಫ್ರಂಟ್-ರನ್ನರ್: 65–99
  • ಸಾಧಕ: 100

https://static.pib.gov.in/WriteReadData/userfiles/image/image003VG71.jpg

ಒಟ್ಟಾರೆ ಫಲಿತಾಂಶಗಳು ಮತ್ತು ಕಂಡುಬಂದ ಅಂಶಗಳು

ದೇಶದ ಒಟ್ಟಾರೆ ಎಸ್ಡಿಜಿ ಸ್ಕೋರ್ 6 ಅಂಶಗಳಷ್ಟು ಸುಧಾರಿಸಿದೆ- 2019ರಲ್ಲಿ 60ರಿಂದ 2020-21ರಲ್ಲಿ 66ಕ್ಕೆ ಹೆಚ್ಚಿದೆಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಮುನ್ನಡೆಯ ಪ್ರಮುಖ ಚಾಲಕ ಶಕ್ತಿಯೆಂದರೆ, ಗುರಿ 6 (ಶುದ್ಧ ನೀರು ಮತ್ತು ನೈರ್ಮಲ್ಯ) ಮತ್ತು ಗುರಿ 7 (ಕೈಗೆಟುಕುವ ಮತ್ತು ಶುದ್ಧ ಇಂಧನ) ವಿಚಾರದಲ್ಲಿ ದೇಶವ್ಯಾಪಿ ಸಾಧಿಸಲಾದ ಅತ್ಯುತ್ತಮ ಕಾರ್ಯಕ್ಷಮತೆ. ಎರಡೂ ಗುರಿಗಳಲ್ಲಿ ಕ್ರಮವಾಗಿ 83 ಮತ್ತು 92 ಸಂಯೋಜಿತ ಅಂಕಗಳನ್ನು ಗಳಿಸಲಾಗಿದೆ.

ಗುರಿವಾರು ಭಾರತದ ಫಲಿತಾಂಶ, 2019–20 ಮತ್ತು 2020–21:

https://static.pib.gov.in/WriteReadData/userfiles/image/image004HSF4.jpg

ಭಾರತದ ಎಸ್ಡಿಜಿ ಸೂಚ್ಯಂಕ 2020-21ರಲ್ಲಿ ಅಗ್ರ ಸಾಧನೆಯ ಐದು ಮತ್ತು ಕಳಪೆ ಸಾಧನೆಯ ಐದು ರಾಜ್ಯಗಳು:

https://static.pib.gov.in/WriteReadData/userfiles/image/image005FTTM.jpg

2020-21 ʻಎಸ್ಡಿಜಿʼಗೆ ಸಂಬಂಧಿಸಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕ್ಷಮತೆ ಮತ್ತು ಶ್ರೇಯಾಂಕ, ಕಳೆದ ವರ್ಷಕ್ಕೆ ಹೋಲಿಸಿದರೆ ಅಂಕ ಗಳಿಕೆಯಲ್ಲಿ ಬದಲಾವಣೆಯನ್ನೂ ಇದು ಒಳಗೊಂಡಿದೆ:

https://static.pib.gov.in/WriteReadData/userfiles/image/image006JTWS.jpg

https://static.pib.gov.in/WriteReadData/userfiles/image/image007XM1X.jpg

ಮಿಜೋರಾಂ, ಹರಿಯಾಣ ಮತ್ತು ಉತ್ತರಾಖಂಡ್ ರಾಜ್ಯಗಳು 2019ಕ್ಕೆ ಹೋಲಿಸಿದರೆ 2020-21ನೇ ಸಾಲಿನಲ್ಲಿ ಕ್ರಮವಾಗಿ 12, 10 ಮತ್ತು 8 ಅಂಕಗಳನ್ನು ಹೆಚ್ಚು ಗಳಿಸುವ ಮೂಲಕ ಅಗ್ರ ಸ್ಥಾನ ಪಡೆದಿವೆ.

ಕ್ಷಿಪ್ರ ಚಲನೆ ಹೊಂದಿರುವ ಅಗ್ರ ರಾಜ್ಯಗಳು (ಅಂಕವಾರು):

