ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದ ದೈನಿಕ ಹೊಸ ಪ್ರಕರಣಗಳ ಸಂಖ್ಯೆ 1.32 ಲಕ್ಷದಲ್ಲಿದೆ


ಸತತ 6 ನೇ ದಿನ ದೈನಿಕ ಹೊಸ ಪ್ರಕರಣಗಳ ಸಂಖ್ಯೆ 2 ಲಕ್ಷಕ್ಕಿಂತ ಕಡಿಮೆ ಇದೆ

ಒಟ್ಟು 17,93,645 ಸಕ್ರಿಯ ಪ್ರಕರಣಗಳೊಂದಿಗೆ , ಸತತ ಎರಡನೇ ದಿನವೂ ಪ್ರಕರಣಗಳ ಹೊರೆ 20 ಲಕ್ಷಕ್ಕಿಂತ ಕಡಿಮೆ ಇದೆ

ಸತತ 20 ನೇ ದಿನವೂ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚು

ಗುಣಮುಖ ದರ ಇನ್ನಷ್ಟು ಏರಿಕೆಯಾಗಿ 92.48 % ತಲುಪಿದೆ

ದೈನಿಕ ಪಾಸಿಟಿವ್ ದರ 6.57 % ಆಗಿದ್ದು, ಸತತ 9 ನೇ ದಿನವೂ 10 % ಗಿಂತ ಕೆಳಗಿದೆ

Posted On: 02 JUN 2021 11:28AM by PIB Bengaluru

ದೈನಿಕ ಹೊಸ ಪ್ರಕರಣಗಳ ಸಂಖ್ಯೆ ಸತತವಾಗಿ ಇಳಿಕೆಯಾಗುತ್ತಿದ್ದು, ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1.32 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆ 1,32,788.

ದೇಶವು ಸತತ 6 ನೇ ದಿನವೂ ದೈನಿಕ 2 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳನ್ನು ದಾಖಲಿಸಿದೆ.

https://static.pib.gov.in/WriteReadData/userfiles/image/image001ZP4Q.jpg

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಹೊರೆ ಸತತ ಕುಸಿಯುತ್ತಿದೆ. ಇಂದು 17,93,645 ಸಕ್ರಿಯ ಪ್ರಕರಣಗಳು ವರದಿಯಾಗಿವೆ.

ಕಳೆದ 24 ಗಂಟೆಗಳಲ್ಲಿ 1,01,875 ರಷ್ಟು ನಿವ್ವಳ ಇಳಿಕೆ ಕಂಡು ಬಂದಿದೆ ಮತ್ತು ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಬರೇ 6.34% ರಷ್ಟಿವೆ.

https://static.pib.gov.in/WriteReadData/userfiles/image/image002WC1N.jpg

ಭಾರತದ ದೈನಿಕ ಚೇತರಿಕೆ/ಗುಣಮುಖ ಪ್ರಕರಣಗಳ ಸಂಖ್ಯೆ ಸತತ 20 ನೇ ದಿನವೂ ದೈನಿಕ ಹೊಸ ಪ್ರಕರಣಗಳ ಸಂಖ್ಯೆಗಿಂತ ಹೆಚ್ಚಾಗಿದೆ. ಕಳೆದ 24 ಗಂಟೆಗಳಲ್ಲಿ 2,31,456 ಮಂದಿ ಗುಣಮುಖರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೈನಿಕ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಗುಣಮುಖ ಪ್ರಕರಣಗಳು 98,668 ರಷ್ಟು ಹೆಚ್ಚಾಗಿವೆ.

