ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಹೈದರಾಬಾದ್‌ ನ ಬಯೋಲಾಜಿಕಲ್-ಇ ಸಂಸ್ಥೆಯ 30 ಕೋಟಿ ಡೋಸ್ ಕೋವಿಡ್ ಲಸಿಕೆ ಖರೀದಿಗೆ ಮುಂಗಡ ವ್ಯವಸ್ಥೆಯನ್ನು ಅಂತಿಮಗೊಳಿಸಿದ ಕೇಂದ್ರ ಆರೋಗ್ಯ ಸಚಿವಾಲಯ

Posted On: 03 JUN 2021 8:00AM by PIB Bengaluru

30 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ಕಾಯ್ದಿರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಹೈದರಾಬಾದ್ ಮೂಲದ ಲಸಿಕೆ ತಯಾರಕ ಸಂಸ್ಥೆ ಬಯಲಾಜಿಕಲ್- ಜೊತೆ ಅಂತಿಮ ವ್ಯವಸ್ಥೆಯನ್ನು ಮಾಡಿದೆ. ಲಸಿಕೆಗಳನ್ನು ಆಗಸ್ಟ್-ಡಿಸೆಂಬರ್ 2021 ರಿಂದ ಬಯೋಲಾಜಿಕಲ್- ತಯಾರಿಸುತ್ತದೆ ಮತ್ತು ಸಂಗ್ರಹಿಸುತ್ತದೆ. ಉದ್ದೇಶಕ್ಕಾಗಿ, ಕೇಂದ್ರ ಆರೋಗ್ಯ ಸಚಿವಾಲಯವು ಬಯಲಾಜಿಕಲ್-  ಸಂಸ್ಥೆಗೆ 1500 ಕೋಟಿ ರೂ. ಮುಂಗಡ ಪಾವತಿಸಲಿದೆ.

ಮೊದಲ ಮತ್ತು ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿ ಭರವಸೆಯ ಫಲಿತಾಂಶಗಳನ್ನು ತೋರಿಸಿರುವ ಬಯಲಾಜಿಕಲ್- ಸಂಸ್ಥೆಯ ಕೋವಿಡ್ -19 ಲಸಿಕೆ ಸದ್ಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಟ್ಟಿದೆ. ಇದು ಬಯಲಾಜಿಕಲ್- ಅಭಿವೃದ್ಧಿಪಡಿಸುತ್ತಿರುವ ಆರ್ಬಿಡಿ ಪ್ರೋಟೀನ್ ಉಪ-ಘಟಕ ಲಸಿಕೆಯಾಗಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

ಕೋವಿಡ್-19 ಲಸಿಕೆ ಕುರಿತ ರಾಷ್ಟ್ರೀಯ ತಜ್ಞರ ಗುಂಪು (NEGVAC) ಬಯಲಾಜಿಕಲ್- ಸಂಸ್ತೆಯ ಪ್ರಸ್ತಾಪವನ್ನು ಪರಿಶೀಲಿಸಿದ ನಂತರ ಅನುಮೋದನೆ ನೀಡಿದೆ.

ಇದು ದೇಶೀಯ ಲಸಿಕೆ ತಯಾರಕರಿಗೆ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಯಲ್ಲಿ ಬೆಂಬಲ ಮತ್ತು ಆರ್ಥಿಕ ನೆರವು ನೀಡುವ ಮೂಲಕ ಪ್ರೋತ್ಸಾಹಿಸುವ ಭಾರತ ಸರ್ಕಾರದ ವ್ಯಾಪಕ ಪ್ರಯತ್ನದ ಭಾಗವಾಗಿದೆ.