https://static.pib.gov.in/WriteReadData/userfiles/image/image0082BPP.jpg

2019ರಲ್ಲಿ, ಹತ್ತು ರಾಜ್ಯಗಳು /ಕೇಂದ್ರಾಡಳಿತ ಗಳು ಫ್ರಂಟ್-ರನ್ನರ್ ವರ್ಗಕ್ಕೆ ಸೇರಿದ್ದವು (ಎರಡನ್ನೂ ಒಳಗೊಂಡು 65-99 ಶ್ರೇಣಿಯಲ್ಲಿ ಅಂಕಗಳು) 2020-21 ರಲ್ಲಿ ಇನ್ನೂ ಹನ್ನೆರಡು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ವಿಭಾಗದಲ್ಲಿ ತಮ್ಮನ್ನು ಗುರುತಿಸಿಕೊಂಡಿವೆ. ಉತ್ತರಾಖಂಡ, ಗುಜರಾತ್, ಮಹಾರಾಷ್ಟ್ರ, ಮಿಜೋರಾಂ, ಪಂಜಾಬ್, ಹರಿಯಾಣ, ತ್ರಿಪುರ, ದೆಹಲಿ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಫ್ರಂಟ್ ರನ್ನರ್ಸ್ (ಎರಡನ್ನೂ ಒಳಗೊಂಡು 65 ರಿಂದ 99 ನಡುವಿನ ಅಂಕಗಳು) ವರ್ಗಕ್ಕೆ ಬಡ್ತಿ ಪಡೆದಿವೆ.

https://static.pib.gov.in/WriteReadData/userfiles/image/image009CVDV.jpg

https://static.pib.gov.in/WriteReadData/userfiles/image/image0105R60.jpghttps://static.pib.gov.in/WriteReadData/userfiles/image/image011PHAO.jpg

ಭಾರತದ ಎಸ್ಡಿಜಿ ಸೂಚ್ಯಂಕ ವರದಿಯ ಒಂದು ವಿಭಾಗವನ್ನು ದೇಶದ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ರಾಜ್ಯಗಳಿಗೆ ಸಮರ್ಪಿಸಲಾಗಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕುರಿತಾದ ಸ್ಥೂಲ ಚಿತ್ರಣವು ಎಲ್ಲಾ ಗುರಿಗಳಲ್ಲಿ 115 ಸೂಚಕಗಳ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ನೀತಿ ನಿರೂಪಕರು, ವಿದ್ವಾಂಸರು ಮತ್ತು ಜನಸಾಮಾನ್ಯರಿಗೆ ಬಹಳ ಉಪಯುಕ್ತವಾಗಿವೆ.

ವರದಿಯಲ್ಲಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಸ್ಥೂಲ ಚಿತ್ರಣದ ಮಾದರಿ:

https://static.pib.gov.in/WriteReadData/userfiles/image/image012R6JG.jpg

ಇದರ ನಂತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ʻಎಸ್ಡಿಜಿʼ ಸ್ಥಳೀಯ ಪ್ರದೇಶದ ಪ್ರಗತಿಯ ಬಗ್ಗೆ ಮಾಹಿತಿಯನ್ನು ಒಳಗೊಂಡ ವಿಶಿಷ್ಟ ವಿಭಾಗವಿದೆ. ಸಾಂಸ್ಥಿಕ ರಚನೆಗಳು, ಎಸ್ಡಿಜಿ ದೃಷ್ಟಿಕೋನ ದಾಖಲೆಗಳು, ರಾಜ್ಯ ಮತ್ತು ಜಿಲ್ಲಾ ಸೂಚಕ ವ್ಯವಸ್ಥೆಗಳು ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಗಳು ಕೈಗೊಂಡ ಇತರ ಉಪಕ್ರಮಗಳ ಬಗ್ಗೆ ತಾಜಾ ಮಾಹಿತಿಯನ್ನು ಇದು ಒದಗಿಸುತ್ತದೆ.

https://static.pib.gov.in/WriteReadData/userfiles/image/image013Y892.jpg

ʻಭಾರತದ ಎಸ್ಡಿಜಿ ಸೂಚ್ಯಂಕ 2020-21ʼ ಆನ್ಲೈನ್ ಡ್ಯಾಶ್ಬೋರ್ಡ್ ನಲ್ಲಿ ʻಲೈವ್ʼ ರೂಪದಲ್ಲಿ ಲಭ್ಯವಿದ್ದು  ನೀತಿಗಳು, ನಾಗರಿಕ ಸಮಾಜ, ವ್ಯವಹಾರ ಮತ್ತು ಶೈಕ್ಷಣಿಕ ಕ್ಷೇತ್ರಗಳಿಗೆ ಇದು ಪ್ರಸ್ತುತತೆಯನ್ನು ಹೊಂದಿದೆ. ಕೇಂದ್ರೀಕೃತ ನೀತಿ ಸಂವಾದ, ನೀತಿಗಳ ರಚನೆ ಹಾಗೂ ಜಾಗತಿಕವಾಗಿ ʻಎಸ್ಡಿಜಿʼ ಮಾನದಂಡಗಳಾಗಿ ಗುರುತಿಸಬಹುದಾದ ಅಭಿವೃದ್ಧಿ ಕ್ರಿಯೆಗಳ ಮೂಲಕ ಅವುಗಳ ಜಾರಿಗೆ ಸಾಧನವಾಗಿ ಕೆಲಸ ಮಾಡುವಂತೆ ಸೂಚ್ಯಂಕವನ್ನು ವಿನ್ಯಾಸಗೊಳಿಸಲಾಗಿದೆ.