https://static.pib.gov.in/WriteReadData/userfiles/image/image0036R8V.jpg

ಜಾಗತಿಕ ಸಾಂಕ್ರಾಮಿಕ ಆರಂಭಗೊಂಡಂದಿನಿಂದ ಸೋಂಕಿತರಾಗಿದ್ದವರ ಪೈಕಿ 2,61,79,085 ಮಂದಿ ಈಗಾಗಲೇ ಕೋವಿಡ್-19 ರಿಂದ ಗುಣಮುಖರಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 2,31,456 ರೋಗಿಗಳು ಗುಣಮುಖರಾಗಿದ್ದಾರೆ. ಇದರಿಂದ ಒಟ್ಟು ಗುಣಮುಖ ದರ 92.48% ಆಗಿದೆ, ಅದು ಹೆಚ್ಚಳದ ಪ್ರವೃತ್ತಿಯನ್ನು ದಾಖಲಿಸುತ್ತಿದೆ.

https://static.pib.gov.in/WriteReadData/userfiles/image/image0046YH4.jpg

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 20,19,773 ಪರೀಕ್ಷೆಗಳನ್ನು ನಡೆಸಲಾಗಿದೆ ಮತ್ತು ಭಾರತವು ಇದುವರೆಗೆ ಒಟ್ಟು 35 ಕೋಟಿ (35,00,57,330) ಪರೀಕ್ಷೆಗಳನ್ನು ನಡೆಸಿದೆ.

ಒಂದೆಡೆ ದೇಶಾದ್ಯಂತ ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದರೆ, ಸಾಪ್ತಾಹಿಕವಾಗಿ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಸಾಪ್ತಾಹಿಕ ಪಾಸಿಟಿವ್ ದರ ಪ್ರಸ್ತುತ 8.21% ಇದೆ, ದೈನಿಕ ಪಾಸಿಟಿವ್ ದರ ಇಳಿಕೆಯಾಗಿದ್ದು, ಅದೀಗ ಇಂದು 6.57% ಆಗಿದೆ. ಅದು ಸತತ 9 ನೇ ದಿನವೂ 10% ಗಿಂತ ಕೆಳಗಿದೆ.

https://static.pib.gov.in/WriteReadData/userfiles/image/image005DUPR.jpg

ರಾಷ್ಟ್ರವ್ಯಾಪೀ ಲಸಿಕಾ ಆಂದೋಲನದ ಮೂಲಕ ದೇಶದಲ್ಲಿ ಹಾಕಲಾದ ಕೋವಿಡ್ -19 ಲಸಿಕಾ ಡೋಸ್ ಗಳ ಒಟ್ಟು ಪ್ರಮಾಣ ಇಂದು 21.85 ಕೋಟಿ ದಾಟಿದೆ.

ಇಂದು ಬೆಳಿಗ್ಗೆ 7 ಗಂಟೆಯ ತಾತ್ಕಾಲಿಕ ವರದಿಗಳ ಪ್ರಕಾರ ಒಟ್ಟು 30,91,543 ಅಧಿವೇಶನಗಳ ಮೂಲಕ 21,85,46,667 ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.

ವಿವರಗಳು ಕೆಳಗಿನಂತಿವೆ:

ಎಚ್.ಸಿ.ಡಬ್ಲ್ಯು.

1ನೇ ಡೋಸ್

98,99,574

2ನ್ ಡೋಸ್

68,03,865

ಎಫ್.ಎಲ್.ಡಬ್ಲ್ಯು.

1ನೇ ಡೋಸ್

1,57,63,082

2ನ್ ಡೋಸ್

85,56,719

18-44 ವರ್ಷ ವಯೋಗುಂಪಿನವರು

1ನೇ ಡೋಸ್

2,13,73,965

2ನ್ ಡೋಸ್

39,443

45 ರಿಂದ 60 ವರ್ಷ ವಯೋಗುಂಪಿನವರು

1ನೇ ಡೋಸ್

6,72,19,095

2ನ್ ಡೋಸ್

1,08,65,046

60ವರ್ಷಕ್ಕಿಂತ ಮೇಲ್ಪಟ್ಟವರು

1ನೇ ಡೋಸ್

5,91,55,780

2ನ್ ಡೋಸ್

1,88,70,098

ಒಟ್ಟು

21,85,46,667

 

 

 

 

 

 

 

 

 

 

 

 

 

 

 

 

 

 

 

 

 

***


(Release ID: 1723669) Visitor Counter : 172