ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕಳೆದ 24 ಗಂಟೆಗಳಲ್ಲಿ ಭಾರತದ ದೈನಿಕ ಹೊಸ ಪ್ರಕರಣಗಳ ಸಂಖ್ಯೆ 1.34 ಲಕ್ಷದಲ್ಲಿದೆ


ಸತತ 7 ನೇ ದಿನ ದೈನಿಕ ಹೊಸ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕಿಂತ ಕಡಿಮೆ ಇದೆ

ಒಟ್ಟು 17,13,413 ಸಕ್ರಿಯ ಪ್ರಕರಣಗಳೊಂದಿಗೆ , ಸತತ ಮೂರನೇ ದಿನವೂ ಪ್ರಕರಣಗಳ ಹೊರೆ 20 ಲಕ್ಷಕ್ಕಿಂತ ಕಡಿಮೆ ಇದೆ

ಸತತ 21 ನೇ ದಿನವೂ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು

ಗುಣಮುಖ ದರ ಇನ್ನಷ್ಟು ಏರಿಕೆಯಾಗಿ 92.79 % ತಲುಪಿದೆ

ದೈನಿಕ ಪಾಸಿಟಿವ್ ದರ 6.21 % ಆಗಿದ್ದು, ಸತತ 10 ನೇ ದಿನವೂ 10 % ಗಿಂತ ಕೆಳಗಿದೆ

ಭಾರತವು ರಾಷ್ಟ್ರೀಯ ಕೋವಿಡ್ ಲಸಿಕಾಕರಣ ಆಂದೋಲನದಡಿಯಲ್ಲಿ 22 ಕೋಟಿಗೂ ಅಧಿಕ ಲಸಿಕಾ ಡೋಸ್ ಗಳನ್ನು ನೀಡಿದೆ

Posted On: 03 JUN 2021 10:40AM by PIB Bengaluru

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೈನಿಕ 1,34,154 ಹೊಸ ಪ್ರಕರಣಗಳು ವರದಿಯಾಗಿವೆ. ದೇಶವು ಸತತ 7 ನೇ ದಿನವೂ ದೈನಿಕ 2 ಲಕ್ಷಕ್ಕಿಂತ ಕಡಿಮೆ ಹೊಸ ಪ್ರಕರಣಗಳನ್ನು ದಾಖಲಿಸಿದೆ. ಕೇಂದ್ರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸಂಯುಕ್ತ ಪ್ರಯತ್ನಗಳಿಗೆ ದೊರೆತ ಫಲ ಇದಾಗಿದೆ.

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಹೊರೆ ಸತತ ಕುಸಿಯುತ್ತಿದೆ. ಇಂದು 17,13,413 ಸಕ್ರಿಯ ಪ್ರಕರಣಗಳು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ 80,232 ರಷ್ಟು ನಿವ್ವಳ ಇಳಿಕೆ ಕಂಡು ಬಂದಿದೆ ಮತ್ತು ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಬರೇ 6.02% ರಷ್ಟಿವೆ.

ಭಾರತದ ದೈನಿಕ ಚೇತರಿಕೆ/ಗುಣಮುಖ ಪ್ರಕರಣಗಳ ಸಂಖ್ಯೆ ಸತತ 21 ನೇ ದಿನವೂ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 2,11,499 ಮಂದಿ ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೈನಿಕ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖ ಪ್ರಕರಣಗಳು 77,345 ರಷ್ಟು ಹೆಚ್ಚಾಗಿವೆ.

ಜಾಗತಿಕ ಸಾಂಕ್ರಾಮಿಕ ಆರಂಭಗೊಂಡಂದಿನಿಂದ ಸೋಂಕಿತರಾಗಿದ್ದವರ ಪೈಕಿ 2,63,90,584 ಮಂದಿ ಈಗಾಗಲೇ ಕೋವಿಡ್ -19 ರಿಂದ ಗುಣಮುಖರಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 2,11,499 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದ ಒಟ್ಟು ಗುಣಮುಖ ದರ 92.79% ಆಗಿದೆ, ಅದು ಹೆಚ್ಚಳದ ಪ್ರವೃತ್ತಿಯನ್ನು ದಾಖಲಿಸುತ್ತಿದೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 21,59,873 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಭಾರತವು ಇದುವರೆಗೆ ಒಟ್ಟು 35.3 ಕೋಟಿ (35,37,82,648) ಪರೀಕ್ಷೆಗಳನ್ನು ನಡೆಸಿದೆ.

ಒಂದೆಡೆ ದೇಶಾದ್ಯಂತ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದರೆ, ಸಾಪ್ತಾಹಿಕವಾಗಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಸಾಪ್ತಾಹಿಕ ಪಾಸಿಟಿವ್ ದರ ಪ್ರಸ್ತುತ 7.66% ಇದೆ, ದೈನಿಕ ಪಾಸಿಟಿವ್ ದರ ಇಳಿಕೆಯಾಗಿದ್ದು, ಅದೀಗ ಇಂದು 6.21% ಆಗಿದೆ. ಅದು ಸತತ 10 ನೇ ದಿನವೂ 10% ಗಿಂತ ಕೆಳಗಿದೆ.

ದೇಶದಲ್ಲಿ ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಮೂಲಕ ಹಾಕಲಾದ ಕೋವಿಡ್ -19 ಲಸಿಕಾ ಡೋಸ್ ಗಳ ಒಟ್ಟು ಪ್ರಮಾಣ ಇಂದು 22.10 ಕೋಟಿ ದಾಟಿದೆ.

ಇಂದು ಬೆಳಿಗ್ಗೆ 7 ಗಂಟೆಯ ತಾತ್ಕಾಲಿಕ ವರದಿಗಳ ಪ್ರಕಾರ ಒಟ್ಟು 31,24,981 ಅಧಿವೇಶನಗಳ ಮೂಲಕ 22,10,43,693 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.

ವಿವರಗಳು ಕೆಳಗಿನಂತಿವೆ:

ಎಚ್.ಸಿ.ಡಬ್ಲ್ಯು.

1ನೇ ಡೋಸ್

99,12,522

2ನ್ ಡೋಸ್

68,15,468

ಎಫ್.ಎಲ್.ಡಬ್ಲ್ಯು.

1ನೇ ಡೋಸ್

1,58,49,178

2ನ್ ಡೋಸ್

85,84,162

18-44 ವರ್ಷ ವಯೋಗುಂಪಿನವರು

1ನೇ ಡೋಸ್

2,26,12,866

2ನ್ ಡೋಸ್

59,283

45 ರಿಂದ 60 ವರ್ಷ ವಯೋಗುಂಪಿನವರು

1ನೇ ಡೋಸ್

6,78,84,028

2ನ್ ಡೋಸ್

1,09,73,523

60ವರ್ಷಕ್ಕಿಂತ ಮೇಲ್ಪಟ್ಟವರು

1ನೇ ಡೋಸ್

5,94,06,566

2ನ್ ಡೋಸ್

1,89,46,097

ಒಟ್ಟು

 

***



(Release ID: 1724053) Visitor Counter : 221