ಬಯಲಾಜಿಕಲ್- ಕೋವಿಡ್ ಲಸಿಕೆಯನ್ನು ಕ್ಲಿನಿಕಲ್ ಪೂರ್ವ ಹಂತದಿಂದ ಮೂರನೇ ಹಂತದ ಅಧ್ಯಯನಗಳವರೆಗೆ ಭಾರತ ಸರ್ಕಾರ ಬೆಂಬಲಿಸಿದೆ. ಜೈವಿಕ ತಂತ್ರಜ್ಞಾನ ಇಲಾಖೆಯು 100 ಕೋಟಿ ರೂ.ಗಳ ಹಣಕಾಸಿನ ನೆರವು ನೀಡಿದ್ದಲ್ಲದೆ, ಬಯಲಾಜಿಕಲ್- ಸಂಸ್ಥೆಯ ಜೊತೆ ಸಹಭಾಗಿತ್ವದಲ್ಲಿ ಎಲ್ಲಾ ಪ್ರಾಣಿಗಳ ಸವಾಲು ಮತ್ತು ಮೌಲ್ಯಮಾಪನ ಅಧ್ಯಯನಗಳನ್ನು ಫರಿದಾಬಾದ್ನ ಸಂಶೋಧನಾ ಸಂಸ್ಥೆಯಾದ ಸಾಕ್ಷ್ಯಾಧಾರ ಆಧರಿತ ಆರೋಗ್ಯ ವಿಜ್ಞಾನ ತಂತ್ರಜ್ಞಾನ ಸಂಸ್ಥೆ (ಟಿಎಚ್ಎಸ್ಟಿಐ) ಮೂಲಕ ನಡೆಸಿದೆ.

ಮೂರನೆಯ ಉತ್ತೇಜನಾ ಪ್ಯಾಕೇಜ್ ಆದ ಆತ್ಮನಿರ್ಭರ್ 3.0 ಭಾಗವಾಗಿ ಕೋವಿಡ್-19 ಲಸಿಕೆ ಅಭಿವೃದ್ಧಿ ಪ್ರಯತ್ನಗಳನ್ನು ಬಲಪಡಿಸಲು ಮತ್ತು ವೇಗಗೊಳಿಸಲು ಪ್ರಾರಂಭಿಸಲಾದ ಭಾರತ ಸರ್ಕಾರದ ಮಿಷನ್ ಕೋವಿಡ್ ಸುರಕ್ಷಾ- ಭಾರತೀಯ ಕೋವಿಡ್-19 ಲಸಿಕೆ ಅಭಿವೃದ್ಧಿ ಮಿಷನ್ ಭಾಗವಾಗಿ ಇದನ್ನು ಕೈಗೊಳ್ಳಲಾಗಿದೆ.

ನಾಗರಿಕರಿಗೆ ಸುರಕ್ಷಿತ, ಪರಿಣಾಮಕಾರಿ, ಕೈಗೆಟುಕುವ ಮತ್ತು ಲಭ್ಯವಾಗಬಹುದಾದ ಕೋವಿಡ್-19 ಲಸಿಕೆ ಅಭಿವೃದ್ಧಿಯನ್ನು ಮಿಷನ್ ಹೊಂದಿದೆ. ಐದಾರು ಕೋವಿಡ್-19 ಲಸಿಕೆಗಳ ಅಭಿವೃದ್ಧಿಗೆ ಮಿಷನ್ ಬೆಂಬಲ ನೀಡುತ್ತಿದೆ. ಇವುಗಳಲ್ಲಿ ಕೆಲವು ಈಗ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳಲ್ಲಿ ಪರವಾನಗಿ ಪಡೆಯಲು ಮತ್ತು ಬಳಸಲು ಹತ್ತಿರವಾಗಿವೆ. ಇದು ಕೇವಲ ಕೋವಿಡ್-19 ಲಸಿಕೆ ಅಭಿವೃದ್ಧಿ ಪ್ರಯತ್ನಗಳನ್ನು ವೇಗಗೊಳಿಸಿಲ್ಲ, ಬದಲಿಗೆ ಸದ್ಯ ಇತರ ಲಸಿಕೆಗಳಿಗಾಗಿ ನಡೆಯುತ್ತಿರುವ ಮತ್ತು ಭವಿಷ್ಯದ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ದೇಶದಲ್ಲಿ ದೃಢವಾದ ಲಸಿಕೆ ಅಭಿವೃದ್ಧಿ ಪರಿಸರ ವ್ಯವಸ್ಥೆಗೂ ಲಭ್ಯವಾಗಲಿದೆ.

***


(Release ID: 1723965) Visitor Counter : 311