ಎಸ್ಡಿಜಿಗಳ ಮೇಲೆ ನಿಗಾ ಇರಿಸುವುದಕ್ಕೆ ಸಂಬಂಧಿಸಿದ ನಿರ್ಣಾಯಕ ಕೊರತೆಗಳನ್ನು ಗುರುತಿಸಲು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರತವು ತನ್ನ ಅಂಕಿ-ಅಂಶ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಗುರುತಿಸಲು ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್ ಅನುಕೂಲ ಮಾಡಿಕೊಡುತ್ತದೆ. ದೇಶದ ಎಸ್ಡಿಜಿ ಸ್ಥಳೀಕರಣ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿರುವ  ಸೂಚ್ಯಂಕವನ್ನು ಪ್ರಸ್ತುತ ನೀತಿ ಆಯೋಗವು ಜಿಲ್ಲಾ ಮಟ್ಟದಲ್ಲಿ ಬಳಸುವ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತಿದ್ದು, ಮುಂಬರುವ ಈಶಾನ್ಯ ವಲಯದ ಜಿಲ್ಲಾ ಎಸ್ಡಿಜಿ ಸೂಚ್ಯಂಕಕ್ಕಾಗಿಯೂ ಬಳಸಲಾಗುವುದು.

ʻಭಾರತದ ಎಸ್ಡಿಜಿ ಸೂಚ್ಯಂಕ 2020-21 ಡ್ಯಾಶ್ ಬೋರ್ಡ್ʼ ಮುಖಚಿತ್ರ:

https://static.pib.gov.in/WriteReadData/userfiles/image/image014Q7QF.jpg

ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯ ಮಟ್ಟದಲ್ಲಿ ಎಸ್ಡಿಜಿಗಳ ಅಳವಡಿಕೆ ಮತ್ತು ಮೇಲ್ವಿಚಾರಣೆಯನ್ನು ಸಮನ್ವಯಗೊಳಿಸುವ ಧ್ಯೇಯವನ್ನು ನೀತಿ ಆಯೋಗ ಹೊಂದಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವುಗಳ ಪ್ರಗತಿಯನ್ನು ಅಳೆಯಲು, ಅವುಗಳ ಆದ್ಯತಾ ವಲಯಗಳನ್ನು ಗುರುತಿಸಲು ಮತ್ತು ಉತ್ತಮ ಅಭ್ಯಾಸಗಳನ್ನು ಅವುಗಳೊಂದಿಗೆ ಹಂಚಿಕೊಳ್ಳಲು ಬೆಂಬಲಿಸುವ ಮೂಲಕ ಪುರಾವೆ-ಆಧರಿತ ನೀತಿ ನಿರೂಪಣೆಯನ್ನು ನೀತಿ ಆಯೋಗವು ಉತ್ತೇಜಿಸುತ್ತದೆ. ನಿಟ್ಟಿನಲ್ಲಿ ನೀತಿ ಆಯೋಗದ ಪ್ರಯತ್ನಗಳನ್ನು ʻಭಾರತದ ಎಸ್ಡಿಜಿ ಸೂಚ್ಯಂಕ ಮತ್ತು ಡ್ಯಾಶ್ಬೋರ್ಡ್ʼ ಪ್ರತಿನಿಧಿಸುತ್ತದೆ.

https://static.pib.gov.in/WriteReadData/userfiles/image/image015OU5B.jpg

ಸಂಪೂರ್ಣ ಭಾರತದ ಎಸ್ಡಿಜಿ ಸೂಚ್ಯಂಕ ವರದಿಯನ್ನು ಇಲ್ಲಿ ಪಡೆಯಬಹುದು: https://wgz.short.gy/SDGIndiaIndex  

ಸಂವಾದಾತ್ಮಕ ಡ್ಯಾಶ್ಬೋರ್ಡ್ ಅನ್ನು ಇಲ್ಲಿ ಪಡೆಯಬಹುದು: http://sdgindiaindex.niti.gov.in/

***



(Release ID: 1724096) Visitor Counter : 1120